ಭಾರತದ ಗ್ರಾಹಕರಿಗಾಗಿ ವಿನ್ಯಾಸಗೊಳಿಸಿದ ಎಂಐ 10ಐ ಮೊಬೈಲ್ ಫೋನ್ ಬಿಡುಗಡೆ
Team Udayavani, Jan 5, 2021, 3:03 PM IST
ದೇಶದ ನಂ. 1 ಸ್ಮಾರ್ಟ್ ಫೋನ್ ಬ್ರಾಂಡ್ ಎಂಐ ಇಂಡಿಯಾ ಇಂದು ಮಿ 10 ಐ (5ಜಿ) ಎಂಬ ಹೊಸ ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. 108 ಮೆಗಾಪಿಕ್ಸಲ್ ಕ್ಯಾಮರಾ ಮತ್ತು ಸ್ನ್ಯಾಪ್ ಡ್ರಾಗನ್ 750ಜಿ ಪ್ರೊಸೆಸರ್ ಜೊತೆಗೆ 5ಜಿ ತಂತ್ರಜ್ಞಾನ ಹೊಂದಿರುವುದು ಇದರ ವಿಶೇಷತೆ.
2020 ರಿಂದ ಎಂಐ ಇಂಡಿಯಾ ಮತ್ತು ರೆಡ್‍ಮಿ ಪ್ರತ್ಯೇಕ ಬ್ರಾಂಡ್‍ಗಳಾಗಿ ವ್ಯವಹಾರ ನಿರ್ವಹಿಸುತ್ತಿವೆ. ಮಿ ಬ್ರಾಂಡ್ ಹೆಸರಿನಡಿ ಬಿಡುಗಡೆಯಾಗುವ ಫೋನ್‍ಗಳು ಮಧ್ಯಮ ವಲಯಕ್ಕಿಂತ ಮೇಲ್ಪಟ್ಟ ಹಾಗೂ ಪ್ರೀಮಿಯಂ ಫೋನ್‍ಗಳನ್ನು ಬಿಡುಗಡೆ ಮಾಡುತ್ತಿವೆ. ರೆಡ್‍ಮಿ ಬ್ರಾಂಡ್‍ನಲ್ಲಿ ಆರಂಭಿಕ ಮತ್ತು ಮಧ್ಯಮ ವಲಯದ ಫೋನ್‍ಗಳು ತಯಾರಾಗುತ್ತಿವೆ. ಎಂಐ 10 ಸರಣಿಯಲ್ಲಿ ಈಗಾಗಲೇ ಎಂಐ 10, ಎಂಐ 10ಟಿ ಹಾಗೂ ಎಂಐ 10ಟಿ ಪ್ರೊ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿವೆ. ಈ ಸರಣಿಗೆ ಹೊಸ ಸೇರ್ಪಡೆ ಇಂದು ಬಿಡುಗಡೆಯಾಗಿರುವ ಎಂಐ 10ಐ.
ಇದರಲ್ಲಿ ಅಳವಡಿಸಲಾಗಿರುವ ಸ್ನಾಪ್‍ಡ್ರಾಗನ್ 750ಜಿ ಪ್ರೊಸೆಸರ್ ಹೊಸ ಪ್ರೊಸೆಸರ್ ಆಗಿದ್ದು, 700 ಸರಣಿಯಲ್ಲೇ ಶಕ್ತಿಯುತ ಪ್ರೊಸೆಸರ್ ಆಗಿದೆ.
