ಒಪ್ಪೋ ಎ54: ಒಪ್ಪೋ ಬಿಡುಗಡೆ ಮಾಡಿದ ಹೊಸ ಮೊಬೈಲ್ ಹೇಗಿದೆ? ದರ ಎಷ್ಟು?
Team Udayavani, Jun 15, 2021, 5:39 PM IST
ಒಪ್ಪೋ ಕಂಪೆನಿ ಮಧ್ಯಮ ದರ್ಜೆಯಲ್ಲಿ ಹೊರತಂದಿರುವ ಇತ್ತೀಚಿನ ಮೊಬೈಲ್ ಒಪ್ಪೋ ಎ54. ಮೊಬೈಲ್ ಪೋನ್ ಮಾರುಕಟ್ಟೆಯಲ್ಲಿ ಸ್ಪರ್ಧೆ ಜೋರಾಗಿದೆ. ಹೀಗಾಗಿ ಗ್ರಾಹಕ ನೀಡುವ ದರಕ್ಕೆ ಸಮಾಧಾನಕರವಾಗುವ ಸ್ಪೆಸಿಫಿಕೇಷನ್ ಗಳುಳ್ಳ ಮೊಬೈಲ್ ನೀಡಬೇಕೆಂಬುದು ಕಂಪೆನಿಗಳಿಗೆ ಅರ್ಥವಾಗತೊಡಗಿದೆ. ಅದನ್ನು ಒಪ್ಪೋ ಕೂಡ ಒಪ್ಪಿಕೊಂಡಂತಿದೆ. ಒಪ್ಪೋ ಎ54 ಮೊಬೈಲ್ ವಾಸ್ತವ ಬಳಕೆಯಲ್ಲಿ ಹೇಗಿದೆ ಎಂಬುದರ ಒಂದು ನೋಟ ಇಲ್ಲಿದೆ.
ಒಪ್ಪೋ-ವಿವೋ ಒಂದೇ ಕಂಪೆನಿಯ ಅಣ್ಣತಮ್ಮಂದಿರು. ಈ ಬ್ರಾಂಡ್ ಮೊಬೈಲ್‍ಗಳನ್ನು ಬಾಕ್ಸ್ ನಿಂದ ತೆರೆದ ತಕ್ಷಣ ಅವುಗಳ ವಿನ್ಯಾಸ ಗಮನ ಸೆಳೆಯದಿರುವುದಿಲ್ಲ. ಅದೇ ರೀತಿ ಒಪ್ಪೋ ಎ54 ಕೂಡ ಇದೆ. ಮೊಬೈಲ್ ಹೆಚ್ಚು ದಪ್ಪ ಅನಿಸುವುದಿಲ್ಲ. ಹೆಚ್ಚು ತೂಕವೂ ಇಲ್ಲ.
ಮೊಬೈಲ್‍ನ ಮೇಲ್ಭಾಗ ಯಾವುದೇ ಪೋರ್ಟ್ ಇಲ್ಲ. ಬಲಗಡೆ ಆನ್ ಆಫ್ ಬಟನ್ ಇದೆ. ಇದೇ ಬಟನ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಆಗಿಯೂ ಕೆಲಸ ಮಾಡುತ್ತದೆ. ಎಡಗಡೆ ಸಿಮ್ ಕಾರ್ಡ್ ಟ್ರೇ, ಅದರ ಕೆಳಗೆ ಧ್ವನಿ ಹೆಚ್ಚು ಕಡಿಮೆ ಮಾಡುವ ಬಟನ್‍ಗಳಿವೆ. ಕೆಳಗೆ 3.5 ಎಂ.ಎಂ. ಆಡಿಯೋ ಜಾಕ್, ಟೈಪ್ ಸಿ ಆಡಿಯೋ ಪೋರ್ಟ್, ಸ್ಪೀಕರ್ ಇದೆ.
ಪರದೆಯ ಮೇಲ್ಭಾಗದ ಎಡತುದಿಯಲ್ಲಿ ಸೆಲ್ಫೀ ಕ್ಯಾಮರಾ ಇದೆ. ಹಿಂಭಾಗ ಮೂರು ಕ್ಯಾಮರಾ ಲೆನ್ಸ್ ಉಬ್ಬಿದ ಆಕಾರದಲ್ಲಿದೆ. ಮೊಬೈಲ್‍ನ ಹಿಂಬದಿ ಪ್ಯಾನಲ್ ಗ್ಲಾಸ್ಟಿಕ್ (ಪ್ಲಾಸ್ಟಿಕ್ ಆದರೂ ಗಾಜಿನಂತೆ ಕಾಣುವ) ಆಗಿದೆ. ಮೊಬೈಲ್‍ನ ಫ್ರೇಂ ಅಲ್ಯೂಮಿನಿಯಂನದ್ದಾಗಿದೆ. ಒಟ್ಟಾರೆ ಈ ವಿನ್ಯಾಸ ಗಮನ ಸೆಳೆಯುತ್ತದೆ.
