ಜಾಗ್ವಾರ್ ಲ್ಯಾಂಡ್ ರೋವರ್ : ಆ್ಯಂಟಿ ವೈರಸ್ ತಂತ್ರಜ್ಞಾನ ಕೋವಿಡ್ ವಿರುದ್ಧ ಪರಿಣಾಮಕಾರಿ !


ಶ್ರೀರಾಜ್ ವಕ್ವಾಡಿ, May 19, 2021, 5:24 PM IST

Jaguar Land Rover has announced that its future cabin air purification technology has been shown in laboratory tests to inhibit viruses and airborne bacteria by as much as 97 percent including Covid-19.

 

  • ಜೆ ಎಲ್‌ ಆರ್‌ ನ ಹೊಸ ವಾಯು ಶುದ್ಧೀಕರಣ ತಂತ್ರಜ್ಞಾನವು ಮೊದಲಿಗಿಂತ ಹತ್ತು ಪಟ್ಟು ಹೆಚ್ಚು ಪರಿಣಾಮಕಾರಿಯಾಗಿರಲಿದೆ.
  • ಇದು ಶೇಕಡಾ 97 ರಷ್ಟು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳೊಂದಿಗೆ ಹೋರಾಡಬಲ್ಲದು.
  • ಕೊರೊನಾವೈರಸ್ ವಿರುದ್ಧ ಶೇಕಡಾ 99.995 ರಷ್ಟು ಯಶಸ್ಸಿನ ಪ್ರಮಾಣವನ್ನು ಹೊಂದಿದೆ.

ಕೋವಿಡ್ ಸೋಂಕು ವಿಶ್ವವ್ಯಾಪಿ ಹರಡಿದಂದಿನಿಂದ ಹಲವು ಕಾರ್ಪೋರೇಟ್ ಸಂಸ್ಥೆಗಳು, ತಮ್ಮ ಉತ್ಪನ್ನಗಳಲ್ಲಿ ಆ್ಯಂಟಿ ವೈರಸ್ ಅಥವಾ ನಿರ್ದಿಷ್ಟವಾಗಿ ಕೋವಿಡ್ ವಿರುದ್ಧ ಹೋರಾಡುವ ಗುಣಗಳನ್ನು ಪರಿಚಯಿಸಿದೆ. ಸಾಬೂನು, ಸ್ಯಾನಿಟೈಸರ್ ಗಳು ಮಾತ್ರವಲ್ಲದೆ ಹಲ್ಲುಜ್ಜುವ ಬ್ರಶ್, ಎಸಿ, ಪೈಂಟ್, ಪ್ಲೈವುಡ್ ಎಲ್ಲವೂ ಸಾಂಕ್ರಾಮಿಕ ರೋಗದ ವಿರುದ್ಧ ಸಮರ ಸಾರಿದವು. ಅದಕ್ಕೀಗ ಹೊಸ ಸೇರ್ಪಡೆ ಜಾಗ್ವಾರ್ ಲ್ಯಾಂಡ್ ರೋವರ್ ಕಾರು!

ತಮ್ಮ ಕಾರುಗಳಲ್ಲಿ ಪ್ರಸ್ತುತ ಇರುವ ಪಿಎಂ 2.5 ಫಿಲ್ಟರ್ ಮತ್ತು ನ್ಯಾನೋ ಟೆಕ್ನಾಲಜಿ ಫಿಲ್ಟರ್ ನನ್ನು ಬದಲಿಸಿ, ಹೊಸ ವಾಯು ಶುದ್ಧೀಕರಣ ವ್ಯವಸ್ಥೆಯನ್ನು ಪರಿಚಯಿಸಲು ಜಾಗ್ವಾರ್ ಲ್ಯಾಂಡ್ ರೋವರ್ (ಜೆ ಎಲ್‌ ಆರ್) ಮುಂದಾಗಿದೆ. ಈ ಹೊಸ ಫಿಲ್ಟರ್ ನನ್ನು ನ್ಯಾನೋ ಎಕ್ಸ್ ಎಂದು ಕರೆಯಲಾಗುತ್ತದೆ. ಪ್ಯಾನಸೋನಿಕ್ ಸಂಸ್ಥೆಯು ಇದನ್ನು ಅಭಿವೃದ್ಧಿಪಡಿಸುತ್ತಿದೆ.

ಈ ನೂತನ ವಾಯು ಶುದ್ಧೀಕರಣ ತಂತ್ರಜ್ಞಾನವನ್ನು ಎರಡು ಪ್ರತ್ಯೇಕ ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ಪರೀಕ್ಷಿಸಿವೆ. ಪರ್ಫೆಕ್ಟಸ್ ಬಯೋಮೆಡ್ (ಲಿ.) ಸಂಸ್ಥೆ ನಡೆಸಿದ ಪ್ರಾಯೋಗಿಕ ಪರೀಕ್ಷೆಯಲ್ಲಿ, 30 ನಿಮಿಷಗಳಲ್ಲಿ ಶೇ.97ರಷ್ಟು ವೈರಸ್ ಮತ್ತು ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಕುಂಠಿತಗೊಳಿಸಬಹುದು ಎಂದು ಫಲಿತಾಂಶ ಬಂದಿದೆ.

