ಒಪ್ಪಂದ; ಇನ್ಮುಂದೆ ರಿಲಯನ್ಸ್ ಡಿಜಿಟಲ್ ಮಳಿಗೆಯಲ್ಲೂ ಒನ್ ಪ್ಲಸ್ ಲಭ್ಯ


Team Udayavani, Oct 25, 2018, 4:35 PM IST

oneplus.jpg

ಮುಂಬೈ: ದೇಶದ ನಂ. ಒನ್ ಹಾಗೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕನ್ಸ್ಯೂಮರ್ ಇಲೆಕ್ಟ್ರಾನಿಕ್ಸ್ ಮಾರಾಟ ಸಂಸ್ಥೆ ರಿಲಯನ್ಸ್ ಡಿಜಿಟಲ್  ಜೊತೆಗೆ ಅಧಿಕ ಮೌಲ್ಯದ (ಪ್ರೀಮಿಯಂ) ಸ್ಮಾರ್ಟ್‌ಫೋನುಗಳ ನಿರ್ಮಾತೃ ಒನ್‌ಪ್ಲಸ್ ಒಪ್ಪಂದ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಇನ್ಮುಂದೆ ರಿಲಯನ್ಸ್ ಡಿಜಿಟಲ್ ಮಳಿಗೆಯಲ್ಲೂ ಒನ್ ಪ್ಲಸ್ ಲಭ್ಯವಾಗಲಿದೆ.

ಗ್ರಾಹಕರು ದೇಶದೆಲ್ಲೆಡೆಯ ನಗರಗಳಲ್ಲಿ ಒನ್‌ಪ್ಲಸ್ ಮೊಬೈಲ್ ಫೋನುಗಳನ್ನು ಬಳಸಿ ನೋಡಲು ಹಾಗೂ ಕೊಂಡುಕೊಳ್ಳಲು, ಒನ್‌ಪ್ಲಸ್ ಹಾಗೂ ರಿಲಯನ್ಸ್ ಡಿಜಿಟಲ್ ಸಂಸ್ಥೆಗಳು ಈ ಸಹಭಾಗಿತ್ವದ ಮೂಲಕ ಹೆಚ್ಚಿನ ಸಂಖ್ಯೆಯ ಕೇಂದ್ರಗಳನ್ನು ಒದಗಿಸುತ್ತಿವೆ.

ಆಫ್‌ಲೈನ್ ಚಾನೆಲ್ ಪಾರ್ಟ್‌ನರ್ ರೂಪದಲ್ಲಿ ರಿಲಯನ್ಸ್ ಡಿಜಿಟಲ್‌ನ ಪ್ರವೇಶದೊಡನೆ, ಅನುಕೂಲಕರ ಸ್ಥಳಗಳಲ್ಲಿರುವ ಮಳಿಗೆಗಳಲ್ಲಿ ಒನ್‌ಪ್ಲಸ್ ಉತ್ಪನ್ನಗಳನ್ನು ಬಳಸಿ ನೋಡುವ, ಆನ್‌ಲೈನ್‌ನಷ್ಟೇ ಬೆಲೆಯಲ್ಲಿ ಕೊಳ್ಳುವ ಅವಕಾಶ ಗ್ರಾಹಕರಿಗೆ ದೊರಕಲಿದೆ. ಇದರ ಜೊತೆಗೆ ಅವರು ರಿಲಯನ್ಸ್ ಡಿಜಿಟಲ್ ಮಳಿಗೆಗಳಲ್ಲಿ ನಡೆಸಲಾಗುವ ಪ್ರಚಾರ ಅಭಿಯಾನಗಳ ಲಾಭವನ್ನೂ ಪಡೆದುಕೊಳ್ಳಬಹುದಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಒನ್‌ಪ್ಲಸ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ವಿಕಾಸ್ ಅಗರ್‌ವಾಲ್, “ಭಾರತದಲ್ಲಿ ಅಧಿಕ ಮೌಲ್ಯದ (ಪ್ರೀಮಿಯಂ) ಸ್ಮಾರ್ಟ್‌ಫೋನುಗಳ ಮಾರುಕಟ್ಟೆ ಏಕಪ್ರಕಾರವಾಗಿ ಬೆಳೆಯುತ್ತಿದ್ದು, ಆನ್‌ಲೈನ್ ಮತ್ತು ಆಫ್‌ಲೈನ್ ವೇದಿಕೆಗಳೆರಡನ್ನೂ ಪರಿಣಾಮಕಾರಿಯಾಗಿ ಬಳಸಿಕೊಂಡು ಗ್ರಾಹಕರನ್ನು ತಲುಪುವ ಮೂಲಕ ಒನ್‌ಪ್ಲಸ್ ಈ ಮಾರುಕಟ್ಟೆಯಲ್ಲಿ ಬೆಳೆಯಲು ಬಯಸುತ್ತದೆ. ರಿಲಯನ್ಸ್ ಡಿಜಿಟಲ್ ಜೊತೆಗಿನ ಈ ಸಹಭಾಗಿತ್ವದಿಂದಾಗಿ, ಹಲವು ನಗರಗಳಲ್ಲಿ ಬೆಳೆಯುತ್ತಿರುವ ತನ್ನ ಗ್ರಾಹಕ ಸಮುದಾಯವನ್ನು ಹೆಚ್ಚು ಸಶಕ್ತವಾದ ಭೌತಿಕ ಅಸ್ತಿತ್ವದೊಡನೆ ತಲುಪುವುದು ಒನ್‌ಪ್ಲಸ್‌ಗೆ ಸಾಧ್ಯವಾಗುತ್ತದೆ. ಗ್ರಾಹಕರಿಗೆ ಅತ್ಯುತ್ತಮ ಅನುಭವವನ್ನು ಮಾತ್ರ ನೀಡುವ ರಿಲಯನ್ಸ್ ಡಿಜಿಟಲ್‌ನ ಗುರಿ ಹಾಗೂ ಒನ್‌ಪ್ಲಸ್‌ನ ಗ್ರಾಹಕಪರ ಸಿದ್ಧಾಂತಕ್ಕೆ ಉತ್ತಮ ಹೊಂದಾಣಿಕೆ ಇದೆ.” ಎಂದರು.

