ಲಕ್ಷಾಂತರ ಆ್ಯಂಡ್ರಾಯ್ಡ್ ಫೋನ್ ಗಳಿಗೆ ಅಪಾಯ: Qualcomm chip ನಲ್ಲಿ ಭದ್ರತಾ ದೋಷ !
Team Udayavani, Aug 8, 2020, 9:44 AM IST
ನವದೆಹಲಿ: ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಗಳಲ್ಲಿ ಬಳಸಲಾಗುವ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ ಚಿಪ್ ಜಾಗತಿಕವಾಗಿ 3 ಬಿಲಿಯನ್ ಬಳಕೆದಾರರನ್ನು ಅಪಾಯಕ್ಕೆ ಸಿಲುಕಿಸಿದೆ. ಚೆಕ್ ಪಾಯಿಂಟ್ ಭದ್ರತಾ ಸಂಶೋಧಕರು ಕ್ವಾಲ್ಕಾಮ್ ನ ಡಿಜಿಟಲ್ ಸಿಗ್ನಲ್ ಪ್ರೊಸೆಸರ್ (ಡಿಎಸ್‌ಪಿ) ಚಿಪ್ ಗಳಲ್ಲಿ 400ಕ್ಕೂ ಹೆಚ್ಚು ದೋಷಗಳನ್ನು ಕಂಡುಹಿಡಿದಿದ್ದಾರೆ.
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕ್ವಾಲ್ಕಾಮ್ ಚಿಪ್ ಗಳನ್ನು 40%ಕ್ಕಿಂತ ಹೆಚ್ಚಾಗಿ ಬಳಸಲಾಗುತ್ತದೆ. ಗೂಗಲ್, ಸ್ಯಾಮ್‌ಸಂಗ್, ಎಲ್ ಜಿ, ಶಿಯೋಮಿ ಮತ್ತು ಹೆಚ್ಚಿನ ಬ್ರಾಂಡ್ ಗಳ ಪ್ರೀಮಿಯಂ ಫೋನ್ ಗಳು ಇವುಗಳಲ್ಲಿ ಸೇರಿವೆ. ಚೆಕ್ ಪಾಯಿಂಟ್ ಭದ್ರತಾ ಸಂಶೋಧಕರು ಈ ಚಿಪ್ ಗಳಲ್ಲಿ 400ಕ್ಕೂ ಅಧಿಕ ದುರ್ಬಲ ಕೋಡ್ ಗಳನ್ನು ಕಂಡುಹಿಡಿದಿದ್ದಾರೆ.
ಈ ಕೋಡ್ ಗಳು ಹ್ಯಾಕರ್ ಗಳಿಗೆ ವರದಾನವಾಗಿದ್ದು ಬಳಕೆದಾರರಿಗೆ ತಿಳಿಯದಂತೆ ಸ್ಮಾರ್ಟ್‌ಫೋನ್ ಡೇಟಾ ಕದಿಯಲು ಮತ್ತು ಬೇಹುಗಾರಿಕಾ ಸಾಧನವಾಗಿ ಪರಿವರ್ತಿಸಲು ಅವಕಾಶ ನೀಡುತ್ತದೆ. ಅಂದರೇ ನಿಮ್ಮ ಮೊಬೈಲ್ ನಲ್ಲಿರುವ ಫೋಟೋಗಳು, ವೀಡಿಯೊಗಳು, ಫೋನ್ ರೆಕಾರ್ಡಿಂಗ್‌ಗಳು, ಲೈವ್ ಸ್ಪೀಕರ್ , ಜಿಪಿಎಸ್ ಮತ್ತು ಲೋಕೇಷನ್ ಸೇರಿದಂತೆ ಎಲ್ಲವೂ ಹ್ಯಾಕರ್ ಗಳ ಪಾಲಾಗುತ್ತದೆ.
ಮಾತ್ರವಲ್ಲದೆ ಹ್ಯಾಕರ್ ಗಳು ಸ್ಮಾರ್ಟ್ ಫೋನ್ ಫ್ರೀಜ್ ಮಾಡುವ ಅವಕಾಶವೂ ಇದ್ದು ಮಾಲ್ ವೇರ್ ಮತ್ತು ದುರುದ್ದೇಶಪೂರಿತ ಕೋಡ್ ಅನ್ನು ಇನ್ ಸ್ಟಾಲ್ ಮಾಡಬಹುದು.
ಈ ಬಗ್ಗೆ ಮಾಹಿತಿ ನೀಡಿದ ಚೆಕ್ ಪಾಯಿಂಟ್ ತಂಡ, ಈಗಾಗಲೇ ಸರ್ಕಾರಕ್ಕೆ ಮಾಹಿತಿ ತಿಳಿಸಲಾಗಿದ್ದು, ಸ್ಮಾರ್ಟ್ ಪೋನ್ ಗಳನ್ನು ಮತ್ತು ಬಳಕೆದಾರರನ್ನು ಸುರಕ್ಷಿತವಾಗಿಸಲು ನಾವು ಈ ಸಂಶೋಧನೆಯೊಂದಿಗೆ ಸಹಕರಿಸಿದ್ದೇವೆ. ಕ್ವಾಲ್ ಕ್ವಾಮ್ ಪ್ರೊಸೆಸ್ಸರ್ ಕಂಪೆನಿಗೂ ಮಾಹಿತಿ ನೀಡಲಾಗಿದ್ದು 6 ದೋಷಗಳನ್ನು ಸರಿಪಡಿಸಿದ್ದಾರೆ. ಸದ್ಯ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳು ಸುರಕ್ಷಿತವಾಗಿದೆ ಎಂದಿದ್ದಾರೆ.
ಕ್ವಾಲ್ಕಾಮ್ ಚಿಪ್ ನ ಭದ್ರತಾ ಲೋಪದೋಷಗಳು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಮೇಲೆ ಮಾತ್ರ ಪರಿಣಾಮ ಬೀರುತ್ತವೆ. ಆ್ಯಪಲ್ ತನ್ನದೇ ಆದ ಚಿಪ್‌ಗಳನ್ನು ಬಳಸುವುದರಿಂದ ಐಫೋನ್ ಗಳು ಸುರಕ್ಷಿತವಾಗಿವೆ. ಕ್ವಾಲ್ಕಾಮ್ ಹೊರತುಪಡಿಸಿದರೆ, ಮೀಡಿಯಾ ಟೆಕ್ ಚಿಪ್ ಸೆಟ್‌ಗಳನ್ನು ಹೆಚ್ಚಾಗಿ ಆಂಡ್ರಾಯ್ಡ್ ಫೋನ್ ಗಳಲ್ಲಿ ಬಳಸಲಾಗುತ್ತದ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Karkala: ಕೀಟ ನಾಶಕ ಸೇವಿಸಿ ವ್ಯಕ್ತಿ ಸಾವು
Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.