ನೋಕಿಯಾ ಎಕ್ಸ್30 5ಜಿ ಬಿಡುಗಡೆ: ಬೆಲೆ ಎಷ್ಟು ಗೊತ್ತಾ ?
ನೋಕಿಯಾದಿಂದ ಪರಿಸರ ಸ್ನೇಹಿ ಫೋನ್
Team Udayavani, Feb 16, 2023, 9:00 PM IST
ನವದೆಹಲಿ: ಎಚ್ಎಂಡಿ ಗ್ಲೋಬಲ್, ನೋಕಿಯಾ ಎಕ್ಸ್30 5ಜಿ (Nokia X30 5G) ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಇದು ನೋಕಿಯಾದ ಅತ್ಯಂತ ಪರಿಸರ ಸ್ನೇಹಿ ಫೋನ್ ಆಗಿದ್ದು, ಹೊಸ ಪರಿಸರ-ಸ್ನೇಹಿ ವಿನ್ಯಾಸವು ಶೇ 100ರಷ್ಟು ಮರುಬಳಕೆಯ ಅಲ್ಯೂಮಿನಿಯಂ ಫ್ರೇಂ ಮತ್ತು ಶೇ 65ರಷ್ಟು ಮರುಬಳಕೆಯ ಪ್ಲಾಸ್ಟಿಕ್ ಹೊಂದಿದೆ. ಅತ್ಯುತ್ತಮ ಪ್ಯೂರ್ವ್ಯೂ ಛಾಯಾಗ್ರಹಣ ಮತ್ತು 6.43 ಇಂಚಿನ ಅಮೊಲೆಡ್ ಪ್ಯೂರ್ ಡಿಸ್ಪ್ಲೇ ಸೇರಿದಂತೆ ಹಲವಾರು ವೈಶಿಷ್ಟ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಅಲ್ಟ್ರಾ-ಟಫ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಡಿಸ್ ಪ್ಲೇ ರಕ್ಷಣೆಯಿದೆ.
ಫಿನ್ಲೆಂಡ್ ನಲ್ಲಿ ವಿನ್ಯಾಸ:
ಈ ಸ್ಮಾರ್ಟ್ ಫೋನ್ ಅನ್ನು ಫಿನ್ಲೆಂಡಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಹೊಸ ಪರಿಸರ-ಸ್ನೇಹಿ ವಿನ್ಯಾಸವು ಶೇ 100ರಷ್ಟು ಮರುಬಳಕೆಯ ಅಲ್ಯೂಮಿನಿಯಂ ಫ್ರೇಮ್ ಮತ್ತು ಶೇ 65ರಷ್ಟು ಮರುಬಳಕೆಯ ಪ್ಲಾಸ್ಟಿಕ್ ಹೊಂದಿದೆ. ಕಡಿಮೆ ಪ್ಲಾಸ್ಟಿಕ್, ಕಡಿಮೆ ರಾಸಾಯನಿಕಗಳು, ಶೇ 100ರಷ್ಟು ಎಫ್ಎಸ್ ಸಿ ಪ್ರಮಾಣೀಕೃತವಾಗಿದೆ.
ಇದು 3 ವರ್ಷಗಳ ವಾರಂಟಿ ಮತ್ತು 3 ಒಎಸ್ ಅಪ್ ಗ್ರೇಡ್ ನೀಡುತ್ತದೆ. ಈ ಫೋನ್ IP67 ಧೂಳಿನ ರಕ್ಷಣೆ ಒಳಗೊಂಡಿದೆ. 30 ನಿಮಿಷಗಳ ಕಾಲ 1ಮೀಟರ್ವರೆಗಿನ ನೀರಿನಲ್ಲಿ ಮುಳುಗಿಸಿದರೂ ನೀರು ಒಳಸೇರುವುದಿಲ್ಲ.
50 ಎಂಪಿ ಪ್ಯೂರ್ವ್ಯೂ ಕ್ಯಾಮೆರಾದೊಂದಿಗೆ 13ಎಂಪಿ ಅಲ್ಟ್ರಾ-ವೈಡ್ ಲೆನ್ಸ್ ಹೊಂದಿದೆ. 16ಎಂಪಿ ಮುಂಭಾಗದ ಸೆಲ್ಫಿ ಕ್ಯಾಮರಾ ಇದೆ.
ಡಿಸ್ ಪ್ಲೆಯಲ್ಲಿ ಬೆರಳಚ್ಚು ಸ್ಕ್ಯಾನರ್ ಇದ್ದು, 33 ವ್ಯಾಟ್ಸ್ ವೇಗದ ಚಾರ್ಜರ್ ಹೊಂದಿದೆ. ಕ್ವಾಲ್ಕಾಂ ಸ್ನಾಪ್ ಡ್ರಾಗನ್ 695 ಪ್ರೊಸೆಸರ್ ಒಳಗೊಂಡಿದೆ.
ಬೆಲೆ ಮತ್ತು ಲಭ್ಯತೆ:
Nokia X30 5G 8ಜಿಬಿ ಮತ್ತು 256 ಜಿಬಿ ಮಾದರಿಗೆ ಸೀಮಿತ ಅವಧಿಗೆ 48,999 ರೂ. ಆರಂಭಿಕ ಬೆಲೆಯಿದ್ದು, ಬುಕಿಂಗ್ ಗೆ ಲಭ್ಯ ಇರಲಿದೆ. ಫೆ. 20 ರಿಂದ ಅಮೆಜಾನ್ ಮತ್ತು Nokia.com ತಾಣಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.
Nokia X30 5G 5799 ರೂ.ಗಳ ಮೌಲ್ಯದ ಆರಂಭಿಕ ಕೊಡುಗೆಯೊಂದಿಗೆ ಬರುತ್ತದೆ. ಪ್ರತಿ ಖರೀದಿಯೊಂದಿಗೆ ಇದರಲ್ಲಿ 33 ವ್ಯಾಟ್ಸ್ ವೇಗದ ಚಾರ್ಜರ್ ಮತ್ತು ನೋಕಿಯಾ ಕಂಫರ್ಟ್ ಇಯರ್ ಬಡ್ ನೀಡಲಾಗುವುದು ಎಂದು ಕಂಪೆನಿ ತಿಳಿಸಿದೆ.
ಇದನ್ನೂ ಓದಿ: ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್23 ಸರಣಿ: 24 ಗಂಟೆಗಳಲ್ಲಿ 1.40 ಲಕ್ಷ ಮುಂಗಡ ಬುಕ್ಕಿಂಗ್ ದಾಖಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.