ಮತ್ತೆ ಗ್ರಾಹಕ ಸ್ನೇಹಿ ಪ್ಲ್ಯಾನ್ ಗಳನ್ನು ಜಾರಿಗೊಳಿಸಿದ ಜಿಯೋ..!
Team Udayavani, Mar 9, 2021, 11:02 AM IST
ನವ ದೆಹಲಿ : ರಿಲಯನ್ಸ್ ಜಿಯೋ ತನ್ನ ಗ್ರಾಹಕರನ್ನು ಸೆಳೆದುಕೊಳ್ಳಲು ಮೇಲಿಂದ ಮೇಲೆ ಹೊಸ ಗರಾಹಕ ಪ್ರಿಯ ಪ್ಲ್ಯಾನ್ ಗಳು ಜಾರಿಗೊಳಿಸುತ್ತಿದೆ. ಈಗ ಮತ್ತೆ ಹೊಸದಾಗಿ ಕೆಲ ಡೇಟಾ ಪ್ಲಾನ್ಗಳನ್ನ ಪರಿಚಯಿಸಿದೆ. ಈ ಹೊಸ ಪ್ಲ್ಯಾನ್ ಗಳು 22 ರೂಪಾಯಿಯಿಂದ ಆರಂಭವಾಗಿ 152 ರೂಪಾಯಿಗಳವರೆಗೂ ಇವೆ. ಜಿಯೋದ ಈ ಹೊಸ ಪ್ಲ್ಯಾನ್ ಗಳಿಂದ ಗ್ರಾಹಕರಿಗೆ ಡೇಟಾ ಲಾಭ ಸಿಗಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.
ಜಿಯೋ ಹೊಸ ಪ್ಲ್ಯಾನ್ ಗಳು ಹೇಗಿವೆ..?
22 ರೂ ಜಿಯೋ ಪ್ಲ್ಯಾನ್ : 22 ರೂಪಾಯಿಯ ಈ ಹೊಸ ಪ್ಲ್ಯಾನ್ ನಲ್ಲಿ ಜಿಯೋ(Jio) ಗ್ರಾಹಕರಿಗೆ 4ಜಿ ಹೈ ಸ್ಪೀಡ್ 2 ಜಿಬಿ ಇಂಟರ್ ನೆಟ್ ಸೌಲಭ್ಯ ನೀಡಲಿದೆ. 28 ದಿನಗಳ ವ್ಯಾಲಿಡಿಟಿ ಇದು ಹೊಂದಿರಲಿದ್ದು., ಡೇಟಾ ಮಿತಿ ಮುಗಿದ ಬಳಿಕ ಇಂಟರ್ನೆಟ್ ಸ್ಪೀಡ್ 645 ಕೆಬಿಪಿಎಸ್ಗೆ ಇಳಿಯಲಿದೆ ಎಂದು ಕಂಪೆನಿ ಮಾಹಿತಿ ನಿಡಿದೆ.
ಓದಿ : ವಿ.ಎಸ್. ಪಾರ್ಥಸಾರಥಿ ಮಹೀಂದ್ರಾ ಸಮೂಹದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ..!
52 ರೂ. ಜಿಯೋ ಪ್ಲ್ಯಾನ್ : ಈ ಡೇಟಾ ಪ್ಯಾಕ್ ನ ಬೆಲೆ 52 ರೂಪಾಯಿ ಆಗಿದ್ದು, ಇದರಲ್ಲಿ ಗ್ರಾಹಕರು 6 ಜಿಬಿ 4ಜಿ ಹೈಸ್ಪೀಟ್ ಇಂಟರ್ ನೆಟ್ ಡೇಟಾ ಪಡೆಯಲಿದ್ದಾರೆ. ಡೇಟಾ ಮಿತಿ ಮುಗಿಯುತ್ತಿದ್ದಂತೆಯೇ ಇಂಟರ್ ನೆಟ್ ಸ್ಪೀಡ್ ಗೆ 64 ಕೆಬಿಪಿಎಸ್ ಗೆ ಇಳಿಕೆ ಕಾಣಲಿದೆ. 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಯಾಕ್ ನಲ್ಲಿ ಜಿಯೋ ಅಪ್ಲಿಕೇಶನ್ ಗೆ ಚಂದಾದಾರಿಕೆ ಕೂಡ ಸಿಗಲಿದೆ.
72 ರೂ. ಜಿಯೋ ಪ್ಲ್ಯಾನ್ : 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲ್ಯಾನ್ ನಲ್ಲಿ ಗ್ರಾಹಕರಿಗೆ 72 ಜಿಬಿ ಹೈಸ್ಪೀಡ್ ಇಂಟರ್ ನೆಟ್ ಡೇಟಾ ಸಿಗಲಿದೆ.
102 ರೂ ಜಿಯೋ ಪ್ಲ್ಯಾನ್ : ಈ ಜಿಯೋ ಪ್ಲ್ಯಾನ್ ನಲ್ಲಿ ಗ್ರಾಹಕರಿಗೆ ಪ್ರತಿದಿನಿ 1 ಜಿಬಿ ಹೈಸ್ಪೀಡ್ ಇಂಟರ್ ನೆಟ್ ದೊರೆಯಲಿದೆ.
152 ಜಿಯೋ ಪ್ಲ್ಯಾನ್ : ಈ ಪ್ಲ್ಯಾನ್ ನಲ್ಲಿ ಗ್ರಾಹಕರಿಗೆ 2 ಜಿಬಿ ಹೈಸ್ಪೀಡ್ ಡೇಟಾ ಸಿಗಲಿದೆ. ಅಂದರೆ ಒಟ್ಟು 56 ಜಿಬಿ ಡೇಟಾ ಗ್ರಾಹಕರಿಗೆ ಸಿಗಲಿದೆ ಎಂದು ಕಂಪೆನಿ ಮಾಹಿತಿ ನೀಡಿದೆ.
ಓದಿ : ಸಿಡಿ ಬಗ್ಗೆ 4 ತಿಂಗಳ ಮೊದಲೇ ಗೊತ್ತಿತ್ತು, ನಾನು ನಿರಪರಾಧಿ: ಕಣ್ಣೀರಿಟ್ಟ ರಮೇಶ್ ಜಾರಕಿಹೊಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ
Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ
ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.