ಲಾವಾ ಪ್ರೊಬಡ್ಸ್ 21: ಭರ್ಜರಿ ಬ್ಯಾಟರಿಯ ಇಯರ್ ಬಡ್ಸ್

Team Udayavani, Aug 11, 2022, 7:11 PM IST

18-erabuds

ಮೊಬೈಲ್‍ ಫೋನಿಗೆ ಕರೆ ಬಂದಾಗ ಕಿವಿಯ ಬಳಿ ಮೊಬೈಲ್‍ ಹಿಡಿದೇ ಮಾತಾಡಬೇಕಾದ ಅಥವಾ ಹೆಗಲಿಗೆ ಮೊಬೈಲ್‍ ಒತ್ತಿಕೊಂಡು ಕತ್ತನ್ನು ವಾಲಿಸಿಕೊಂಡೇ ಮಾತಾಡಬೇಕಾದ ಅವಶ್ಯಕತೆ ಈಗ ಇಲ್ಲ.  ವೈರಿನ ಇಯರ್‍ ಫೋನ್‍ ಗಳನ್ನು ಕತ್ತಿನ ಸುತ್ತ ಹಾಕಿಕೊಂಡು ಅದರ ಬಟನ್‍ ಒತ್ತಿ ಕರೆ ಸ್ವೀಕರಿಸುವ ವಿಧಾನ ಈಗ ಹಳೆಯದಾಯ್ತು.  ಈಗ ಟ್ರೂ ವಯರ್‍ ಲೆಸ್‍ ಇಯರ್‍ ಬಡ್‍ಗಳ ಕಾಲ. ಎರಡು ಇಯರ್‍ ಬಡ್‍ಗಳ ಪೈಕಿ ಒಂದನ್ನು ಕಿವಿಯಲ್ಲಿ ಹಾಕಿಕೊಂಡು, ಕರೆ ಬಂದಾಗ ಎರಡು ಬಾರಿ ಟಕ್‍ ಟಕ್‍ ಎಂದು ಟಚ್‍ ಮಾಡಿ ಕರೆ ಸ್ವೀಕರಿಸಿ, ಕೈಯಲ್ಲಿ ಮೊಬೈಲ್‍ ಹಿಡಿಯದೇ ಫ್ರೀಯಾಗಿ ಮಾತಾಡುವ ಕಾಲ ಇದು. ಒಮ್ಮೆ ಈ ಟಿಡಬ್ಲೂಎಸ್‍ ಗಳು ರೂಢಿಯಾಗಿಬಿಟ್ಟರೆ ಆಯಿತು, ನಂತರ ಕಿವಿಗೆ ಮೊಬೈಲ್‍ ಹಿಡಿದು ಮಾತನಾಡುವುದು ರೇಜಿಗೆ ಎನಿಸಿಬಿಡುತ್ತದೆ! ಅಲ್ಲದೇ ಬೇಕೆನಿಸಿದಾಗ ಎರಡೂ ಟಿಡಬ್ಲೂಎಸ್‍ ಗಳನ್ನು ಹಾಕಿಕೊಂಡು ಹಾಡು ಕೇಳುತ್ತಿದ್ದರೆ ಅದರ ಮಜವೇ ಬೇರೆ!

ಇಂಥ ಟಿಡಬ್ಲೂಎಸ್‍ಗಳು ಈಗ ಒಂದು ಸಾವಿರ ರೂ. ಗಳಿಂದ ಹಿಡಿದು 25 ಸಾವಿರ ರೂ.ಗಳವರೆಗೂ ಇವೆ. ಇವುಗಳಲ್ಲಿ ನಮಗೆ ಬೇಕಾದ ಬಜೆಟ್‍ ನಲ್ಲಿ ಸೂಕ್ತವಾದುವುಗಳನ್ನು ಆರಿಸಿಕೊಳ್ಳಬಹುದು.  ಅತ್ಯಂತ ಕಡಿಮೆ ಬಜೆಟ್‍ ನಲ್ಲಿ ಟಿಡಬ್ಲೂಎಸ್‍ ಬೇಕು ಎನ್ನುವವರಿಗಾಗಿ ಲಾವಾ ಕಂಪೆನಿ ಪ್ರೊಬಡ್ಸ್ 21 ಹೊರತಂದಿದೆ. ಇದರ ದರ ಅಮೆಜಾನ್‍. ಇನ್‍ ಹಾಗೂ ಫ್ಲಿಪ್‍ ಕಾರ್ಟ್ ನಲ್ಲಿ 1599 ರೂ. ಇದೆ. ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ದೊರೆಯುತ್ತದೆ.

