ಶೇ.10 ದಂಡ ಪಾವತಿಸಿ
Team Udayavani, Jan 5, 2023, 8:20 AM IST
ಹೊಸದಿಲ್ಲಿ: ಟೆಕ್‌ದೈತ್ಯ ಗೂಗಲ್ ಮೇಲೆ ಭಾರತದ ಸ್ಪರ್ಧಾತ್ಮಕ ಆಯೋಗ (ಸಿಸಿಐ) ವಿಧಿಸಿರುವ 1,337.76 ಕೋಟಿ ರೂ.ದಂಡದಲ್ಲಿ, ಶೇ.10ರಷ್ಟು ದಂಡ ಪಾವತಿಸುವಂತೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ಬುಧವಾರ ಗೂಗಲ್ ಸಂಸ್ಥೆಗೆ ನಿರ್ದೇಶಿಸಿದೆ.
ಸಿಸಿಐ ವಿಧಿಸಿದ್ದ ದಂಡ ವನ್ನು ಪ್ರಶ್ನಿಸಿ ಗೂಗಲ್ ಸಲ್ಲಿಸಿದ್ದ ಅರ್ಜಿ ಯನ್ನು ಎನ್‌ಸಿಎಲ್‌ಎಟಿಯ ದ್ವಿಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ಗೂಗಲ್ ವಿರುದ್ಧದ ಆಯೋಗ ಕೈಗೊಳ್ಳಲು ಉದ್ದೇಶಿಸಿರುವ ಕ್ರಮಗಳ ವಿರುದ್ಧ ಮಧ್ಯಂತರ ತಡೆ ಕೋರಿದ್ದ ಗೂಗಲ್ ಮನವಿಯನ್ನು ನ್ಯಾಯ ಮಂಡಳಿ ನಿರಾಕರಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಫೆ.13ರಂದು ನಡೆಯಲಿದೆ.
ಆ್ಯಂಡ್ರಾಯ್ಡ ಮೊಬೈಲ್ ಎಕೋಸಿ ಸ್ಟಮ್‌ಗಳಲ್ಲಿ ಗೂಗಲ್ ತನ್ನ ಪ್ರಾಬ ಲ್ಯವನ್ನು ದುರುಪಯೋಗ ಪಡಿಸಿಕೊ ಳ್ಳುತ್ತಿದೆ. ಇದರಿಂದ ಭಾರತೀಯ ಮೊಬೈಲ್ ಬಳಕೆದಾರರಿಗೆ ಸಮಸ್ಯೆ ಯಾ ಗುವುದಲ್ಲದೆ, ಅಂಥ ಸಾಧನಗಳ ಬೆಲೆಯೂ ದುಬಾರಿಯಾಗುತ್ತಿದೆ ಎಂದು ಸಿಸಿಐ ಗೂಗಲ್‌ಗೆ ದಂಡ ವಿಧಿಸಿತ್ತು. ಆದರೆ, ಗೂಗಲ್ ಪರ ವಕೀಲ ಮನುಸಿಂ Ì, ಸಿಸಿಐ ಮಾಡಿ ರುವಂಥ ಯಾವುದೇ ಆರೋಪಗಳು ಕಂಡು ಬಂದಿಲ್ಲ ಎಂದಿದ್ದಾರೆ. ಜತೆಗೆ 2018ರಲ್ಲಿ ಗೂಗಲ್ ವಿರುದ್ಧ ಐರೋಪ್ಯ ಒಕ್ಕೂಟ ನೀಡಿದ್ದ ತೀರ್ಪು ಗಳನ್ನೇ ಸಿಸಿಐ ನಕಲು ಮಾಡಿ, ತೀರ್ಪು ನೀಡಿದೆ. ಆರೋಪ ಸಾಬೀತು ಪಡಿಸುವ ಅಂಶಗಳನ್ನು ಉಲ್ಲೇಖೀಸಿಲ್ಲ ಎಂದು ವಾದಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.