ನಿಮ್ಮ ಆಕ್ಸಿಮೀಟರ್ ಖರ್ಚನ್ನು ಉಳಿಸಲಿದೆ ಕೇರ್ ಪ್ಲಿಕ್ಸ್ ವೈಟಲ್ಸ್ ಸ್ಮಾರ್ಟ್ ಫೋನ್ ಆ್ಯಪ್!
ಶ್ರೀರಾಜ್ ವಕ್ವಾಡಿ, May 30, 2021, 5:32 PM IST
ಕೋವಿಡ್ -19 ಸಾಂಕ್ರಾಮಿಕದ ಎರಡನೇ ಅಲೆಯು ಭಾರತದಲ್ಲಿ ಏರುಗತಿಯಲ್ಲಿ ಸಾಗುತ್ತಿದ್ದಂತೆಯೇ, ದೇಶದಲ್ಲಿ ವೈದ್ಯಕೀಯ ಸಲಕರಣೆಗಳ ಅಗತ್ಯವು ತೀವ್ರವಾಗಿ ಏರಿಕೆಯಾಗಿದೆ. ಯಾವುದೇ ರೋಗ ಲಕ್ಷಣಗಳನ್ನು ಹೊಂದಿರದೇ, ಕೋವಿಡ್ ಸೋಂಕಿಗೆ ಒಳಪಡುವ ಬಹುತೇಕರಿಗೆ ಹೋಂ ಕ್ವಾರಂಟೈನ್ ನಲ್ಲಿರುವಂತೆ ವೈದ್ಯರು ಸೂಚಿಸುತ್ತಾರೆ.
ಹಾಗಾಗಿ, ದೇಹದಲ್ಲಿನ ಆಮ್ಲಜನಕದ ಶುದ್ಧತ್ವ ಮಟ್ಟವನ್ನು ಅಳೆಯುವ ಸಲುವಾಗಿ, ಹೋಂ ಕ್ಯಾರೆಂಟೈನ್ ಸಮಯದಲ್ಲಿ ಆಕ್ಸಿಮೀಟರ್ ಒಂದು ಪ್ರಮುಖ ಅವಶ್ಯಕತೆ ಆಗಿಬಿಟ್ಟಿದೆ. ಹೀಗಿರುವಾಗ, ಮಾರುಕಟ್ಟೆಯಲ್ಲಿ ಆಕ್ಸಿಮೀಟರ್ ಗಳಿಗೆ ಬೇಡಿಕೆಗಳು ಹೆಚ್ಚಾದಂತೆ, ಅದರ ಬೆಲೆಯೂ ಗಗನಕ್ಕೇರಿವೆ. ಒಂದು ಒಳ್ಳೆಯ ಆಕ್ಸಿಮೀಟರ್ ಬೆಲೆ ಕನಿಷ್ಠ 2,000 ರೂಪಾಯಿ !
ಆಕ್ಸಿಮೀಟರ್ ಗಳ ಬೆಲೆಯೇರಿಕೆ ಮತ್ತು ಅದರ ಲಭ್ಯತೆಯ ಬಗ್ಗೆ ಗಮನದಲ್ಲಿಟ್ಟುಕೊಂಡು, ಕೋಲ್ಕತಾ ಮೂಲದ ಸ್ಟಾರ್ಟ್ ಅಪ್ ‘ಕೇರ್ ನೌ ಹೆಲ್ತ್ ಕೇರ್’ ಸ್ಮಾರ್ಟ್ ಪೋನ್ ಆ್ಯಪ್ ನನ್ನು ಅಭಿವೃದ್ಧಿಪಡಿಸಿದೆ. ‘ಕೇರ್ ಪ್ಲಿಕ್ಸ್ ವೈಟಲ್ಸ್’ಎಂಬ ಹೆಸರಿನ ಅಪ್ಲಿಕೇಶನ್ ಆಕ್ಸೀಮೀಟರ್ ನಂತೆ, ನಿಮ್ಮ ದೇಹದಲ್ಲಿನ ಆಮ್ಲಜನಕದ ಮಟ್ಟವನ್ನು ದಾಖಲಿಸುತ್ತದೆ. ಈ ಅಪ್ಲಿಕೇಶನ್ ಫೊಟೋಪ್ಲೆಥಿಸ್ಮೋಗ್ರಫಿ ಅಥವಾ ಪಿಪಿಜಿ ಆಧಾರಿತ ತಂತ್ರಜ್ಞಾನವನ್ನು ಬಳಸುತ್ತದೆ.