ಎಂಐ 10 ಐ ನಲ್ಲಿರುವ ಐ ಎಂಬುದು ಇಂಡಿಯಾ ಸೂಚಕವಾಗಿದ್ದು, ಇದನ್ನು ಭಾರತೀಯ ಮಾರುಕಟ್ಟೆಗೆಂದೇ ರೂಪಿಸಲಾಗಿದೆ. ಈ ಫೋನಿನಲ್ಲಿ ಎಂಐ ಇಂಡಿಯಾವು ಇಸ್ರೋ ಮತ್ತು ಕ್ವಾಲ್‍ಕಾಂ ಸಹಭಾಗಿತ್ವದೊಡನೆ NavIC ನ್ಯಾವಿಗೇಷನ್ ಸಿಸ್ಟಂ ಅಳವಡಿಸಿಕೊಂಡಿದೆ. NavIC ಇಸ್ರೋದ ಸ್ವದೇಶಿ ನ್ಯಾವಿಗೇಷನ್ ವ್ಯವಸ್ಥೆಯಾಗಿದ್ದು, ಅತ್ಯುತ್ತಮ, ನಿಖರ ಫಲಿತಾಂಶ ನೀಡುತ್ತದೆ ಎಂದು ಎಂಐ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನುಕುಮಾರ್ ಜೈನ್ ತಿಳಿಸಿದರು.
ಕ್ಯಾಮರಾ: ಹಾಗೆಯೇ ಎಂಐ 10ಐ, ಐಸೋಸೆಲ್ ಎಚ್‍ಎಂ2 108 ಮೆಗಾಪಿಕ್ಸಲ್ ಕ್ಯಾಮರಾ ಹೊಂದಿರುವ ಭಾರತದ ಮೊದಲ ಫೋನ್ ಆಗಿದೆ. ನಾಲ್ಕು ಹಿಂಬದಿ ಕ್ಯಾಮರಾ ಇದ್ದು, ಇದರಲ್ಲಿ 8 ಮೆ.ಪಿ. ಅಲ್ಟ್ರಾ ವೈಡ್ ಸೆನ್ಸರ್, 2 ಮೆ.ಪಿ. ಮ್ಯಾಕ್ರೋ ಮತ್ತು 2 ಮೆ.ಪಿ. ಡೆಪ್ತ್ ಸೆನ್ಸರ್ ಇದೆ. ಸೆಲ್ಫೀಗೆ 16 ಮೆ.ಪಿ.ಕ್ಯಾಮರಾ ಇದೆ.
ಡಿಸ್‍ಪ್ಲೇ: ಇದರಲ್ಲಿ 120 ಹರ್ಟ್ಜ್ ಇಂಟೆಲಿಜೆಂಟ್ ಅಡಾಪ್ಟಿವ್ ಸಿಂಕ್ ಡಿಸ್‍ಪ್ಲೇ ಅಳವಡಿಸಲಾಗಿದೆ. ಇದರ ವಿಶೇಷತೆ ಎಂದರೆ ಯಾವ ಕಂಟೆಂಟ್‍ಗೆ ಎಷ್ಟು ರಿಫ್ರೆಶ್ ರೇಟ್ ಅಗತ್ಯವೋ ಅದಕ್ಕೆ ಹೊಂದಿಕೊಳ್ಳುತ್ತದೆ. 30 ಹರ್ಟ್ಜ್ ನಿಂದ 120 ಹರ್ಟ್ಜ್ ನವರೆಗೆ ಆರು ಹಂತದ ರಿಫ್ರೆಶ್ ರೇಟ್ ಇದ್ದು ಅಗತ್ಯಕ್ಕೆ ತಕ್ಕಂತೆ ಹೊಂದಿಸಿಕೊಳ್ಳುತ್ತದೆ. ಇದರಿಂದ ಪರದೆಯ ಸರಿಸುವಿಕೆ ತುಂಬಾ ಮೃದುವಾಗಿ ಕಾರ್ಯಾಚರಿಸುತ್ತದೆ ಎಂದು ಕಂಪೆನಿ ತಿಳಿಸಿದೆ. ಈ ಡಿಸ್‍ಪ್ಲೇ ಎಚ್‍ಡಿಆರ್ 10 ಮತ್ತು ಎಚ್‍ಡಿಆರ್ 10 ಪ್ಲಸ್ ದೃಶ್ಯಗಳನ್ನು ಬೆಂಬಲಿಸುತ್ತದೆ. ಪರದೆಯ ಅಳತೆ 6.67 ಇಂಚಿದೆ. ಫುಲ್‍ಎಚ್‍ಡಿ ಪ್ಲಸ್ ಐಪಿಎಸ್ ಡಿಸ್‍ಪ್ಲೇ ಹೊಂದಿದೆ. ಪರದೆಯ ಮೇಲ್ಪದರ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದ್ದು, ಮೊಬೈಲ್‍ನ ಹಿಂಬದಿ ಹಾಗೂ ಕ್ಯಾಮರಾ ಲೆನ್ಸ್ ಗೂ ಗೊರಿಲ್ಲಾ ಗಾಜಿನ ರಕ್ಷಣೆಯಿದೆ.
