OnePlus Nord 3 ಮೊಬೈಲ್: ಏನೈತಿ ಇದರಾಗೇನೈತಿ?

ಇತ್ತೀಚೆಗೆ ಬಿಡುಗಡೆಗೊಂಡ ಒನ್ ಪ್ಲಸ್ ನಾರ್ಡ್ 3 ಮೊಬೈಲ್ ನ ಮಾಹಿತಿ ಇಲ್ಲಿದೆ

Team Udayavani, Aug 22, 2023, 8:29 PM IST

OnePlus Nord 3 ಮೊಬೈಲ್: ಏನೈತಿ ಇದರಾಗೇನೈತಿ?

OnePlus ಕಂಪೆನಿ ಇತ್ತೀಚಿಗೆ Nord 3 5G ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು 8GB RAM ಮತ್ತು 128GB ಸಂಗ್ರಹ ಸಾಮರ್ಥ್ಯ (ಇದರ ಬೆಲೆ ರೂ. 33,999) 16GB RAM ಮತ್ತು 256GB ಸಂಗ್ರಹ ಸಾಮರ್ಥ್ಯ (ಇದರ ಬೆಲೆ ರೂ. 37,999 ರೂ.) ಹೊಂದಿರುವ ಎರಡು ಆವೃತ್ತಿಯಲ್ಲಿ ದೊರಕುತ್ತದೆ.

OnePlus Nord 3 5G ವಿನ್ಯಾಸ:
OnePlus Nord 3 5G, ಗಾಜಿನ ಹಿಂಬದಿ ಪ್ಯಾನೆಲ್ ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಹೊಂದಿದೆ. ನೀರು ಮತ್ತು ಧೂಳಿನ ರಕ್ಷಣೆಯಗಾಗಿ IP54 ರೇಟಿಂಗ್‌ ಹೊಂದಿದೆ. ಫ್ಲಾಟ್ ಪ್ಲಾಸ್ಟಿಕ್ ಫ್ರೇಮ್ ಮ್ಯಾಟ್ ಫಿನಿಶ್ ಒಳಗೊಂಡಿದೆ. ಇದರ ಬಲಭಾಗದಲ್ಲಿ ಒನ್ ಪ್ಲಸ್ ಅಭಿಮಾನಿಗಳ ಮೆಚ್ಚಿನ ಸೈಲೆಂಟ್, ರಿಂಗ್, ವೈಬ್ರೇಟ್ ಮೋಡ್ ಹೊಂದಿಸುವ ಸ್ಲೈಡರ್ ಮತ್ತು ಪವರ್ ಬಟನ್ ಇದೆ. ವಾಲ್ಯೂಮ್ ರಾಕರ್ ಎಡಭಾಗದಲ್ಲಿದೆ. ಮೊಬೈಲ್ ತಳಭಾಗದಲ್ಲಿ USB ಟೈಪ್-C ಪೋರ್ಟ್, ಸ್ಪೀಕರ್ ಗ್ರಿಲ್, ಮೈಕ್ರೊಫೋನ್ ಮತ್ತು ಡ್ಯುಯಲ್-ಸಿಮ್ ಸ್ಲಾಟ್‌ಗೆ ಸ್ಥಳಾವಕಾಶವಿದೆ. ಮೇಲ್ಭಾಗದಲ್ಲಿ, ನಿಮ್ಮ ಮನೆಯ ಟಿವಿ ಮತ್ತಿತರ ಉಪಕರಣಗಳನ್ನು ನಿಯಂತ್ರಿಸಲು ಬಳಸಬಹುದಾದ ಐಆರ್ ಎಮಿಟರ್ ಕೂಡ ಇದೆ. ಈ ಫೋನ್ 193.5g ತೂಕ ಮತ್ತು 8.15mm ಮಂದವಿದೆ. ಒಟ್ಟಾರೆಯಾಗಿ ಇದು ಪ್ರೀಮಿಯಂ ಡಿಸೈನ್, ಮತ್ತು ಉತ್ತಮ ಬಿಲ್ಡ್ ಕ್ವಾಲಿಟಿ ಹೊಂದಿದೆ.

ಪರದೆ: 6.74-ಇಂಚಿನ ‘ಸೂಪರ್ ಫ್ಲೂಯಿಡ್’ AMOLED ಡಿಸ್ಪ್ಲೇಯನ್ನು ಹೊಂದಿದೆ. OnePlus Nord 3 5G ಬಾಗಿದ ಅಂಚಿನ ಬದಲಿಗೆ ಫ್ಲಾಟ್ ಡಿಸ್ಪ್ಲೇ ಹೊಂದಿದೆ.. ಬೆಜೆಲ್‌ಗಳು ತುಂಬಾ ತೆಳುವಾಗಿವೆ. ಇದು ಪರದೆಯನ್ನು ವಿಶಾಲವಾಗಿಸಲು ಸಹಕಾರಿ.

