ಎಂಐ ಫೋನ್ ಕಂಪನಿಯಿಂದ ಬಡ ವಿದ್ಯಾರ್ಥಿಗಳಿಗೆ ಫೋನ್‍ಗಳ ದೇಣಿಗೆ
ಸೋನು ಸೂದ್ ಸಹಯೋಗದಲ್ಲಿ ನೂತನ ಕಾರ್ಯಕ್ರಮ #ಶಿಕ್ಷಾ ಹರ್ ಹಾಥ್
Team Udayavani, Jan 28, 2021, 11:08 AM IST
ಬೆಂಗಳೂರು: ದೇಶದ ನಂ.1 ಸ್ಮಾರ್ಟ್‌ಫೋನ್ ಮತ್ತು ಸ್ಮಾರ್ಟ್ ಟಿ.ವಿ. ಸಂಸ್ಥೆ ಎಂಐ ಇಂಡಿಯಾದಿಂದ ಬಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗ ನೆರವು ನೀಡುವ ಶಿಕ್ಷಾಹರ್‌ಹಾಥ್ ಎಂಬ ಕಾರ್ಯಕ್ರಮವನ್ನು ಖ್ಯಾತ ನಟ ಸೋನು ಸೂದ್ ಅವರ ಸಹಯೋಗದಲ್ಲಿ ಪ್ರಾರಂಭಿಸಿದೆ.
ಈ ಕಾರ್ಯಕ್ರಮವು ದೇಶಾದ್ಯಂತ ಸ್ಮಾರ್ಟ್‌ಫೋನ್‌ಗಳ ಲಭ್ಯತೆ ಇಲ್ಲದೆ ಆನ್‌ಲೈನ್ ಶಿಕ್ಷಣ ಪಡೆಯಲಾಗದ ದುರ್ಬಲ ವರ್ಗಗಳ ಮಕ್ಕಳಿಗೆ ನೆರವಾಗುತ್ತದೆ. ಈ ಸಹಯೋಗದ ಭಾಗವಾಗಿ ಎಂಐ ಇಂಡಿಯಾ ಸಾವಿರಾರು ವಿದ್ಯಾರ್ಥಿಗಳಿಗೆ ರೆಡ್‌ಮಿ ಸ್ಮಾರ್ಟ್‌ಫೋನ್‌ಗಳನ್ನು ದೇಣಿಗೆ ನೀಡಲು ನಿರ್ಧರಿಸಿದೆ.
ಇದನ್ನೂ ಓದಿ:ಸರಳವಾಗಿ ಸೆಟ್ಟೇರಿದ ಬೆಲ್‌ಬಾಟಂ-2: ರಿಷಭ್ ಗೆ ಹರಿಪ್ರಿಯಾ, ತಾನ್ಯ ಹೋಪ್ ಸಾಥ್
ಹೆಚ್ಚುವರಿಯಾಗಿ ಈ ಬ್ರಾಂಡ್ ಗ್ರಾಹಕರಿಗೆ ಅವರ ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ನೀಡಲು ಮೈಕ್ರೊಸೈಟ್ ಪ್ರಾರಂಭಿಸಿದೆ. ಗ್ರಾಹಕರು https://shikshaharhaath.com ಗೆ ಭೇಟಿ ನೀಡಬಹುದು ಮತ್ತು ಅವರ ಫೋನ್‌ಗಳನ್ನು ನೀಡಬಹುದು. ಗ್ರಾಹಕರು ತಮ್ಮ ಸುಸ್ಥಿತಿಯಲ್ಲಿರುವ ಸ್ಮಾರ್ಟ್‌ಫೋನ್‌ಗಳನ್ನು ಹತ್ತಿರದ ಎಂಐ ಹೋಮ್, ಎಂಐ ಸ್ಟುಡಿಯೊ, ಎಂಐ ಸರ್ವೀಸ್ ಸೆಂಟರ್‌ಗಳಲ್ಲಿ ಹಾಕಬಹುದು. ಈ ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್‌ಗಳನ್ನು ಎಂಐ ಇಂಡಿಯಾದ ಸರ್ವೀಸ್ ಸೆಂಟರ್‌ಗಳಲ್ಲಿ ದುರಸ್ತಿ ಮಾಡಿ ನವೀಕರಿಸಿ ಮಕ್ಕಳಿಗೆ ನೀಡಲಾಗುತ್ತದೆ.
