ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಬಳಿ ಇವೆ ದುಬಾರಿ ಕಾರುಗಳು… ಬೆಲೆ ಎಷ್ಟು ಗೊತ್ತಾ
Team Udayavani, Dec 21, 2022, 5:42 PM IST
ಅರ್ಜೆಂಟೀನಾ: ಕತಾರ್‌ನ ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್‌ನ ಫೈನಲ್ ಪಂದ್ಯವು ನೆನಪಿಡುವ ಪಂದ್ಯವಾಗಿತ್ತು. ಫ್ರಾನ್ಸ್ ಮತ್ತು ಅರ್ಜೆಂಟೀನಾ ನಡುವೆ ನಡೆದ ಫೈನಲ್ ಪಂದ್ಯಾವಳಿಯಲ್ಲಿ ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡ ಜಯಗಳಿಸಿತ್ತು. ಮೆಸ್ಸಿ ಅವರ ಪಂದ್ಯಾವಳಿ ನೋಡಲು ಅವರ ಅಭಿಮಾನಿಗಳು ದುಂಬಾಲು ಬೀಳುತ್ತಾರೆ, ಆದರೆ ಮೆಸ್ಸಿ ಕೇವಲ ಫುಟ್ಬಾಲ್ ಗೆ ಮಾತ್ರ ಸೀಮಿತವಲ್ಲ ಅವರೊಬ್ಬ ಹವ್ಯಾಸಿ ಕಾರು ಸಂಗ್ರಹಕಾರ.
ಅಂದಹಾಗೆ ಮೆಸ್ಸಿ ಬಳಿ ಹಲವಾರು ಐಷಾರಾಮಿ ಕಾರುಗಳೂ ಕೂಡಾ ಇವೆಯಂತೆ ಅವರಿಗೆ ಹೊಸ ಹೊಸ ಕಾರುಗಳನ್ನು ಕೊಳ್ಳುವುದೇ ಒಂದು ಹವ್ಯಾಸವಂತೆ ಕೋಟಿ ಕೋಟಿ ರೂ. ಮೌಲ್ಯದ ಫೆರಾರಿಯಿಂದ ಮರ್ಸಿಡಿಸ್‌ವರೆಗೆ ಹಲವಾರು ಐಷಾರಾಮಿ ಕಾರುಗಳು ಮೆಸ್ಸಿ ಬಳಿ ಇವೆ. ಬನ್ನಿ ಮೆಸ್ಸಿ ಬಳಿ ಯಾವೆಲ್ಲಾ ಕಾರುಗಳಿವೆ ಎಂಬುದನ್ನು ನೋಡೋಣ.
1. ಫೆರಾರಿ F430 ಸ್ಪೈಡರ್
ಮೆಸ್ಸಿ ಬಳಿ ದುಬಾರಿ ಕಾರುಗಳಲ್ಲಿ ಒಂದಾದ ಫೆರಾರಿ F430 ಸ್ಪೈಡರ್ ಕಾರು ಇದ್ದು ಇದು 4.3-ಲೀಟರ್ V8 ಎಂಜಿನ್‌ನಿಂದ ಚಾಲಿತವಾಗಿದೆ. ಜೊತೆಗೆ 476 bhp ಗರಿಷ್ಠ ಶಕ್ತಿ ಮತ್ತು 465 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು ಗಂಟೆಗೆ 311 ಕಿಮೀ ವೇಗವನ್ನು ಹೊಂದಿದ್ದು, ಕೇವಲ 4.1 ಸೆಕೆಂಡುಗಳಲ್ಲಿ 0-100 ಕಿಮೀ ವೇಗವನ್ನು ಪಡೆಯಯುವ ಶಕ್ತಿ ಹೊಂದಿದೆ. ಈ ಸೂಪರ್ ಕಾರಿನ ಬೆಲೆ 2.10 ಕೋಟಿ ರೂ.
2. ಪಗಾನಿ ಝೋಂಡಾ
ಮೆಸ್ಸಿ ಇಟಾಲಿಯನ್ ಸೂಪರ್‌ಕಾರ್ ಅನ್ನು ಕೂಡಾ ಹೊಂದಿದ್ದಾರೆ, ಪಗಾನಿ ಝೋಂಡಾ, ಟ್ರಿಕಾಲೋರ್ ಆವೃತ್ತಿ ಹೊಂದಿದ್ದು. ಇದು 651 bhp ಮತ್ತು 779 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ 7.3-ಲೀಟರ್ V12 ಎಂಜಿನ್ ಅನ್ನು ಹೊಂದಿದೆ. ಈ ದುಬಾರಿ ಕಾರಿನ ಬೆಲೆ ರೂ. 16.5 ಕೋಟಿ .