ಈ ಸಹಭಾಗಿತ್ವ ಕುರಿತು ವಿವರಿಸಿದ ರಿಲಯನ್ಸ್ ಡಿಜಿಟಲ್‌ನ ಸಿಇಓ ಬ್ರಿಯಾನ್ ಬೇಡ್, “ಒನ್‌ಪ್ಲಸ್ ಜೊತೆಗೆ ನಮ್ಮ ಸಹಭಾಗಿತ್ವವನ್ನು ಘೋಷಿಸಲು ರಿಲಯನ್ಸ್ ಡಿಜಿಟಲ್ ಸಂತೋಷಿಸುತ್ತದೆ. ನಾವು ಮಾರಾಟ ಮಾಡುವ ಉತ್ಪನ್ನಗಳ ಸಾಲಿಗೆ ಒನ್‌ಪ್ಲಸ್ 6Tಯನ್ನು ಸೇರಿಸಿಕೊಳ್ಳುವ ಮೂಲಕ, ಗ್ರಾಹಕರು ತಮ್ಮ ತಂತ್ರಜ್ಞಾನದ ಅಗತ್ಯಗಳನ್ನು ಪೂರೈಸಿಕೊಳ್ಳಲು ಅವರಿಗೆ ವಿಶ್ವದರ್ಜೆಯ ರೀಟೇಲ್ ಅನುಭವ ನೀಡುವ ನಮ್ಮ ನಿರಂತರ ಪ್ರಯತ್ನದ ಕುರಿತು ಮತ್ತೊಮ್ಮೆ ಹೇಳಲು ಬಯಸುತ್ತಿದ್ದೇವೆ.” ಎಂದು ಹೇಳಿದರು.

ಭಾರತೀಯ ಮಾರುಕಟ್ಟೆಯ ಕುರಿತು ತನ್ನ ಬದ್ಧತೆಯನ್ನು ಪುನರುಚ್ಚರಿಸಿರುವ ಒನ್‌ಪ್ಲಸ್ ಪಾಲಿಗೆ ರಿಲಯನ್ಸ್ ಡಿಜಿಟಲ್ ಜೊತೆಗಿನ ಈ ಒಪ್ಪಂದವು ಮತ್ತೊಂದು ಜಾಗತಿಕ ಪ್ರಥಮ ಸಾಧನೆಯಾಗಿದೆ. ಕೌಂಟರ್‌ಪಾಯಿಂಟ್‌ ಮಾರ್ಕೆಟ್ ಮಾನಿಟರ್ ಸರ್ವಿಸ್‌ನ 2018ರ ಎರಡನೇ ತ್ರೈಮಾಸಿಕ ವರದಿಯ ಪ್ರಕಾರ, ಭಾರತೀಯ ಮಾರುಕಟ್ಟೆಯಲ್ಲಿ ಶೇ. 40ಕ್ಕೂ ಹೆಚ್ಚಿನ ಪಾಲಿನೊಡನೆ ಅಧಿಕ ಮೌಲ್ಯದ (ಪ್ರೀಮಿಯಂ) ಸ್ಮಾರ್ಟ್‌ಫೋನುಗಳ ಅತಿದೊಡ್ಡ ನಿರ್ಮಾತೃ ಎಂಬ ಹೆಗ್ಗಳಿಕೆಗೆ ಒನ್‌ಪ್ಲಸ್ ಪಾತ್ರವಾಗಿದೆ.

ಈ ಸಹಭಾಗಿತ್ವದ ಅನ್ವಯ, ಒನ್‌ಪ್ಲಸ್ ಹಾಗೂ ರಿಲಯನ್ಸ್ ಡಿಜಿಟಲ್ ಸಂಸ್ಥೆಗಳು ಗ್ರಾಹಕರ ಅನುಕೂಲಕ್ಕಾಗಿ ಲೈವ್ ಡೆಮೋ ಫೋನುಗಳೊಡನೆ ಪ್ರತ್ಯೇಕ ಎಕ್ಸ್‌ಪೀರಿಯೆನ್ಸ್ ಜೋನ್‌ಗಳನ್ನು ರೂಪಿಸಲಿವೆ. ಈ ಕೇಂದ್ರಗಳಲ್ಲಿ ತರಬೇತಿ ಹೊಂದಿದ ಸಿಬ್ಬಂದಿ ಕೂಡ ಇರಲಿದ್ದು ಗ್ರಾಹಕರು ಒನ್‌ಪ್ಲಸ್ ಸಾಧನಗಳನ್ನು ಕುರಿತ ತಮ್ಮ ಪ್ರಶ್ನೆಗಳಿಗೆ ಅವರಿಂದ ನೇರವಾಗಿ ಉತ್ತರ ಪಡೆದುಕೊಳ್ಳಬಹುದಾಗಿದೆ.

ಟಾಪ್ ನ್ಯೂಸ್

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaap

Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ

Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್

Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್

11-airtel

Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್

ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ

ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ

1-trree

OnePlus 13 ಮುಂದಿನ ತಿಂಗಳು ಬಿಡುಗಡೆ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

sagara

Sagara: ಕಾಡಾನೆಗಳ ಹಾವಳಿ; ಲಕ್ಷಾಂತರ ರೂ. ಬೆಳೆ ನಷ್ಟ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.