ಕೆಲವು ಅವಧಿಯ ನಂತರ ಸ್ಟ್ರೀಮಿಂಗ್ ಮಾಡುವುದನ್ನು ನಿಲ್ಲಿಸಲಿದೆ ನೆಟ್ ಪ್ಲಿಕ್ಸ್ ..!?
ಕೆಲವು ಅವಧಿಯ ನಂತರ ಸ್ಟ್ರೀಮಿಂಗ್ ಮಾಡುವುದನ್ನು ನಿಲ್ಲಿಸಲು ನೆಟ್ ಫ್ಲಿಕ್ಸ್ ಟೈಮರ್ ಫೀಚರನ್ನು ಟೆಸ್ಟಿಂಗ್
Team Udayavani, Jan 31, 2021, 10:53 AM IST
ನವ ದೆಹಲಿ : ಜಾಗತಿಕವಾಗಿ 200 ಮಿಲಿಯನ್ ಗ್ರಾಹಕರನ್ನು ಹೊಂದಿರುವ ನೆಟ್ ಫ್ಲಿಕ್ಸ್, ಕೆಲವು ಅವಧಿಯ ನಂತರ ಸ್ಟ್ರೀಮಿಂಗ್ ಮಾಡುವುದನ್ನು ನಿಲ್ಲಿಸಲು ನೆಟ್ ಫ್ಲಿಕ್ಸ್ ಟೈಮರ್ ಫೀಚರನ್ನು ಟೆಸ್ಟಿಂಗ್ ಪ್ರಾರಂಭಿಸಲಿದೆ.
ನೆಟ್ ಫ್ಲಿಕ್ಸ್ ನಲ್ಲಿನ ಟೈಮರ್ ಫೀಚರ್ ಚಂದಾದಾರರಿಗೆ ವೀಕ್ಷಣೆಯ ಅನುಭವದ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ ಎನ್ನಲಾಗುತ್ತಿದೆ.
ಓದಿ : 4 ವರ್ಷಗಳಲ್ಲಿ ಟ್ರಂಪ್‌ಗೆ 8,770 ಕೋ. ರೂ. ನಷ್ಟ
ಹಾಗಾದರೇ ಇದರ ಮುಖ್ಯಾಂಶಗಳು ಏನು..?
*ನೆಟ್ ಫ್ಲಿಕ್ಸ್ ತನ್ನ ಅಡಲ್ಟ್ಸ್ ಪ್ರೊಫೈಲ್ ಗಳಿಗಾಗಿ ಟೈಮರ್ ಫೀಚರ್ ಟೆಸ್ಟಿಂಗ್ ಮಾಡಲಿದೆ.
*ಹೊಸ ಫೀಚರ್ ಬಹು ಟೈಮರ್ ಆಯ್ಕೆಗಳನ್ನು ಒದಗಿಸುತ್ತದೆ.
*ಜಾಗತಿಕವಾಗಿ ನೆಟ್ ಫ್ಲಿಕ್ಸ್ ಬಳಕೆದಾರರನ್ನು ಟೆಸ್ಟಿಂಗ್ ಗೆ ಪರಿಗಣಿಸಲಾಗುತ್ತದೆ.
*ಕೆಲವು ಅವಧಿಯ ನಂತರ ಸ್ಟ್ರೀಮಿಂಗ್ ಮಾಡುವುದನ್ನು ನಿಲ್ಲಿಸಲು ನೆಟ್ ಫ್ಲಿಕ್ಸ್ ಟೈಮರ್ ಫೀಚರ್ ನ್ನು ಪ್ರಾರಂಭಿಸಲಿದೆ.
*ಆಂಡ್ರಾಯ್ಡ್ ಬಳಕೆದಾರರನ್ನು ಆಯ್ಕೆ ಮಾಡಲು ನೆಟ್ ಫ್ಲಿಕ್ಸ್ ಆರಂಭದಲ್ಲಿ ಟೈಮರ್ ಫೀಚರ್ ನ್ನು ತಂದಿತ್ತು.
ಚಂದಾದಾರರಿಗಾಗಿ ನೆಟ್ ಫ್ಲಿಕ್ಸ್ ಹೊಸ ಫೀಚರ್ ನ್ನು ಟೆಸ್ಟಿಂಗ್ ಮಾಡಲು ಪ್ರಾರಂಭಿಸಿದೆ, ಅದು ವೀಕ್ಷಕರಿಗೆ ತಮ್ಮ ನೆಚ್ಚಿನ ಪ್ರದರ್ಶನ ಅಥವಾ ಚಲನಚಿತ್ರಕ್ಕಾಗಿ ಟೈಮರ್ ಅನ್ನು ಹೊಂದಿಸಲು ಅನುವು ಮಾಡಿಕೊಡುತ್ತದೆ ಎಂದು ವರದಿ ಹೇಳಿದೆ.
ಓದಿ : ಆ್ಯಕ್ಷನ್ ಕಿಂಗ್ ಧ್ರುವ ಸರ್ಜಾ ಅವರ ವಿಶೇಷ ಫೋಟೋ ಗ್ಯಾಲರಿ
ಇತ್ತೀಚಿನ ಸೇರ್ಪಡೆ ಏನು..?
