ಬಾಸ್ ಪ್ರಿಯರಿಗಾಗಿ ಮಿವಿ ಫೋರ್ಟ್ ಎಸ್ 200: ಮೇಡ್ ಇನ್ ಇಂಡಿಯಾ ಸೌಂಡ್ ಬಾರ್
Team Udayavani, Jan 9, 2023, 10:50 PM IST
ಮನೆಗಳಲ್ಲಿ 50-55-75 ಇಂಚಿನ ಸ್ಮಾರ್ಟ್, ಆಂಡ್ರಾಯ್ಡ್ ಟಿವಿಗಳು ಈಗ ಸಾಮಾನ್ಯ. ಅನೇಕರು ತಮ್ಮ ನೆಚ್ಚಿನ ಸಿನಿಮಾಗಳನ್ನು, ವೆಬ್ ಸರಣಿಗಳನ್ನು ತಮ್ಮ ಮನೆಯ ಸ್ಮಾರ್ಟ್ ಟಿವಿಗಳಲ್ಲೇ ನೋಡುತ್ತಿದ್ದಾರೆ. ಅಮೆಜಾನ್ ಪ್ರೈಮ್, ನೆಟ್ ಫ್ಲಿಕ್ಸ್, ಹಾಟ್ ಸ್ಟಾರ್, ವೂಟ್, ಝೀ 5 ಇತ್ಯಾದಿ ಓಟಿಟಿ ಫ್ಲಾಟ್ ಫಾರಂಗಳಲ್ಲಿ ಅಸಂಖ್ಯಾತ ಸಿನಿಮಾಗಳು, ವೆಬ್ ಸರಣಿಗಳು ನೋಡ ಸಿಗುತ್ತವೆ. ನೀವು ಗಮನಿಸಿರಬಹುದು, ಸ್ಮಾರ್ಟ್ ಟಿವಿಗಳಲ್ಲಿ ವಿಡಿಯೋ ತುಂಬಾ ಚೆನ್ನಾಗಿ ಕಂಡರೂ, ಧ್ವನಿ ಸ್ಪಷ್ಟವಾಗಿ ಕೇಳಿಬರುವುದಿಲ್ಲ. ಧ್ವನಿ ಹೆಚ್ಚಿಸಿದರೆ, ಹಿನ್ನೆಲೆ ಸಂಗೀತ ಜೋರಾಗಿ ಕೇಳಿಸುತ್ತದೆ, ಪಾತ್ರಗಳ ಸಂಭಾಷಣೆ ಸರಿಯಾಗಿ ಕೇಳಿಸುವುದಿಲ್ಲ. ಮನೆಯ ಹಾಲ್ ದೊಡ್ಡದಾಗಿದ್ದು ನೋಡುವ ಅಂತರ ಸ್ವಲ್ಪ ದೂರ ಇದ್ದರಂತೂ ಧ್ವನಿ ಸರಿಯಾಗಿ ಕೇಳಿಸುವುದಿಲ್ಲ. ಕಾರಣ ಸ್ಮಾರ್ಟ್ ಟಿವಿಗಳ ಸ್ಪೀಕರ್ ದೊಡ್ಡದಿರುವುದಿಲ್ಲ, ಸ್ಮಾರ್ಟ್ ಟಿವಿಗಳು ಇನ್ನಷ್ಟು ಸ್ಲಿಮ್ ಆಗುತ್ತಿರುವುದರಿಂದ ಅದರೊಳಗೆ ಹೆಚ್ಚು ಸಶಕ್ತ ಸ್ಪೀಕರ್ ಗಳನ್ನು ಅಳವಡಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ಸಮರ್ಪಕ ಪರಿಹಾರವೆಂದರೆ ಟಿವಿಗಳಿಗೆ ಸೌಂಡ್ ಬಾರ್ ಕನೆಕ್ಟ್ ಮಾಡುವುದು.
