ಬಂಪರ್ ಆಫರ್ ; ನೆಟ್ ಫ್ಲಿಕ್ಸ್ ಇನ್ನು ಮುಂದೆ ಅಗ್ಗ
ಎಲ್ಲ ಪ್ಲ್ಯಾನ್‌ಗಳ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಇಳಿಸಲಾಗಿದೆ.
Team Udayavani, Dec 15, 2021, 2:15 PM IST
ನವದೆಹಲಿ: ಪ್ರಸಿದ್ಧ ಒಟಿಟಿ “ನೆಟ್‌ಫ್ಲಿಕ್ಸ್’ ತನ್ನ ಚಂದಾದಾರರಿಗೆ ಬಂಪರ್ ಆಫರ್ ನೀಡಿದೆ. ಈಗಿದ್ದ ಎಲ್ಲ ಪ್ಲ್ಯಾನ್‌ಗಳ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಇಳಿಸಲಾಗಿದೆ. ಮೊಬೈಲ್‌ನಲ್ಲಿ ತಿಂಗಳಿಗೆ 199 ರೂ. ಕೊಟ್ಟು ನೆಟ್ ಫ್ಲಿಕ್ಸ್ ನೋಡುತ್ತಿದ್ದವರಿಗೆ ಇನ್ನು ಮುಂದೆ 149 ರೂ.ಗೆ ಆ ಪ್ಲ್ಯಾನ್ ಲಭ್ಯವಾಗಲಿದೆ.
ಹಾಗೆಯೇ 499 ರೂ.ನ ಬೇಸಿಕ್ ಪ್ಲ್ಯಾನ್ ಬೆಲೆಯನ್ನು 199 ರೂ.ಗೆ, 649 ರೂ.ನ ಸ್ಟಾಂಡರ್ಡ್ ಪ್ಲ್ಯಾನ್ ಬೆಲೆಯನ್ನು 499 ರೂ.ಗೆ ಹಾಗೂ 799 ರೂ.ನ ಪ್ರೀಮಿಯಂ ಪ್ಲ್ರಾನ್ ಅನ್ನು 649ರೂ.ಗೆ ಇಳಿಸಲಾಗಿದೆ. ಈ ಬೆಲೆ ಮಂಗಳವಾರದಿಂದಲೇ ಅನ್ವಯವಾಗಲಿದೆ.
ಖಡಕ್ ಟೀ ಆಗದ್ದಕ್ಕೆ ನೆಟ್ಟಿಗರ ಕೋಪ
ಒಂದು ಕಪ್ ಚಹಾ ಹೇಗೆ ಸಿದ್ಧ ಮಾಡುವುದು ಎಂದು ಪ್ರಶ್ನೆ ಕೇಳಿದರೆ ಎಲ್ಲರೂ ಅವರದ್ದೇ ಆದ ವಿಧಾನ ಸೂಚಿಸುತ್ತಾರೆ. ಇದೇ ವಿಚಾರ ಈಗ ಜಗತ್ತಿನಾದ್ಯಂತ ಇಂಟರ್‌ನೆಟ್‌ನಲ್ಲಿ ಖಂಡನೆ ಮತ್ತು ನಗೆಯ ಅಲೆಗೆ ಕಾರಣವಾಗಿದೆ.
ಅಮೆರಿಕದ ಸಿಎನ್‌ಎನ್ ಸುದ್ದಿ ವಾಹಿನಿಯ ಮುಖ್ಯ ಆರೋಗ್ಯ ವರದಿಗಾರ ಮತ್ತು ನ್ಯೂರೋ ಸರ್ಜನ್, ಭಾರತೀಯ ಮೂಲದ ಡಾ. ಸಂಜಯ ಗುಪ್ತಾ ತಮ್ಮ ಮಕ್ಕಳಿಗೆ ಚಹಾ ಹೇಗೆ ಮಾಡುವುದು ಎಂಬ ಬಗ್ಗೆ 3 ನಿಮಿಷ 31 ಸೆಕೆಂಡುಗಳ ವಿಡಿಯೋವನ್ನು ಸಿಎನ್‌ಎನ್ ಟ್ವಿಟರ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಆರಂಭದಲ್ಲಿ ಡಾ.ಸಂಜಯ್ ಗುಪ್ತಾ ತಮ್ಮ ಹೆತ್ತವರಿಗೆ ತಾವೇ ಚಹಾ ಮಾಡುತ್ತಿದ್ದ ಬಗ್ಗೆ ಮತ್ತು ತಮ್ಮ ತಾಯಿ ಚಹಾ ಸಿದ್ಧಗೊಳಿಸಿ ನೀಡುತ್ತಿದ್ದ ಕಪ್ ಗಳನ್ನೇ ಅಲ್ಲಿ ಬಳಕೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಏಲಕ್ಕಿ, ಶುಂಟಿಯನ್ನು ಜಜ್ಜಿ ಚಹಾ ಮಾಡುವುದು ಹೇಗೆ, ಎಂಬುದನ್ನು ಅವರು ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಹೊಸ ಸೇರ್ಪಡೆ
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Childhood Days: ಮರಳಿ ಬಾರದ ಬಾಲ್ಯ ಜೀವನ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
UV Fusion: ಅಂದು ಇಂದು- ಮಕ್ಕಳೆಲ್ಲ ಈಗ ಮಾಡ್ರನೈಸ್ಡ್
By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.