ಬ್ಯಾಟರಿ: 4,820 ಎಂಎಎಚ್ ಬ್ಯಾಟರಿ ಹೊಂದಿದ್ದು, ಇದಕ್ಕೆ 33 ವ್ಯಾಟ್ಸ್ ವೇಗದ ಚಾರ್ಜರ್ ನೀಡಲಾಗಿದೆ. ಶೇ.68ರಷ್ಟು ಚಾರ್ಜ್ 30 ನಿಮಿಷದಲ್ಲಾಗುತ್ತದೆ. ಶೂನ್ಯದಿಂದ 100% ಚಾರ್ಜ್ 1 ಗಂಟೆಯೊಳಗಾಗುತ್ತದೆ ಎಂದು ತಿಳಿಸಿದೆ.
ಆಡಿಯೋ: ಹೈ ರೆಸ್ಯೂಲೇಷನ್ ಆಡಿಯೋ ಪ್ರಮಾಣಿತವಾಗಿದ್ದು ಎರಡು ಸ್ಟೀರಿಯೋ ಸ್ಪೀಕರ್ ಹೊಂದಿದೆ. 3.5 ಎಂ.ಎಂ. ಆಡಿಯೋ ಜಾಕ್ ಸೌಲಭ್ಯ ಇದೆ.
ಮೊಬೈಲ್‍ನ ಸೈಡ್‍ನಲ್ಲಿ ಬೆರಳಚ್ಚು ಶೋಧಕ ಇದ್ದು, ಅಂಡ್ರಾಯ್ಡ್ 10 ಆಧಾರಿತ ಎಂಐಯುಐ12 ಕಾರ್ಯಾಚರಣೆ ವ್ಯವಸ್ಥೆ ಹೊಂದಿದೆ.
ಅಮೆಜಾನ್.ಇನ್, ಎಂಐ.ಕಾಮ್, ಎಂಐ ಹೋಮ್ಸ್, ಎಂಐ ಸ್ಟುಡಿಯೋಸ್‍ಗಳಲ್ಲಿ ಜನವರಿ 7ರಿಂದ ಈ ಮೊಬೈಲ್ ಲಭ್ಯವಾಗಲಿದೆ.
ದರ: 6 ಜಿಬಿ ರ್ಯಾಮ್, 64 ಜಿಬಿ ಸಂಗ್ರಹ: 20,999 ರೂ.
6 ಜಿಬಿ ರ್ಯಾಮ್, 128 ಜಿಬಿ ಸಂಗ್ರಹ: 21,999 ರೂ.
8 ಜಿಬಿ ರ್ಯಾಮ್, 128 ಜಿಬಿ ಸಂಗ್ರಹ: 23,999 ರೂ.
ಐಸಿಐಸಿಐ ಕ್ರೆಡಿಟ್ ಕಾರ್ಡ್ ಬಳಸಿದರೆ 2000 ರೂ. ತಕ್ಷಣದ ರಿಯಾಯಿತಿ ಸಹ ದೊರಕುತ್ತದೆ.
-ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ
FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್
Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.