ಈಗ ಮಾರುಕಟ್ಟೆಯಲ್ಲಿ 5-6 ಸಾವಿರ ರೂ.ಗಳಿಂದ ಹಿಡಿದು ಲಕ್ಷ ರೂ.ಗಳವರೆಗೆ ಸೌಂಡ್ ಬಾರ್ ಗಳು ದೊರಕುತ್ತಿವೆ. ನಮ್ಮ ಬಜೆಟ್ ಗೆ ಹೊಂದುವಂಥ ಗುಣಮಟ್ಟದ ಸೌಂಡ್ ಬಾರ್ ಗಳನ್ನು ಆಯ್ಕೆ ಮಾಡುವುದಕ್ಕೆ ಸರ್ಕಸ್ ಮಾಡಬೇಕಾಗುತ್ತದೆ. 10 ಸಾವಿರ ರೂ.ಗಳೊಳಗೆ ಸೌಂಡ್ ಬಾರ್ ಹುಡುಕುತ್ತಿದ್ದರೆ ಪರಿಗಣಿಸಬಹುದಾದ ಒಂದು ಆಯ್ಕೆ ಮಿವಿ ಫೋರ್ಟ್ ಎಸ್ 200. ಇತ್ತೀಚಿಗೆ ಬಿಡುಗಡೆಯಾದ ಈ ಸೌಂಡ್ ಬಾರ್ ಗುಣಮಟ್ಟ ಹೇಗಿದೆ ಎಂಬುದರ ವಿವರಣೆ ಇಲ್ಲಿದೆ.
ಮೇಡ್ ಇನ್ ಇಂಡಿಯಾ: ಬಹುತೇಕ ಸೌಂಡ್ ಬಾರ್ ಗಳು ಮೇಡ್ ಇನ್ ಚೈನಾ. ಆದರೆ ಮಿವಿ ಭಾರತೀಯ ಬ್ರಾಂಡ್ ಆಗಿದ್ದು, ಈ ಸೌಂಡ್ ಬಾರ್ ತಯಾರಿಕೆ ಕೂಡ ಭಾರತದಲ್ಲೇ ಎಂಬುದು ಇದರ ವಿಶೇಷ.
ಸ್ಪೆಸಿಫಿಕೇಷನ್: ಇದರ ಸ್ಪೆಸಿಫಿಕೇಷನ್ನನ್ನು ಸಂಕ್ಷಿಪ್ತವಾಗಿ ನೋಡುವುದಾದರೆ, ಮಿವಿ ಪೋರ್ಟ್ ಎಸ್ 200 ಸೌಂಡ್ ಬಾರ್ 2.1 ಚಾನೆಲ್ ಸೌಂಡ್ ಬಾರ್ ಆಗಿದೆ. ಅಂದರೆ ಎರಡು ಸ್ಪೀಕರ್ ಗಳು ಹಾಗೂ ಒಂದು ಸಬ್ ವೂಫರ್ ಹೊಂದಿದೆ. ಸಬ್ ವೂಫರ್ ವೈರ್ ಮೂಲಕ ಸಂಪರ್ಕಿಸುವಂಥದು. ಇದನ್ನು ನಿಮ್ಮ ಸ್ಮಾರ್ಟ್ ಟಿವಿಗೆ, ಬ್ಲೂಟೂತ್, ಯುಎಸ್ ಬಿ, ಆಕ್ಸ್ ಕೇಬಲ್, ಆಪ್ಟಿಕಲ್ ಕೇಬಲ್, ಎಚ್ ಡಿ ಎಂ ಐ (ಎರ್ ಸಿ) ಅಥವಾ ಕೋಆಕ್ಸಿಯಲ್ ಕೇಬಲ್ ಈ ಯಾವುದಾದರೊಂದರ ಮೂಲಕ ಕನೆಕ್ಟ್ ಮಾಡಬಹುದು. ಇದು 200 ವ್ಯಾಟ್ಸ್ (ಆರ್ ಎಂ ಎಸ್) ಪವರ್ ಔಟ್ ಪುಟ್ ಹೊಂದಿದೆ. ಇದು 89.5 ಸೆ.ಮೀ.ಉದ್ದ, 11 ಸೆ.ಮೀ. ಎತ್ತರ, 8 ಸೆ.ಮೀ. ದಪ್ಪ ಹೊಂದಿದೆ. ಸ್ಪೀಕರ್ ಮೇಲಿನ ಗ್ರಿಲ್ ಲೋಹದ್ದಾಗಿದೆ. ಹೀಗಾಗಿ ವಿನ್ಯಾಸ ಮೇಲ್ದರ್ಜೆಯದಾಗಿ ಕಾಣುತ್ತದೆ. ಸಬ್ ವೂಫರ್ ಮರದ ಕ್ಯಾಬಿನೆಟ್ ಹೊಂದಿದೆ. ಇದು ಫ್ಲಿಪ್ ಕಾರ್ಟ್ ಹಾಗೂ ಮಿವಿ ಸ್ಟೋರ್ ನಲ್ಲಿ ಮಾತ್ರ ಲಭ್ಯ. ದರ ಫ್ಲಿಪ್ ಕಾರ್ಟ್ ನಲ್ಲಿ 9,999 ರೂ. ಇದೆ.