ಇದನ್ನೂ  ಓದಿ : ಕೋವಿಡ್ ಕಾಲದಲ್ಲಿ ಶಿಕ್ಷಣ ಪ್ರಕ್ರಿಯೆ: ತಜ್ಞರ ಸಮಿತಿ ರಚನೆ- ಸುರೇಶ್ ಕುಮಾರ್

ಅದಲ್ಲದೆ, ನಿರ್ದಿಷ್ಟವಾಗಿ ಕೋವಿಡ್ ವೈರಸ್ ನನ್ನು ಗುರಿಯಾಗಿಸಿಕೊಂಡು, ಟೆಕ್ಸೆಲ್ ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ಎರಡು ಗಂಟೆಗಳೊಳಗೆ ಶೇಕಡಾ. 99.995 ರಷ್ಟು ಯಶಸ್ಸಿನ ಪ್ರಮಾಣವನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನು ಸರಳವಾಗಿ ಹೇಳುವುದಾದರೆ, ಜಾಗ್ವಾರ್ ಲ್ಯಾಂಡ್ ರೋವರ್ ಸಂಸ್ಥೆಯು ಪರಿಚಯಿಸಲು ಹೊರಟಿರುವ ಹೊಸ ನ್ಯಾನೋ ಎಕ್ಸ್ ತಂತ್ರಜ್ಞಾನವು ಹಳೆಯ ನ್ಯಾನೋ ತಂತ್ರಜ್ಞಾನಕ್ಕಿಂತ ಹತ್ತು ಪಟ್ಟು ಹೆಚ್ಚು ಪರಿಣಾಮಕಾರಿಯಾಗಿರಲಿದೆ. ಸಾಮಾನ್ಯವಾಗಿ ವಾಯು ಶುದ್ಧೀಕರಣ ಮಾಡುವುದರೊಂದಿಗೆ, ಈ ತಂತ್ರಜ್ಞಾನವು ಗಾಳಿಯಲ್ಲಿ ಹರಡಿರುವ ಯಾವುದೇ ವೈರಸ್ ಹಾಗೂ ಬ್ಯಾಕ್ಟೀರಿಯಾಗಳ ನಾಶ ಮಾಡುತ್ತದೆ.

ಈ ತಂತ್ರಜ್ಞಾನವು ಗಾಳಿಯಲ್ಲಿ ನೈಸರ್ಗಿಕವಾಗಿ ಹರಿಡಿಕೊಂಡಿರುವ ಹೈಡ್ರಾಕ್ಸಿಲ್ ರಾಡಿಕಲ್ಸ್ ಅಯಾನ್ ನನ್ನು ಬಳಸುತ್ತದೆ. ಆದರೆ ವಿಶೇಷ ಸಂಗತಿಯೆಂದರೆ, ಜಾಗ್ವಾರ್ ಲ್ಯಾಂಡ್‌ ರೋವರ್ ಸಂಸ್ಥೆಯು ವಿದ್ಯುತ್ ನನ್ನು ಬಳಸಿ ಹೈಡ್ರಾಕ್ಸಿಲ್ ರಾಡಿಕಲ್ಸ್  ನಂತಹ ಟ್ರಿಲಿಯನ್ ಅಯಾನ್‌ ಗಳನ್ನು ಕಾರಿನೊಳಗೆಯೇ ಉತ್ಪಾದಿಸಿ, ಅಲ್ಲಿ ಹರಡಿಕೊಂಡಿರುವ ವೈರಸ್ ಬ್ಯಾಕ್ಟೀರಿಯಾಗಳನ್ನು ಪತ್ತೆ ಹಚ್ಚಿ, ಅದನ್ನು ಕಾರಿನಿಂದ ಹೊಡೆದೋಡಿಸುವುದಲ್ಲದೆ, ಅದರ ಸಂತಾನೋತ್ಪತ್ತಿ ಮತ್ತು ಹರಡುವ ಸಾಮರ್ಥ್ಯವನ್ನು ಕೊನೆಗೊಳಿಸುತ್ತದೆ.

ಇನ್ನು,  ಕಾರುಗಳಲ್ಲಿ ಆ್ಯಂಟಿವೈರಸ್ ತಂತ್ರಜ್ಞಾನವನ್ನು ಅಳವಡಿಸಲು ಕೆಲಸ ಮಾಡುತ್ತಿರುವ ಏಕೈಕ ಕಂಪನಿ ಜಾಗ್ವರ್ ಲ್ಯಾಂಡ್ ರೋವರ್ ಅಲ್ಲ. ಕಳೆದ ವರ್ಷ ಕೋವಿಡ್ -19 ಸಾಂಕ್ರಾಮಿಕ ಉಂಟಾದಾಗ, ಇಟಾಲಿಯನ್ ಕಾರಿನ ಇತರೆ ಭಾಗಗಳ ತಯಾರಕರಾದ ಯು ಎ ಎಫ್‌ ಐ  ಫಿಲ್ಟರ್ಸ್, ಭಾರತದಲ್ಲಿ ಆ್ಯಂಟಿ-ವೈರಸ್ ಕ್ಯಾಬಿನ್ ಫಿಲ್ಟರ್ ನನ್ನು ಬಿಡುಗಡೆ ಮಾಡಿತ್ತು.