ಇದನ್ನೂ ಓದಿ:ಕೇಂದ್ರಕ್ಕೆ ಕೋವ್ಯಾಕ್ಸಿನ್ ನನ್ನು 150 ರೂ.ನಂತೆ ನೀಡಲು ಸಾಧ್ಯವಾಗುತ್ತಿಲ್ಲ: ಭಾರತ್ ಬಯೋಟೆಕ್
ಪರದೆ: ಪರದೆಯ ಅಳತೆ 6.51 ಇಂಚಿದೆ. 720*1600 ಎಚ್‍ಡಿ ಪ್ಲಸ್ ಡಿಸ್‍ಪ್ಲೇ ಇದೆ. ಎಲ್‍ಸಿಡಿ ಪ್ಯಾನೆಲ್ ಇದ್ದು, ಪರದೆಯ ರಿಫ್ರೆಶ್ ರೇಟ್ 60 ಹರ್ಟ್ಜ್ ಇದೆ. ಪರದೆಯ ಗುಣಮಟ್ಟ ಪರವಾಗಿಲ್ಲ ಎನ್ನುವಂತಿದೆ.
ಕಾರ್ಯಾಚರಣೆ: ಇದು ಮೀಡಿಯಾಟೆಕ್ ಹೀಲಿಯೋ ಪಿ35 ಪ್ರೊಸೆಸರ್ (ಎಂಟು ಕೋರ್ ಗಳು) ಹೊಂದಿದೆ. ಇದು ಸ್ನಾಪ್‍ಡ್ರಾಗನ್ 625 ಪ್ರೊಸೆಸರ್ ಗೆ ಸಮನಾದ ಪ್ರೊಸೆಸರ್. ಅಂಡ್ರಾಯ್ಡ್ 10 ಆವೃತ್ತಿ ಹೊಂದಿದೆ. ಮುಂದಿನ ಅಪ್ ಡೇಟ್ ಗಳಲ್ಲಿ ಆಂಡ್ರಾಯ್ಡ್ 11 ದೊರಕಲಿದೆ. ಇದಕ್ಕೆ ಕಲರ್ ಓಎಸ್ ಹೊಂದಿಸಲಾಗಿದೆ. ಟಿಪಿಕಲ್ ಒಪ್ಪೋ, ವಿವೋ ಫೋನಿನ ಇಂಟರ್ ಫೇಸ್ ಇದೆ. ಮಧ್ಯಮ ದರ್ಜೆಯ ಫೋನಿನಲ್ಲಿರಬೇಕಾದ ವೇಗದಲ್ಲಿ ಫೋನ್ ಕೆಲಸ ಮಾಡುತ್ತದೆ. ಸಾಧಾರಣ ಬಳಕೆದಾರರಿಗೆ ಈ ವೇಗ ಸಾಕು.
ಕ್ಯಾಮರಾ: ಇದರಲ್ಲಿ 13 ಮೆಗಾ ಪಿಕ್ಸಲ್ ಪ್ರಾಥಮಿಕ ಸೆನ್ಸರ್, 2 ಮೆಗಾ ಪಿಕ್ಸಲ್ ಮತ್ತು 2 ಮೆಗಾ ಪಿಕ್ಸಲ್ ಹೆಚ್ಚುವರಿ ಲೆನ್ಸ್ ಗಳಿವೆ. 16 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮರಾ ಇದೆ. ಆರಂಭಿಕ ಮಧ್ಯಮ ದರ್ಜೆಯ ಫೋನ್ ಗಳಲ್ಲಿ ಕ್ಯಾಮರಾ ಗುಣಮಟ್ಟವನ್ನು ಹೆಚ್ಚು ನಿರೀಕ್ಷಿಸಲು ಸಾಧ್ಯವಿಲ್ಲ. ಇದರ ಸೆಲ್ಫೀ ಕ್ಯಾಮರಾ ಮುಖವನ್ನು ಇರುವುದಕ್ಕಿಂತ ನಯವಾಗಿ ತೋರಿಸುತ್ತದೆ!
ಬ್ಯಾಟರಿ: 5000 ಎಂಎಎಚ್ ಬ್ಯಾಟರಿ ಹೊಂದಿದೆ. ಒಂದೂವರೆ ದಿನದ ಬ್ಯಾಟರಿ ಬಾಳಿಕೆಗೆ ಅಡ್ಡಿಯೇನಿಲ್ಲ. ಇದಕ್ಕೆ 18 ವ್ಯಾಟ್ಸ್ ವೇಗದ ಚಾರ್ಜರ್ ನೀಡಿರುವುದು ಬೋನಸ್.
ದರ: 4 ಜಿಬಿ ರ್ಯಾಮ್, 64 ಜಿಬಿ ಸಂಗ್ರಹ= 13,490 ರೂ.
4 ಜಿಬಿ ರ್ಯಾಮ್, 128 ಜಿಬಿ ಸಂಗ್ರಹ= 14,490 ರೂ.
6 ಜಿಬಿ ರ್ಯಾಮ್, 128 ಜಿಬಿ ಸಂಗ್ರಹ= 15,990 ರೂ.
-ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.