ಲಾವಾದಿಂದ ಅಗ್ಗದ ದರದ 5ಜಿ ಫೋನ್ ಬ್ಲೇಜ್ 5ಜಿ ಬಿಡುಗಡೆ
Team Udayavani, Nov 10, 2022, 6:35 PM IST
ನವದೆಹಲಿ: ಸ್ವದೇಶಿ ಕಂಪನಿಯಾದ ʻಲಾವಾ ಇಂಟರ್ನ್ಯಾಷನಲ್ ಲಿಮಿಟೆಡ್ʼ, ತನ್ನ ಲಾವಾ ಅಗ್ಗದ ದರದ 5G ಸ್ಮಾರ್ಟ್‌ಫೋನ್ ‘ಬ್ಲೇಜ್ 5 ಜಿ’ ಮೊಬೈಲ್ ಅನ್ನು ಬಿಡುಗಡೆ ಮಾಡಿದೆ.
ನ. 15ರ ಮಧ್ಯಾಹ್ನ 12 ಗಂಟೆಯಿಂದ Amazon.in ನಲ್ಲಿ 9,999 ರೂ.ಗಳ ವಿಶೇಷ ಆರಂಭಿಕ ಬೆಲೆಯಲ್ಲಿ ಮಾರಾಟವಾಗಲಿದೆ ಎಂದು ಘೋಷಿಸಿದೆ. ಈ ಕೊಡುಗೆಯು ಸೀಮಿತ ಸ್ಟಾಕ್‌ಗೆ ಮಾತ್ರವಿದ್ದು, ಈ ಸ್ಮಾರ್ಟ್‌ಫೋನ್‌ನ ನೈಜ ಬೆಲೆ 10,999 ರೂ. ಆಗಿರಲಿದೆ. ಇದು ವಿಶೇಷವಾಗಿ Amazon.in ಮಾತ್ರ ಮಾರಾಟವಾಗಲಿದೆ ಎಂದು ಸಂಸ್ಥೆಯು ಪ್ರಕಟಿಸಿದೆ.
ʻಲಾವಾ ಬ್ಲೇಜ್ 5Gʼಯನ್ನು ರೈಲ್ವೆ, ಸಂವಹನ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ʻಇಂಡಿಯಾ ಮೊಬೈಲ್ ಕಾಂಗ್ರೆಸ್-2022ʼ ರಲ್ಲಿ ಅನಾವರಣಗೊಳಿಸಿದರು.
ಹಿನ್ನೆಲೆಯಲ್ಲಿ ಯೂಟ್ಯೂಬ್ ಕಾರ್ಯನಿರ್ವಹಣೆ:
ʻಲಾವಾ ಬ್ಲೇಜ್ 5Gʼ ವಿಶೇಷ ವೈಶಿಷ್ಟ್ಯದೊಂದಿಗೆ ಬರುತ್ತಿದ್ದು, ಇದರಲ್ಲಿ ʻಯೂಟ್ಯೂಬ್ʼ ಅಪ್ಲಿಕೇಶನ್ ಅನ್ನು ತೆರೆಯದೆ ಹಿನ್ನೆಲೆಯಲ್ಲಿ ಅದು ಕಾರ್ಯನಿರ್ವಹಿಸುತ್ತದೆ. ಇದು ಬಳಕೆದಾರರಿಗೆ ಮಲ್ಟಿ-ಟಾಸ್ಕಿಂಗ್ ಮಾಡುವಾಗ ತಮ್ಮ ನೆಚ್ಚಿನ ವೀಡಿಯೊಗಳನ್ನು ಪ್ಲೇ ಮಾಡಲು ಅನುವು ಮಾಡಿಕೊಡುತ್ತದೆ. ಈ ವೈಶಿಷ್ಟ್ಯವನ್ನು ಯೂಟ್ಯೂಬ್‍ನಲ್ಲಿ ಪ್ರತ್ಯೇಕವಾಗಿ ಪಡೆಯಲು ಯೂಟ್ಯೂಬ್ ಗೆ ಹಣ ನೀಡಿ ಚಂದಾದಾರರಾಗಬೇಕು. ಆದರೆ ಲಾವಾ ಬ್ಲೇಜ್ 5 ಜಿ ಫೋನಿನಲ್ಲಿ ಈ ವೈಶಿಷ್ಟ್ಯ ಉಚಿತವಾಗಿ ದೊರಕುತ್ತಿದೆ.