ಇದನ್ನೂ ಓದಿ : ಮೋದಿ ಸರಕಾರಕ್ಕೆ 7 ವರ್ಷ; ಇಡೀ ದಿನ ಡಿಸಿಎಂ ಬೆಂಗಳೂರು ರೌಂಡ್ಸ್
ಕೇರ್ ಪ್ಲಿಕ್ಸ್ ಆ್ಯಪ್, ಒಂದು ನೋಂದಣಿ ಆಧಾರಿತ ಅಪ್ಲಿಕೇಶನ್ ಆಗಿದೆ. ಕ್ಯಾಮರಾ ಹಾಗೂ ಪ್ಲಾಶ್ ಲೈಟ್ ಭಾಗದಲ್ಲಿ ನಮ್ಮ ಬೆರಳನ್ನು ಇಡಬೇಕು. ಎಷ್ಟು ಬಲವಾಗಿ ಒತ್ತಿ ಇಡುತ್ತೇವೋ, ಅಷ್ಟು ನಿಖರ ಹಾಗೂ ವೇಗವಾಗಿ ನಮಗೆ ಫಲಿತಾಂಶ ಸಿಗುತ್ತದೆ. ಅಪ್ಲಿಕೇಶನ್ ನ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಮೂಲಕ ನಾವು ಎಷ್ಟು ಬಲವಾಗಿ ಬೆರಳನ್ನು ಒತ್ತಿಟ್ಟಿದ್ದೇವೆ ಎಂದು ನಮಗೆ ಗೊತ್ತುಪಡಿಸುತ್ತದೆ. ಬೆರಳನ್ನು ಸರಿಯಾಗಿ ಪ್ಲೇಸ್ ಮಾಡಿದ 40 ಸೆಕೆಂಡುಗಳಲ್ಲಿ ವರದಿಯನ್ನು ನಮಗೆ ಕೊಡುತ್ತದೆ. ಅದಲ್ಲದೆ, ಈ ಮಾಹಿತಿಯನ್ನು ತನ್ನ ಕ್ಲೌಡ್ ಸ್ಟೋರೇಜ್ ನಲ್ಲಿ ದಾಖಲಿಸಿ, ಇಂಟರ್ ನೆಟ್ ಸಂಪರ್ಕದ ಮೂಲಕ ಯಾವುದೇ ಕ್ಷಣದಲ್ಲಿ ನೀವು ಆ ಮಾಹಿತಿಯನ್ನು ಪಡೆಯಬಹುದು.
ಈ ಬಗ್ಗೆ ಮಾತನಾಡಿದ ಕೇರ್ ಪ್ಲಿಕ್ಸ್ ವೈಟಲ್ ನ ಸಹ-ಸಂಸ್ಥಾಪಕ ಮೊನೊಸಿಜ್ ಸೆನ್ ಗುಪ್ತಾ, “ಈ ಆ್ಯಪ್ ಹೊರತರುವ ಮೊದಲು ಹಲವಾರು ಕ್ಲಿನಿಕಲ್ ಪ್ರಯೋಗಗಳು ನಡೆದಿವೆ. ಈ ವರ್ಷ ಕೋಲ್ಕತ್ತಾದ ಸೇಠ್ ಸುಖ್ ಲಾಲ್ ಕರ್ಣಣಿ ಮೆಮೊರಿಯಲ್ ಆಸ್ಪತ್ರೆಯ ತಂಡವು ಒಪಿಡಿಯಲ್ಲಿ 1200 ವ್ಯಕ್ತಿಗಳ ಮೇಲೆ ಕ್ಲಿನಿಕಲ್ ಪ್ರಯೋಗ ನಡೆಸಿದೆ” ಎಂದಿದ್ದಾರೆ.
