Nothing- CMF ಉತ್ಪನ್ನಗಳಿಗೆ ಶೇ.50ಕ್ಕೂ ಹೆಚ್ಚಿನ ರಿಯಾಯಿತಿಗಳನ್ನು ಪ್ರಕಟಿಸಿದ ನಥಿಂಗ್

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್‌

Team Udayavani, Sep 23, 2024, 6:10 PM IST

Nothing- CMF ಉತ್ಪನ್ನಗಳಿಗೆ ಶೇ.50ಕ್ಕೂ ಹೆಚ್ಚಿನ ರಿಯಾಯಿತಿಗಳನ್ನು ಪ್ರಕಟಿಸಿದ ನಥಿಂಗ್

ಬೆಂಗಳೂರು: ಲಂಡನ್ ಮೂಲದ ಹಾಗೂ H1 2024ರಲ್ಲಿ 567% ರಷ್ಟು ಗಣನೀಯ ಪ್ರಗತಿ ಸಾಧಿಸಿರುವ ಗ್ರಾಹಕ ಟೆಕ್ ಬ್ರ್ಯಾಂಡ್ ಕಂಪನಿ ನಥಿಂಗ್ (Nothing), ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿದೆ. ಬಹುನಿರೀಕ್ಷಿತ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್‌ ಸಲುವಾಗಿ ಹೊಸ ಮತ್ತು ಹೆಚ್ಚು ಬೇಡಿಕೆಯಿರುವ ನಥಿಂಗ್ ಮತ್ತು CMF ಉತ್ಪನ್ನಗಳ ಮೇಲೆ ಆಮೋಘ ರಿಯಾಯಿತಿಗಳನ್ನು ಘೋಷಿಸಿದೆ.

ನಥಿಂಗ್ ಫೋನ್ (2ಎ):
ಡೈಮೆನ್ಸಿಟಿ 7200 ಪ್ರೊ ಪ್ರೊಸೆಸರ್ ಮತ್ತು 5,000 mAh ಬ್ಯಾಟರಿ 45w ಫಾಸ್ಟ್ ಚಾರ್ಜಿಂಗ್ ಆಯ್ಕೆಯನ್ನು ಈ ಫೋನ್ (2a) ಹೊಂದಿದೆ. ಇದು 50 MP + 50 MP ಹಿಂಭಾಗದ ಕ್ಯಾಮೆರಾಗಳು, 32 MP ಮುಂಭಾಗದ ಕ್ಯಾಮೆರಾ ಮತ್ತು 1,300 ನಿಟ್ಸ್ ಪೀಕ್ ಬ್ರೈಟ್ನೆಸ್ ಜೊತೆಗೆ 6.7″ ಅಮೋಲೆಡ್ ಡಿಸ್‌ಪ್ಲೇ ಮತ್ತು 120 Hz ರಿಫ್ರೆಶ್ ದರವನ್ನು ಹೊಂದಿದೆ. ಆಂಡ್ರಾಯ್ಡ್ (Android)14 ಜೊತೆಗೆ ನಥಿಂಗ್ OS 2.6 ರಲ್ಲಿ ಕಾರ್ಯ ನಿರ್ವಹಿಸುವ ಇದು, ವರ್ಧಿತ ವಿಜೆಟ್‌ಗಳು ಮತ್ತು AI ವೈಶಿಷ್ಟ್ಯಗಳನ್ನು ನೀಡುತ್ತದೆ. ಬಿಡುಗಡೆಯ ದಿನದಂದು ಈ ಫೋನ್ (2ಎ) ಬೆಸ್ಟ್ ಸೆಲ್ಲರ್ ಆಗಿತ್ತು ಮತ್ತು ಕೇವಲ 60 ನಿಮಿಷಗಳಲ್ಲಿ 60 ಸಾವಿರ ಸಂಖ್ಯೆಯಲ್ಲಿ ಮಾರಾಟವಾಗಿತ್ತು. ಬಿಗ್ ಬಿಲಿಯನ್ ಡೇಸ್ 2024 ಸೇಲ್‌ಗೆ, ಫೋನ್ (2ಎ) ಕೇವಲ ₹18,999 ಬೆಲೆಗೆ ಲಭ್ಯವಿರುತ್ತದೆ.