ʻಮೀಡಿಯಾಟೆಕ್ ಡೈಮೆನ್ಸಿಟಿ 700ʼ ಪ್ರೊಸೆಸರ್ ಹೊಂದಿರುವ ಈ ಫೋನು, 2.2 GHz ವೇಗವನ್ನು ಹೊಂದಿದೆ.
ಲಾವಾ ಇಂಟರ್ನ್ಯಾಷನಲ್ ಲಿಮಿಟೆಡ್ʼನ ಉತ್ಪನ್ನ ವಿಭಾಗದ ಮುಖ್ಯಸ್ಥ ತೇಜಿಂದರ್ ಸಿಂಗ್ ಮಾತನಾಡಿ, “ಬ್ಲೇಜ್ ಸ್ಮಾರ್ಟ್ ಫೋನ್ ಮೂಲಕ 5G ಸೌಲಭ್ಯವನ್ನು ಭಾರತೀಯರಿಗೆ ಕೈಗೆಟುಕುವ ಬೆಲೆಯಲ್ಲಿ ಒದಗಿಸಲಾಗುತ್ತಿದೆ. ʻಮೀಡಿಯಾಟೆಕ್ ಡೈಮೆನ್ಸಿಟಿ 700ʼ ಪ್ರೊಸೆಸರ್ ಮತ್ತು ಭಾರತದಲ್ಲಿ ಲಭ್ಯವಿರುವ ಎಲ್ಲ 5G ಬ್ಯಾಂಡ್‌ಗಳನ್ನು ಹೊಂದಿರುವ ʻಬ್ಲೇಜ್ 5Gʼ, ʻಆಲ್ ರೌಂಡರ್ʼ ಸ್ಮಾರ್ಟ್‌ಫೋನ್ ಆಗಿದೆ,’’ ಎಂದು ಹೇಳಿದರು.
ಈ 5G ಸ್ಮಾರ್ಟ್‌ಫೋನ್, ಪ್ರೀಮಿಯಂ ಗ್ಲಾಸ್ ಬ್ಯಾಕ್ ವಿನ್ಯಾಸವನ್ನು ಹೊಂದಿದೆ. ʻಆಂಡ್ರಾಯ್ಡ್ 12 ಓಎಸ್ʼ ಜೊತೆಗೆ ಅನಾಮಧೇಯ ಕಾಲ್ ರೆಕಾರ್ಡಿಂಗ್ ವೈಶಿಷ್ಟ್ಯ ಒಳಗೊಂಡಿದೆ. ಹಿಂಬದಿಯಲ್ಲಿ ʻಇಐಎಸ್ʼ ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್‌ನ ʻಎಐʼ(AI) ಟ್ರಿಪಲ್ ಕ್ಯಾಮೆರಾ ಹಾಗೂ ಉತ್ತಮ ಫೋಟೋಗ್ರಫಿ ಅನುಭವ ಮತ್ತು ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್ ಮುಂಬದಿಯ ಕ್ಯಾಮೆರಾವನ್ನು ಹೊಂದಿದೆ. 4GB+ 3GB ವರ್ಚುವಲ್ RAM ಮತ್ತು 128 GB ಆಂತರಿಕ ಸಂಗ್ರಹ ಹೊಂದಿದ್ದು, 5000 mAh ಬ್ಯಾಟರಿಯನ್ನು ಹೊಂದಿದೆ.
ಇದು 6.5 ಇಂಚಿನ HD+ IPS ಡಿಸ್‌ಪ್ಲೇಯನ್ನು ಹೊಂದಿದ್ದು, 90Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಹೊಂದಿದೆ.
ಮಾರಾಟದ ನಂತರ ಗ್ರಾಹಕರ ಅನುಭವಕ್ಕಾಗಿ, ‘ಮನೆಯಲ್ಲೇ ಉಚಿತ ಸೇವೆ’ಯನ್ನು ಒದಗಿಸಲಾಗುವುದು. ಅಂದರೆ, ಗ್ರಾಹಕರ ಮನೆ ಬಾಗಿಲಿಗೆ ಸರ್ವಿಸ್ (ಆನ್ ಸೈಟ್ ವಾರಂಟಿ) ಒದಗಿಸಲಾಗುತ್ತದೆ (ಗ್ರಾಹಕರು ಫೋನ್‌ನ ವಾರಂಟಿ ಅವಧಿಯೊಳಗೆ ಈ ಸೇವೆಯನ್ನು ಪಡೆಯಬಹುದು) ಎಂದು ಕಂಪೆನಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.