ಕಾರ್ಯಾಚರಣೆ: ಸೌಂಡ್ ಬಾರ್ ನ ಪವರ್ ಕೇಬಲ್ ಅನ್ನು ವಿದ್ಯುತ್ ಪ್ಲಗ್ ಗೆ ಹಾಕಿ, ನಂತರ ಎಚ್ ಡಿ ಎಂ ಐ ಕೇಬಲ್ ಅಥವಾ ಟಿವಿಯಲ್ಲಿ ಸೆಟಿಂಗ್ ಗೆ ಹೋಗಿ ಬ್ಲೂಟೂತ್ ಗೆ ಪೇರ್ ಮಾಡುವ ಮೂಲಕ ಅಥವಾ ಮೇಲೆ ಹೇಳಿರುವ ಬೇರೆ ಯಾವುದಾದರೂ ಕೇಬಲ್ ಮೂಲಕ ಟಿವಿಗೆ ಸಂಪರ್ಕಿಸಬೇಕು. ಇದರೊಡನೆ ನೀಡಲಾಗಿರುವ ರಿಮೋಟ್ ನಲ್ಲಿ ಇದನ್ನು ಆಪರೇಟ್ ಮಾಡಬೇಕು. ಇದರಲ್ಲಿ ಮೂರು ಬಗೆಯ ಪ್ರಿಸೆಟ್ ಈಕ್ವಲೈಜರ್ ಮೋಡ್ ಗಳಿವೆ. ಮೂವೀಸ್, ಮ್ಯೂಸಿಕ್ ಮತ್ತು ನ್ಯೂಸ್. ನೀವು ದೃಶ್ಯಗಳನ್ನುನೋಡುವಾಗ ರಿಮೋಟ್ ಮೂಲಕ ನಿಮಗೆ ಬೇಕಾದ ಸೌಂಡ್ ಮೋಡ್ ಅನ್ನು ಆಯ್ಕೆ ಮಾಡಿಕೊಂಡು, ನಿಮ್ಮ ಕಿವಿಗೆ ಹಿತವೆನಿಸುವ ಮೋಡ್ ನಲ್ಲಿ ಟಿವಿ ನೋಡಬಹುದು.
