Automobile ಮಾರುಕಟ್ಟೆಯಲ್ಲಿ ಜಿಗಿತ: ನವೆಂಬರ್‌ನಲ್ಲಿ ಬರೋಬ್ಬರಿ 28,54,242 ವಾಹನಗಳ ಮಾರಾಟ


Team Udayavani, Dec 18, 2023, 6:45 AM IST

Automobile ಮಾರುಕಟ್ಟೆಯಲ್ಲಿ ಜಿಗಿತ: ನವೆಂಬರ್‌ನಲ್ಲಿ ಬರೋಬ್ಬರಿ 28,54,242 ವಾಹನಗಳ ಮಾರಾಟ

ದೇಶದಲ್ಲಿ ಕಳೆದ ಕೆಲವು ತಿಂಗಳುಗಳಿಂದೀಚೆಗೆ ಆಟೋಮೊಬೈಲ್‌ ಕ್ಷೇತ್ರ ಮಹತ್ತರ ಪ್ರಗತಿಯನ್ನು ದಾಖಲಿಸುತ್ತಿದೆ.
ಪ್ರಸಕ್ತ ವರ್ಷದ ನವೆಂಬರ್‌ನಲ್ಲಿ ಪ್ರಯಾಣಿಕ ಮತ್ತು ದ್ವಿಚಕ್ರ ವಾಹನಗಳ ತಿಂಗಳ ರಿಟೇಲ್‌ ಮಾರಾಟದಲ್ಲಿ ಗಮನಾರ್ಹ ಹೆಚ್ಚಳವಾಗಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 18. 46ರಷ್ಟು ಏರಿಕೆಯಾಗಿದೆ. ಹಬ್ಬದ ಋತು ಮುಗಿಯುತ್ತಿದ್ದಂತೆಯೇ ವಾಹನಗಳ ರಿಟೇಲ್‌ ಮಾರಾಟದಲ್ಲಿ ಇಳಿಕೆ ಕಂಡುಬಂದಿದೆಯಾದರೂ ಪಂಚರಾಜ್ಯಗಳ ಚುನಾವಣೆ ಮುಕ್ತಾಯಗೊಂಡ ಬಳಿಕ ಉದ್ಯಮ ಕ್ಷೇತ್ರದಲ್ಲಿ ಕಂಡುಬಂದಿರುವ ಪ್ರಗತಿ, ವಿವಾಹ ಋತು ಆರಂಭಗೊಂಡಿರುವುದು ಮತ್ತು ಹೊಸವರ್ಷ ಸಮೀಪಿಸುತ್ತಿರುವುದು ವಾಹನ ಮಾರುಕಟ್ಟೆಯನ್ನು ಮತ್ತೆ ಹಳಿಗೆ ತರುವ ವಿಶ್ವಾಸ ಮೂಡಿಸಿದೆ.

