108 ಮೆಗಾಫಿಕ್ಸೆಲ್ ಕ್ಯಾಮರಾವಿರುವ ಎಂಐ ನೋಟ್ 10 ಅತೀ ಶೀಘ್ರದಲ್ಲಿ ಮಾರುಕಟ್ಟೆಗೆ
Team Udayavani, Nov 5, 2019, 8:33 AM IST
ಮಣಿಪಾಲ: ಚೀನಾ ಮೂಲದ ಸ್ಮಾರ್ಟ್ ಫೋನ್ ತಯಾರಿಕ ಕಂಪೆನಿ ಶಿಯೋಮಿ ಸಾಮಾಜಿಕ ಜಾಲಾತಾಣದಲ್ಲಿ ನೂತನ ಫೋನ್ ಮಾರುಕಟ್ಟೆಗೆ ತರುವ ಕುರಿತು ಪ್ರಕಟಿಸಿದೆ. ಎಂ ಐ ನೋಟ್ 10 ಹೆಸರಿನ ಸ್ಮಾರ್ಟ್ ಫೋನ್ ಇದೇ ನವೆಂಬರ್ 6 ರಂದು ಸ್ಪೇನ್ ನ ಮ್ಯಾಡ್ರಿಡ್ ನಲ್ಲಿ ಬಿಡುಗಡೆಯಾಗಲಿದೆ.
ಎಂ ಐ ನೋಟ್ 10 ನ ಅತೀ ಪ್ರಮುಖ ವಿಶೇಷತೆ ಎಂದರೇ 108 ಮೆಗಾಫಿಕ್ಸೆಲ್ ಪ್ರಾಥಮಿಕ ಕ್ಯಾಮಾರವನ್ನು ಒಳಗೊಂಡಿರಲಿದೆ. ಈ ಫೋನ್ ಚೀನಾದಲ್ಲಿ ನವೆಂಬರ್ 5 ರಂದು ಬಿಡುಗಡೆಯಾಗಲಿರುವ ಎಂಐ ಸಿಸಿ9 ಜಾಗತಿಕ ರೂಪಾಂತರವಾಗಿದೆ. 2017 ರಲ್ಲಿ ಎಂಐ ನೋಟ್ 3 ಅಧಿಕೃತವಾಗಿ ಜಾರಿಗೆ ಬಂದಾಗಿನಿಂದ ಅಪ್ಡೇಟ್ ಅನ್ನು ಕಂಡಿರಲಿಲ್ಲ.
ಎಂಐ ನೋಟ್ 10 ವಿಶೇಷತೆ:
ಈ ಸ್ಮಾರ್ಟ್ ಫೋನ್ ಓಕ್ಟಾ ಕೋರ್ ಕ್ವಾಲ್ ಕ್ವಾಮ್ ಸ್ನ್ಯಾಪ್ ಡ್ರ್ಯಾಗನ್ 660 SoC ಮತ್ತು ಪೆಂಟಾ ಕ್ಯಾಮಾರಗಳನ್ನು ಒಳಗೊಂಡಿದೆ. 108 ಮೆಗಾಫಿಕ್ಸೆಲ್ ಪ್ರಾಥಮಿಕ ಕ್ಯಾಮಾರ ಸೆನ್ಸಾರ್ ಅನ್ನು ಒಳಗೊಂಡಿರಲಿದೆ. ಈ ಸೆನ್ಸಾರ್ 10x ಹೈಬ್ರೀಡ್ ಜೂಮ್ ಮತ್ತು 50x ವರೆಗೂ ವಿಸ್ತರಿಸಬಹುದಾದ ಡಿಜಿಟಲ್ ಜೂಮ್ ಆಗಿರಲಿದೆ ಎನ್ನುವುದೇ ವಿಶೇಷ. 12 ಮೆಗಾಫಿಕ್ಸೆಲ್ ದ್ವಿತೀಯ ಸೆನ್ಸಾರ್ ಪೊರ್ಟ್ರೇಟ್ ಶಾಟ್ ಅನ್ನು ಹೊಂದಿದ್ದರೆ, 50x ಜೂಮ್ ನವರೆಗೂ ವಿಸ್ತರಿಸಬಹುದಾದ 5 ಮೆಗಾಫಿಕ್ಸೆಲ್ ತೃತೀಯ ಸಂವೇದಕ(ಸೆನ್ಸಾರ್) ಅನ್ನು ಒಳಗೊಂಡಿದೆ.
ಅಂದಾಜಿಸಲಾಗಿರುವ ಹೋಸ ಫೀಚರ್ ಗಳು:
ಶಿಯೋಮಿ ಎಂಐ ಸಿಸಿ 9 ಪ್ರೊ ನಲ್ಲಿ ಪರಿಚಯಿಸಿರುವ 32 ಮೆಗಾಫಿಕ್ಸೆಲ್ ಸೆಲ್ಫಿ ಕ್ಯಾಮಾರ ಇದರಲ್ಲಿ ಕೂಡ ಇರಬಹುದೆಂದು ಅಂದಾಜಿಸಲಾಗಿದೆ. ಇದರ ಜೊತೆಗೆ 12 ವಿಶೇಷ ಫಿಲ್ಟರ್ಸ್ ಅನ್ನು ಒಳಗೊಂಡಿರಲಿದೆ. 6 ಜಿಬಿ, 8 ಜಿಬಿ ಮತ್ತು 12ಜಿಬಿ ರ್ಯಾಮ್ ಆಯ್ಕೆಗಳು , 64ಜಿಬಿ, 128ಜಿಬಿ ಮತ್ತು 256 ಜಿಬಿ ವರೆಗೂ ವಿಸ್ತರಿಸಬಹುದಾದ ಸ್ಟೋರೇಜ್ . 6.47 ಇಂಚು ಫುಲ್ ಹೆಚ್ ಡಿ ಪ್ಲಸ್ (1080*2340) ಓಎಲ್ ಇಡಿ ಡಿಸ್ ಪ್ಲೇ ಅನ್ನು ಒಳಗೊಂಡಿರಲಿದೆ.
ಈ ಕುರಿತು ಶಿಯೋಮಿ ತನ್ನ ಟ್ಟಿಟ್ಟರ್ ಅಧಿಕೃತ ಖಾತೆಯಲ್ಲಿ ದಾಖಲಿಸಿದೆ.
Welcome to the new era of smartphone cameras!
Join our event to reveal the world’s first 108MP Penta camera.
Live stream available, stay tuned!#DareToDiscover with #MiNote10 pic.twitter.com/BiUXHH4Xdp
— Xiaomi #First108MPPentaCam (@Xiaomi) November 3, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್
WhatsApp Pay: ಭಾರತದಲ್ಲಿ ವಾಟ್ಸ್‌ಆ್ಯಪ್ ಪೇ ಇನ್ನು ಎಲ್ಲರಿಗೂ ಲಭ್ಯ
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.