ನಥಿಂಗ್ ಇಯರ್ ಬಡ್ ಖರೀದಿಸುವವರಿಗೆ ಭರ್ಜರಿ ಆಫರ್!
Team Udayavani, Nov 27, 2021, 11:15 AM IST
ಬಜೆಟ್ ದರದಲ್ಲಿ ಅತ್ಯುನ್ನತ ವಿಶೇಷಗಳಿರುವ ನಥಿಂಗ್ ಇಯರ್ ಬಡ್ ಖರೀದಿಸಲು ಇಚ್ಚಿಸುವವರಿಗೆ ಉತ್ತಮ ಆಫರ್ ಪ್ರಸ್ತುತ ಲಭ್ಯವಿದೆ.
ಬ್ಲ್ಯಾಕ್ ಫ್ರೈಡೇ ವಾರದ ಅಂಗವಾಗಿ ನ. 29ರವರೆಗೆ ಫ್ಲಿಪ್‍ಕಾರ್ಟ್ ನಲ್ಲಿ ನಥಿಂಗ್ ಇಯರ್ (1) ಇಯರ್ ಬಡ್ ದರವನ್ನು ಕಡಿತ ಮಾಡಲಾಗಿದೆ. ಭಾರತದಲ್ಲಿ ಇದರ ದರ 6.999 ರೂ. ಆಗಿದ್ದು, ಆಫರ್ ದರ 6,299 ರೂ.ಗೆ ಆಗಿದೆ. ಇದಲ್ಲದೇ ಯಾವುದೇ ಬ್ಯಾಂಕಿನ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಗೆ ಹೆಚ್ಚುವರಿ 500 ರೂ. ರಿಯಾಯಿತಿ ನೀಡಲಾಗಿದೆ. ಇದಲ್ಲದೇ ಐಸಿಐಸಿಐ ಕ್ರೆಡಿಟ್ ಹೊಂದಿರುವವರಿಗೆ ಮತ್ತೆ ಶೇ. 10ರಷ್ಟು ರಿಯಾಯಿತಿ ದೊರಕಲಿದೆ! ಅಂದರೆ ಐಸಿಐಸಿಐ ಕಾರ್ಡ್ ಬಳಕೆದಾರರಿಗೆ 6,999 ರೂ.ಗಳ ಈ ಇಯರ್ ಬಡ್ 5,219 ರೂ.ಗೆ ದೊರಕಲಿದೆ.
ಇದನ್ನೂ ಓದಿ:ನಥಿಂಗ್ ನಲ್ಲಿ ಯುವರಾಜ್ ಸಿಂಗ್, ಕರಣ್ ಜೋಹರ್ ಹೂಡಿಕೆ
ಪಾರದರ್ಶಕ ವಿನ್ಯಾಸ ಹಾಗೂ ಪ್ರೀಮಿಯಮ್ ಬಳಕೆಯ ಅನುಭವ ನೀಡುವ, ಟ್ರೂ ವೈರ್‌ಲೆಸ್ ಇಯರ್‌ಬಡ್ ‘ಇಯರ್ (1) ಕೇಸ್ 34 ಗಂಟೆಗಳ ಬ್ಯಾಟರಿ ಹೊಂದಿದೆ ಇದರ ಶಕ್ತಿಶಾಲಿ 11.6 ಎಂಎಂ ಡ್ರೈವರ್ ಮತ್ತು ಆಕ್ಟೀವ್ ನಾಯ್ಸ್ ಕ್ಯಾನ್ಸಲೇಷನ್ ಹೊಂದಿರುವ ನಥಿಂಗ್ ಇಯರ್ (1) ಪರಿಶುಧ್ಧ ಧ್ವನಿಯ ಅನುಭವ ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ.
ವಿಶೇಷತೆಗಳೇನು?
ಪಾರದರ್ಶಕ ವಿನ್ಯಾಸ: ಹಿಂದೆಂದೂ ನೋಡಿರದ ಮಾದರಿಯಲ್ಲಿ ಇಯರ್ (1) ಅನ್ನು ರೂಪಿಸಲಾಗಿದೆ. ಇಂಜಿನಿಯರಿಂಗ್ ವಿಧಾನವನ್ನು ತೋರಿಸುವ ಪಾರದರ್ಶಕತೆ, ಮೈಕ್ರೋಫೋನ್, ಮ್ಯಾಗ್ನೆಟ್‌ಗಳು ಮತ್ತು ಸರ್ಕ್ಯೂಟ್ ಬೋರ್ಡ್ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಇಯರ್ (1) ನಲ್ಲಿ ಅಳವಡಿಸಿರುವ ಎಲ್ಲಾ ಅಂಶಗಳು ಒಂದು ಉದ್ದೇಶವನ್ನು ಒಳಗೊಂಡಿದೆ. ಇದರಲ್ಲಿನ ತಕ್ಷಣ ಗುರುತಿಸಬಲ್ಲ ವಿನ್ಯಾಸ, ಬಲ ಹಾಗೂ ಎಡಗಿವಿಯ ಬಳಕೆಗೆ ಕೆಂಪು ಬಣ್ಣದ ಸೂಚಕ ವಿಭಿನ್ನವಾಗಿ ಕಾಣುತ್ತದೆಯಲ್ಲದೆ, ಇದನ್ನು ಸುಧಾರಿತ ಆರಾಮಕ್ಕಾಗಿ ತಯಾರಿಸಲಾಗಿದೆ. ಪ್ರತಿ ಇಯರ್‌ಬಡ್ ಕೇವಲ 4.7 ಗ್ರಾಂ ತೂಕವಿದ್ದು, ಒತ್ತಡ-ನಿವಾರಿಸುವ ವೆಂಟ್‌ಗಳು, ಎರ್ಗೋಮಿಕ್ ಹೊಂದಿಕೆ ಮತ್ತು ಮೂರು ಅಳತೆಯ ಸಿಲಿಕಾನ್ ಟಿಪ್‍ಗಳನ್ನು ಹೊಂದಿದೆ.
