ಇನ್ಮುಂದೆ ವಾಟ್ಸಾಪ್ ಮೂಲಕವೂ ಜಿಯೋ ರೀಚಾರ್ಜ್ ಮಾಡಿಕೊಳ್ಳಬಹುದು
Team Udayavani, Jun 10, 2021, 1:50 PM IST
ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಗೆ ಕಾರಣವಾದ ಜಿಯೋ ಇದೀಗ ತನ್ನ ಗ್ರಾಹಕರಿಗೆ ಮತ್ತೊಂದು ಹೊಸ ಸೌಲಭ್ಯ ಒದಗಿಸಿದೆ, ಅದುವೆ ವಾಟ್ಸಾಪ್ ಮೂಲಕ ರಿಚಾರ್ಜ್ ಮಾಡಿಕೊಳ್ಳುವುದು.
ಜಿಯೋ ಗ್ರಾಹಕರು ವಾಟ್ಸ್ಪ್ ಮೂಲಕ ರೀಚಾರ್ಜ್ ಮಾಡುವ ವಿನೂತನ ಅವಕಾಶ ದೊರೆತಿದೆ. ಅದರ ಜತೆಗೆ ಹಣ ಪಾವತಿ, ಅಹವಾಲುಗಳಿಗೆ ಉತ್ತರ, ದೂರು ನೀಡುವುದು ಹೀಗೆ ಕೆಲವು ಚಟುವಟಿಕೆಗಳನ್ನು ವಾಟ್ಸ್ಆಯಪ್ ಮೂಲಕವೇ ಮಾಡಬಹುದಾಗಿದೆ.
ಇನ್ನು ಹೊಸ ಜಿಯೋ ಸಿಮ್ ಖರೀದಿಸಲು, ಅಥವಾ ಪೋರ್ಟ್ ಮಾಡಲು, ಜಿಯೋ ಸಿಮ್ ಒಳಗೊಂಡಿರುವ ಸವಲತ್ತುಗಳನ್ನು ತಿಳಿಯಲು , ಜಿಯೋ ಫೈಬರ್, ಜಿಯೋ ಮಾರ್ಟ್ ಹೀಗೆ ನಾನಾ ಕೆಲಸವನ್ನು ಇದರ ಮೂಲಕವೇ ಮಾಡಬಹುದಾಗಿದೆ.
ಈ ಸೇವೆ ಪಡೆಯುವುದು ಹೇಗೆ ?
ಜಿಯೋ ಸಿಮ್ ಬಳಕೆದಾರರು ವಾಟ್ಸ್ಆಯಪ್ ಮೂಲಕ ಈ ಸೇವೆ ಪಡೆಯಲು ಮೊದಲು ವಾಟ್ಸ್ಆಯಪ್ ಮೂಲಕ 70007 70007 ಸಂಖ್ಯೆಯನ್ನು ಸೇವ್ ಮಾಡಿ ಹಾಯ್ ಎಂದು ಮೆಸೇಜ್ ಮಾಡಬೇಕು. ಇಷ್ಟಾದ ಬಳಿಕ ವ್ಯಾಲೆಟ್, ಯುಪಿಐ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಪಾವತಿ ಆಯ್ಕೆಯನ್ನು ಪಡೆದುಕೊಳ್ಳಬಹುದಾಗಿದೆ. ಆ ಬಳಿಕ ರೀಚಾರ್ಜ್ ಸೇರಿದಂತೆ ಎಲ್ಲಾ ಸೇವೆಯನ್ನು ಪಡೆಯಬಹುದಾಗಿದೆ.
ಸದ್ಯ ಗ್ರಾಹಕರಿಗಾಗಿ ವಾಟ್ಸ್ಆಯಪ್ ಮೂಲಕ 1)ಜಿಯೋ ರೀಚಾರ್ಜ್, 2)ಹೊಸ ಸಿಮ್ ಪಡೆಯುವುದು, 3)ಪೋರ್ಟ್ ಮಡುವುದು, 4)ಜಿಯೋ ಫೈಬರ್, 5)ಜಿಯೋ ಸಿಮ್ ನೆರವು, 6)ಅಂತರಾಷ್ಟ್ರೀಯ ರೋಮಿಂಗ್, 7)ಜಿಯೋ ಮಾರ್ಟ್ ಸೇವೆ ಪಡೆಯಬಹುದಾಗಿದೆ.
ಸದ್ಯ ಜಿಯೋ ಗ್ರಾಹಕರಿಗೆ ಈ ಸೇವೆ ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಈ ಸೇವೆ ಸಿಗುತ್ತಿದೆ. ಮುಂದಿನ ದಿನದಲ್ಲಿ ದೇಶಿ ಭಾಷೆಯಲ್ಲೂ ಬಳಸಬಹುದಾದ ಆಯ್ಕೆ ನೀಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಹೊಸ ಸೇರ್ಪಡೆ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್ ಕಾಳಿಂಗ’:ಅಧಿಕೃತವಾಗಿ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.