ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಒನ್ ಪ್ಲಸ್ 9 ಪ್ರೊ..! ವಿಶೇಷತೆಗಳೇನು..?
Team Udayavani, Apr 2, 2021, 11:08 AM IST
ನವ ದೆಹಲಿ : ಒನ್ ಪ್ಲಸ್ 9 ಪ್ರೊ ಈಗ ಭಾರತದ ,ರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ. ಒನ್ ಪ್ಲಸ್ 9, ಒನ್ ಪ್ಲಸ್ 9 ಆರ್, ಮತ್ತು ಒನ್ ಪ್ಲಸ್ ವಾಚ್ ಜೊತೆಗೆ ಇತ್ತೀಚಿನ ಒನ್ ಪ್ಲಸ್ ಫ್ಲ್ಯಾಗ್ ಶಿಪ್ ಅನ್ನು ಕಳೆದ ವಾರ ಬಿಡುಗಡೆ ಮಾಡಲಾಗಿತ್ತು.
ಒನ್ ಪ್ಲಸ್ 9 ಪ್ರೊ 8 ಜಿಬಿ ಮತ್ತು 12 ಜಿಬಿ ರ್ಯಾಮ್ ಆಯ್ಕೆಗಳಲ್ಲಿ ಲಭ್ಯವಿದೆ. ಮತ್ತು ಮಾರ್ನಿಂಗ್ ಮಿಸ್ಟ್, ಪೈನ್ ಗ್ರೀನ್ ಮತ್ತು ಸ್ಟೆಲ್ಲಾರ್ ಬ್ಲ್ಯಾಕ್ ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 888 SoC ಯೊಂದಿಗೆ ಲಭ್ಯವಿದೆ ಮತ್ತು ಡೈನಾಮಿಕ್ ರಿಫ್ರೆಶ್ ರೇಟ್ ಗಳನ್ನು ನೀಡುವ ಸ್ಮಾರ್ಟ್ 120Hz ವೈಶಿಷ್ಟ್ಯದೊಂದಿಗೆ AMOLED ಡಿಸ್ಪ್ಲೇ ಹೊಂದಿದೆ. ಒನ್ ಪ್ಲಸ್ 9 ಪ್ರೊ ಕ್ವಾಡ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ.
ಓದಿ : ಉ.ಕನ್ನಡ ಕರಾವಳಿಯ ಬಲ ಹೆಚ್ಚಿಸಿದ ಎರಡು ಫಾಸ್ಟ್ ಪಟ್ರೋಲ್ ಹಡಗುಗಳು
ಭಾರತದಲ್ಲಿ ಒನ್ ಪ್ಲಸ್ 9 ಪ್ರೊ ಬೆಲೆ, ಲಭ್ಯತೆ, ಆಫರ್ ಗಳೆನು..?
ಭಾರತದಲ್ಲಿ ಒನ್ ಪ್ಲಸ್ 9 ಪ್ರೊ 8 ಜಿಬಿ ರ್ಯಾಮ್ + 128 ಜಿಬಿ ಸ್ಟೋರೇಜ್ 64,999 ರೂ ಆಗಿದೆ. 12 ಜಿಬಿ ರ್ಯಾಮ್ + 256 ಜಿಬಿ ಸ್ಟೋರೇಜ್ 69,999 ರೂ. ನಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ ಗಳು ಅಮೆಜಾನ್ ಮತ್ತು OnePlus.in ಮೂಲಕ ಲಭ್ಯವಿದೆ. ಇನ್ನು, ಒನ್ ಪ್ಲಸ್ ಎಕ್ಸ್ ಕ್ಲೂಸಿವ್ ಆಫ್ ಲೈನ್ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಿದೆ.
ಒನ್ ಪ್ಲಸ್ 9 ಪ್ರೊ ವಿಶೇಷತೆಗಳೆನು..?
