ಪಾನ್ ಇಂಡಿಯಾ ಸಿನಿಮಾದಂತೆ ಪಾನ್ ಇಂಡಿಯಾ ಮಾತಿಗೆ ಸಾಥ್ ನೀಡುತ್ತಿದೆ ಕೂ ಆಪ್‌ನ MLK ಫೀಚರ್

Team Udayavani, Aug 5, 2022, 3:25 PM IST

Koo App’s MLK feature supports Pan India talk

ಸದ್ಯ ಪಾನ್ ಇಂಡಿಯಾ ಸಿನಿಮಾಗಳು ಎಲ್ಲೆಡೆ ಸದ್ದು ಮಾಡುತ್ತಿವೆ. ನಿಮ್ಮ ಮಾತು ಕೂಡ ಪಾನ್ ಇಂಡಿಯಾ ಜನರನ್ನು ತಲುಪುತ್ತದೆ ಎಂದಾದರೆ ಎಷ್ಟು ಚಂದ ಅಲ್ಲವಾ? ಹೌದು, ಅದು ಕೂಡ ಈಗ ಸಾಧ್ಯ.

ಇನ್ನೇನು ನಮ್ಮ ದೇಸಿ ಆಟ ಕಬ್ಬಡಿಯ ರಂಗು ಎಲ್ಲೆಡೆ ಹಬ್ಬಲಿದೆ. ಬೆಂಗಳೂರು ಬುಲ್ಸ್ ನಾಯಕ ಪವನ್ ಕುಮಾರ್ ಸೆಹ್ರಾವತ್ ನಮ್ಮ ರಾಜ್ಯದ ತಂಡವನ್ನು ಪ್ರತಿನಿಧಿಸಿದರೂ ಅವರ ಮಾತೃಭಾಷೆ ಹಿಂದಿ. ಸಾಮಾಜಿಕ ಜಾಲತಾಣದಲ್ಲಿ ಅವರ ಮಾತು ಕನ್ನಡದಲ್ಲಿ ನೋಡಿ ಇಲ್ಲಿನ ಅವರ ಅಭಿಮಾನಿಗಳಿಗಂತೂ ಎಲ್ಲಿಲ್ಲದ ಸಂಭ್ರಮ. ಕನ್ನಡ ಅಷ್ಟೇ ಅಲ್ಲ ಅವರು ಒಂದೇ ಸಮಯದಲ್ಲಿ ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಬೆಂಗಾಲಿ, ಅಸ್ಸಾಮಿ, ಪಂಜಾಬಿ ಮತ್ತು ಇಂಗ್ಲೀಶ್ ನಲ್ಲಿ ಸಂವಹನ ನಡೆಸುತ್ತಿದ್ದಾರೆ.

ಇದು ಸಾಧ್ಯವಾಗಿರುವುದು ಕೂ ವೇದಿಕೆಯ ಒಂದು ವಿಶಿಷ್ಟ ಫೀಚರ್ ಬಹು-ಭಾಷಾ ಕೂ (ಎಂಎಲ್ ಕೆ) ಮೂಲಕ. ಈ ಫೀಚರ್ ನಿಂದಾಗಿ ನಿಮ್ಮ ಬರಹ ಒಂಬತ್ತು ಇತರ ಭಾಷೆಗಳಿಗೆ ನೈಜ-ಸಮಯದ ಮೂಲ ಬರಹಕ್ಕೆ ಶೇ 90ರಷ್ಟು ನಿಖರತೆಯಲ್ಲಿ ಅನುವಾದಗೊಳ್ಳುತ್ತದೆ.

ಹೀಗಾಗಿ ಸೆಹ್ರಾವತ್ ಅವರಿಗೆ ಅಸನ್ಸೋಲ್‌ನಿಂದ ಅಹಮದಾಬಾದ್ ಮತ್ತು ಬಟಿಂಡಾದಿಂದ ಬೆಂಗಳೂರಿನವರೆಗೆ ಅಭಿಮಾನಿಗಳಿದ್ದು, ಎಂಎಲ್ ಕೆ ಫೀಚರ್ ನಿಂದಾಗಿ ಅವರು ತಮ್ಮ ತಮ್ಮ ಭಾಷೆಯಲ್ಲಿಯೇ ಸೆಹ್ರಾವತ್ ಅವರ ಕೂ ಗಳನ್ನೂ ಪಡೆಯುತ್ತಿದ್ದಾರೆ. ಸೆಹ್ರಾವತ್ ಅವರು ಕೇವಲ ಒಂದು ಉದಾಹರಣೆ. ಈ ಎಂಎಲ್ ಕೆ ಫೀಚರ್ ಮೂಲಕ ಅನೇಕರು ವಿವಿಧ ಭಾಷೆಯ ಜನರನ್ನು ತಲುಪುತ್ತಿದ್ದಾರೆ.