ಇದು ಮಧ್ಯ ಕಿವಿಯೊಳಗೆ ಕುಳಿತುಕೊಳ್ಳುವಂತೆ ವಿನ್ಯಾಸಗೊಳಿಸಲಾದ ಇಯರ್‍ ಬಡ್‍. ಮೂರು ಅಳತೆಗಳ ಇಯರ್‍ ಟಿಪ್‍ಗಳಿವೆ. ನಿಮ್ಮ ಕಿವಿಯ ಕಿಂಡಿಯೊಳಗೆ ಸರಿಯಾಗಿ ಕುಳಿತುಕೊಳ್ಳುವ ಇಯರ್‍ ಟಿಪ್‍ ಹಾಕಿಕೊಂಡು ಬಳಸಬಹುದು. ಇಯರ್‍ ಬಡ್‍ನ ಕಡ್ಡಿಗಳು (ಸ್ಟೆಮ್‍) ಕೊಂಚ ಉದ್ದ ಇವೆ. ಈಗ ಬರುತ್ತಿರುವ ಬಡ್‍ ಗಳಲ್ಲಿ ಹೆಚ್ಚು ಉದ್ದದ ಕಡ್ಡಿಗಳಿರುವುದಿಲ್ಲ. ಇದರ ಕೇಸ್‍ ಅಂಗೈಯಲ್ಲಿ ಮುಚ್ಚಿಕೊಳ್ಳಬಹುದಾದಷ್ಟು ಪುಟ್ಟದಾಗಿದೆ. ಜೇಬಲ್ಲಿರಿಸಿಕೊಳ್ಳಲು ಸೂಕ್ತವಾಗಿದೆ. ಇದು ಐಪಿಎಕ್ಸ್ 4 ರೇಟಿಂಗ್‍  ಹೊಂದಿದ್ದು, ನೀರು, ಬೆವರು ನಿರೋಧಕವಾಗಿದೆ. ವಿನ್ಯಾಸದ ಗುಣಮಟ್ಟ ಈ ದರದಲ್ಲಿ ಚೆನ್ನಾಗಿದೆ.

ಇದು  12 ಮಿ.ಮೀ. ಡ್ರೈವರ್ಸ್ ಹೊಂದಿದೆ. ಎರಡೂ ಬಡ್‍ ಗಳನ್ನು ಹಾಕಿಕೊಂಡು ಹಾಡು ಸಂಗೀತ ಕೇಳಿದಾಗ  ಈ ದರಕ್ಕೆ ಉತ್ತಮವಾಗಿಯೇ ಇದೆಯಲ್ಲ ಅನಿಸುತ್ತದೆ. ಇದು ಮೀಡಿಯಂ ಬಾಸ್‍ ಹೊಂದಿದೆ. ನಿಮ್ಮ ಕಿವಿಯ ನಾಲೆ ಮುಚ್ಚಿಕೊಳ್ಳುವಂತೆ ಇಯರ್‍ ಟಿಪ್‍ ಹಾಕಿಕೊಂಡರೆ ಬಾಸ್‍ ಸಹ ಚೆನ್ನಾಗಿ ಕೇಳಿಬರುತ್ತದೆ.  ಧ್ವನಿ ಮತ್ತು ಸಂಗೀತ ವಾದ್ಯಗಳ ಶಬ್ದ ಸ್ಪಷ್ಟವಾಗಿ ಕೇಳಿಬರುತ್ತದೆ.   ಒಟ್ಟಾರೆಯಾಗಿ ಹಾಡು ಸಂಗೀತ ಆಲಿಸಲು ಈ ಬಡ್ಸ್ ಈ ದರಪಟ್ಟಿಯಲ್ಲಿ ಉತ್ತಮವಾಗಿಯೇ ಇದೆ ಎಂದೆನಿಸಿತು.