ಈ ಸಹಯೋಗ ಕುರಿತು ಎಂಐ ಇಂಡಿಯಾದ ಎಂ.ಡಿ. ಮನು ಕುಮಾರ್ ಜೈನ್ ಮಾತನಾಡಿ, ನಾವು ತಂತ್ರಜ್ಞಾನ ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದರಲ್ಲಿ ನಂಬಿಕೆ ಇರಿಸಿದ್ದೇವೆ. ಶಿಕ್ಷಣವು ಮುಂದಿನ ತಲೆಮಾರುಗಳ ಸಬಲೀಕರಣ ಮತ್ತು ಸುರಕ್ಷಿತಗೊಳಿಸುವ ಪ್ರಮುಖ ಸಾಧನವಾಗಿದೆ. ಕೋವಿಡ್ ಸಮಯದಲ್ಲಿ ನಾವು ಸ್ಮಾರ್ಟ್‌ಫೋನ್ ಇಲ್ಲದೇ ಇರುವುದರಿಂದ ಯಾವುದೇ ಮಗುವು ಶಿಕ್ಷಣವನ್ನು ತಪ್ಪಿಸಿಕೊಳ್ಳಬಾರದು ಎಂದು ದೃಢವಾಗಿ ನಂಬುತ್ತೇವೆ. ಶಿಕ್ಷಾಹರ್‌ಹಾಥ್ ಉಪಕ್ರಮವು ಎಲ್ಲರಿಗೂ ಶಿಕ್ಷಣ ಎನ್ನುವ ನಮ್ಮ ಬದ್ಧತೆಯನ್ನು ದೃಢೀಕರಿಸುತ್ತದೆ. ಸೋನು ಸೂದ್ ಅವರೊಂದಿಗೆ ಈ ಉಪಕ್ರಮ ಮುಂದಕ್ಕೆ ಕೊಂಡೊಯ್ಯಲು ಸಹಯೋಗಕ್ಕೆ ಬಹಳ ಹೆಮ್ಮೆ ಪಡುತ್ತೇವೆ. ಕೋವಿಡ್ ಸಮಯದಲ್ಲಿ ಅವರ ಅದ್ಭುತ ಕೊಡುಗೆಯಿಂದ ಸೋನು ಅಸಹಾಯಕರಿಗೆ ನೆರವಾಗಿ ಇತರರಿಗೂ ಸ್ಫೂರ್ತಿ ತುಂಬಿದ್ದಾರೆ ಎಂದರು.
ಇದನ್ನೂ ಓದಿ: ಆನ್ಲೈನ್ ನಲ್ಲಿ ಸೋರಿಕೆಯಾಯ್ತು ಒನ್ ಪ್ಲಸ್ 9 ಫೋನ್ ನ ಚಿತ್ರ..!
ನಟ ಸೋನು ಸೂದ್ ಮಾತನಾಡಿ, ಈ ಸಾಂಕ್ರಾಮಿಕವು ನಮ್ಮ ಸ್ಥೈರ್ಯವನ್ನು ಅಲ್ಲಾಡಿಸಿದೆ ಮತ್ತು ನಾವು ಅದನ್ನು ನಿಭಾಯಿಸಿದ್ದೇ ಅಲ್ಲದೆ ಮತ್ತಷ್ಟು ಸದೃಢ ಮತ್ತು ಒಗ್ಗಟ್ಟಿನಿಂದ ಬೆಳೆದಿದ್ದೇವೆ. ಲಾಕ್‌ಡೌನ್ ಶಿಕ್ಷಣದ ವ್ಯಾಖ್ಯೆಯನ್ನು ಬದಲಾಯಿಸಿದೆ ಮತ್ತು ಇದು ಬಡ ಸಮುದಾಯಗಳನ್ನು ಬಾಧಿಸಿದೆ. ಆದ್ದರಿಂದ ಮಕ್ಕಳಿಗೆ ಆನ್‌ಲೈನ್ ತರಗತಿಗಳಿಗೆ ಅವಕಾಶ ಕಲ್ಪಿಸಲು ಮತ್ತು ಅವರ ಶಿಕ್ಷಣದ ಮುಂದುವರಿಕೆ ದೃಢೀಕರಿಸಲು ಎಂಐ ಇಂಡಿಯಾದೊಂದಿಗೆ ನಮ್ಮ ಸಹಯೋಗ ಉತ್ತಮ ಭವಿಷ್ಯ ನಿರ್ಮಿಸುವಲ್ಲಿ ನೆರವಾಗುವ ಹೆಜ್ಜೆಯಾಗಿದೆ. ಈ ಉಪಕ್ರಮವು ದೇಶದಲ್ಲಿ ಸಾಕ್ಷರತೆ ಮತ್ತು ಆನ್‌ಲೈನ್ ಶಿಕ್ಷಣ ಹೆಚ್ಚಿಸುವ ನಮ್ಮ ಹೆಜ್ಜೆಯಾಗಿದೆ’ ಎಂದರು.
