ಸರೆಗಮ‌‌ ಜತೆ ಸ್ಪಾಟಿಫೈ ಒಪ್ಪಂದ ; ಸಂಗೀತ ಪ್ರಿಯರಿಗೆ ‍ರೆಟ್ರೋ ಹಾಡುಗಳ ಸುರಿಮಳೆ

Team Udayavani, May 17, 2020, 6:32 PM IST

ಸರೆಗಮ‌‌ ಜತೆ ಸ್ಪಾಟಿಫೈ ಒಪ್ಪಂದ ; ಸಂಗೀತ ಪ್ರಿಯರಿಗೆ ‍ರೆಟ್ರೋ ಹಾಡುಗಳ ಸುರಿಮಳೆ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಆನ್‌ಲೈನ್ ಮ್ಯೂಸಿಕ್ ಸ್ಟ್ರೀಮಿಂಗ್ ಸೇವೆ ಒದಗಿಸುವ ಸ್ಪಾಟಿಫೈ ಸಂಸ್ಥೆಯು ಭಾರತದಲ್ಲಿ ತಮ್ಮ ನೆಟ್ ವರ್ಕ್ ಇನ್ನಷ್ಟು ಬಲಗೊಳಿಸುವ ಉದ್ದೇಶದಿಂದ‌ ಭಾರತೀಯ ಸರೆಗಮ ಮ್ಯೂಸಿಕ್ ಸಂಸ್ಥೆಯ ಜತೆ ಒಪ್ಪಂದವೊಂದನ್ನು ಮಾಡಿಕೊಂಡಿದೆ.

ಈ ಒಪ್ಪಂದದಿಂದ ಸ್ಪಾಟಿಫೈ ಸಂಸ್ಥೆಗೆ ಭಾರತದ ಸುಮಾರು 25 ಭಾಷೆಗಳ ಚಲನಚಿತ್ರ, ಭಕ್ತಿ ಗೀತೆ, ಕರ್ನಾಟಕ, ಹಿಂದೂಸ್ತಾನಿ ಮತ್ತು ಶಾಸ್ತ್ರೀಯ ಸಂಗೀತದಂತಹ ವಿವಿಧ ಪ್ರಕಾರಗಳಲ್ಲಿ 100,000ಕ್ಕೂ ಹೆಚ್ಚು ಹಾಡುಗಳಿಗೆ ಸರೆಗಮದಿಂದ ಆ್ಯಕ್ಸೆಸ್ ಪಡೆದುಕೊಳ್ಳಲಿದೆ.

‘ನಾವು ಸ್ಪಾಟಿಫೈ ಜತೆ ಪಾಲುದಾರರಾಗಲು ಸಂತೋಷಪಡುತ್ತೇವೆ ಮತ್ತು ಈ ಒಪ್ಪಂದದಿಂದ ನಮ್ಮ ಸಂಪೂರ್ಣ ಕ್ಯಾಟಲಾಗ್ ಅನ್ನು ಈಗ ಭಾರತ ಸೇರಿದಂತೆ ವಿಶ್ವಾದ್ಯಂತ ಕೇಳುಗರಿಗೆ ಲಭ್ಯವಾಗುತ್ತದೆ. ನಮ್ಮಲ್ಲಿ ಹಳೆಯ ಕ್ಲಾಸಿಕ್‌ಗಳಿಂದ ಹಿಡಿದು ಹೊಸ ಯುಗದ ಸಂಗೀತದವರೆಗಿನ ಹಾಡುಗಳ ಸಂಗ್ರಹ ಹೊಂದಿದ್ದೇವೆ.

ಈ ಒಪ್ಪಂದದಿಂದ ಕೇಳುಗರಿಗೆ ಇನ್ನಷ್ಟು ಉಪಯೋಗವಾಗಲಿದೆ’ ಎಂದು ಸರೆಗಮಾ ಭಾರತೀಯ ವ್ಯವಸ್ಥಾಪಕ ನಿರ್ದೇಶಕ ವಿಕ್ರಮ್ ಮೆಹ್ರಾ ಅವರು ಈ ಮಹತ್ವದ ಒಪ್ಪಂದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.