ನಥಿಂಗ್ ಫೋನ್ (2ಎ) ಪ್ಲಸ್:
ಮೀಡಿಯಾಟೆಕ್ (MediaTek) ಡೈಮೆನ್ಸಿಟಿ 7350 ಪ್ರೊ 5G ಪ್ರೊಸೆಸರ್ ಚಾಲಿತ ನಥಿಂಗ್ (2ಎ) ಪ್ಲಸ್ ಫೋನ್, ಟ್ರಿಪಲ್ 50 MP ಕ್ಯಾಮೆರಾ ಸಿಸ್ಟಮ್ ಹೊಂದಿರುವ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಮುಂಭಾಗದ ಕ್ಯಾಮರಾ ಈ ಹಿಂದಿನ ಮಾದರಿಗಳಿಗಿಂತ ಅಪ್‌ಗ್ರೇಡ್ ಆಗಿದ್ದು, ಈಗ 4k ವೀಡಿಯೊವನ್ನು 30 FPS ನಲ್ಲಿ ಸೆರೆಹಿಡಿಯುತ್ತದೆ. ಎಲ್ಲ ಮೂರು ಸೆನ್ಸಾರ್‌ಗಳು ನೇರ 50 MP ಫೋಟೋ ಔಟ್ಪುಟ್, HDR ಫೋಟೋ ಕ್ಯಾಪ್ಚರ್ ಮತ್ತು 4K ವಿಡಿಯೋ ರೆಕಾರ್ಡಿಂಗ್ ಮಾಡಬಲ್ಲವು. ಫೋನ್ (2ಎ) ಪ್ಲಸ್ 6.7″ FHD+ 1300 ನಿಟ್ಸ್ ಪೀಕ್ ಬ್ರೈಟ್ನೆಸ್ ಜೊತೆಗೆ AMOLED ಡಿಸ್‌ಪ್ಲೇ ಮತ್ತು 120 Hz ರಿಫ್ರೆಶ್ ದರವನ್ನು ಹೊಂದಿದೆ. ಇದು 50w ಫಾಸ್ಟ್ ಚಾರ್ಜಿಂಗ್ ಜೊತೆಗೆ 5,000 mAh ಬ್ಯಾಟರಿ ಹೊಂದಿದ್ದು. ಗರಿಷ್ಠ ಎರಡು ದಿನಗಳ ಕಾಲ ಬಳಸಬಹುದು. ಆಂಡ್ರಾಯ್ಡ್ 14 ಚಾಲಿತ ಈ ಫೋನ್ ಮೂರು ವರ್ಷಗಳ ಕಾಲ ಸಾಫ್ಟ್‌ವೇರ್ ಅಪ್ಡೇಟ್‌ಗಳು ಮತ್ತು ನಾಲ್ಕು ವರ್ಷಗಳ ಕಾಲ ಭದ್ರತಾ ನವೀಕರಣಗಳ ಭರವಸೆ ನೀಡುತ್ತದೆ. ಎರಡು ಲೋಹೀಯ ಬಣ್ಣಗಳಲ್ಲಿ ಲಭ್ಯವಿರುವ ಫೋನ್ (2ಎ) ಪ್ಲಸ್ ಅನ್ನು ಬಿಗ್ ಬಿಲಿಯನ್ ಡೇಸ್‌ನಲ್ಲಿ ₹23,999 ಬೆಲೆಗೆ ಮಾರಾಟ ಮಾಡಲಾಗುತ್ತದೆ.

