ಹೊಸ ಸೈಬರ್ ವಂಚನೆ: ಎಚ್ಚರಿಕೆ
Team Udayavani, Aug 12, 2021, 8:20 AM IST
ಹೊಸದಿಲ್ಲಿ: ಗ್ರಾಹಕರ ಇಂಟರ್‌ನೆಟ್ ಬ್ಯಾಂಕಿಂಗ್ ಗೌಪ್ಯ ವಿವರ, ಮೊಬೈಲ್ ಸಂಖ್ಯೆ ಮತ್ತು ಒಟಿಪಿ ಇತ್ಯಾದಿ ಕದಿಯಲು ವಂಚಕರು ಹೊಸ ಫಿಶಿಂಗ್ ತಂತ್ರ ಬಳಸುತ್ತಿದ್ದು, ಗ್ರಾಹ ಕರು ಎಚ್ಚರದಿಂದ ಇರಬೇಕು ಎಂದು ದೇಶದ ಸೈಬರ್ ಸೆಕ್ಯುರಿಟಿ ಏಜೆನ್ಸಿ ತಿಳಿಸಿದೆ.
“ಎನ್‌ಜಿರಾಕ್ ಪ್ಲಾಟ್ ಫಾರ್ಮ್’ ಎಂಬ ಹೊಸ ವೆಬ್ ಅಪ್ಲಿಕೇಶನನ್ನು ಖದೀಮರು ಇದಕ್ಕಾಗಿ ಬಳಸು ತ್ತಿದ್ದಾರೆ ಎಂದು ಅದು ಎಚ್ಚರಿಸಿದೆ. ಬ್ಯಾಂಕ್ ಇಂಟರ್‌ನೆಟ್ ಬ್ಯಾಂಕಿಂಗ್ ಪೋರ್ಟಲ್‌ಗಳಂತೆ ಕಾಣಿಸುವ ವೆಬ್‌ಸೈಟ್ ಸೃಷ್ಟಿಸಲಾಗುತ್ತದೆ. ಇವುಗಳಿಂದ ಎಸ್ಸೆಮ್ಮೆಸ್ ಕಳುಹಿಸಿ ಗ್ರಾಹಕರನ್ನು ಬಲೆಗೆ ಕೆಡವಲಾಗುತ್ತದೆ. ಹೀಗಾಗಿ ಎಚ್ಚರಿಕೆಯಿಂದ ಇರಬೇಕು, ngrok.io/xxxbank. -ಹೀಗೆ ಅಂತ್ಯವಾಗುವ ಸಂದೇಶವನ್ನು ಕ್ಲಿಕ್ಕಿಸಬಾರದು ಎಂದು ಸೈಬರ್ ಸೆಕ್ಯುರಿಟಿ ಏಜೆನ್ಸಿ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.