ಬಹು-ಭಾಷಾ ಡಿಜಿಟಲ್ ಅಭಿವ್ಯಕ್ತಿ: ಭಾರತದಲ್ಲಿ 467 ಮಿಲಿಯನ್ ಜನರು ವಿವಿಧ ಸಾಮಾಜಿಕ ಮಾಧ್ಯಮ ಬಳಸುತ್ತಿದ್ದು, ದಿನಕ್ಕೆ 2.36 ಗಂಟೆಗಳ ಕಾಲ ವೇದಿಕೆಗಳಲ್ಲಿ ಕಳೆಯುತ್ತಿದ್ದಾರೆ. ಆನ್‌ಲೈನ್ ಸಂಭಾಷಣೆಗಳು ಹೆಚ್ಚಾಗಿ ಇಂಗ್ಲೀಶ್ ನಲ್ಲಿಯೇ ಇರುತ್ತದೆ ಆದರೆ, ಶೇ. 90ರಷ್ಟು ಭಾರತೀಯರು ಸ್ಥಳೀಯ ಭಾಷೆಯಲ್ಲಿಯೇ ಮಾತನಾಡುತ್ತಾರೆ. ಹೆಚ್ಚಾಗುತ್ತಿರುವ ಬಹು-ಭಾಷಾ ಸಾಮಾಜಿಕ ಮಾಧ್ಯಮಗಳು ಲಕ್ಷಾಂತರ ಮೊದಲ-ಬಾರಿ ಬಳಕೆದಾರರನ್ನು ಆಕರ್ಷಿಸಿದೆ. ಇದು ಸ್ಥಳೀಯ ಭಾಷೆ ಮಾತನಾಡುವವರನ್ನೂ ಒಳಗೊಂಡಿದೆ. ಇವರು ಈ ಮೊದಲು ಆಂಗ್ಲ ಪ್ರಧಾನವಾಗಿದ್ದ ವೇದಿಕೆಗಳಲ್ಲಿ ಕಳೆದುಹೋಗಿದ್ದೆವು ಎಂಬ ಭಾವವನ್ನು ಹೊಂದಿದ್ದವರು. ಈ ಬಳಕೆದಾರರು ಸಾಮಾಜಿಕ ಮಾಧ್ಯಮಗಳ ಚರ್ಚೆಗಳಲ್ಲಿ ಭಾಗವಹಿಸಲು, ಪ್ರಖ್ಯಾತ ವ್ಯಕ್ತಿಗಳೊಂದಿಗೆ ಸಂವಹನ ಮಾಡಲು ಮತ್ತು ತಮ್ಮದೇ ಭಾಷೆಯಲ್ಲಿ ಅಭಿವ್ಯಕ್ತಿಸುವ ಈಗ ಹೆಚ್ಚು ಆಸಕ್ತಿಯನ್ನು ತೋರುತ್ತಿದ್ದಾರೆ. ಜೊತೆಗೆ ಒಂದೇ ರೀತಿ ಆಸಕ್ತಿ ಇರುವ ಬೇರೆ ಬೇರೆ ಭಾಷೆಗಳ ಜನರೊಂದಿಗೆ ತಮ್ಮದೇ ಭಾಷೆಯಲ್ಲಿ ಸಂವಹನ ನಡೆಸಲು ಸಹ ಎದುರು ನೋಡುತ್ತಿದ್ದಾರೆ.

ಇದಕ್ಕೆ ಪ್ರಮುಖ ಕಾರಣ ಎಂದರೆ ಅದು  ಎಂಎಲ್ ಕೆ ಆಗಿದೆ. ನೀವು ತುಂಬ ಖುಷಿಯಲ್ಲಿ ಮಾತನಾಡುವ ಭಾಷೆಯಲ್ಲಿಯೇ ದೇಶದಾದ್ಯಂತ ಇರುವ ಜನರೊಂದಿಗೆ ಸಂವಹನ ನಡೆಸಬಹುದಾಗಿದೆ. ನೀವು ಪೋಸ್ಟ್ ಮಾಡಬೇಕೆನ್ನುವ ವಿಷಯವನ್ನು ಕೇವಲ ಒಂದು ಕ್ಲಿಕ್ ಮೂಲಕ ಕೂ ವೇದಿಕೆಯಲ್ಲಿನ ಒಟ್ಟು ಒಂಬತ್ತು ಭಾಷೆಗಳಿಗೆ ಅನುವಾದ ಮಾಡಬಹುದಾಗಿದೆ. ದೃಢವಾದ ಭಾಷಾ ತಂತ್ರಜ್ಞಾನಗಳಿಂದ ಬೆಂಬಲಿತವಾಗಿರುವುದರಿಂದ, ಅನುವಾದವು ಮೂಲ ವಿಷಯಕ್ಕೆ ಹೆಚ್ಚು ಹತ್ತಿರವಿರಲಿದೆ ಹಾಗು ಅದರ ಭಾವಾರ್ಥವನ್ನು ಉಳಿಸಿಕೊಂಡಿರಲಿದೆ.