CMF ಫೋನ್ 1:
CMF ಫೋನ್ 1 ಅನ್ನು ನಥಿಂಗ್ ಸಹಯೋಗದಲ್ಲಿ ವಿನ್ಯಾಸಗೊಳಿಸಲಾಗಿದ್ದು, ವೇಗದ, ಪರಿಣಾಮಕಾರಿ ಶಕ್ತಿಯನ್ನು ಒದಗಿಸಲು ಮೀಡಿಯಾಟೆಕ್ ಡೈಮೆನ್ಸಿಟಿ 7300 5G ಪ್ರೊಸೆಸರ್ ಹೊಂದಿರುದೆ. ಇದು ಎರಡು ದಿನಗಳ ಬಳಸಬಹುದಾದ 5,000 mAh ಬ್ಯಾಟರಿ ಹೊಂದಿದೆ. RAM ಬೂಸ್ಟರ್‌ ಜೊತೆಗೆ 16 GB RAM ಸೌಕರ್ಯವಿದೆ. 50 MP ಸೋನಿ ಹಿಂಭಾಗದ ಕ್ಯಾಮೆರಾ ಮತ್ತು 16 MP ಮುಂಭಾಗದ ಕ್ಯಾಮೆರಾಗಳು ಗರಿಷ್ಠ ಕಾರ್ಯಕ್ಷಮತೆಯ ಕ್ಯಾಮೆರಾ ಸಿಸ್ಟಂ ಅನ್ನು ನೀಡುತ್ತವೆ. 120 Hz ಅಡಾಪ್ಟಿವ್ ರಿಫ್ರೆಶ್ ರೇಟ್ ಹೊಂದಿರುವ 6.67-ಇಂಚಿನ ಸೂಪರ್ AMOLED ಡಿಸ್‌ಪ್ಲೇ ಸ್ಮೂತ್ ಆಗಿರುವ, ರೋಮಾಂಚಕ ದೃಶ್ಯಗಳ ಮೂಲಕ ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತದೆ. CMF ಫೋನ್ 1 ಹೊಂದಿಕೊಳ್ಳಬಲ್ಲ ವಿನ್ಯಾಸವನ್ನು ಹೊಂದಿದ್ದು, ವಿವಿಧ ಬಣ್ಣಗಳು, ವಸ್ತುಗಳು ಮತ್ತು ಫಿನಿಶ್‌ಗಳ ಪರಸ್ಪರ ಬದಲಾಯಿಸಬಹುದಾದ ಕವರ್‌ಗಳ ಮೂಲಕ ತಮ್ಮ ವ್ಯಕ್ತಿತ್ವವನ್ನು ವ್ಯಕ್ತಪಡಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಆಂಡ್ರಾಯ್ಡ್ 14 ಮತ್ತು ನಥಿಂಗ್ OS 2.6 ಚಾಲಿತ CMF ಫೋನ್ 1 ಅನ್ನು ಗ್ರಾಹಕರು ಬಿಗ್ ಬಿಲಿಯನ್ ಡೇಸ್ ಸಂದರ್ಭದಲ್ಲಿ ಕೇವಲ ₹12,999 ಗೆ ಖರೀದಿಸಬಹುದು.

CMF ವಾಚ್ ಪ್ರೊ:
CMF ವಾಚ್ ಪ್ರೊ ಸ್ಲೀಕ್ ಅಲ್ಯೂಮಿನಿಯಂ ಅಲಾಯ್ ಚೌಕಟ್ಟು ಮತ್ತು 1.96-ಇಂಚಿನ AMOLED ಡಿಸ್‌ಪ್ಲೇ ಹಾಗೂ ಅಲ್ಯೂಮಿನಿಯಂ ಅಲಾಯ್ ಚೌಕಟ್ಟು ಮತ್ತು ಸುಗಮ ಕಾರ್ಯಕ್ಷಮತೆಗಾಗಿ 58 fps ರಿಫ್ರೆಶ್ ದರವನ್ನು ಹೊಂದಿದೆ. ಅಂತರ್ನಿರ್ಮಿತ GPS, 110 ಸ್ಪೋರ್ಟ್ ಮೋಡ್‌ಗಳು ಮತ್ತು ಹೃದಯ ಬಡಿತ (ಹಾರ್ಟ್ ರೇಟ್) ಮತ್ತು ರಕ್ತದ ಆಮ್ಲಜನಕದ (ಬ್ಲಡ್ ಆಕ್ಸಿಡನ್) ಮಟ್ಟ ಸೇರಿದಂತೆ ಸಮಗ್ರ ಆರೋಗ್ಯ ಟ್ರ್ಯಾಕಿಂಗ್ ಅನ್ನು ಬೆಂಬಲಿಸುತ್ತದೆ. ವಾಚ್ 13 ದಿನಗಳ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ. ಅದರ IP68 ರೇಟಿಂಗ್ ನೀರಿನ ಪ್ರತಿರೋಧವನ್ನು ಖಾತ್ರಿಗೊಳಿಸುತ್ತದೆ. AI ತಂತ್ರಜ್ಞಾನವು ಅದರ ಅಂತರ್ನಿರ್ಮಿತ ಮೈಕ್ರೊಫೋನ್ ಮತ್ತು ಸ್ಪೀಕರ್ ಮೂಲಕ ನಾಯ್ಸ್ ರಿಡಕ್ಷನ್ ಜೊತೆಗೆ ಕರೆ ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ. CMF ವಾಚ್ ಪ್ರೊ ಬಿಗ್ ಬಿಲಿಯನ್ ಡೇಸ್ ಸಂದರ್ಭದಲ್ಲಿ ಅತ್ಯಂತ ಕನಿಷ್ಠ ₹2,499, ಬೆಲೆಗೆ ಲಭ್ಯವಿದೆ.