ಸಂಗೀತ ಆಲಿಕೆ ಅಲ್ಲದೇ, ಕರೆ ಮಾಡಲು, ಕರೆ ಸ್ವೀಕರಿಸಲು ಸಹ ಈ ಇಯರ್‍ ಬಡ್‍ ಬಳಸಬಹುದು. ಆ ಕಡೆ ಕರೆ ಆಲಿಸುವವರಿಗೆ ಸ್ವಲ್ಪ ಅಸ್ಪಷ್ಟ ಎನಿಸುತ್ತದೆ. ಒಳಾಂಗಣದಲ್ಲಿ ಮಾತನಾಡುವಾಗ ಪರವಾಗಿಲ್ಲ. ಹೊರಾಂಗಣದಲ್ಲಿ, ಗಾಳಿ ಬೀಸುವಿಕೆ ಇದ್ದಾಗ  ಆ ಕಡೆ ಕರೆ ಆಲಿಸುವವರಿಗೆ ಮಾತು ಸ್ಪಷ್ಟವಾಗಿ ಕೇಳಿಬರುವುದಿಲ್ಲ.  ಈ ದರಪಟ್ಟಿಯಲ್ಲಿ ಅದನ್ನು ನಿರೀಕ್ಷಿಸುವಂತೆಯೂ ಇಲ್ಲ! ಆದರೂ ಮನೆ, ಕಚೇರಿಯೊಳಗೆ ಕುಳಿತು ಮೊಬೈಲ್‍ನಲ್ಲಿ ಮಾತನಾಡಲು ಇದು ಸಾಕು.

ಈ ಇಯರ್‍ ಬಡ್‍ನ ದೊಡ್ಡ ಪ್ಲಸ್‍ ಪಾಯಿಂಟ್‍ ಎಂದರೆ ಇದರ ಬ್ಯಾಟರಿ. ಬಡ್‍ನಲ್ಲಿ 60 ಎಂಎಎಚ್‍ ಬ್ಯಾಟರಿ ಇದ್ದು, ಸುಮಾರು ಆರರಿಂದ ಏಳು ಗಂಟೆ ಕಾಲ ಬಳಸಬಹುದು. ಕೇಸ್‍ ಮತ್ತು ಬಡ್ಸ್ ನಿಂದ ಒಟ್ಟು ಸುಮಾರು 40 ಗಂಟೆಗಳ ಬ್ಯಾಟರಿ ಬಾಳಿಕೆ ಬರುತ್ತದೆ.  ಕೇಸ್‍ ಅನ್ನು ಚಾರ್ಜ್‍ ಮಾಡಲು ಟೈಪ್‍ ಸಿ ಪೋರ್ಟ್ ನೀಡಲಾಗಿದೆ.

ಒಟ್ಟಾರೆ ಒಂದೂವರೆ ಸಾವಿರ ರೂ. ದರಪಟ್ಟಿಯಲ್ಲಿ ಪರಿಗಣಿಸಬಹುದಾದ ಇಯರ್‍ ಬಡ್‍ ಲಾವಾ  ಪ್ರೊ ಬಡ್ಸ್ 21.

-ಕೆ.ಎಸ್‍. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ

GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ

Pro Kabaddi League-11: ಇಂದು ಎಲಿಮಿನೇಟರ್‌ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ

Pro Kabaddi League-11: ಇಂದು ಎಲಿಮಿನೇಟರ್‌ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ

ICC : 904 ರೇಟಿಂಗ್‌ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್‌ ಬುಮ್ರಾ

ICC : 904 ರೇಟಿಂಗ್‌ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್‌ ಬುಮ್ರಾ

Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್‌ ಎದುರಾಳಿ

Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್‌ ಎದುರಾಳಿ

Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ

Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ

Bangla–Pak

ಬಾಂಗ್ಲಾದೇಶದ ಭಾರತ ವಿರೋಧಿ ಮನಃಸ್ಥಿತಿ ಖಂಡನೀಯ

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!

YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!

ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ

ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ

ಶೀಘ್ರವೇ ದೇಶದ ಬುಲೆಟ್‌; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್‌ ಬುಲೆಟ್‌ ರೈಲು ಯೋಜನೆ

ಶೀಘ್ರವೇ ದೇಶದ ಬುಲೆಟ್‌; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್‌ ಬುಲೆಟ್‌ ರೈಲು ಯೋಜನೆ

ನಿಸ್ಸಾನ್‌-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!

Japan rivals: ನಿಸ್ಸಾನ್‌-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!

ISRO 2

ISRO; ಬಾಹ್ಯಾಕಾಶದಲ್ಲಿ ಅಲಸಂಡೆ, ಪಾಲಕ್‌ ಬೆಳೆಯಲು ಪ್ಲಾನ್‌!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ

GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ

Pro Kabaddi League-11: ಇಂದು ಎಲಿಮಿನೇಟರ್‌ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ

Pro Kabaddi League-11: ಇಂದು ಎಲಿಮಿನೇಟರ್‌ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ

ICC : 904 ರೇಟಿಂಗ್‌ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್‌ ಬುಮ್ರಾ

ICC : 904 ರೇಟಿಂಗ್‌ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್‌ ಬುಮ್ರಾ

Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್‌ ಎದುರಾಳಿ

Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್‌ ಎದುರಾಳಿ

Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ

Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.