ಸ್ಪಾಟಿಫೈ ಇಂಡಿಯಾದಲ್ಲಿ ಸರೆಗಮ ಕ್ಯಾಟಲಾಗ್ ಲಭ್ಯವಿರುವುದರಿಂದ ಬಳಕೆದಾರರು ಸ್ಥಳೀಯ ಭಾಷೆಗಳಲ್ಲಿ ತಮ್ಮ ನೆಚ್ಚಿನ ರೆಟ್ರೋ ಗೀತೆಗಳನ್ನು ಕೇಳಿ ಆನಂದಿಸಬಹುದು. ಸ್ಪಾಟಿಫೈನ ಸ್ಥಳೀಯ ಪ್ಲೇ ಲಿಸ್ಟ್ ಸಂಗ್ರಹದ ಮೂಲಕ ಹಳೇ ಹಾಡುಗಳನ್ನು ಹುಡುಕಿ ಆಲಿಸಲು ಸಾಧ್ಯವಾಗಲಿದೆ ಎಂದು ಸ್ಪಾಟಿಫೈ ಗ್ಲೋಬಲ್ ಲೈಸೆನ್ಸಿಂಗ್ ನಿರ್ದೇಶಕ ಪೌಲ್ ಸ್ಮಿತ್ ಹೇಳಿದ್ದಾರೆ.

ಕಳೆದ ಮಾಚ್‌ನಲ್ಲಿ ಸ್ಪಾಟಿಫೈ ಸಂಸ್ಥೆಯು ಭಾರತೀಯ ಮಾರುಕಟ್ಟೆಯೂ ಒಳಗೊಂಡಂತೆ ವಾರ್ನರ್ ಮ್ಯೂಸಿಕ್ ಗ್ರೂಪ್‌ನೊಂದಿಗೆ ತನ್ನ ಜಾಗತಿಕ ಪರವಾನಗಿ ಸಹಭಾಗಿತ್ವವನ್ನು ನವೀಕರಿಸಿತ್ತು.‌ ಈ ಒಪ್ಪಂದದ ಮೂಲಕ ದೇಶದಲ್ಲಿದ್ದ ದೀರ್ಘಕಾಲೀನ ಕಾನೂನು ಸಮರವೊಂದು ಅಂತ್ಯವಾಗಿತ್ತು.

ಇಷ್ಟು ಮಾತ್ರವಲ್ಲದೇ ಸ್ಪಾಟಿಫೈ ಕಳೆದ ತಿಂಗಳು ಶೆಮರೂ ಎಂಟರ್‌ಟೈನ್‌ಮೆಂಟ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು. ಈ ಮೂಲಕ ತನ್ನ ಚಂದಾದಾರರಿಗೆ 25 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಆ್ಯಕ್ಸಸ್ ನೀಡಿದೆ.

ಟಾಪ್ ನ್ಯೂಸ್

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-poco

POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್‌

US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್‌

WhatsApp Pay: ಭಾರತದಲ್ಲಿ ವಾಟ್ಸ್‌ಆ್ಯಪ್‌ ಪೇ ಇನ್ನು ಎಲ್ಲರಿಗೂ ಲಭ್ಯ

WhatsApp Pay: ಭಾರತದಲ್ಲಿ ವಾಟ್ಸ್‌ಆ್ಯಪ್‌ ಪೇ ಇನ್ನು ಎಲ್ಲರಿಗೂ ಲಭ್ಯ

Airtel Outage:ದೇಶದ ಹಲವೆಡೆ ಏರ್‌ ಟೆಲ್‌ Network ಸಮಸ್ಯೆ; ಏರ್‌ ಟೆಲ್‌ ಗ್ರಾಹಕರಿಂದ ದೂರು

Airtel Outage:ದೇಶದ ಹಲವೆಡೆ ಏರ್‌ ಟೆಲ್‌ Network ಸಮಸ್ಯೆ; ಏರ್‌ ಟೆಲ್‌ ಗ್ರಾಹಕರಿಂದ ದೂರು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.