CMF ಬಡ್ಸ್ ಪ್ರೊ 2:
ಡ್ಯುಯಲ್ ಡ್ರೈವರ್‌ಗಳು, LDAC™ ತಂತ್ರಜ್ಞಾನ, ಹೈ-ರೆಸಿಸ್ಟೆನ್ಸ್ ಆಡಿಯೊ ವೈರ್‌ಲೆಸ್ ಪ್ರಮಾಣೀಕರಣ, 50 dB ಸ್ಮಾರ್ಟ್ ANC ಮತ್ತು ಗ್ರಾಹಕೀಯಗೊಳಿಸಬಹುದಾದ ಸ್ಮಾರ್ಟ್ ಡಯಲ್ ಜೊತೆಗೆ ಉನ್ನತ ಆಡಿಯೊ ಅನುಭವಕ್ಕಾಗಿ CMF ಬಡ್ಸ್ ಪ್ರೊ 2 ಅನ್ನು ವಿನ್ಯಾಸಗೊಳಿಸಲಾಗಿದೆ. ಸ್ಮಾರ್ಟ್ ಡಯಲ್‌ನ ಗ್ರಾಹಕೀಯಗೊಳಿಸಬಹುದಾದ ಕಾರ್ಯಗಳಲ್ಲಿ ಮುಂದಿನ ಹಾಡು, ಹಿಂದಿನ ಹಾಡು, ವಾಲ್ಯೂಮ್ ಅಪ್, ವಾಲ್ಯೂಮ್ ಡೌನ್, ವಾಯ್ಸ್ ಅಸಿಸ್ಟೆಂಟ್ ಮತ್ತು ನಾಯ್ಸ್ ಕ್ಯಾನ್ಸಲೇಷನ್ ಮೋಡ್‌ಗಳ ನಡುವೆ ಬದಲಾಯಿಸಬಹುದಾದ ಸೌಕರ್ಯಗಳು ಸೇರಿವೆ. ತೀವ್ರ ತಲ್ಲೀನತೆಯನ್ನು ಬಯಸುವವರಿಗೆ, ಸ್ಪೇಷಿಯಲ್ ಆಡಿಯೊ ಪರಿಣಾಮವು ಕೇಳುಗರನ್ನು ಮೂರು ಆಯಾಮದ ಸೌಂಡ್ ಸ್ಕೇಪ್‌ನಲ್ಲಿ ಆವರಿಸುತ್ತದೆ. ಒಟ್ಟು 43 ಗಂಟೆಗಳ ಬ್ಯಾಟರಿ ಬಾಳಿಕೆ ಮತ್ತು 7 ಗಂಟೆಗಳ ಪ್ಲೇಬ್ಯಾಕ್‌ಗಾಗಿ ತ್ವರಿತ 10 ನಿಮಿಷಗಳ ಚಾರ್ಜ್ ಸೌಲಭ್ಯವನ್ನು ಈ ಸಾಧನಗಳು ನೀಡುತ್ತವೆ. ಬಿಗ್ ಬಿಲಿಯನ್ ಡೇಸ್ ಸಂದರ್ಭದಲ್ಲಿ, MCF ಬಡ್ಸ್ ಪ್ರೊ 2 ₹3,299 ವಿಶೇಷ ಬೆಲೆಯಲ್ಲಿ ಲಭ್ಯವಿರುತ್ತದೆ.

