ಮೊಬೈಲ್ ಮೇಲೇರುವ ಮಾಲ್ವೇರುಗಳು
Team Udayavani, Dec 28, 2020, 8:01 PM IST
ಮುಂಚೆಯೆಲ್ಲಾ ಮೊಬೈಲ್ ಎಂಬುದು ಶ್ರೀಮಂತರ ಸ್ವತ್ತಾಗಿತ್ತು. ಒಂದು ಕಾಲ್ ಮಾಡೋಕೆನಿಮಿಷಕ್ಕೆ ಹದಿನಾರು ರೂ. ಕೊಡೋ ಕಾಲ ಹೋಗಿ ಮೂರು ತಿಂಗಳಿಗೆ ಐನೂರುಕೊಟ್ಟು ಬಿಡಿ, ಎಷ್ಟಾದ್ರೂ ಮಾತಾಡ್ಕೊಳ್ಳಿ ಅನ್ನೋ ಕಾಲ ಬಂದಿದೆ. ಕೆಲವೇ ಸಾವಿರಕ್ಕೆ ಒಳ್ಳೊಳ್ಳೆ ಸ್ಮಾರ್ಟ್ ಫೋನ್‌ಗಳು ಎಲ್ಲರ ಜೇಬು ಸೇರಿವೆ. ಅದಕ್ಕೆ ಸರಿಯಾಗಿ ಡಿಜಿಟಲ್ ಪೇಮೆಂಟ್ ರಂಗದಲ್ಲಿನ ಕ್ರಾಂತಿಯಿಂದಾಗಿ ಹಣ ವರ್ಗಾವಣೆಗೂ ಮೊಬೈಲ್ ಅವಲಂಬನೆ ಹೆಚ್ಚಾಗಿದೆ. ಹೆಚ್ಚೆಚ್ಚು ಜನರ ಬಳಿ ಮೊಬೈಲ್ ಬಂದಂತೆಲ್ಲಾ ಈ ಮೊಬೈಲ್ ಮುಖಾಂತರವೇ ಜನರಮಾಹಿತಿಗೆ, ಗೌಪ್ಯತೆಗೆ, ದುಡ್ಡಿಗೆ ಕನ್ನಹಾಕಬಾರದ್ಯಾಕೆ? ಎಂಬ ಕಳ್ಳರತಲೆಯೂ ಚುರುಕಾಗಿದೆ. ಮೊಬೈಲ್ ಮೂಲಕ ಮಾಹಿತಿ, ದುಡ್ಡಿಗೆ ಕನ್ನವಾ? ಅದೇನೋ ಮಾಲ್ವೇರು ಅಂದ್ರಲ್ಲಾ, ಅದೇನು ಅಂದಿರಾ? ಮುಂದೆ ಓದಿ.
ಮೊಬೈಲ್ ಮಾಲ್ವೇರುಗಳು :
ನಮಗೆಲ್ಲಾ ಜ್ವರ, ಥಂಡಿ ಆದ್ರೆ ಅದು ಬ್ಯಾಕ್ಟೀರಿಯಾಗಳಿಂದ, ವೈರಸ್ಸುಗಳಿಂದ ಬರುತ್ತೆ ಅಂತಾರೆವೈದ್ಯರು. ಅದೇ ಥರ ಮೊಬೈಲ್‌ಗಳನ್ನು ಕಾಡೋ ವೈರಸ್ಸು, ಟ್ರೋಜನ್ನು,ವರ್ಮ್, ಸೈವೇರ್, ಬ್ಯಾಕ್‌ಡೋರ್, ಡ್ರಾಪರ್ ಮುಂತಾದವುಗಳನ್ನು ಮೊಬೈಲ್‌ಮಾಲ್ವೇರ್ ಎನ್ನಲಾಗುತ್ತೆ. ಇವೇನು, ಇವುಮೊಬೈಲ್‌ಗೆ ಹೇಗೆ ಹಾನಿ ಮಾಡಬಹುದು ಎಂದು ನೋಡೋಣ.
ವೈರಸ್ ಇದು ತನ್ನ ಕಾರ್ಯನಿರ್ವಹಣಾ ವಿಧಿ(ಕೋಡ್) ಅನ್ನು ಬೇರೆ ಪ್ರೋಗ್ರಾಂಗಳಲ್ಲಿ ತುರುಕಿ ತನ್ನ ಸಂಖ್ಯೆಯನ್ನುಬೆಳೆಸುತ್ತಾ ಹೋಗುತ್ತೆ. ಇದರಿಂದ ಏನಾಗುತ್ತೆ ಅಂದಿರಾ? 2016ರಲ್ಲಿ ಬಂದ ಹಮ್ಮಿಂಗ್ ಬ್ಯಾಡ್ ಎಂಬ ವೈರಸ್ 1 ಕೋಟಿ ಆಂಡ್ರ್ಯಾಡ್ ಬಳಕೆದಾರರ ಮೊಬೈಲಲ್ಲಿ ನುಸುಳಿತ್ತು! ಅವರ ಮಾಹಿತಿಗಳನ್ನೆಲ್ಲಾ ಜಾಹಿರಾತು ದಾರರಿಗೆ ಮಾರಿತ್ತು! ಗ್ರಾಹಕರಿಗೆ ಅರಿವಿಲ್ಲದಂತೆ ಅವರ ಮೊಬೈಲಿನಿಂದ ಜಾಹಿರಾತುಗಳ ಕ್ಲಿಕ್ ಮಾಡಿ ಅದೆಷ್ಟೋ ದುಡ್ಡು ದೋಚಿತ್ತು!