3. ಮಸೆರಟಿ ಗ್ರಾಂಟ್ಯುರಿಸ್ಮೊ ಎಂಸಿ ಸ್ಟ್ರಾಡೇಲ್
ಮೆಸ್ಸಿ ಬಳಿ ಮಾಸೆರೋಟಿ ಗ್ರಾಂಟ್ಯುರಿಸ್ಮೊ ಎಂಸಿ ಸ್ಟ್ರಾಡೇಲ್ ಎಂಬ ದುಬಾರಿ ಕಾರು ಇದೆ, ಇದು 4.7-ಲೀಟರ್ V8 ಎಂಜಿನ್ ಹೊಂದಿದ್ದು ಮತ್ತು 444 bhp ಮತ್ತು 510 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರಿನ ಗರಿಷ್ಠ ವೇಗವು 289 kmph ಆಗಿದೆ ಮತ್ತು ಇದು 0-100 kmph ನಿಂದ 4.9 ಸೆಕೆಂಡುಗಳಲ್ಲಿ ವೇಗವನ್ನು ಪಡೆಯಲಿದೆಯಂತೆ. ಈ ಕಾರಿನ ಬೆಲೆ 2.51 ಕೋಟಿ ರೂ.
4. ಮರ್ಸಿಡಿಸ್ SLS AMG
ಮೆಸ್ಸಿಯ ಅಮೂಲ್ಯ ಆಸ್ತಿಗಳಲ್ಲಿ ಮರ್ಸಿಡಿಸ್ SLS AMG ಕೂಡಾ ಒಂದು. ಈ ಕಾರು 6.2-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ಸ್ವಯಂಚಾಲಿತ ಪ್ರಸರಣದೊಂದಿಗೆ ಸಂಯೋಜಿಸಲ್ಪಟ್ಟಿದೆ. ಇದು ಗರಿಷ್ಠ 563 bhp ಪವರ್ ಮತ್ತು 650 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 317 kmph ಗರಿಷ್ಠ ವೇಗವನ್ನು ಹೊಂದಿದೆ. ಅಷ್ಟು ಮಾತ್ರವಲ್ಲದೆ ಮೆಸ್ಸಿಯ ಸಂಗ್ರಹದಲ್ಲಿರುವ ಅತ್ಯಂತ ಸುಂದರವಾದ ಕಾರುಗಳಲ್ಲಿ ಒಂದಾಗಿದೆ. ಈ ಕಾರಿನ ಬೆಲೆ 2.54 ಕೋಟಿ ರೂ.
5. ರೇಂಜ್ ರೋವರ್ : ವೋಗ್ ಮತ್ತು ಸ್ಪೋರ್ಟ್
ಮೆಸ್ಸಿ ಬಳಿ ರೇಂಜ್ ರೋವರ್ ನ ಸ್ಪೋರ್ಟ್ ಮತ್ತು ವೋಗ್ ಮಾಡೆಲ್ ಗಳ ಎರಡು ಕಾರುಗಳನ್ನು ಹೊಂದಿದ್ದಾರೆ. ಸ್ಪೋರ್ಟ್ ಐಷಾರಾಮಿ SUV 3.0-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದ್ದು ಅದು 345 bhp ಮತ್ತು 700 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 234 kmph ಗರಿಷ್ಠ ವೇಗವನ್ನು ಹೊಂದಿದೆ ಜೊತೆಗೆ ಕೇವಲ 5.9 ಸೆಕೆಂಡುಗಳಲ್ಲಿ 0-100 kmph ವೇಗವನ್ನು ಪಡೆಯಲಿದೆ.
ಮತ್ತೊಂದೆಡೆ, ವೋಗ್ 3.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು. ಇದು 394 bhp ಮತ್ತು 550 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 225 kmph ನ ಗರಿಷ್ಠ ವೇಗವನ್ನು ಹೊಂದಿದೆ ಮತ್ತು 0-100 kmph ನಿಂದ 6.5 ಸೆಕೆಂಡುಗಳಲ್ಲಿ ಸ್ಪ್ರಿಂಟ್ ಮಾಡಬಹುದು.
ಇದನ್ನೂ ಓದಿ: ಚಲಿಸುತ್ತಿದ್ದ ಬಸ್ಸಿನಲ್ಲೇ ಪತ್ನಿಯನ್ನು ಕೊಲೆಗೈದು ಪೊಲೀಸರು ಬರುವವರೆಗೂ ಬಸ್ಸಿನಲ್ಲೇ ಕುಳಿತ್ತಿದ್ದ ಕಾನ್‌ಸ್ಟೇಬಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.