ಪ್ರಯಾಣಿಕ, ದ್ವಿಚಕ್ರ
ವಾಹನಗಳ ಮಾರಾಟದಲ್ಲಿ ಹೆಚ್ಚಳ
ಈ ವರ್ಷದ ನವೆಂಬರ್‌ನಲ್ಲಿ ಒಟ್ಟಾರೆ 28,54,242 ವಾಹನಗಳು ಮಾರಾಟವಾಗಿದ್ದರೆ, ಕಳೆದ ವರ್ಷದ ನವೆಂಬರ್‌ನಲ್ಲಿ 24,09,535 ವಾಹನಗಳು ಮಾರಾಟ ವಾಗಿದ್ದವು. ಕಳೆದ ವರ್ಷದ ನವೆಂಬರ್‌ನಲ್ಲಿ 3,07, 550 ಪ್ರಯಾಣಿಕ ವಾಹನಗಳು ಮಾರಾಟವಾಗಿದ್ದರೆ, ಈ ವರ್ಷದ ನವೆಂಬರ್‌ನಲ್ಲಿ 3,60,242 ಪ್ರಯಾಣಿಕ ವಾಹನಗಳ ಮಾರಾಟ ವಾಗುವ ಮೂಲಕ ಶೇ. 17ರಷ್ಟು ಹೆಚ್ಚಳ ದಾಖಲಿಸಿದೆ. ಇನ್ನು ಕಳೆದ ನವೆಂಬರ್‌ನಲ್ಲಿ 18,56,108 ದ್ವಿಚಕ್ರ ವಾಹನಗಳ ಮಾರಾಟವಾಗಿದ್ದರೆ ಈ ವರ್ಷ 22,47,366 ದ್ವಿಚಕ್ರ ವಾಹನಗಳು ಮಾರಾಟ ವಾಗುವ ಮೂಲಕ ಶೇ. 21ರಷ್ಟು ಏರಿಕೆ ಕಂಡಿದೆ ಎಂದು ಆಟೋಮೊಬೈಲ್‌ ಡೀಲರ್ ಅಸೋಸಿಯೇಶನ್‌ಗಳ ಫೆಡರೇಶನ್‌(ಎಫ್ಎಡಿಎ) ತಿಳಿಸಿದೆ. ಎಫ್ಡಿಎಯು ದೇಶಾದ್ಯಂತದ 15,000 ಆಟೋಮೊಬೈಲ್‌ ಡೀಲರ್‌ಗಳ 30,000ಕ್ಕೂ ಅಧಿಕ ವಾಹನ ಮಾರಾಟ ಮಳಿಗೆಗಳನ್ನು ಪ್ರತಿನಿಧಿಸುತ್ತಿದೆ.

ವಾಹನ ಮಾರುಕಟ್ಟೆಯಲ್ಲಿ ಹಬ್ಬದ ಸಂಭ್ರಮ
ದೀಪಾವಳಿ ಹಬ್ಬ ಮತ್ತು ವಾಹನ ತಯಾರಿಕ ಕಂಪೆನಿಗಳು ಅತ್ಯಾಧುನಿಕ ಮತ್ತು ಸುಧಾರಿತ ಮಾದರಿಯ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದುದು ಒಟ್ಟಾರೆ ವಾಹನ ಮಾರುಕಟ್ಟೆ ಚಿಗಿತುಕೊಳ್ಳಲು ಪ್ರಮುಖ ಕಾರಣಗಳಾಗಿವೆ. ಹಬ್ಬದ ಸಂದರ್ಭದಲ್ಲಿ ಗ್ರಾಹಕರು ವಾಹನ ಖರೀದಿಗೆ ಹೆಚ್ಚಿನ ಆಸಕ್ತಿ ತೋರುವುದು ಸಹಜ ಪ್ರಕ್ರಿಯೆಯಾಗಿದ್ದು ಬೇಡಿಕೆಗಳು ಹೆಚ್ಚುತ್ತವೆ. ಇದಕ್ಕನುಗುಣವಾಗಿ ವಾಹನ ತಯಾರಿಕ ಕಂಪೆನಿಗಳು ಗ್ರಾಹಕರ ಅಭಿರುಚಿಗೆ ತಕ್ಕಂತೆ ಸುಧಾರಿತ ಮಾಡೆಲ್‌ಗ‌ಳನ್ನು ಪರಿಚಯಿಸಿದುದು ಕೂಡ ಮಾರುಕಟ್ಟೆ ಚಿಗಿತುಕೊಳ್ಳಲು ಧನಾತ್ಮಕ ಅಂಶವಾಗಿ ಪರಿಣಮಿಸಿತು.

