ವಾಟ್ಸಾಪ್ ಪರಿಚಯಿಸುತ್ತಿದೆ ಹೊಸ ಫೀಚರ್…!
Team Udayavani, Mar 3, 2021, 5:00 PM IST
ಅತೀ ಹೆಚ್ಚು ಬಳಕೆಯಲ್ಲಿರುವ ಸಂವಹನ ಮಾಧ್ಯಮ ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ಫೀಚರ್ ಪರಿಚಯಿಸುತ್ತಿದೆ. ಕೆಲ ದಿನಗಳ ಹಿಂದೆ ಬಳಕೆದಾರರ ಖಾಸಗಿತನಕ್ಕೆ ಧಕ್ಕೆ ತರುವಂತಹ ಕ್ರಮ ವಾಟ್ಸಾಪ್ ಕೈಗೊಂಡಿತ್ತು. ಇದರ ವಿರುದ್ಧ ವ್ಯಾಪಕ ಟೀಕೆ ಕೂಡ ವ್ಯಕ್ತವಾಗಿತ್ತು. ಸಾಕಷ್ಟು ಜನರು ವಾಟ್ಸಾಪ್ ಗೆ ಪರ್ಯಾಯ ಮಾರ್ಗ ಕಂಡುಕೊಳ್ಳಲು ಮುಂದಾದರು. ಇದರಿಂದ ವಾಟ್ಸಾಪ್ ಗೆ ಹಿನ್ನಡೆಯಾದದ್ದು ಸುಳ್ಳಲ್ಲ. ತನ್ನ ಬಳಕೆದಾರರ ವಿಶ್ವಾಸ ಪುನಃ ಸಂಪಾದಿಸಲು ವಾಟ್ಸಾಪ್ ಕಸರತ್ತು ನಡೆಸುತ್ತಿದೆ. ಇದರ ಭಾಗವಾಗಿ ಹೊಸ ಫೀಚರ್ ವೊಂದನ್ನು ಪರಿಚಯಿಸುತ್ತಿದೆ.
ಹೊಸ ಫೀಚರ್ ಏನು ?
ಬಳಕೆದಾರರ ಗೌಪ್ಯತೆಗೆ ಮೊದಲ ಆದ್ಯತೆ ನೀಡುತ್ತೇವೆ ಎನ್ನುವುದನ್ನು ಸಾಬೀತು ಪಡಿಸಲು ಹೊರಟಿರುವ ವಾಟ್ಸಾಪ್, ಅದಕ್ಕಾಗಿ ಇದೀಗ ಸ್ವಯಂ-ಅಳಿಸಿಹಾಕು ( Auto-delete ) ಸೌಲಭ್ಯ ನೀಡುತ್ತಿದೆ. ನಾವು ಕಳುಹಿಸಿದಂತಹ ಫೋಟೊಗಳು ನಾವು ಚಾಟ್ ನಿಂದ ಹೊರಬಂದ ತಕ್ಷಣ ತನ್ನಿಂದ ತಾನೆ ಡಿಲೀಟ್ ಆಗಲಿವೆ. ನಮ್ಮಿಂದ ಸಂದೇಶ ಸ್ವೀಕರಿಸಿದವರು, ಬೇರೆಯವರ ಜತೆ ಹಂಚಿಕೊಳ್ಳಲಾಗದು. ತನ್ನ ಈ ಫೀಚರ್ ನ ಡೆಮೋದ ಕೆಲ ಫೋಟೊಗಳನ್ನು ವಾಟ್ಸಾಪ್ ಹಂಚಿಕೊಂಡಿದೆ.
ಸ್ಕ್ರೀನ್ ಶಾಟ್ ಮಾಡಬಹುದು ?
ವಾಟ್ಸಾಪ್ ಪರಿಚಯಿಸಲು ಹೊರಟಿರುವ ಹೊಸ ಫೀಚರ್ ಒಂದು ನ್ಯೂನ್ಯತೆ ಹೊಂದಿದೆ. ಫೋಟೊಗಳನ್ನು ಚಾಟ್ ನಿಂದ ಬೇರೆಯವರಿಗೆ ಹಂಚಿಕೊಳ್ಳಲು ಅವಕಾಶ ಇರುವುದಿಲ್ಲ. ಆದರೆ, ಸ್ಕ್ರೀನ್ ಶಾಟ್ ತೆಗೆದುಕೊಳ್ಳಬಹುದು.
ವಾಟ್ಸಾಪ್ ತನ್ನ ಹೊಸ ಫೀಚರ್ ಇನ್ನೂ ಬಳಕೆದಾರರಿಗೆ ಕಲ್ಪಿಸಿಲ್ಲ. ಸದ್ಯ ಇದರ ಮೇಲೆ ಕಾರ್ಯನಿರ್ವಹಿಸುತ್ತಿದೆ. ಸ್ಕ್ರೀನ್ ಶಾಟ್ ಮೂಲಕ ಫೋಟೊ ಹಂಚಿಕೊಳ್ಳಬಹುದೆನ್ನುವ ಸಾಧ್ಯತೆಯನ್ನೂ ಗಮನದಲ್ಲಿಟ್ಟು ಕೊಂಡಿರುವ ವಾಟ್ಸಾಪ್, ಈ ಸೌಲಭ್ಯವನ್ನೂ ತೆಗೆದುಹಾಕುವುದರತ್ತ ಕಾರ್ಯೋನ್ಮುಖವಾಗಿದೆ. ವಾಟ್ಸಾಪ್ ನ ಈ ನೂತನ ಸೌಲಭ್ಯ ಮುಂದಿನ ದಿನಗಳಲ್ಲಿ ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಬಳಕೆದಾರರಿಗೆ ಲಭ್ಯವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.