ವರ್ಮ್ :
ಎಸ್‌ಎಂಎಸ್ ಗಳ ಮೂಲಕ ಬರೋ ಇವುಗಳಿಗೆ ನಿಯಂತ್ರಣವಿಲ್ಲದಂತೆ ಬೆಳೆಯುವುದೇ ಕೆಲಸ. ಎಸ್‌ಎಂಎಸ್ ಅಲ್ಲಿ ಬಂದ ಯಾವುದೋ ಗೊತ್ತಿರದ ಲಿಂಕ್ ಒತ್ತಿದಿರಿ ಎಂದರೆ ಇವುಗಳು ನಿಮ್ಮ ಮೊಬೈಲನ್ನು ಆಕ್ರಮಿಸೋ ಎಲ್ಲಾ ಲಕ್ಷಣಗಳೂಇವೆ! ಮೊಬೈಲಲ್ಲಿ ಹೇಗಿದ್ರೂ ಜಿಬಿ ಗಟ್ಟಲೇ ಜಾಗವಿದೆ, ಬೆಳೆಯಲಿ ಬಿಡಿ ಎಂದು ನಿರ್ಲಕ್ಷಿಸುವಂತಿಲ್ಲ. ತಪ್ಪು ತಪ್ಪುಮಾಹಿತಿಯನ್ನು ಮೊಬೈಲು ತನ್ನ ಗ್ರಾಹಕರಿಗೆ ನೀಡುವಂತೆ ಇದು ಮಾಡಬಲ್ಲದು. ಮೊಬೈಲು ತನ್ನಿಂತಾನೇ ಬೇಕಾದ ತಾಣವನ್ನು ತೆಗೆದು ಬೇಕಾದ್ದದ್ದು ಮಾಡಲು ಆ ಮೊಬೈಲ್ ಒಡೆಯನ ಅಪ್ಪಣೆ ಬೇಡ ಇವಿದ್ದರೆ! ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್ ಅಲ್ಲಿರೋ ಎಲ್ಲರಿಗೆ, ನಿಮ್ಮ ಬ್ಲೂಟೂತ್ ಸಂಪರ್ಕದಲ್ಲಿರೋ ಎಲ್ಲರಿಗೂ ಇದು ಸೋಂಕನ್ನು ಹಚ್ಚಬಲ್ಲದು !
ಟ್ರೋಜನ್ನುಗಳು :
ಮುಂಚಿನವುಗಳಿಗಿಂತ ಸ್ವಲ್ಪ ಭಿನ್ನವಾದ ಇವುಗಳಿಗೆ ಕಾರ್ಯನಿರ್ವಹಿಸಲು ಮೊಬೈಲ್‌ಒಡೆಯನ ಅನುಮತಿ ಬೇಕು. ಹಾಗಾಗೇ ಇವು ತಮ್ಮ ಗುರುತು ಮರೆಸಿಕೊಂಡುದಾಳಿಯಿಡುತ್ತವೆ. ಯಾವುದೋ ವೆಬ್‌ಸೈಟಿಗೆಹೋದಾಗ ಅದು ಯಾವುದೋ ಉಚಿತ ಆ್ಯಪ್‌ಅನ್ನು ಡೌನ್ ಲೋಡ್ ಮಾಡಲುಹೇಳುತ್ತಿದೆಯೆಂದರೆ, ಆ ಆ್ಯಪ್ ಟ್ರೋಜನ್ ಆಗಿರುವ ಎಲ್ಲಾ ಸಾಧ್ಯತೆಯೂ ಇದೆ. ನೀವೇ ಆಮಂತ್ರಣ ಕೊಟ್ಟು ಕರೆದ ಮೇಲೆ ಇದು ಸುಮ್ಮನೇ ಬಿಟ್ಟಿತೆ? ನಿಮ್ಮಲ್ಲಿರೋ ಆ್ಯಪ್‌ಗಳನ್ನು ನಿಷ್ಕ್ರಿಯಗೊಳಿಸಿ, ನಿಮ್ಮ ಇ ಮೇಲ್, ಕ್ಯಾಲೆಂಡರ್ ಮುಂತಾದವುಗಳಲ್ಲಿರೋ ಎಲ್ಲಾ ಮಾಹಿತಿಯನ್ನು ದೋಚಿ ತನ್ನ ಸರ್ವರ್ ಗೆಕಳುಹಿಸುತ್ತವೆ. ನಿಮಗೆ ಆ ಮಾಹಿತಿ ಬೇಕು ಎಂದರೆ ಫೋನ್ ಸರಿಯಾಗಬೇಕು ಎಂದರೆ ದುಡ್ಡು ಕೊಡಿ ಎನ್ನುತ್ತೆ !
ಮಾಲ್ವೇರುಗಳಿಂದ ದೂರವಿರೋದು ಹೇಗೆ? : ಕಂಪ್ಯೂಟರಿನ ಸುರಕ್ಷತೆಗೆ ಎಷ್ಟು ಎಚ್ಚರ ವಹಿಸುತ್ತೀರೋ ಅಷ್ಟೇ ಎಚ್ಚರವನ್ನು ಮೊಬೈಲ್‌ಕುರಿತೂ ವಹಿಸಿ, ಗೊತ್ತಿಲ್ಲದ ನಂಬರ್‌ಗಳಿಂದಬರೋ ಸಂದೇಶಗಳಿಂದ, ಸಂಶಯಾಸ್ಪದಲಿಂಕುಗಳಿಂದ, ವೆಬ್ ಸೈಟುಗಳಿಂದ ದೂರವಿದ್ದರೆ, ನಿಮ್ಮ ಮೊಬೈಲನ್ನು ಈಮಾಲ್ವೇರುಗಳಿಂದ ರಕ್ಷಿಸಬಹುದು
– ಪ್ರಶಸ್ತಿ.ಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.