ಫಲಿತಾಂಶದ ನಿಖರತೆಯನ್ನು ಪರೀಕ್ಷಿಸಲು ಆಕ್ಸಿಮೀಟರ್ ಹಾಗೂ ಆ್ಯಪ್ ನಲ್ಲಿ ಬಂದ ವರದಿಯನ್ನು ವರದಿ ಹೋಲಿಕೆ ಮಾಡಲಾಗಿದೆ ಮತ್ತು ಕೇರ್ ಪ್ಲಿಕ್ಸ್ ವೈಟಲ್ ಹೃದಯ ಬಡಿತದ ವರದಿಯಲ್ಲಿ ಶೇ.96 ಆಮ್ಲಜನಕದ ಶುದ್ಧತ್ವದಲ್ಲಿ ಶೇ.98 ನಿಖರವಾಗಿದೆ ಎಂದು ತಿಳಿದುಬಂದಿದೆ.
ಕೇರ್ ಪ್ಲಿಕ್ಸ್ ವೈಟಲ್ಸ್ ಅಪ್ಲಿಕೇಶನ್ ನ ವೈಶಿಷ್ಟ್ಯಗಳು
ಹೃದಯ ಬಡಿತದ ಮಾನಿಟರ್
ಆಮ್ಲಜನಕ ಸ್ಯಾಚುರೇಶನ್ ಮಾನಿಟರ್
ಉಸಿರಾಟದ ದರದ ಮಾನಿಟರ್
ಕೇರ್ ಪ್ಲಿಕ್ಸ್ ವೈಟಲ್ಸ್ ಅಪ್ಲಿಕೇಶನ್ ಮೂಲಕ ನಿಮ್ಮ ಆಮ್ಲಜನಕದ ಮಟ್ಟವನ್ನು ಹೇಗೆ ಅಳೆಯುವುದು?
- ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಆ್ಯಪ್ ಸ್ಟೋರ್ ನಿಂದ ಕೇರ್ ಪ್ಲಿಕ್ಸ್ ವೈಟಲ್ಸ್ ಅಪ್ಲಿಕೇಶನ್ ನನ್ನು ಇನ್ಸ್ಟಾಲ್ ಮಾಡಿ
- ಅಪ್ಲಿಕೇಶನ್ ತೆರೆದು ನೋಂದಣಿ ಮಾಡಿಸಿಕೊಳ್ಳಿ
- ಫ್ರಂಟ್ ನಲ್ಲೇ ಕಾಣುವ ‘ರೆಕಾರ್ಡ್ ವೈಟಲ್ಸ್’ ಆಪ್ಶನ್ ಮೇಲೆ ಟ್ಯಾಪ್ ಮಾಡಿ
- ನಿಮ್ಮ ಸ್ಮಾರ್ಟ್ ಫೋನ್ ನ ಹಿಂದಿನ ಕ್ಯಾಮೆರಾ ಮತ್ತು ಫ್ಲ್ಯಾಷ್ ಲೈಟ್ ನ ಕವರ್ ಮಾಡಿ, ಕೆಲವು ಸೆಕೆಂಡುಗಳ ಕಾಲ ಅಲ್ಲಿ ಬೆರಳು ಇರಿಸಿ (ಒತ್ತಿ ಇಡಬೇಕು)
- ಸುಮಾರು 30-40 ಸೆಕೆಂಡಿನಲ್ಲಿ ನಿಮ್ಮ ಆಮ್ಲಜನಕ ಮಟ್ಟ, ನಾಡಿ ಮತ್ತು ಉಸಿರಾಟದ ಮಟ್ಟದಂತಹ ಮಾಹಿತಿಯನ್ನು ತೋರಿಸಲಾಗುತ್ತದೆ.
- ಅದನ್ನು ವೈಟಲ್ಸ್ ಹಿಸ್ಟರಿಯಲ್ಲಿ ಸೇವ್ ಮಾಡಿಟ್ಟರೆ, ಮುಂದಿನ ದಿನಗಳಲ್ಲಿ ಯಾವಾಗ ಬೇಕಾದರೂ ನೋಡಬಹುದು.
ಇಂದುಧರ ಹಳೆಯಂಗಡಿ
ಇದನ್ನೂ ಓದಿ : ಮೋದಿ ಸರಕಾರಕ್ಕೆ 7 ವರ್ಷ; ಇಡೀ ದಿನ ಡಿಸಿಎಂ ಬೆಂಗಳೂರು ರೌಂಡ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್.. ಅರ್ಜುನ್ ಜಂಟಿ ಅಗ್ರಸ್ಥಾನ
Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.