![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 16, 2023, 7:57 AM IST
ನವದೆಹಲಿ: ಗ್ರಾಹಕ ಕೇಂದ್ರಿತ, ಉತ್ಕೃಷ್ಟ ಸೇವೆಯ ಮೇಲೆ ನಿರಂತರ ಗಮನ ಹೊಂದಿರುವ ನಿಸ್ಸಾನ್ ಮೋಟಾರ್ ಇಂಡಿಯಾ ತನ್ನೆಲ್ಲ ಗ್ರಾಹಕರ ಕಾರುಗಳಿಗೆ ಉಚಿತ ಎಸಿ ತಪಾಸಣೆ ಶಿಬಿರಗಳನ್ನು ಘೋಷಿಸಿದೆ.
ಭಾರತದಾದ್ಯಂತ ಹರಡಿರುವ ನಿಸ್ಸಾನ್ ಅಧಿಕೃತ ವರ್ಕ್‌ಶಾಪ್‌ಗಳಲ್ಲಿ ಏಪ್ರಿಲ್ 15ರಿಂದ ಜೂನ್ 15, 2023ರ ವರೆಗೆ ಕಾರುಗಳ ಎಸಿ ತಪಾಸಣೆ ಶಿಬಿರಗಳನ್ನು ನಿಸ್ಸಾನ್ ನಡೆಸಲಿದೆ. ನಿಸ್ಸಾನ್ ಮತ್ತು ಡಟ್ಸನ್ ವಾಹನ ಮಾಲೀಕರು ನಿಸ್ಸಾನ್ ಕನೆಕ್ಟ್ ಅಪ್ಲಿಕೇಶನ್ ಅಥವಾ ನಿಸ್ಸಾನ್ ಮೋಟಾರ್ ಇಂಡಿಯಾ ವೆಬ್‌ಸೈಟ್ (www.nissan.in) ಮೂಲಕ ತಪಾಸಣೆಗಾಗಿ ಸೇವಾ ಸಮಯವನ್ನು ಸುಲಭವಾಗಿ ಬುಕ್ ಮಾಡಬಹುದು. ಇದು ವಾಹನ ಮಾಲೀಕರಿಗೆ ಜಂಜಾಟವಿಲ್ಲದ ಸವಾರಿ ಅನುಭವದ ಭರವಸೆಯನ್ನು ನೀಡುತ್ತದೆ ಮತ್ತು ನಿಸ್ಸಾನ್ ಬ್ರ್ಯಾಂಡ್‌ನಲ್ಲಿ ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸುತ್ತದೆ. ಪ್ರಸ್ತುತ ನಿಸ್ಸಾನ್ ಮತ್ತು ದಟ್ಸನ್ ಬ್ರಾಂಡ್ ವಾಹನಗಳಿಗೆ ಸೇವೆ ನೀಡುತ್ತಿರುವ 122-ವರ್ಕ್‌ಶಾಪ್ ಜಾಲದಲ್ಲಿ ಈ ಸೇವಾ ಶಿಬಿರಗಳನ್ನು ನಡೆಸಲಾಗುವುದು.
ನಿಸ್ಸಾನ್-ತರಬೇತಿ ಪಡೆದ ವೃತ್ತಿಪರ ಮೆಕ್ಯಾನಿಕ್‌ಗಳು ಎಸಿ-ತಪಾಸಣೆ ಶಿಬಿರಗಳನ್ನು ನಡೆಸಿ, ಸೇವೆಯ ಗುಣಮಟ್ಟವನ್ನು ಖಚಿತಪಡಿಸಲು ನಿಸ್ಸಾನ್ ನೈಜ ಬಿಡಿಭಾಗಗಳನ್ನೇ ಬಳಸುತ್ತಾರೆ. ಶಿಬಿರವು ಸಮಗ್ರ 20-ಅಂಶಗಳ ತಪಾಸಣೆಯನ್ನು ಒಳಗೊಂಡಿದೆ. ಇದರಲ್ಲಿ ಉಚಿತ ಎಸಿ ತಪಾಸಣೆ, ವಾಹನದ ಆಂತರಿಕ, ಬಾಹ್ಯ ಮತ್ತು ತಳಭಾಗದ ತಪಾಸಣೆ ಹಾಗೂ ರೋಡ್ ಟೆಸ್ಟ್ ಕೂಡ ಸೇರಿವೆ. ಇದಲ್ಲದೆ, ಗ್ರಾಹಕರ ವಾಹನಗಳಿಗೆ ಟಾಪ್ ವಾಶ್ ಕಾಂಪ್ಲಿಮೆಂಟರಿ ಕೊಡುಗೆಯನ್ನೂ ನೀಡಲಾಗುತ್ತದೆ. ಹೆಚ್ಚುವರಿಯಾಗಿ, ಗ್ರಾಹಕರು ಲೇಬರ್ ವೆಚ್ಚಗಳ ಮೇಲೆ 20% ಮತ್ತು ಮೌಲ್ಯವರ್ಧಿತ ಸೇವೆಗಳ (VAS) ಮೇಲೆ 10% ವರೆಗೆ ರಿಯಾಯಿತಿ ಪ್ರಯೋಜನ ಪಡೆಯಬಹುದು.
ನಿಸ್ಸಾನ್ ಮೋಟಾರ್ ಇಂಡಿಯಾ ಸರಿಸಾಟಿಯಿಲ್ಲದ ಮೌಲ್ಯವನ್ನು ನೀಡಬಲ್ಲ ಪ್ರಿ-ಪೇಯ್ಡ್ ಮೆಂಟೆನೆನ್ಸ್ ಪ್ಯಾಕೇಜ್ (PMP) ಅನ್ನು ಸೇವಾ ಶಿಬಿರಗಳಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡುತ್ತಿದೆ. ಇದು ಗ್ರಾಹಕರಿಗೆ ನಿರ್ವಹಣಾ ವೆಚ್ಚದಲ್ಲಿ 20% ವರೆಗೆ ಉಳಿತಾಯ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ.
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.