ಡ್ಯುಯಲ್-ಸಿಮ್ (ನ್ಯಾನೊ) ಒನ್ ಪ್ಲಸ್ 9 ಪ್ರೊ 6.7-ಇಂಚಿನ ಕ್ಯೂ ಎಚ್ ಡಿ + (1,440×3,216 ಪಿಕ್ಸೆಲ್‌ಗಳು) ಫ್ಲೂಯಿಡ್ ಡಿಸ್ಪ್ಲೇ 2.0 ಅಮೋಲೆಡ್ ಡಿಸ್ಪ್ಲೇ ಯನ್ನು ಸ್ಮಾರ್ಟ್ 120 ಹೆಚ್ ಡಿ ವೈಶಿಷ್ಟ್ಯದೊಂದಿಗೆ 1Hz ನಡುವಿನ ರಿಫ್ರೆಶ್ ರೇಟ್ ನ್ನು ಕ್ರಿಯಾತ್ಮಕವಾಗಿ ಬದಲಾಯಿಸುತ್ತದೆ. ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 888 SoC ಅನ್ನು ಹೊಂದಿದೆ, ಜೊತೆಗೆ 12GB ವರೆಗೆ LPDDR 5 RAM ಅನ್ನು ಹೊಂದಿದೆ.
ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಇದ್ದು, 48 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 789 ಪ್ರೈಮರಿ ಸೆನ್ಸಾರ್ F / 1.8 ಲೆನ್ಸ್ ಹೊಂದಿದೆ, 50 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 766 ಸೆಕೆಂಡರಿ ಸೆನ್ಸಾರ್ ನೊಂದಿಗೆ ಅಳವಡಿಸಲಾಗಿದೆ, ಇದು ಅಲ್ಟ್ರಾ-ವೈಡ್-ಆಂಗಲ್ F/ 2.2 ಫ್ರೀ ಫಾರ್ಮ್ ಲೆನ್ಸ್ ಅನ್ನು ಹೊಂದಿದೆ. ಕ್ಯಾಮೆರಾ ಸೆಟಪ್ 8 ಮೆಗಾಪಿಕ್ಸೆಲ್ ಟೆಲಿಫೋಟೋ ಶೂಟರ್ ಮತ್ತು 2 ಮೆಗಾಪಿಕ್ಸೆಲ್ ಮೋನೊಕ್ರೋಮ್ ಸೆನ್ಸಾರ್ ನನ್ನು ಸಹ ಹೊಂದಿದೆ. ಇನ್ನು, ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಹ ಒಳಗೊಂಡಿದೆ.
ಒನ್ ಪ್ಲಸ್ 9 ಪ್ರೊ 128 ಜಿಬಿ ಮತ್ತು 256 ಜಿಬಿ ಯು ಎಫ್ ಎಸ್ 3.1 ಸ್ಟೋರೇಜ್ ಆಯ್ಕೆಗಳೊಂದಿಗೆ ಬರುತ್ತದೆ. ಫೋನ್ 5 ಜಿ, 4 ಜಿ ಎಲ್ ಟಿ ಇ, ವೈ-ಫೈ 6, ಬ್ಲೂಟೂತ್ ವಿ 5.2, ಜಿಪಿಎಸ್ / ಎ-ಜಿಪಿಎಸ್, ಎನ್ ಎಫ್ ಸಿ, ಮತ್ತು ಕನೆಕ್ಟಿವಿಟಿ ಮುಂಭಾಗದಲ್ಲಿ ಯುಎಸ್ ಬಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿದೆ. ಇದು ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸಾರ್ ನನ್ನು ಒಳಗೊಂಡಿದೆ. 4,500mha ಬ್ಯಾಟರಿಯನ್ನು ಹೊಂದಿ ನೋಡಲು ಅತ್ಯಾಕರ್ಷಕವಾಗಿದೆ.
ಓದಿ : ಕರ್ತವ್ಯ ಲೋಪದ ಹಿನ್ನೆಲೆ: ತಿಕೋಟಾ ಮೊರಾರ್ಜಿ ವಸತಿ ಶಾಲೆ ಪ್ರಾಚಾರ್ಯೆ, ವಾರ್ಡನ್ ಗೆ ನೋಟಿಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.