ದ್ವಿಚಕ್ರ ವಾಹನ ಮಾರಾಟದಲ್ಲಿ 2022ರ
ಮಾರ್ಚ್‌ನಲ್ಲಿ ಗರಿಷ್ಠ ಸಂಖ್ಯೆಯ ವಾಹನಗಳು ಮಾರಾಟ ಗೊಂಡಿದ್ದವು. ಇದಕ್ಕೆ ಹೋಲಿಸಿದರೆ ಈ ವರ್ಷದ ನವೆಂಬರ್‌ನಲ್ಲಿ 1.77 ಲಕ್ಷ ಅಧಿಕ ದ್ವಿಚಕ್ರ ವಾಹನಗಳು ಮಾರಾಟ ವಾಗಿವೆ. ಇನ್ನು ಪ್ರಯಾಣಿಕ ವಾಹನಗಳ ಮಾರಾಟದಲ್ಲಿ 2022ರ ಅಕ್ಟೋಬರ್‌ನಲ್ಲಿ ಗರಿಷ್ಠ ವಾಹನಗಳು ಮಾರಾಟ ವಾಗಿದ್ದವು. ಆದರೆ ನವೆಂಬರ್‌ನಲ್ಲಿ ಇದಕ್ಕಿಂತ 4,000 ಅಧಿಕ ವಾಹನಗಳು ಹೊಸದಾಗಿ ನೋಂದಣಿಯಾಗಿವೆ.

ದ್ವಿಚಕ್ರ ವಾಹನಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಈಗ ವಿವಾಹ ಋತು ಆರಂಭವಾಗಿದ್ದು ದ್ವಿಚಕ್ರ ವಾಹನಗಳ ಮಾರಾಟ ಮತ್ತಷ್ಟು ಚುರುಕು ಪಡೆಯುವ ನಿರೀಕ್ಷೆ ಇದೆ. ಆದರೆ ಗ್ರಾಮೀಣ ಆರ್ಥಿಕತೆಯ ಮುಖ್ಯ ಆಧಾರಸ್ತಂಭವಾಗಿರುವ ರಬಿ ಋತುವಿನ ಬೆಳೆಯ ಮೇಲೆ ಸದ್ಯದ ಪ್ರತಿಕೂಲ ಹವಾಮಾನ ಪರಿಸ್ಥಿತಿಯು ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಗ್ರಾಮೀಣ ಜನರ ಆದಾಯಕ್ಕೆ ಪೆಟ್ಟು ಬೀಳುವ ಲಕ್ಷಣಗಳು ಗೋಚರಿಸುತ್ತಿದೆ. ಇದು ವಾಹನ ಮಾರುಕಟ್ಟೆಯ ಮೇಲೂ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಎಫ್ಎಡಿಎ ಹೇಳಿದೆ.

ನವೆಂಬರ್‌ನಲ್ಲಿ ದಾಖಲೆ ಮಾರಾಟ
ಈ ವರ್ಷದ ನವೆಂಬರ್‌ ತಿಂಗಳು, ದೇಶದ ಆಟೋ ಮೊಬೈಲ್‌ ಮಾರುಕಟ್ಟೆ ಪಾಲಿಗೆ ಶುಭ‌ ಮಾಸವಾಗಿತ್ತು. ಈ ಮಾಸದಲ್ಲಿ ದೇಶಾದ್ಯಂತ ಒಟ್ಟು 28.54ಲಕ್ಷ ವಾಹನಗಳು ಮಾರಾಟಗೊಂಡಿವೆ. ಈ ಹಿಂದೆ ಅಂದರೆ 2020ರ ಮಾರ್ಚ್‌ ನಲ್ಲಿ 25.69 ಲಕ್ಷ ವಾಹನಗಳು ಮಾರಾಟವಾಗಿದ್ದುದು ಈವರೆಗಿನ ದಾಖಲೆಯಾಗಿತ್ತು.