ಶುದ್ಧಧ್ವನಿ: ಇದರ ದೊಡ್ಡ ಡ್ರೈವರ್ ಶುದ್ಧ ಧ್ವನಿ ನೀಡುತ್ತದೆ. ಇದು 11.6 ಎಂಎಂ ಅಷ್ಟು ದೊಡ್ಡದಿದೆ. ಸಮತೋಲಿತ ಧ್ವನಿ, ಮಧ್ಯಮ ಮತ್ತು ಕಂಪನದ ಕಾರ್ಯಕ್ಷಮತೆಗಾಗಿ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‌ಗಳನ್ನು ಹೊಂದಿದೆ. ಇದರ ಇತ್ತೀಚಿನ ಬ್ಲೂಟೂತ್ 5.2 ಕನೆಕ್ಟಿವಿಟಿ, ನೀವು ಯಾವುದೇ ಬೀಟ್ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುತ್ತದೆ.
ಆಕ್ಟೀವ್ ನಾಯ್ಸ್ ಕ್ಯಾನ್ಸಲೇಷನ್: ಇಯರ್ (1) ರಲ್ಲಿನ ಆಕ್ಟೀವ್ ನಾಯ್ಸ್ ಕ್ಯಾನ್ಸಲೇಷನ್ ವ್ಯವಸ್ಥೆ ಮೂರು ಹೈ ಡೆಫಿನೇಷನ್ ಮೈಕ್‌ಗಳನ್ನು ಒಳಗೊಂಡಿದೆ, ಇದರಿಂದಾಗಿ ಕರೆಗಳನ್ನು ಮಾಡಿದಾಗ ಆ ಕಡೆಯವರು ಸ್ಪಷ್ಟವಾಗಿ ನಿಮ್ಮ ಧ್ವನಿಯನ್ನು ಆಲಿಸಬಹುದಾಗಿದೆ. ಗಾಳಿ ಬಡಿತದಲ್ಲೂ ನಿಮ್ಮ ಮಾತು ಆ ಕಡೆಯವರಿಗೆ ಸರಿಯಾಗಿ ಕೇಳಿಸುತ್ತದೆ ಎಂದು ಕಂಪೆನಿ ತಿಳಿಸಿದೆ.
ಚಾರ್ಜಿಂಗ್ ಕೇಸ್: ಇಯರ್ (1) ನಲ್ಲಿ ಬ್ಯಾಟರಿ 5.7 ಗಂಟೆಗಳವರೆಗೆ ಬಾಳಿಕೆ ಬರುತ್ತದೆ. ಅಲ್ಲದೆ ಅದರ ಕೇಸ್‌ನೊಂದಿಗೆ 34 ಗಂಟೆಗಳವರೆಗೆ ಬಳಸಬಹುದು. ಇದರ ಕಾಂಪ್ಯಾಕ್ಟ್ ಪವರ್ ವೇಗದ ಚಾರ್ಜಿಂಗ್ ಒದಗಿಸುತ್ತದೆ. 10 ನಿಮಿಷದ ಕೇಸ್ ಚಾರ್ಜ್ ಮಾಡುವುದು 8 ಗಂಟೆಗಳ ಬ್ಯಾಟರಿ ನೀಡುತ್ತದೆ. ನಥಿಂಗ್ ಇಯರ್ (1) ವೈರ್‌ಲೆಸ್ ನಲ್ಲೂ ಚಾರ್ಜ್ ಮಾಡಬಹುದಾಗಿದೆ. ಕ್ಯೂಐ ಚಾರ್ಜರ್‌ಗಳಿಗೆ ಹೊಂದಿಕೊಳ್ಳುತ್ತದೆ.
ಹೆಚ್ಚುವರಿ ಫೀಚರ್‌ಗಳೆಂದರೆ- ಇಯರ್ (1) ಆ್ಯಪ್ ಮೂಲಕ ಫೈಂಡ್ ಮೈ ಇಯರ್‌ಬಡ್, ಈಕ್ವಲೈಸರ್, ಗೆಸ್ಚರ್ ಕಂಟ್ರೋಲ್ ಕಸ್ಟಮೈಸೇಷನ್ ಹಾಗೂ ಇನ್-ಇಯರ್ ಡಿಟೆಕ್ಷನ್ ಮತ್ತು ಫಾಸ್ಟ್ ಪೇರಿಂಗ್ ಮಾಡಬಹುದು. ಇಯರ್ (1) ಇಯರ್‌ಬಡ್‌ಗಳು ಬೆವರು ಹಾಗೂ ನೀರು ನಿರೋಧಕವಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.