![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Feb 10, 2021, 12:49 PM IST
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಫೇಸ್ ಬುಕ್ ಬಳಕೆಯಂತೂ ಸರ್ವೇ ಸಾಮಾನ್ಯ . ಹೀಗಿರುವಾಗ ಬಳಕೆದಾರರು ಹಲವಾರು ಬಾರಿ ತಮ್ಮ ಫೇಸ್ ಬುಕ್ ಅನ್ನು ಬಳಸಿದ ನಂತರ ಲಾಗ್ ಔಟ್ ಮಾಡುವುದನ್ನು ಮರೆತೇ ಬಿಡುತ್ತಾರೆ. ಇದರಿಂದ ಮತ್ತೊಬ್ಬ ವ್ಯಕ್ತಿ ನಿಮ್ಮ ಅನುಮತಿ ಇಲ್ಲದೆ ನಿಮ್ಮ ಫೇಸ್ ಬುಕ್ ಅಕೌಂಟ್ ಅನ್ನು ಬಳಸುವ ಸಾಧ್ಯತೆ ಇರುತ್ತದೆ.
ಸೈಬರ್ ಕೆಫೆಗಳಲ್ಲಿ ಅಥವಾ ಬೇರೊಬ್ಬರ ಮೊಬೈಲ್ ಫೋನ್ ಗಳಲ್ಲಿ ಒಂದು ವೇಳೆ ನೀವು ನಿಮ್ಮ ಫೇಸ್ ಬುಕ್ ಅಕೌಂಟ್ ಅನ್ನು ಲಾಗ್ ಇನ್ ಮಾಡಿ ಲಾಗ್ ಔಟ್ ಮಾಡುವುದನ್ನು ಮರೆತಿದ್ದರೆ ಇನ್ನೊಬ್ಬ ವ್ಯಕ್ತಿ ನಿಮ್ಮ ಅಕೌಂಟ್ ಅನ್ನು ಬಳಸುವ ಸಾದ್ಯತೆ ಹೆಚ್ಚು. ಅಂತಹ ಸಮಯದಲ್ಲಿ ನಿಮ್ಮ ಅಕೌಂಟ್ ಅನ್ನು ಯಾರು ಬಳಸುತ್ತಿದ್ದಾರೆ ಎಂದು ತಿಳಿದುಕೊಳ್ಳುವುದರೊಂದಿಗೆ, ನಿಮ್ಮ ಅಕೌಂಟ್ ಅನ್ನು ಅವರು ಬಳಸದಂತೆ ಲಾಗ್ ಔಟ್ ಮಾಡಬಹುದಾಗಿದೆ.
ಇದನ್ನೂ ಓದಿ:ಉತ್ತರಪ್ರದೇಶ: ಲಿಕ್ಕರ್ ಮಾಫಿಯಾ ಗೂಂಡಾಗಳಿಂದ ಕಾನ್ಸ್ ಟೇಬಲ್ ಹತ್ಯೆ, ಎಸ್ ಐ ಗಂಭೀರ
ನಿಮಗೆ ಅರಿವಿಲ್ಲದೆ ಬೇರೆಯವರು ನಿಮ್ಮ ಫೇಸ್ ಬುಕ್ ಅಕೌಂಟ್ ಅನ್ನು ಬಳಸುತ್ತಿದ್ದರೆ ಅದನ್ನು ತಿಳಿಯಲು ಹೀಗೆ ಮಾಡಿ
ಕಂಪ್ಯೂಟರ್ ಮೂಲಕ ತಿಳಿಯಲು ಈ ವಿಧಾನವನ್ನು ಅನುಸರಿಸಿ
ಮೊದಲಿಗೆ ಬ್ರೌಸರ್ ನಲ್ಲಿ ನಿಮ್ಮ ಫೇಸ್ ಬುಕ್ ಅಕೌಂಟ್ ಅನ್ನು ಲಾಗ್ ಇನ್ ಮಾಡಿಕೊಳ್ಳಿ. ನಂತರ ಅಲ್ಲಿ ಕಾಣುವ ಸೆಟ್ಟಿಂಗ್ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆ ಬಳಿಕ ನಿಮ್ಮ ಕಂಪ್ಯೂಟರ್ ಪರದೆಯ ಬದಿಯಲ್ಲಿ ಕಾಣುವ Security and login ಆಯ್ಕೆಯ ಮೇಲೆ ಕ್ಲಿಕ್ ಮಾಡಿ . ಆಗ Where you’re logged in ಎಂಬ ಆಯ್ಕೆಯನ್ನು ಕಾಣಬಹುದಾಗಿದೆ. ಇಲ್ಲಿ ನಿಮ್ಮ ಫೇಸ್ ಬುಕ್ ಅಕೌಂಟ್ ಯಾವೆಲ್ಲಾ ಡಿವೈಸ್ ಗಳಲ್ಲಿ ಲಾಗ್ ಇನ್ ಆಗಿದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ಆಗ ನೀವು ಅವುಗಳಲ್ಲಿ ಯಾವ ಡಿವೈಸ್ ನಲ್ಲಿ ನಿಮ್ಮ ಫೆಸ್ ಬುಕ್ ಲಾಗ್ ಔಟ್ ಆಗಬೇಕಿದೆ ಎಂದು ಗುರುತಿಸಿ ಲಾಗ್ ಔಟ್ ಮಾಡಬಹುದು.
ಮೊಬೈಲ್ ಪೋನ್ ಮೂಲಕ ತಿಳಿಯಲು ಈ ವಿಧಾನವನ್ನು ಪಾಲಿಸಿ
ಮೊದಲು ನಿಮ್ಮ ಮೊಬೈಲ್ ಪೋನ್ ನಲ್ಲಿ ಫೇಸ್ ಬುಕ್ ಓಪನ್ ಮಾಡಿಕೊಳ್ಳಿ . ಬಳಿಕ ಸೆಟ್ಟಿಂಗ್ ಆಯ್ಕೆಯನ್ನು ಕ್ಲಿಕ್ ಮಾಡಿ. ಬಳಿಕ ನಿಮಗೆ ಕಾಣಸಿಗುವ Security and login ಆಯ್ಕೆಯನ್ನು ಕ್ಲಿಕ್ ಮಾಡಿದಾಗ Where you’re logged in ಎಂಬ ಆಯ್ಕೆ ಕಾಣಿಸುತ್ತದೆ. ಅಲ್ಲಿ ಯಾವ ಯಾವ ಡಿವೈಸ್ ಗಳಲ್ಲಿ ನಿಮ್ಮ ಫೇಸ್ ಬುಕ್ ಲಾಗ್ ಇನ್ ಆಗಿದೆ ಎಂಬುವುದು ತಿಳಿಯುತ್ತದೆ. ಆಗ ನೀವು ಲಾಗ್ ಆಫ್ ಮಾಡಬೇಕಾಗಿರುವ ಡಿವೈಸ್ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಫೆಸ್ ಬುಕ್ ಅಕೌಂಟ್ ಅನ್ನು ಲಾಗ್ ಔಟ್ ಮಾಡಬಹುದಾಗಿದೆ.
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.