ಟ್ರ್ಯಾಕ್ಟರ್‌, ವಾಣಿಜ್ಯ ವಾಹನಗಳ ಮಾರಾಟದಲ್ಲಿ ಇಳಿಕೆ
ಟ್ರ್ಯಾಕ್ಟರ್‌ ಮತ್ತು ವಾಣಿಜ್ಯ ವಾಹನಗಳ ಮಾರಾಟದಲ್ಲಿ ಸ್ವಲ್ಪಮಟ್ಟಿನ ಇಳಿಕೆಯಾಗಿದೆ. ಮಳೆಕೊರತೆ, ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿ ಸಂಭವಿಸಿರುವುದರಿಂದ ಬೇಡಿಕೆಯಲ್ಲಿ ಕುಸಿತ ಕಂಡುಬಂದಿದೆ. ಅಷ್ಟು ಮಾತ್ರವಲ್ಲದೆ ಈ ವಾಹನಗಳ ಲಭ್ಯತೆಯಲ್ಲೂ ಕೊರತೆ ಉಂಟಾಗಿದ್ದು, ಗ್ರಾಹಕರಿಗೆ ಕ್ಲಪ್ತ ಸಮಯದಲ್ಲಿ ವಾಹನಗಳನ್ನು ಪೂರೈಸಲು ಅಸಾಧ್ಯವಾದುದು ಕೂಡ ಇವುಗಳ ಮಾರಾಟ ಕಡಿಮೆಯಾಗಲು ಪ್ರಮುಖ ಕಾರಣಗಳಾಗಿವೆ ಎಂದು ವಿಶ್ಲೇಷಿಸಲಾಗಿದೆ. ಇದರ ಹೊರತಾಗಿಯೂ ಮುಂದಿನ ದಿನಗಳಲ್ಲಿ ವಾಣಿಜ್ಯ ವಾಹನಗಳ ಮಾರಾಟ ಚೇತರಿಕೆ ಕಾಣುವ ನಿರೀಕ್ಷೆಯನ್ನು ಡೀಲರ್‌ಗಳು ವ್ಯಕ್ತಪಡಿಸಿದ್ದಾರೆ. ಪಂಚರಾಜ್ಯ ಚುನಾವಣೆ ಫ‌ಲಿತಾಂಶದ ಬಳಿಕ ವಾಣಿಜ್ಯ ಚಟುವಟಿಕೆಗಳು ಬಿರುಸುಗೊಳ್ಳಲಿರುವ ಸಾಧ್ಯತೆ ಇರುವುದರಿಂದ ಹಾಗೂ ಕಲ್ಲಿದ್ದಲು ಮತ್ತು ಸಿಮೆಂಟ್‌ ವ್ಯಾಪಾರ ಬಿರುಸು ಪಡೆದಿರುವುದು ಕೂಡ ವಾಣಿಜ್ಯ ವಾಹನಗಳ ಮಾರಾಟ ಒಂದಿಷ್ಟು ಏರಿಕೆಯನ್ನು ಕಾಣುವ ನಿರೀಕ್ಷೆಯನ್ನು ಹುಟ್ಟಿಸಿದೆ. ಇದೇ ವೇಳೆ ಖಾಸಗಿ ವಾಹನಗಳ ಮಾರಾಟವೂ ಬಿರುಸು ಪಡೆದುಕೊಳ್ಳುವ ಆಶಾವಾದವನ್ನು ಆಟೋಮೊಬೈಲ್‌ ಕ್ಷೇತ್ರದ ಪರಿಣತರು ವ್ಯಕ್ತಪಡಿಸಿದ್ದಾರೆ.