CMF ಬಡ್ಸ್ ಪ್ರೊ:
45 dB ಹೈಬ್ರಿಡ್ ನಾಯ್ಸ್ ಕ್ಯಾನ್ಸಲೇಷನ್ ಹೊಂದಿರುವ, CMF ಬಡ್ಸ್ ಪ್ರೊ ಪರಿಸರದ ವಿಚಲನಗಳನ್ನು ಪರಿಣಾಮಕಾರಿಯಾಗಿ ತಗ್ಗಿಸುತ್ತದೆ. ಹೀಗಾಗಿ, ಬ್ಯುಸಿಯಾದ ಪರಿಸರ ಹಾಗೂ ಶಾಂತವಾದ ಕ್ಷಣ ಎರಡಕ್ಕೂ ಸೂಕ್ತವಾಗಿದೆ. ತ್ವರಿತ ಚಾರ್ಜಿಂಗ್ ಸಾಮರ್ಥ್ಯದಿಂದ ಬೆಂಬಲಿತವಾಗಿರುವ ಈ ಇಯರ್‌ಬಡ್‌ಗಳು ಒಟ್ಟು 39 ಗಂಟೆಗಳ ಪ್ಲೇಬ್ಯಾಕ್ ಭರವಸೆ ನೀಡುತ್ತವೆ. ಕರೆಯ ಸ್ಪಷ್ಟತೆಗಾಗಿ ಆರು HD ಮೈಕ್ರೊಫೋನ್‌ಗಳನ್ನು ಅಳವಡಿಸಲಾಗಿದೆ. ವೈಯಕ್ತಿಕಗೊಳಿಸಿದ ಆಲಿಸುವ ಅನುಭವಕ್ಕಾಗಿ ನಥಿಂಗ್ X ಆ್ಯಪ್ ಮೂಲಕ ಗ್ರಾಹಕೀಯಗೊಳಿಸಬಹುದಾದ ಸೌಂಡ್ ಪ್ರೊಫೈಲ್‌ಗಳನ್ನು ನೀಡುತ್ತದೆ. ಅವುಗಳ IP54 ರೇಟಿಂಗ್ ಧೂಳು ಮತ್ತು ನೀರಿನಿಂದ ರಕ್ಷಣೆ ಒದಗಿಸುವುದನ್ನು ಖಾತ್ರಿಗಳಿಸುತ್ತದೆ. ಹೀಗಾಗಿ, ದೈನಂದಿನ ಬಳಕೆಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. CMF ಬಡ್ಸ್ ಪ್ರೊ ಈಗ ₹2,499 ಬಿಗ್ ಬಿಲಿಯನ್ ಡೇಸ್ ವಿಶೇಷ ಬೆಲೆಯಲ್ಲಿ ಲಭ್ಯ.