ನೀವು ಜೆ ಎಲ್‌ ಆರ್ ಕಾರಿನೊಳಗೆ ಕಾಲಿಡುವ ಮೊದಲು, ಇದನ್ನು ಸಕ್ರಿಯಗೊಳಿಸಬಹುದು. ಐ-ಪೇಸ್, ಲ್ಯಾಂಡ್‌ರೋವರ್, ಡಿಸ್ಕವರಿ ಮತ್ತು ಇವೋಕ್‌ನಂತಹ ಹೊಸ ಜನರೇಷನ್ ಮಾದರಿಗಳಲ್ಲಿ ಈ ತಂತ್ರಜ್ಞಾನವನ್ನು ಪರಿಚಯಿಸಲಾಗುವುದು ಎಂದು ಜೆ ಎಲ್‌ ಆರ್ ಸಂಸ್ಥೆ ಹೇಳಿಕೊಂಡಿದೆ. ಆದರೆ ತಂತ್ರಜ್ಞಾನವನ್ನು ಯಾವಾಗ ವಾಣಿಜ್ಯೀಕರಿಸಲಾಗುವುದು ಅಥವಾ ತಮ್ಮ ಸಂಸ್ಥೆಯ ಯಾವ ಕಾರಿನಲ್ಲಿ ಈ ವ್ಯವಸ್ಥೆಯನ್ನು ಮೊದಲು ಪರಿಚಯಿಸಲಾಗುವುದು ಎಂಬುದನ್ನು ಜೆ ಎಲ್‌ ಆರ್ ಇನ್ನೂ ದೃಢೀಕರಿಸಿಲ್ಲ.

“ನಮ್ಮ ಗ್ರಾಹಕರ ಯೋಗಕ್ಷೇಮ ನಮಗೆ ಅತ್ಯಂತ ಮಹತ್ವದ್ದಾಗಿದೆ. ಆದರಲ್ಲೂ ಈಗ, ಎಂದಿಗಿಂತಲೂ ಹೆಚ್ಚಾಗಿ, ನಾವೆಲ್ಲರೂ ನಮ್ಮ ಪ್ರೀತಿಪಾತ್ರರ ಉತ್ತಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುವ ತಾಂತ್ರಿಕ ಪರಿಹಾರಗಳನ್ನು ಹುಡುಕುತ್ತಿದ್ದೇವೆ. ನಮ್ಮ ಪರಿಣಿತ ಎಂಜಿನಿಯರ್‌ಗಳು ಅಭಿವೃದ್ಧಿಪಡಿಸಿದ ಈ ಸ್ವತಂತ್ರ ಸಂಶೋಧನೆ, ಹಾನಿಕಾರಕ ವೈರಸ್ ಮತ್ತು ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡುತ್ತದೆ. ಕ್ಯಾಬಿನ್ ಒಳಗೆ ಸ್ವಚ್ಛ ಮತ್ತು ನೈರ್ಮಲ್ಯ ಪರಿಸರವನ್ನು ಒದಗಿಸುತ್ತದೆ ಎಂದು ನಮ್ಮ ಗ್ರಾಹಕರಿಗೆ ಭರವಸೆ ನೀಡಲು ಬಯಸುತ್ತೇವೆ”

ಡಾ. ಸ್ಟೀವ್ ಇಲೆ, ಜಾಗ್ವಾರ್ ಲ್ಯಾಂಡ್ ರೋವರ್‌ನ ಮುಖ್ಯ ವೈದ್ಯಕೀಯ ಅಧಿಕಾರಿ

ಇದನ್ನೂ  ಓದಿ : ಈ ಸರ್ಕಾರಕ್ಕೆ ದೂರಾಲೋಚನೆಗಳೇ ಇಲ್ಲ : ರಾಜ್ಯ ಸರ್ಕಾರದ ಕೋವಿಡ್ ಪ್ಯಾಕೇಜ್ ಗೆ HDK ಆಕ್ರೋಶ

ಇಂದುಧರ ಹಳೆಯಂಗಡಿ

ಇದನ್ನೂ  ಓದಿ : ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 291 ಅಂಕ ಕುಸಿತ, 15,100ರ ಗಡಿ ತಲುಪಿದ ನಿಫ್ಟಿ

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಇದೀಗ ಜಿಯೋ ಹಾಟ್‌ಸ್ಟಾರ್‌

JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಇದೀಗ ಜಿಯೋ ಹಾಟ್‌ಸ್ಟಾರ್‌

drdo

DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್‌ ಪರೀಕ್ಷೆ ಯಶಸ್ವಿ

PM-Modi-Paris

AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್

GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.