ಪ್ರಸ್ತುತ ಜಾಗತಿಕವಾಗಿ ಆ್ಯಂಡ್ರಾಯ್ಡ್ ಸಾಧನಗಳಲ್ಲಿ ಆಯ್ದ ನೆಟ್ ಫ್ಲಿಕ್ಸ್ ಚಂದಾದಾರರಿಗಾಗಿ ಲೈವ್ ಆಗಿದೆ, ಯು ಎಸ್ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ತನ್ನ ವೀಕ್ಷಣೆಯ ಅನುಭವವನ್ನು ಹೆಚ್ಚಿಸಲು ಮತ್ತೊಂದು ಕ್ರಮವಾಗಿದೆ. ನೆಟ್ ಫ್ಲಿಕ್ಸ್ ವಯಸ್ಕ ಪ್ರೊಫೈಲ್ ಗಳಿಗಾಗಿ ಟೈಮರ್ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ, ಆರಂಭಿಕ ಟೆಸ್ಟಿಂಗ್ ವೇಳೆಯಲ್ಲಿ ಬರುವ ಪ್ರತಿಕ್ರಿಯೆಯನ್ನು ಗಮನಿಸಿ ಕಾಲಾಂತರದಲ್ಲಿ ಹರೆಯದ ವಯಸ್ಸಿನ ಚಂದಾದಾರರಿಗೂ ಈ ಫೀಚರನ್ನು ವಿಸ್ತರಿಸಬಹುದು ಎಂದು ಹೇಳಲಾಗುತ್ತಿದೆ.
“ನಾವು ಯಾವಾಗಲೂ ನೆಟ್ ಫ್ಲಿಕ್ಸ್ ಮೊಬೈಲ್ ಅನುಭವವನ್ನು ಸುಧಾರಿಸಲು ಹೊಸ ಮಾರ್ಗಗಳನ್ನು ಹುಡುಕುತ್ತೇವೆ. ಇದು ಕೂಡ ಅದರ ಒಂದು ಹಂತ” ಎಂದು ನೆಟ್ ಫ್ಲಿಕ್ಸ್ ನ ವಕ್ತಾರರೊಬ್ಬರು ತಿಳಿಸಿದ್ದಾರೆ.
“ಈ ಟೆಸ್ಟಿಂಗ್ ಟೈಮರ್ ಚಂದಾದಾರರ ವೀಕ್ಷಣೆಯ ಅನುಭವದ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ. ತಮ್ಮ ನೆಚ್ಚಿನ ಪ್ರದರ್ಶನ ಅಥವಾ ಚಲನಚಿತ್ರವನ್ನು ಆರಿಸಿಕೊಳ್ಳಲು ಮತ್ತು ಅದು ಮುಗಿಯುವ ಮೊದಲು ಅದನ್ನು ವಿರಾಮಗೊಳಿಸುವುದರ ಬಗ್ಗೆ ಸೂಚನೆ ನೀಡುವ ತಂತ್ರಜ್ಞಾನವನ್ನು ಹೊಂದಿದೆ.”
ಓದಿ : ಗವಿಸಿದ್ದೇಶ್ವರ ಜಾತ್ರೆ: ಶಿವಶಾಂತವೀರ ಶರಣರಿಂದ ದೀರ್ಘದಂಡ ನಮಸ್ಕಾರ
ಆ್ಯಂಡ್ರಾಯ್ಡ್ ಸಾಧನಗಳನ್ನು ಮೀರಿ ನೆಟ್ ಫ್ಲಿಕ್ಸ್ ಟೈಮರ್ ವೈಶಿಷ್ಟ್ಯವನ್ನು ವಿಸ್ತರಿಸುತ್ತದೆಯೇ ಎಂಬ ಬಗ್ಗೆ ಸ್ಪಷ್ಟತೆ ಇದುವರೆಗೆ ಇಲ್ಲ. ಆದರೇ, ಟಿವಿ ಸೆಟ್‌ಗಳು ಮತ್ತು ಡೆಸ್ಕ್ ಟಾಪ್ ಗಳು ಸೇರಿದಂತೆ ಇತರ ಸಾಧನಗಳಿಗೆ ತರಲು ಅನ್ವೇಷಿಸುತ್ತದೆ. ಎಂದು ದಿ ವರ್ಜ್ ತನ್ನ ವರದಿಯಲ್ಲಿ ಹೇಳಿದೆ.
ನೆಟ್ ಫ್ಲಿಕ್ಸ್ ನಲ್ಲಿ ಟೈಮರ್ ಅನ್ನು ಹೇಗೆ ಹೊಂದಿಸುವುದು..?
ಈ ಫೀಚರ್ ನಿಮ್ಮ ಆ್ಯಂಡ್ರಾಯ್ಡ್ ಡಿವೈಸ್ ನ್ನು ತಲುಪಿದ ನಂತರ, ಸ್ಕ್ರೀನ್ ಮೇಲಿನ ಬಲ ಮೂಲೆಯಲ್ಲಿರುವ ಕಾಸ್ಟಿಂಗ್ ಬಟನ್ ಪಕ್ಕದಲ್ಲಿ ನೀವು ಟೈಮರ್ ಐಕಾನ್ ಅನ್ನು ನೋಡುತ್ತೀರಿ . ನೀವು ಆ ಐಕಾನ್ ಅನ್ನು ಟ್ಯಾಪ್ ಮಾಡಿ ಮತ್ತು 15 , 30 , 45 ರಿಂದ ಆಯ್ಕೆ ಮಾಡಬೇಕಾಗುತ್ತದೆ.
ಓದಿ : ನುಕ್ಯಾಡಿ ಉದ್ಭವ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಸಚಿವ ಈಶ್ವರಪ್ಪ ಭೇಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.