ಎಂಐ ಇಂಡಿಯಾದ ಸಿಎಸ್‌ಆರ್ ಲೀಡ್ ಪ್ರತೀಕ್ ದಾಸ್ ಮಾತನಾಡಿ, ಶಿಕ್ಷಾಹರ್‌ಹಾಥ್ ಭಾರತದ ಭವಿಷ್ಯದ ನಾಯಕರನ್ನು ಸುಶಿಕ್ಷಿತರಾಗಿಸುವ ಮತ್ತು ಸಬಲೀಕರಣಗೊಳಿಸುವ ನಮ್ಮ ಧ್ಯೇಯದ ವಿಸ್ತರಣೆಯಾಗಿದೆ. ಸೋನು ಸೂದ್ ದೇಶಾದ್ಯಂತ ಅತ್ಯಂತ ದುರ್ಬಲರನ್ನು ತಲುಪುವಲ್ಲಿ ನೆರವಾಗಿದ್ದಕ್ಕೆ ಬಹಳ ಉತ್ಸುಕರಾಗಿದ್ದೇವೆ. ಈ ಉಪಕ್ರಮವು ಸ್ಮಾರ್ಟ್‌ಫೋನ್‌ಗಳನ್ನು ದಾನ ಮಾಡುವುದಾಗಿದೆ ಹಾಗೂ ಜನರು ತಮ್ಮ ಹಳೆಯ ಫೋನ್‌ಗಳನ್ನು ದುರ್ಬಲರಿಗೆ ದಾನ ಮಾಡಲು ಕೂಡಾ ಉತ್ತೇಜಿಸುವುದಾಗಿದೆ’ ಎಂದರು.
ಈ ಚಳವಳಿಯು ಹಿಂದೆ ಮಕ್ಕಳಿಗೆ ಈ ಸ್ಮಾರ್ಟ್‌ಫೋನ್‌ಗಳು ಆನ್‌ಲೈನ್ ಕಲಿಕೆ ಮತ್ತು ಶಿಕ್ಷಣಕ್ಕೆ ಲಭ್ಯವಾಗಬೇಕೆನ್ನುವ ನಿಟ್ಟಿನಲ್ಲಿ ಎಂಐ ಇಂಡಿಯಾ ಕೈಗೊಂಡ ಪ್ರಯತ್ನಗಳ ಮುಂದುವರಿಕೆಯಾಗಿದೆ. ಎಂಐ ಇಂಡಿಯಾ ತನ್ನ 2020ರಲ್ಲಿ ತನ್ನ ಎಂಐ ಸ್ಕಾಲರ್‌ಶಿಪ್ ಪ್ರೋಗ್ರಾಮ್ ಮೂಲಕ ಎಲ್ಲರಿಗೂ ಲಭ್ಯವಾಗುವ ಶಿಕ್ಷಣ ಪೂರೈಸುವ ನಿಟ್ಟಿನಲ್ಲಿ ಪ್ರಾರಂಭಿಸಿತು. ಈ ಬ್ರಾಂಡ್ ಟೀಚ್ ಫಾರ್ ಇಂಡಿಯಾ ಹಾಗೂ ಬಡ್ಡಿ4ಸ್ಟಡಿ ಸಹಯೋಗದಲ್ಲಿ ಎಂಐ ಸ್ಕಾಲರ್‌ಶಿಪ್ ಪ್ರೋಗ್ರಾಮ್ ಅಡಿಯಲ್ಲಿ 2 ಕೋಟಿ ರೂ.ಗಳನ್ನು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮೀಸಲಿರಿಸಿದ್ದು ಅವರಿಗೆ ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಲು ನೆರವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.