ಶೀಘ್ರವೇ ಒನ್ ಪ್ಲಸ್ ಸ್ಮಾರ್ಟ್ ವಾಚ್ ಮಾರುಕಟ್ಟೆಗೆ ಲಗ್ಗೆ
ಒನ್ ಪ್ಲಸ್ ಸ್ಮಾರ್ಟ್ ವಾಚ್ ಮಾರ್ಚ್ 23 ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ
Team Udayavani, Mar 18, 2021, 6:17 PM IST
ಮೊಬೈಲ್ ಮಾರುಕಟ್ಟೆಯಲ್ಲಿ ಒನ್ ಪ್ಲಸ್ ತನ್ನದೆಯಾದ ಗ್ರಾಹಕ ವರ್ಗ ಸೃಷ್ಟಿಸಿಕೊಂಡಿದೆ. ಆಕರ್ಷಕ ಹಾಗೂ ನೂತನ ತಂತ್ರಜ್ಞಾನ ಹೊಂದಿರುವ ಒನ್ ಪ್ಲಸ್ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುತ್ತಿವೆ. ಆ್ಯಕ್ಸೆಸರೀಸ್ ಮಾರುಕಟ್ಟೆಗೆ ಇದೀಗ ಒನ್ ಪ್ಲಸ್ ಹೊಸ ಸ್ಮಾರ್ಟ್ ವಾಚ್ ಪರಿಚಯಿಸುತ್ತಿದೆ.
ಒನ್ ಪ್ಲಸ್ ಸ್ಮಾರ್ಟ್ ವಾಚ್
ವಾಚ್ ಪ್ರಿಯರನ್ನು ಗುರಿಯಾಗಿಸಿಕೊಂಡಿರುವ ಒನ್ ಪ್ಲಸ್ ನೂತನ ‘ಸ್ಮಾರ್ಟ್ ವಾಚ್’ ಅಭಿವೃದ್ಧಿ ಪಡಿಸಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಬೇರೆ ಕಂಪನಿಗಳ ಸ್ಮಾರ್ಟ್ ವಾಚ್‍ಗಳಿಗಿಂತ ಇದು ವಿಭಿನ್ನವಾಗಿರಲಿದೆ ಎಂದು ಒನ್ ಪ್ಲಸ್ ಹೇಳಿಕೊಂಡಿದೆ.
ಒನ್ ಪ್ಲಸ್ ವಾಚ್ ಸ್ನಾಪ್‌ಡ್ರಾಗನ್ ವೇರ್ ಸಿಸ್ಟಮ್ ಜತೆಗೆ ಚಿಪ್ ವ್ಯವಸ್ಥೆ ಹೊಂದಿದೆ. ಹೊಸ ಆವತರಣಿಕೆಯ ‘ಸ್ನಾಪಡ್ರಾಗನ್ ವೇರ್ 4100’ ತಂತ್ರಾಂಶ ಈ ವಾಚ್‍ನಲ್ಲಿರಲಿದೆ.
ಸದ್ಯ ಮಾರುಕಟ್ಟೆಯಲ್ಲಿರುವ ಇತರೆ ಸ್ಮಾರ್ಟ್ ವಾಚ್‍ಗಳು ಸಮಯದ ಜತೆಗೆ ಹೃದಯ ಬಡಿತ ಅಂಕಿಸಂಖ್ಯೆ ತೋರಿಸುತ್ತವೆ. ಆದರೆ, ಒನ್‍ಪ್ಲಸ್ ಸ್ಮಾರ್ಟ್ ವಾಚ್ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಇದು ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲಿದೆ. ಇದು ಗ್ರಾಹಕ ಸ್ನೇಹಿಯಾಗಿ ಕಾರ್ಯ ನಿರ್ವಹಿಸಲಿದೆ. ವಾಚ್ ಧರಿಸಿದವರ ಹೃದಯ ಬಡಿತದ ಸಂಖ್ಯೆ ತೋರಿಸುವುದರ ಜತೆಗೆ ರಕ್ತದಲ್ಲಿ ಆಮ್ಲಜನಕದ ಮಾನಿಟರ್ ಹಾಗೂ ಸ್ಲೀಪ್ ಮಾದರಿಯ ವಿಶ್ಲೇಷಣೆ, ಗುರಿ-ಆಧಾರಿತ ವ್ಯಾಯಾಮ ಟ್ರ್ಯಾಕಿಂಗ್ ಸಾಫ್ಟ್ ವೇರ್ ಆಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ.
ಒನ್ ಪ್ಲಸ್ ಸ್ಮಾರ್ಟ್ ವಾಚ್ OLED ಡಿಸ್‍ಪ್ಲೇ ಹೊಂದಿದ್ದು, ದೀರ್ಘಕಾಲಿಕ ಬ್ಯಾಟರಿ ಬಳಕೆಗೆ ಸಹಕಾರಿಯಾಗಲಿದೆ.
ಮಾರ್ಚ್ 23 ರಂದು ಮಾರುಕಟ್ಟೆಗೆ :
ವಿನೂತನ ಶೈಲಿ, ಹೊಸ ತಂತ್ರಜ್ಞಾನ ಹೊಂದಿರುವ ಒನ್ ಪ್ಲಸ್ ಸ್ಮಾರ್ಟ್ ವಾಚ್ ಮಾರ್ಚ್ 23 ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದು ಒನ್ ಪ್ಲಸ್ ಸಂಸ್ಥೆಯ ಸಿಇಒ ಪೆಟೆ ಲಾ ಹೇಳಿದ್ದಾರೆ. ಇದು ಒನ್ ಪ್ಲಸ್ 9 ಸೀರಿಸ್ ಮೊಬೈಲ್ ಜತೆಗೆ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Assam; ಚಹಾರ್ ಜಿಲ್ಲೆ 4 ಗ್ರಾಮ ಬಾಲ್ಯ ವಿವಾಹ ಮುಕ್ತ: ಸಿಎಂ ಹಿಮಾಂತ್
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
Mumbai-Nagpur ಹೆದ್ದಾರಿಯಲ್ಲಿ ಏಕಕಾಲದಲ್ಲಿ 50 ವಾಹನಗಳ ಟಯರ್ ಪಂಕ್ಚರ್
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.