ಇದನ್ನೂ ಓದಿ:ತಂದೆಯಿಂದಲೇ ಅತ್ಯಾಚಾರ: ಗಂಡು ಮಗುವಿಗೆ ಜನ್ಮ ನೀಡಿದ 8ನೇ ತರಗತಿ ವಿದ್ಯಾರ್ಥಿನಿ

ಬೆಂಗಾಲಿ ಮಾತನಾಡುವವರು ತಮಿಳು, ತೆಲುಗು ಮತ್ತು ಕನ್ನಡದವರೊಂದಿಗೆ ಸಂವಹನ ನಡೆಸಲು ಎಂಎಲ್ ಕೆ ಬಳಸಿಕೊಂಡು ತಮ್ಮ ವಿಷಯವನ್ನು ಅವರ ಭಾಷೆಗೆ  ಭಾಷಾಂತರಿಸಬಹುದಾಗಿದೆ. ಇದರಂತೆ ಇತರೆ ಸ್ಥಳೀಯ ಭಾಷೆಯ ಜನರು ತಾವು ಇಚ್ಚಿಸಿದ ಇತರೆ ಭಾಷೆಗಳ ಜನರೊಂದಿಗೆ ಯಾವುದೇ ಅಡೆತಡೆಗಳಿಲ್ಲದೆ ಮಾತನಾಡಬಹುದು.

ಎಂಎಲ್ ಕೆ ಮೂಲಕ ಶೇ. 30 ರಷ್ಟು ಸಂಭಾಷಣೆಗಳು: ಕೂನಲ್ಲಿನ ಸುಮಾರು ಶೇ. 30 ರಷ್ಟು ಸಂಭಾಷಣೆಗಳು ಎಂಎಲ್ ಕೆ ಮೂಲಕ ನಡೆಯುತ್ತಿದೆ. ಹಲವಾರು ಗಣ್ಯ ವ್ಯಕ್ತಿಗಳು (ಸೆಹ್ರಾವತ್‌ ರಂತಹ) ತಮ್ಮ ಮಾತೃಭಾಷೆಯಲ್ಲಿ ಜನಸಾಮಾನ್ಯರೊಂದಿಗೆ ಸಂವಹನ ನಡೆಸಲು ಮತ್ತು ಅಭಿಮಾನಿಗಳೊಂದಿಗೆ ತೊಡಗಿಸಿಕೊಳ್ಳಲು ಈ ಫೀಚರ್ ಅನ್ನು ಬಳಸುತ್ತಿದ್ದಾರೆ. ಈ ಮೂಲಕ ಸೆಹ್ರಾವತ್ ಅವರು 109.2K ಫಾಲ್ಲೋರ್ಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಹುಭಾಷಾ ಜಗತ್ತಿಗೆ: ಭಾರತದಂತೆಯೇ, ಪ್ರಪಂಚದ ಶೇ. 80 ರಷ್ಟು ಮಂದಿ ಸ್ಥಳೀಯ ಭಾಷೆಯನ್ನೇ ಮಾತನಾಡುತ್ತಾರೆ. ಯುರೋಪಿಯನ್, ಆಫ್ರಿಕನ್ ಅಥವಾ ಪ್ಯಾನ್-ಏಷ್ಯನ್ ಭಾಷೆಗಳನ್ನು ಮಾತನಾಡುವವರ ನಡುವೆ ಯಾವುದೇ ಅಡಚಣೆ ಇಲ್ಲದೆ ಸಂವಹನ ಸಾಧಿಸಲು, ಬಹು ಭಾಷಾ ಜಗತ್ತಿನ ಡಿಜಿಟಲ್ ಒಳಗೊಳ್ಳುವಿಕೆಯನ್ನು ಸಾಧಿಸಲು ಈ ಫೀಚರ್ ನೆರವಾಗಲಿದೆ. ವೈವಿಧ್ಯಮಯ ಸಂಸ್ಕೃತಿ ಮತ್ತು ಭೌಗೋಳಿಕತೆಯ ಜನರು ಒಟ್ಟಿಗೆ ಸೇರುವ, ಅವರ ಮನದಾಳವನ್ನು ಹಂಚಿಕೊಳ್ಳುವ ಮತ್ತು ಅವರ ಪರಂಪರೆಯನ್ನು ಸಂಭ್ರಮಿಸುವ ಸಾಮಾಜಿಕ ಮಾಧ್ಯಮವನ್ನು ಒಂದು ವಾಹಕವನಾಗಿ ಈ ಫೀಚರ್ ಬದಲಿಸಬಹುದಾಗಿದೆ.

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaap

Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ

Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್

Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್

11-airtel

Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್

ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ

ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ

1-trree

OnePlus 13 ಮುಂದಿನ ತಿಂಗಳು ಬಿಡುಗಡೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.