ಸ್ವಾತಂತ್ರ್ಯಕ್ಕೆ ಓಲಾ ಇ ಸ್ಕೂಟರ್ ಬಿಡುಗಡೆ..! ವಿಶೇಷತೆ ಏನು..? ಇಲ್ಲಿದೆ ಮಾಹಿತಿ
Team Udayavani, Aug 12, 2021, 2:10 PM IST
ನವ ದೆಹಲಿ : ದೇಶದ ಬಹು ಜನರ ನಿರೀಕ್ಷೆಯ ಓಲಾ ಇ ಸ್ಕೂಟರ್, 75 ನೇ ಸ್ವಾತಂತ್ರ್ಯದೊಂದಿಗೆ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಸಂಸ್ಥೆ ಮಾಡಿದೆ.
ಸಂಸ್ಥೆ ತನ್ನ ಈ ಹೊಸ ಆವೃತ್ತಿಯ ಇ ಸ್ಕೂಟರ್ ನನ್ನು ಬಿಡುಗಡೆ ಮಾಡುವುದಕ್ಕೆ ತುಂಬಾ ಉತ್ಸುಕವಾಗಿದ್ದು, ಪೆಟ್ರೋಲ್ ಬೆಲೆ ಏರಿಕೆಯ ನಡುವ ಇದು ಜನಸ್ನೇಹಿ ಸ್ಕೂಟರ್ ಆಗಲಿದೆ ಎಂದು ಸಂಸ್ಥೆ ವಿಶ್ವಾಸ ವ್ಯಕ್ತ ಪಡಿಸಿದೆ.
ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭಾವೇಶ್ ಅಗರ್ವಾಲ್ ಕೇವಲ 17 ಸೆಕೆಂಡ್ ಗಳ ವೀಡಿಯೊವೊಂದನ್ನು ತಮ್ಮ ಎಲ್ಲಾ ಸಾಮಾಜಿಕ ಜಾಲಗತಾಣಗಳಲ್ಲಿ ಹಂಚಿಕೊಂಡಿದ್ದರು, ಹಲವು ದ್ವೀಚಕ್ರ ವಾಹನ ಪ್ರಿಯರ ಗಮನ ಸೆಳೆದಿತ್ತು.
ಇದನ್ನೂ ಓದಿ : ಪಕ್ಷದ ಟ್ವೀಟರ್ ಖಾತೆ ಬ್ಲಾಕ್: ಮೋದಿ ಸರ್ಕಾರದ ಒತ್ತಡದಲ್ಲಿ ಟ್ವೀಟರ್ ಇದೆ : ಕಾಂಗ್ರೆಸ್ ಆರೋಪ
ಓಲಾ ಇ-ಸ್ಕೂಟರ್ ಬೆಲೆ ಎಷ್ಟು.?
ಓಲಾ ಇ ಸ್ಕೂಟರ್ ಗೆ ಈಗಾಗಲೇ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ಕೇವಲ 499 ರೂ.ಗಳಿಂದ ಬುಕ್ಕಿಂಗ್ ಆರಂಭಿಸಲಾಗಿದೆ. ಸದ್ಯಕ್ಕೆ ಸಂಸ್ಥೆ ಸ್ಕೂಟರ್ ನ ನಿಗದಿತ ಬೆಲೆಯನ್ನು ಬಹಿರಂಗ ಪಡಿಸಿಲ್ಲ.
ಮಾರುಕಟ್ಟೆಯ ತಜ್ಞರ ಪ್ರಕಾರ ಸ್ಕೂಟರ್ ಬೆಲೆ ಅಂದಾಜು 80,000-85,000 ಆಗಿರಬಹುದು ಎಂದು ಹೇಳಲಾಗುತ್ತಿದೆ. ಓಲಾ ಸ್ಕೂಟರ್ ಮೇಲೆ ಸಬ್ಸಿಡಿಯನ್ನೂ ನೀಡಲಿದೆ. ಆದರೆ, ಅಂದಾಜು ಬೆಲೆ ಸಬ್ಸಿಡಿಯೊಂದಿಗೆ ಇರುತ್ತದೆಯೇ ಅಥವಾ ಸಬ್ಸಿಡಿಯನ್ನು ಈ ಬೆಲೆಯಲ್ಲಿ ಮಾತ್ರ ನೀಡಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿ ಇನ್ನೂ ತಿಳಿದಿಲ್ಲ.
ಓಲಾ ಇ-ಸ್ಕೂಟರ್ ಬೇರೆಲ್ಲಾ ಸ್ಕೂಟರ್ ಗಳಿಗಿಂತ ಹೇಗೆ ಭಿನ್ನ..?
- ಓಲಾ ಇ-ಸ್ಕೂಟರ್ ಒಮ್ಮೆ ಚಾರ್ಜ್ ಮಾಡಿದರೇ 150 ಕಿಮೀ ತನಕ ಚಲಿಸಬಹುದಾಗಿದೆ
- ಹೋಮ್ ಚಾರ್ಜರ್‌ನೊಂದಿಗೆ ಸ್ಕೂಟರ್ ನೊಂದಿಗೆ ಬಿಡುಗಡೆ ಮಾಡಲಾಗುತ್ತಿದೆ. ಮನೆಯಲ್ಲಿ ಅಳವಡಿಸಲಾಗಿರುವ ಸಾಮಾನ್ಯ ಸಾಕೆಟ್ ನಿಂದಲೇ ಸ್ಕೂಟರ್ ನನ್ನು ಚಾರ್ಜ್ ಮಾಡಬಹುದಾಗಿದೆ.
- ಗರಿಷ್ಠ ವೇಗ ಗಂಟೆಗೆ 90 ಕಿಮೀ
- 18 ನಿಮಿಷಗಳಲ್ಲಿ ಶೇಕಡಾ 50 ರಷ್ಟು ಚಾರ್ಜಿಂಗ್ ಸಾಮರ್ಥ್ಯ
- ಸ್ಮಾರ್ಟ್ ಫೋನ್ ಸಂಪರ್ಕವು ಓಲಾ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿಯೂ ಲಭ್ಯ
ಇನ್ನು, ದೇಶದ 400 ಪ್ರಮುಖ ನಗರಗಳಲ್ಲಿ 1,00,000 ಸ್ಥಳಗಳಲ್ಲಿ ಅಥವಾ ಟಚ್ ಪಾಯಿಂಟ್ ಗಳಲ್ಲಿ ಹೈಪರ್ ಚಾರ್ಜರ್ ಕೇಂದ್ರವನ್ನು ಸ್ಥಾಪಿಸಲಿದ್ದು, ಮಾಹಿತಿಯು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರಲಿದೆ ಎಂದು ಕೂಡ ಸಂಸ್ಥೆ ಮಾಹಿತಿ ನೀಡಿದೆ.
ಇದನ್ನೂ ಓದಿ : ಕೊಳೆರೋಗದ ಹೊಡೆತಕ್ಕೆ ನರಳಿದ ಈರುಳ್ಳಿ |ಟ್ರ್ಯಾಕ್ಟರ್‌ನಿಂದ ಬೆಳೆ ನಾಶಪಡಿಸುತ್ತಿರುವ ರೈತರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ
Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ
ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.