ಸೌಂಡ್ ಗುಣಮಟ್ಟ: ಮೊದಲೇ ತಿಳಿಸಿದ ಹಾಗೆ ಇದು 200 ವ್ಯಾಟ್ಸ್ ಸೌಂಡ್ ಔಟ್ ಪುಟ್ ಹೊಂದಿದೆ. ಮನೆಗಳ ಸಾಧಾರಣ ಹಾಲ್ ಗೆ ಈ ಔಟ್ ಪುಟ್ ಸಾಕು. ಸೌಂಡ್ ಬಾರ್ ಮತ್ತು ಜೊತೆಗೆ ನೀಡಿರುವ ಸಬ್ ವೂಫರ್ ಎರಡರ ಜೋಡಿ ಉತ್ತಮ ಗುಣಮಟ್ಟದ ಸೌಂಡ್ ಔಟ್ ಪುಟ ನೀಡುತ್ತವೆ. ನಿಮ್ಮ ಟಿವಿಯಲ್ಲಿ ಬರುವ ಸೌಂಡ್ ಗೂ, ಈ ಸೌಂಡ್ ಬಾರ್ ನಲ್ಲಿ ಬರುವ ಸೌಂಡ್ ಗುಣಮಟ್ಟಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಒಂದು ಸಿನಿಮಾವನ್ನು ಮಿನಿ ಥಿಯೇಟರ್ ನಲ್ಲಿ ನೋಡಿದ ಅನುಭವವನ್ನು ಈ ಸೌಂಡ್ ಬಾರ್ ನೀಡುತ್ತದೆ. ಆದರೆ ಮನೆಯವರು ಸೌಂಡ್ ಜಾಸ್ತಿಯಾಯಿತು ಎಂದು ದೂರಬಾರದಷ್ಟೇ!
ಹೆವಿ ಬಾಸ್: ಇದರಲ್ಲಿ ಪ್ರಿಸೆಟ್ ಸೌಂಡ್ ಮೋಡ್ ಮಾತ್ರವಲ್ಲದೇ, ನಮಗೆ ಬೇಕಾದಷ್ಟು ಬಾಸ್ ಮತ್ತು ಟ್ರೆಬಲ್ ಗಳನ್ನು ಹೊಂದಾಣಿಕೆ ಮಾಡಿಕೊಳ್ಳುವ ಆಯ್ಕೆ ರಿಮೋಟ್ ನಲ್ಲಿದೆ. ಒಂದರಿಂದ ಐದರವರೆಗೆ ನಮಗೆ ಬೇಕಾದಷ್ಟು ಬಾಸ್ ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು. ಇದರ ಬಾಸ್ ಅನ್ನು ಒಂದು ಅಥವಾ ಎರಡು ಪಾಯಿಂಟ್ ಗೆ ನಿಲ್ಲಿಸಿದರೇ ಹೆವಿ ಬಾಸ್ ಅನುಭವವಾಗುತ್ತದೆ! ಉತ್ತಮ ಬಿಜಿಎಂ ಇರುವ ಸಿನಿಮಾಗಳನ್ನು ಇದರಲ್ಲಿ ನೋಡಲು ಮಜವಾಗಿರುತ್ತದೆ.
ಫ್ಲಿಪ್ ಕಾರ್ಟ್ ನಲ್ಲಿ ಇದರ ರಿವ್ಯೂ ಗಮನಿಸಿದಾಗ ಅಚ್ಚರಿಯಾಗುತ್ತದೆ. ಇದಕ್ಕೆ ಒಟ್ಟಾರೆ 4.5 ಸ್ಟಾರ್ ರೇಟಿಂಗ್ ಇದೆ. ಸೌಂಡ್ ಕ್ವಾಲಿಟಿ, ಬಾಸ್ ಗೆ 4.6 ರೇಟಿಂಗ್ ಇದೆ. ಕೊಂಡಿರುವ ಅನೇಕರು ಇದರ ಸೌಂಡ್ ಕ್ವಾಲಿಟಿ, ಬಿಲ್ಡ್ ಕ್ವಾಲಿಟಿಯನ್ನು ಪ್ರಶಂಸಿದ್ದಾರೆ. ನೀಡುವ ಹಣಕ್ಕೆ ತಕ್ಕ ಮೌಲ್ಯ ನೀಡುತ್ತದೆ ಎಂದಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಇದು 10 ಸಾವಿರದೊಳಗಿನ ಯಾವುದೇ ಬ್ರಾಂಡಿನ ಸೌಂಡ್ ಬಾರ್ ಗಳಿಗೆ ಉತ್ತಮ ಸ್ಪರ್ಧೆ ನೀಡುತ್ತದೆ.
-ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.