ಜನವರಿ 5ಕ್ಕೆ ಭಾರತೀಯ ಮಾರುಕಟ್ಟೆಗೆ MI 10i ಸ್ಮಾರ್ಟ್ ಪೋನ್ ಲಗ್ಗೆ: ವಿಶೇಷತೆಗಳೇನು?
108 ಮೆಗಾಫಿಕ್ಸೆಲ್ ಪ್ರಾಥಮಿಕ ಕ್ಯಾಮರಾವನ್ನು ಹೊಂದಿದ್ದು, ಅಲ್ಲದೆ ಮೊಬೈಲ್ ನ ಹಿಂಬದಿಯಲ್ಲಿ ನಾಲ್ಕು ಕ್ಯಾಮರಾ ಸೆನ್ಸರ್ ಅನ್ನು ಅಳವಡಿಸಲಾಗಿದೆ.
Team Udayavani, Jan 2, 2021, 9:00 PM IST
ನವದೆಹಲಿ: ವಿಶ್ವದ ಬಹುಬೇಡಿಕೆಯ ಎಂಐ ಕಂಪೆನಿಯೂ 2021ರ ಜನವರಿ 5 ರಂದು ತನ್ನ ಹೊಸ ಸರಣಿಯ MI 10i ಸ್ಮಾರ್ಟ್ ಪೋನ್ 108 ಮೆಗಾಫಿಕ್ಸೆಲ್ ಕ್ಯಾಮರಾವನ್ನು ಒಳಗೊಂಡಂತೆ ಹಲವು ವಿಭಿನ್ನ ಸೌಲಭ್ಯಗಳನ್ನು ಹೊತ್ತು ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ಈ ಕುರಿತು ಟ್ವೀಟರ್ ಮೂಲಕ ಮಾಹಿತಿ ಹಂಚಿಕೊಂಡಿರುವ ಶಿಯೋಮಿ ಕಂಪನಿಯ ಭಾರತದ ಮ್ಯಾನೇಜಿಂಗ್ ಡೈರೆಕ್ಟರ್ ಮನು ಕುಮಾರ್ ಜೈನ್, MI 10i ಸ್ಮಾರ್ಟ್ ಪೋನ್ ಜನವರಿ 5 ರಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಲಿದ್ದೇವೆ ಎಂದಿದ್ದಾರೆ.
.MI 10i ಸ್ಮಾರ್ಟ್ ಪೋನ್ ನ ವಿಶೇಷತೆಗಳೇನು?
MI 10i ಸ್ಮಾರ್ಟ್ ಪೋನ್ ಅನ್ನು ಭಾರತೀಯ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದ್ದು, 8GB RAM ಅನ್ನು ಹೊಂದಿರಲಿದೆ. ಅಲ್ಲದೆ ಓಕ್ಟಾ ಕೋರ್ SoC ಯನ್ನು ಒಳಗೊಂಡಿದೆ.
ಕ್ಯಾಮರಾ: MI 10i ಸ್ಮಾರ್ಟ್ ಪೋನ್ ಬರೋಬ್ಬರಿ 108 ಮೆಗಾಫಿಕ್ಸೆಲ್ ಪ್ರಾಥಮಿಕ ಕ್ಯಾಮರಾವನ್ನು ಹೊಂದಿದ್ದು, ಅಲ್ಲದೆ ಮೊಬೈಲ್ ನ ಹಿಂಬದಿಯಲ್ಲಿ ನಾಲ್ಕು ಕ್ಯಾಮರಾ ಸೆನ್ಸರ್ ಅನ್ನು ಅಳವಡಿಸಲಾಗಿದೆ.
ಇದನ್ನೂ ಓದಿ:ಶೀಘ್ರದಲ್ಲಿಯೇ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಐ ಪೋನ್ -13
ಈ ಹೊಸ MI 10i ಸ್ಮಾರ್ಟ್ ಪೋನ್ ಎರಡು ರೀತಿಯಲ್ಲಿ ಬಳಕೆದಾರರಿಗೆ ಲಭ್ಯವಾಗಲಿದ್ದು, 6ಜಿಬಿ ಮತ್ತು 8 ಜಿಬಿ RAM ಸೌಲಭ್ಯದಲ್ಲಿ 128 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಇದು ಒಳಗೊಂಡಿದೆ.
ಬಣ್ಣಗಳ ಲಭ್ಯತೆ: ಈ ಸ್ಮಾರ್ಟ್ ಪೋನ್ ನೀಲಿ, ಕಪ್ಪು, ಗ್ರೇಡಿಯಂಟ್ ಆರೆಂಜ್ ಹಾಗೂ ಗ್ರೇಡಿಯಂಟ್ ಬ್ಲೂ ಬಣ್ಣಗಳಲ್ಲಿ ಲಭ್ಯವಾಗಿವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಕಳೆದ ವಾರವೂ ಶಿಯೋಮಿ ಸಂಸ್ಥೆ MI 10i ಸ್ಮಾರ್ಟ್ ಪೋನ್ ಅನ್ನು ಬಿಡುಗಡೆಗೊಳಿಸುವ ಕುರಿತಾಗಿ ಮಾಹಿತಿ ನೀಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.