ಮಾರುಕಟ್ಟೆಗೆ ಲಗ್ಗೆ ಇಡಲಿರುವ Moto E7 Power… ವೈಶಿಷ್ಟ್ಯತೆಗಳೇನು?
4 GB RAM ಜೊತೆಗೆ 64 GB ಸ್ಟೋರೇಜ್ ಇರಲಿದೆ.
Team Udayavani, Feb 19, 2021, 12:54 PM IST
ನವದೆಹಲಿ: ಪ್ರಸಿದ್ದ ಮೊಟೊರೊಲಾ ಕಂಪನಿಯು ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ತನ್ನ Moto E7 Power ಆವೃತ್ತಿಯ ಸ್ಮಾರ್ಟ್ ಪೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿದೆ.
ಬರೋಬ್ಬರಿ 5000 mAh ಬ್ಯಾಟರಿ ಸಾಮರ್ಥ್ಯದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಈ ಮೊಬೈಲ್ ಪೋನ್ ತನ್ನಲ್ಲಿ ಹಲವಾರು ವೈಶಿಷ್ಟ್ಯತೆಗಳನ್ನು ಹೊಂದಿದೆ. ಪ್ರಸಿದ್ದ ಆನ್ ಲೈನ್ ಮಾರುಕಟ್ಟೆಯಾಗಿರುವ ಫ್ಲಿಪ್ ಕಾರ್ಟ್ ಈ ಪೋನ್ ಗಳನ್ನು ಮಾರಾಟ ಮಾಡುತ್ತಿದೆ.
Moto E7 Power ವೈಶಿಷ್ಟ್ಯತೆಗಳು
ಕೇಲವ 10,000 ದ ಒಳಗೆ ಬಳಕೆದಾರರನ್ನು ತಲುಪಲಿರುವ ಈ ಸ್ಮಾರ್ಟ್ ಪೋನ್ ಗಳ ವೈಶಿಷ್ಟ್ಯತೆಗಳ ಕುರಿತಾದ ಮಾಹಿತಿಗಳನ್ನು ಮೊಟೊರೊಲಾ ತನ್ನ ಟ್ಟೀಟರ್ ಖಾತೆಯ ಮಾಲಕ ಹಂಚಿಕೊಂಡಿದೆ.
Can you guess the price of the #PowerpackedEntertainer that comes with a 5000 mAh battery, 4 GB RAM, 64 GB Storage, 6.5″ HD+ display, & more? Comment below & tag your friends to increase your chances of winning the brand-new #motoe7power. T&C Apply: https://t.co/ZFyZPVwjmz pic.twitter.com/sG4InXNy6B
— Motorola India (@motorolaindia) February 16, 2021
ಇದನ್ನೂ ಓದಿ:ದೇಣಿಗೆ ಲೆಕ್ಕ ಕೇಳಲು ಸಿದ್ದರಾಮಯ್ಯ ಯಾವನು? ಸಚಿವ ಈಶ್ವರಪ್ಪ ವಾಗ್ದಾಳಿ
ಕ್ಯಾಮರಾ: Moto E7 Power ಹಿಂಭಾಗದಲ್ಲಿ 2 ಅತ್ಯುತ್ತಮ ಕ್ಯಾಮರಾವನ್ನು ಒಳಗೊಂಡಿದ್ದು, 13 MP ಪ್ರಾಥಮಿಕ ಕ್ಯಾಮರಾ ಇದ್ದು, 2MP ಸೆಕೆಂಡ್ ಸೆನ್ಸಾರ್ ಕ್ಯಾಮರಾವನ್ನು ಹೊಂದಿದೆ. ಮತ್ತು ಮುಂಭಾಗದಲ್ಲಿ 5 MP ಸೆಲ್ಫಿ ಕ್ಯಾಮರಾ ಇದರಲ್ಲಿದೆ.
ಡಿಸ್ ಪ್ಲೇ: ಆ್ಯಂಡ್ರಾಯ್ಡ್ 10 ಮೂಲಕ ಕಾರ್ಯ ನಿರ್ವಹಿಸುವ ಈ ಸ್ಮಾರ್ಟ್ ಫೋನ್ 6.5 HD +LCD ಡಿಸ್ ಪ್ಲೇ ಅನ್ನು ಒಳಗೊಂಡಿದ್ದು, ವಾಟರ್ ಡ್ರಾಪ್ ವಿನ್ಯಾಸದಲ್ಲಿ ಇದರ ಡಿಸ್ ಪ್ಲೇ ಇರಲಿದೆ.
ಸ್ಟೋರೇಜ್: ಆಕ್ಟಾ ಕೋರ್ ಪ್ರೊಸೆಸರ್ ಅನ್ನು ಒಳಗೊಂಡಿರುವ ಈ ಮೊಬೈಲ್ ಪೋನಿನಲ್ಲಿ 4 GB RAM ಜೊತೆಗೆ 64 GB ಸ್ಟೋರೇಜ್ ಇರಲಿದೆ. ಅಲ್ಲದೆ ಮೈಕ್ರೋ SD ಕಾರ್ಡ್ ಮೂಲಕ 1 TB ವರೆಗೆ ಸ್ಟೋರೇಜ್ ಸಾಮರ್ಥ್ಯವನ್ನು ಹೆಚ್ಚಿಸಬಹುದಾಗಿದೆ.
Moto E7 Power ಮೊಬೈಲ್ ಫೋನ್, ನೀಲಿ ಮತ್ತು ಕೆಂಪು ಬಣ್ಣಗಳಲ್ಲಿ ಬಳಕೆದಾರರಿಗೆ ಲಭ್ಯಗೊಳ್ಳಲಿದ್ದು, ಚಾರ್ಜಿಂಗ್ ಗಾಗಿ USB ಟೈಪ್ C ಪೋರ್ಟ್ ಅನ್ನು ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.