CMF ನೆಕ್‌ಬ್ಯಾಂಡ್ ಪ್ರೊ:
ಯಾವುದೇ ಪರಿಸರದಲ್ಲಿ ಸುಸ್ಪಷ್ಟ ಧ್ವನಿಯನ್ನು ನೀಡುವುದಕ್ಕಾಗಿ CMF ನೆಕ್‌ಬ್ಯಾಂಡ್ ಪ್ರೊ ತನ್ನ ವಿಭಾಗದಲ್ಲೇ ಮೊದಲ ಬಾರಿಗೆ 50 dB ಹೈಬ್ರಿಡ್ ANC ಅನ್ನು ಪರಿಚಯಿಸಿತು. ಪರಿಸರಕ್ಕೆ ಹೊಂದಿಕೊಳ್ಳುವ ANC ಮತ್ತು AI ನಾಯ್ಎಸ್ಐ ಕ್ಯಾನ್ಸಲೇಷನ್ ಅಲ್ಗಾರಿದಮ್ ಅನ್ನು 30 ದಶಲಕ್ಷಕ್ಕೂ ಹೆಚ್ಚು ಧ್ವನಿ ಮಾದರಿಗಳೊಂದಿಗೆ ಪರೀಕ್ಷಿಸಲಾಗಿದೆ, ಕರೆ ಸ್ಪಷ್ಟತೆಗೆ ಸಾಟಿಯೇ ಇಲ್ಲ ಎಂದು ಖಚಿತಪಡಿಸಿಕೊಳ್ಳಲಾಗಿದೆ. ವಿರಾಮ ಮತ್ತು ಫಿಟ್ನೆಸ್ ಎರಡಕ್ಕೂ ಸೂಕ್ತವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ, ಕ್ಲಿಯರ್ ವಾಯ್ಸ್ ಟೆಕ್ನಾಲಜಿ (ಸ್ಪಷ್ಟ ಧ್ವನಿ ತಂತ್ರಜ್ಞಾನ) ಯೊಂದಿಗೆ 5 HD ಮೈಕ್ರೋಫೋನ್‌ಗಳನ್ನು ಮತ್ತು ಶ್ರಮರಹಿತ ನಿಯಂತ್ರಣಕ್ಕಾಗಿ 3-ಇನ್ -1 ಸ್ಮಾರ್ಟ್ ಡಯಲ್ ಅನ್ನು ಇದು ಒಳಗೊಂಡಿದೆ. ನೀರು, ಬೆವರು ಮತ್ತು ಧೂಳಿನಿಂದ ರಕ್ಷಣೆಯನ್ನು IP55 ರೇಟಿಂಗ್ ಖಚಿಪಡಿಸುತ್ತಿದ್ದು, ದೈನಂದಿನ ಕಠಿಣ ಪರಿಸ್ಥಿತಿಗಳನ್ನು ತಡೆದುಕೊಳ್ಳುತ್ತದೆ. ನೆಕ್‌ಬ್ಯಾಂಡ್ ಒಟ್ಟು ಪ್ರೊ 37 ಗಂಟೆಗಳ ಪ್ಲೇಬ್ಯಾಕ್ ಅಥವಾ 10 ನಿಮಿಷಗಳ ಕಾಲ ಚಾರ್ಜ್ ಮಾಡಿದರೆ 18 ಗಂಟೆಗಳ ಪ್ಲೇಬ್ಯಾಕ್ ಅವಧಿಯನ್ನು ಒದಗಿಸುತ್ತದೆ. ನೆಕ್‌ಬ್ಯಾಂಡ್ ಪ್ರೊ ಖರೀದಿಸಲು ಬಯಸುವ ಗ್ರಾಹಕರು ಇದನ್ನು ₹1,699 ವಿಶೇಷ ಬೆಲೆಯಲ್ಲಿ ಖರೀದಿಸಬಹುದು.

ನಥಿಂಗ್ ಇಯರ್:
ನಥಿಂಗ್ ಇಯರ್ ಸ್ಪಷ್ಟ ಧ್ವನಿಗಾಗಿ ಸೆರಾಮಿಕ್ ಡಯಾಫ್ರಾಮ್‌ನೊಂದಿಗೆ ಕಸ್ಟಮ್ 11 mm ಡೈನಾಮಿಕ್ ಡ್ರೈವರ್ ಮತ್ತು ಸುಧಾರಿತ ಸ್ಮಾರ್ಟ್ ANC ನಾಯ್ಸ್-ಕ್ಯಾನ್ಸೆಲಿಂಗ್ ಹೊಂದಿದೆ. ಕೇಸ್ ಜೊತೆಗೆ 40.5 ಗಂಟೆಗಳವರೆಗೆ ಮತ್ತು ಒಂದು ಚಾರ್ಜ್‌ನಲ್ಲಿ 8.5 ಗಂಟೆಗಳವರೆಗೆ ಬಾಳಿಕೆ ಬರುತ್ತದೆ. ಇದು ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ ಮತ್ತು ತಡೆರಹಿತ AI ಸಂವಹನಗಳಿಗಾಗಿ ChatGPT ಯೊಂದಿಗೆ ಸಂಯೋಜಿತವಾಗಿದೆ. ನಥಿಂಗ್ ಇಯರ್ ಈಗ ₹7,999 ವಿಶೇಷ ಬಿಗ್ ಬಿಲಿಯನ್ ಡೇಸ್ ಬೆಲೆಯಲ್ಲಿ ಲಭ್ಯವಿದೆ.