OnePlus Nord 3 5G , 1.5K ರೆಸಲ್ಯೂಶನ್ (2772×1240 ಪಿಕ್ಸೆಲ್‌ಗಳು) ಜೊತೆಗೆ 10-ಬಿಟ್ AMOLED ಪ್ಯಾನೆಲ್‌ ಹೊಂದಿದ್ದು, ಆಕರ್ಷಕವಾಗಿ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ HDR10+ ವಿಡಿಯೋಗಳು ಶ್ರೀಮಂತವಾಗಿ ಕಾಣುತ್ತದೆ. ಡ್ಯುಯಲ್ ಸ್ಪೀಕರ್‌ಗಳು ಡಾಲ್ಬಿ ಅಟ್ಮಾಸ್ ಹೊಂದಿವೆ. ಮನೆಯ ಒಳಗೆ ಶಬ್ದ ಜೋರಾಗಿ ಕೇಳುತ್ತದೆ.

OnePlus Nord 3 5G ಡೈನಾಮಿಕ್ 120Hz ರಿಫ್ರೆಶ್ ದರವನ್ನು ಹೊಂದಿದೆ. ಇದರಿಂದಾಗಿ ಸ್ಕ್ರೋಲಿಂಗ್ ಮಾಡುವಾಗ ಬಹಳ ಮೃದುವಾಗಿ ಪರದೆ ಸರಿಯುತ್ತದೆ. ಇದರಲ್ಲಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇದ್ದು ಅತ್ಯಂತ ವೇಗವಾಗಿ ಕೆಲಸ ಮಾಡುತ್ತದೆ. ಹೆಚ್ಚುವರಿಯಾಗಿ ಫೇಸ್ ಅನಲಾಕಿಂಗ್ ಕೂಡಿ ಇದ್ದು, ಬಹಳ ವೇಗವಾಗಿದೆ.

ಕಾರ್ಯಾಚರಣೆ: ಇದರಲ್ಲಿ ಫ್ಲ್ಯಾಗ್‌ಶಿಪ್-ಗ್ರೇಡ್ MediaTek ಡೈಮೆನ್ಸಿಟಿ 9000 SoC ಇದ್ದು, ಇದು 4nm ಫ್ಯಾಬ್ರಿಕೇಶನ್ ಹೊಂದಿದೆ. SoC ಮಾಲಿ G-710 GPU ಅನ್ನು ಹೊಂದಿದ್ದು, 16GB ಯ LPDDR5X RAM ಜೊತೆಗೆ 256GB UFS 3.1 ಸಂಗ್ರಹಣೆ ಹೊಂದಿದೆ. ಇದು ಎಂಟು 5G ಬ್ಯಾಂಡ್‌ಗಳು, ಬ್ಲೂಟೂತ್ 5.3 ಮತ್ತು Wi-Fi 6 ಸಂಪರ್ಕವನ್ನು ಬೆಂಬಲಿಸುತ್ತದೆ.

ಸಾಫ್ಟ್‌ವೇರ್‌ಗೆ ಸಂಬಂಧಿಸಿದಂತೆ,Android 13 ಅನ್ನು ಆಧರಿಸಿದ Oxygen OS 13.1 ಯೂಐ ಹೊಂದಿದೆ. OnePlus ನ ಕಸ್ಟಮ್ ಸ್ಕಿನ್ ಆಯ್ಕೆ ನೀಡಿದೆ. ನೀವು ವಾಲ್‌ಪೇಪರ್‌ಗಳು ಮತ್ತು ಥೀಮ್‌ಗಳನ್ನು ಬದಲಾಯಿಸುವುದು ಮಾತ್ರವಲ್ಲದೆ ಐಕಾನ್ ಆಕಾರ, ಗಾತ್ರ ಮತ್ತು ಫಾಂಟ್‌ಗಳನ್ನು ಹೊಂದಿಸಬಹುದು.

ಈ ಫೋನಿಗೆ ಮೂರು ಪ್ರಮುಖ ಆಂಡ್ರಾಯ್ಡ್ ಅಪ್ಡೇಟ್ ಮತ್ತು ನಾಲ್ಕು ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ಒದಗಿಸುವುದಾಗಿ OnePlus ಭರವಸೆ ನೀಡಿದೆ. ವ್ಯಾಲ್ಯೂ ಫಾರ್ ಮನಿ ಬಯಸುವ ಗ್ರಾಹಕರಿಗೆ ನಾಲ್ಕು ವರ್ಷಗಳ ಕಾಲ ಸೆಕ್ಯುರಿಟಿ ನೀಡಿಕೆ ಪ್ಲಸ್ ಪಾಯಿಂಟ್. ಅಪ್ಲಿಕೇಶನ್‌ಗಳು ತ್ವರಿತವಾಗಿ ಲೋಡ್ ಆಗುತ್ತವೆ ಮತ್ತು ಗೇಮಿಂಗ್ ಕಾರ್ಯಕ್ಷಮತೆ ಕೂಡ ಅತ್ಯುತ್ತಮವಾಗಿದೆ.