ಇ.ವಿ. ಮಾರಾಟದಲ್ಲಿಯೂ ತೇಜಿ
ನವೆಂಬರ್‌ನಲ್ಲಿ ಎಲೆಕ್ಟ್ರಿಕಲ್‌ ವಾಹನ (ಇ.ವಿ.)ಗಳ ರಿಟೇಲ್‌ ಮಾರಾಟ ದಲ್ಲಿಯೂ ಶೇ. 25.5ರಷ್ಟು ಹೆಚ್ಚಳ ಕಂಡುಬಂದಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ 1.21 ಇ.ವಿ.ಗಳು ಮಾರಾಟವಾಗಿದ್ದರೆ, ಈ ವರ್ಷದ ನವೆಂಬರ್‌ನಲ್ಲಿ ಒಟ್ಟು 1.52ಲಕ್ಷ ಇ.ವಿ.ಗಳು ಮಾರಾಟವಾಗಿವೆ. ಇದೇ ವೇಳೆ 91,243 ಎಲೆಕ್ಟ್ರಾನಿಕ್‌ ದ್ವಿಚಕ್ರ ವಾಹನಗಳು ಮಾರಾಟವಾಗುವ ಮೂಲಕ ಶೇ.18.82 ಏರಿಕೆ ಕಂಡಿದೆ. ಇನ್ನು ಎಲೆಕ್ಟ್ರಾನಿಕ್‌ ತ್ರಿಚಕ್ರ ವಾಹನಗಳ ಮಾರಾಟದಲ್ಲಿಯೂ ಹೆಚ್ಚಳವಾಗಿದ್ದು ಈ ವರ್ಷದ ನವೆಂಬರ್‌ನಲ್ಲಿ 53, 766 ಇ.ವಿ. ತ್ರಿಚಕ್ರ ವಾಹನಗಳು ಮಾರಾಟವಾಗುವ ಮೂಲಕ ಶೇ. 32.37ರಷ್ಟು ಹೆಚ್ಚಳ ದಾಖಲಿಸಿದೆ. 7, 064 ಪ್ರಯಾಣಿಕ ವಾಹನಗಳು ಮತ್ತು 533 ಇ-ಬಸ್‌ಗಳು ನವೆಂಬರ್‌ನಲ್ಲಿ ಮಾರಾಟವಾಗಿದ್ದು ಕಳೆದ ವರ್ಷದ ನವೆಂಬರ್‌ಗೆ ಹೋಲಿಸಿದರೆ ಕ್ರಮವಾಗಿ ಶೇ. 77.35 ಮತ್ತು ಶೇ. 162ರಷ್ಟು ಏರಿಕೆಯಾಗಿದೆ.

ಮತ್ತೆ ಚೇತರಿಕೆ ಕಾಣುವ ವಿಶ್ವಾಸ
ಹಬ್ಬದ ಋತು ಮುಗಿಯುತ್ತಿದ್ದಂತೆಯೇ ವಾಹನ ಮಾರುಕಟ್ಟೆಯಲ್ಲಿ ಗಮನಾರ್ಹ ಇಳಿಕೆ ಕಂಡುಬರತೊಡಗಿದೆ. ಬೇಡಿಕೆ ಕಡಿಮೆಯಾಗಿರುವುದು ವಾಹನಗಳ ಪೂರೈಕೆ ಮೇಲೂ ಪರಿಣಾಮ ಬೀರಿದೆ. ವರ್ಷಾಂತ್ಯದ ಕೊಡುಗೆಗಳು, ಬೆಲೆಯಲ್ಲಿ ರಿಯಾಯಿತಿ, ಹೊಸ ವಾಹನಗಳು ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಮತ್ತು ವಾಹನಗಳ ಪೂರೈಕೆಯಲ್ಲಿ ಹೆಚ್ಚಳದ ಸಾಧ್ಯತೆಗಳ ಹಿನ್ನೆಲೆಯಲ್ಲಿ ದ್ವಿಚಕ್ರ, ಖಾಸಗಿ, ವಾಣಿಜ್ಯ ಸಹಿತ ಎಲ್ಲ ವಾಹನಗಳ ಮಾರಾಟ ಚೇತರಿಕೆಯನ್ನು ಕಾಣಲಿದೆ ಎಂಬ ವಿಶ್ವಾಸ ವಾಹನಗಳ ಡೀಲರ್‌ಗಳದ್ದಾಗಿದೆ.

 

ಟಾಪ್ ನ್ಯೂಸ್

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

The owner of the betting app promoted by Bollywood actresses is Pakistani!

Betting App; ಬಾಲಿವುಡ್‌ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್‌‌ ಮಾಲಕ ಪಾಕಿಸ್ತಾನಿ!

1-aaap

Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ

Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್

Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್

11-airtel

Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್

ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ

ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.