ಪವರ್ 100W ಚಾರ್ಜರ್:
ಪವರ್ 100W GaN ಫಾಸ್ಟ್ ಚಾರ್ಜರ್, ಸೆ. 26ರಂದು ಬಿಡುಗಡೆಯಾಗುತ್ತಿದ್ದು, ₹3,499 ರಿಯಾಯಿತಿ ದರದಲ್ಲಿ ಲಭ್ಯವಿರುತ್ತದೆ. ಕಾಂಪ್ಯಾಕ್ಟ್ ಮತ್ತು ಹಗುರವಾಗಿರುವ ಹಾಗೂ ಮತ್ತು ಸಾಮಾನ್ಯ ಚಾರ್ಜರ್‌ಗಿಂತ 40% ಚಿಕ್ಕದಾಗಿರುವ ಇದು ಶಕ್ತಿಯುತ 100W ಔಟ್ಪುಟ್ ಒದಗಿಸುತ್ತದೆ. ವಿಶಾಲ ಹೊಂದಾಣಿಕೆಯೊಂದಿಗೆ ಏಕಕಾಲದಲ್ಲಿ 3 ಸಾಧನಗಳನ್ನು ಚಾರ್ಜ್ ಮಾಡಲು ಮತ್ತು ಎರಡು USB-C ಪೋರ್ಟ್‌ಗಳು ಅಥವಾ USB-C ಮತ್ತು USB-A ಪೋರ್ಟ್‌ಗಳ ಸಂಯೋಜನೆಯನ್ನು ಬಳಸಲು ಈ ಚಾರ್ಜರ್‌ ನಿಮಗೆ ಅನುವು ಮಾಡಿಕೊಡುತ್ತದೆ. ಈ ಚಾರ್ಜರ್ 9 ಸುಧಾರಿತ ಸುರಕ್ಷತಾ ಕಾರ್ಯವಿಧಾನಗಳನ್ನು ಹೊಂದಿದೆ – ಓವರ್‌ಕರೆಂಟ್, ಓವರ್‌ವೋಲ್ಟೇಜ್, ಶಾರ್ಟ್ ಸರ್ಕ್ಯೂಟ್‌ಗಳು ಮುಂತಾದವುಗಳಿಂದ ರಕ್ಷಣೆ ನೀಡುತ್ತದೆ.

ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಿಗೆ ಸೆಪ್ಟೆಂಬರ್ 26, 2024ರಿಂದ ಮತ್ತು ಎಲ್ಲ ಗ್ರಾಹಕರಿಗೆ ಸೆಪ್ಟೆಂಬರ್ 27, 2024ರಿಂದ ಈ ಡೀಲ್‌ಗಳು ಲಭ್ಯವಿರುತ್ತವೆ.

ಉತ್ಪನ್ನ ಬಿಗ್ ಬಿಲಿಯನ್ ಡೇ ಬೆಲೆ
ನಥಿಂಗ್ ಫೋನ್ (2ಎ) ₹18,999
ನಥಿಂಗ್ ಫೋನ್ (2ಎ) ಪ್ಲಸ್ ₹23,999
CMF ಫೋನ್ 1 ₹12,999
CMF ನೆಕ್‌ಬ್ಯಾಂಡ್ ಪ್ರೊ ₹1,699
CMF ವಾಚ್ ಪ್ರೊ ₹2,499
CMF ಬಡ್ಸ್ ಪ್ರೊ ₹2,499
CMF ಬಡ್ಸ್ ಪ್ರೊ 2 ₹3,299
ನಥಿಂಗ್ ಇಯರ್ ₹7,999
ಪವರ್ 100W ಚಾರ್ಜರ್ ₹3,499

ಟಾಪ್ ನ್ಯೂಸ್

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

1-wewqe

Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ

mumbai1

ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

The owner of the betting app promoted by Bollywood actresses is Pakistani!

Betting App; ಬಾಲಿವುಡ್‌ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್‌‌ ಮಾಲಕ ಪಾಕಿಸ್ತಾನಿ!

1-aaap

Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ

Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್

Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್

11-airtel

Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್

ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ

ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!

Belapu

ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ

8

Chikkamagaluru: ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳ ವ್ಯಾನ್ ಪಲ್ಟಿ; ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.