ಬ್ಯಾಟರಿ: 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು 80W ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿದೆ. ಕೆಲವು ಬ್ರಾಂಡ್ ಗಳು ಈಗ ಮೊಬೈಲ್ ಜೊತೆ ಚಾರ್ಜರ್ ನೀಡುತ್ತಿಲ್ಲ. ಮತ್ತು ಫ್ಲಾಗ್ ಶಿಪ್ ಮೊಬೈಲ್ ಗಳು ಕೂಡ 25 ವ್ಯಾಟ್ಸ್ ವೇಗದ ಚಾರ್ಜಿಂಗ್ ಹೊಂದಿವೆ. ಇಂತಲ್ಲಿ ಒನ್ ಪ್ಲಸ್ 80 ವ್ಯಾಟ್ಸ್ ಸೂಪರ್ ಸ್ಪೀಡ್ ಮತ್ತು ಇದರ ಜೊತೆ ಜಾರ್ಜರ್ ನೀಡಿರುವುದು ಗ್ರಾಹಕರಿಗೆ ಅನುಕೂಲಕರ.

ಒಂದು ಚಾರ್ಜ್‌ನಲ್ಲಿ ಪೂರ್ಣ ದಿನ ಇರುತ್ತದೆ. ಮಧ್ಯಮ ಬಳಕೆಯ ಸಂದರ್ಭದಲ್ಲಿ ಸರಾಸರಿ ಸ್ಕ್ರೀನ್-ಆನ್ ಸಮಯ (SoT) ಸುಮಾರು 8 ಗಂಟೆ ಮತ್ತು 30 ನಿಮಿಷಗಳು. ಶೇ. 1 ರಿಂದ 100 ರವರೆಗೆ ಸಂಪೂರ್ಣ ಚಾರ್ಜ್ ಮಾಡಲು ಫೋನ್ ಸುಮಾರು 35 ರಿಂದ 40 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಕ್ಯಾಮರಾ:
OnePlus Nord 3 5G ಹಿಂಭಾಗದಲ್ಲಿ ಟ್ರಿಪಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS), 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾದೊಂದಿಗೆ 50-ಮೆಗಾಪಿಕ್ಸೆಲ್ ಸೋನಿ IMX890 ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿದೆ.
ಪ್ರಾಥಮಿಕ ಕ್ಯಾಮೆರಾದ ಗುಣಮಟ್ಟ ಚೆನ್ನಾಗಿದೆ. ಸಾಮಾನ್ಯವಾಗಿ ಒನ್ ಪ್ಲಸ್ ಮೊಬೈಲ್ ಕ್ಯಾಮರಾಗಳು ಆಯಾ ದರ ವಿಭಾಗದಲ್ಲಿ ಉತ್ತಮ ಫಲಿತಾಂಶದ ಫೋಟೋ ನೀಡುತ್ತವೆ. ನಾರ್ಡ್ 3 ಯಲ್ಲಿ ತೆಗೆದ ಫೋಟೋಗಳ ಗುಣಮಟ್ಟ ಕೂಡ ಶಾರ್ಪ್ ಮತ್ತು ಡೀಟೇಲ್ ಅಗಿದೆ. ಸಹಜ ಬಣ್ಣಗಳನ್ನು ಗ್ರಹಿಸುತ್ತದೆ.

16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಪರವಾಗಿಲ್ಲ. ಈ ದರಕ್ಕೆ 32 ಮೆ.ಪಿ. ಕ್ಯಾಮರಾ ನೀಡಬಹುದಿತ್ತು. ಇದರಲ್ಲಿ ಪೋರ್ಟ್ರೇಟ್ ಮೋಡ್ ಬ್ಲರ್ ಸಹ ಸಹಜವಾಗಿ ಕಾಣುತ್ತದೆ. ವಿಡಿಯೋ ಕ್ಯಾಮರಾ 4K 60fps ವೀಡಿಯೊಗಳನ್ನು ಸೆರೆ ಹಿಡಿಯುತ್ತದೆ.

ಒಟ್ಟಾರೆಯಾಗಿ ಈ ಫೋನು, ಪ್ರೀಮಿಯಂ ವಿನ್ಯಾಸ, ಹೆಚ್ಚಿನ ವೇಗದ ಕಾರ್ಯಾಚರಣೆ, ಉತ್ತಮ ಪ್ರಾಥಮಿಕ ಕ್ಯಾಮರಾದೊಂದಿಗೆ ಮಧ್ಯಮ ವಲಯದ ಫೋನ್ ಗಳಲ್ಲಿ ಗಮನ ಸೆಳೆಯುತ್ತದೆ.

-ಕೆ.ಎಸ್. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಇದೀಗ ಜಿಯೋ ಹಾಟ್‌ಸ್ಟಾರ್‌

JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಇದೀಗ ಜಿಯೋ ಹಾಟ್‌ಸ್ಟಾರ್‌

drdo

DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್‌ ಪರೀಕ್ಷೆ ಯಶಸ್ವಿ

PM-Modi-Paris

AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್

GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.