![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
ಶ್ರೀರಾಜ್ ವಕ್ವಾಡಿ, May 31, 2021, 6:38 PM IST
ಇದುವರೆಗೆ ಗೂಗಲ್ ಫೋಟೋಸ್ ಸ್ಟೋರೇಜ್ ಅಪ್ಲಿಕೇಶನ್ ಉಚಿತವಾಗಿದ್ದು, ನಾಳೆಯಿಂದ ಅಂದರೇ, ಜೂನ್ 1ರಿಂದ ಹಣ ಪಾವತಿಸಬೇಕಾಗುತ್ತದೆ. ಏಕೆಂದರೆ ಹೈ ಕ್ವಾಲಿಟಿ ಫೋಟೋಸ್ ಮತ್ತು ವೀಡಿಯೋಸ್ ಗಳ ಬ್ಯಾಕ್ ಅಪ್ ಆಗುವ ಜಿ-ಮೇಲ್ ಅಪ್ಲಿಕೇಶನ್ ಲೋಡ್ ಉಳಿಸಿಕೊಳ್ಳಲು, ಸಿಗುತ್ತಿದ್ದ ಸ್ಟೋರೇಜ್ ಹಣ ಪಾವತಿಸಲಾಗುವುದು.
ಇಷ್ಟು ದಿನ ಇದ್ಯಾವುದಕ್ಕೆ ನಿರ್ಬಂಧಗಳಿರಲಿಲ್ಲ ಸ್ಟೋರೇಜ್ ಗೆ ಅವಕಾಶವಿತ್ತು. ಇನ್ನು ಮುಂದೆ ಬ್ಯಾಕ್ ಅಪ್ ಆಗುವ ಫೋಟೋಸ್ ಮತ್ತು ವೀಡಿಯೋಸ್ ಗಳು 15 ಜಿಬಿ ಡೇಟಾ ಅವಕಾಶ ಹೊಂದಿರಬೇಕು. 15 ಜಿಬಿ ತುಂಬಿದ ನಂತರದ ಸೇವೆಯನ್ನು ಮುಂದುವರೆಸಲು ಹಣ ಪಾವತಿ ಮಾಡಬೇಕಾಗಿದೆ.
15 ಜಿಬಿ ವರೆಗೆ ಗೂಗಲ್ ಫೋಟೋಸ್ ನಲ್ಲಿ ಅಪ್ ಲೋಡ್ ಮಾಡಬಹುದು. ಫೋಟೋ 16 ಎಂಪಿಗಿಂತ ಜಾಸ್ತಿಯಿದ್ದರೆ, ಅದು ಅಪ್ ಲೋಡ್ ಆಗುವುದಿಲ್ಲ.
ಸ್ಟೋರೇಜ್ ಸ್ಪೇಸ್ ಖಾಲಿಯಾದರೆ ಗೂಗಲ್ ಫೋಟೋಸ್ ನಲ್ಲಿ ಸ್ಟೋರೇಜ್ ಮ್ಯಾನೇಜ್ ಮೆಂಟ್ ಸೆಕ್ಷನ್ ಹೋಗಿ, ಗೂಗಲ್ ಅಕೌಂಟ್ ನಲ್ಲಿ ಎಷ್ಟು ಸ್ಪೇಸ್ ಇದೆ ಎಂದು ನೋಡಬಹುದು. ಗೂಗಲ್ ಫೋಟೋಸ್ ಸ್ಟೋರೇಜ್ ನಲ್ಲಿ ಬ್ಲರ್ ಆಗಿರುವ ಫೋಟೋಗಳು, ಹೆಚ್ಚು ಸ್ಪೇಸ್ ಪಡೆಯುವ ಫೈಲ್ ಗಳ ಮಾಹಿತಿಗಳು ಸಿಗುತ್ತದೆ.
ಅಗತ್ಯವಿಲ್ಲದ ಫೈಲ್ ಡಿಲೀಟ್ ಮಾಡಿಕೊಳ್ಳುವ ಮೂಲಕ, ಸ್ಟೋರೇಜ್ ಸ್ಪೇಸ್ ಹೆಚ್ಚಿಸಿಕೊಳ್ಳಬಹುದು.
15 ಜಿಬಿ ಸ್ಟೋರೇಜ್ ಸ್ಪೇಸ್ ತುಂಬಿದರೆ ನಂತರ, ಮುಂದೆ ಯಾವುದೇ ಫೈಲ್ ಗೂಗಲ್ ಡ್ರೈವ್/ಫೋಟೋಸ್ ನಲ್ಲಿ ಬ್ಯಾಕ್ ಆಪ್ ಮಾಡಲಾಗುವುದಿಲ್ಲ. ಹೆಚ್ಚಿನ ಫೋಟೋ ಮತ್ತು ವಿಡಿಯೋಗಳನ್ನು ಗೂಗಲ್ ಫೋಟೋಸ್ ಅಕೌಂಟ್ಸ್ ನಲ್ಲಿ ಉಳಿಸಲಾಗುವುದಿಲ್ಲ. ಅದೇ ರೀತಿ ಜಿ-ಮೇಲ್ ಮೂಲಕ ಫೋಟೋಸ್ ಮತ್ತು ಸಂದೇಶಗಳು, ಫೋಟೋ ವಿಡಿಯೋಗಳನ್ನು ಕಳುಹಿಸಲು ಹಾಗೂ ಸ್ವೀಕರಿಸಲಾಗುವುದಿಲ್ಲ.
15 ಜಿಬಿ ತುಂಬಿದ ಬಳಿಕ ಗೂಗಲ್ ವನ್ ಗೆ ಸಬ್‌ಸ್ಕ್ರೈಬ್ ಮಾಡಿಕೊಂಡು ಹೆಚ್ಚಿನ ಸ್ಪೇಸ್ ಕೊಂಡುಕೊಳ್ಳಬಹುದು. ಐಒಎಸ್, ಆಂಡ್ರಾಯ್ಡ್ ಮತ್ತು ವಿಂಡೋಸ್ ಈ ಮೂರರಲ್ಲಿ ಯಾವುದಾದರೂ ಒಂದರ ಮೂಲಕ ಗೂಗಲ್ ಒನ ಪ್ಲ್ಯಾನ್ ಗೆ ಸಬ್ಸ್ ಕ್ರೈಬ್ ಮಾಡಬಹುದು.
ಗೂಗಲ್ ಒನಲ್ಲಿ ಮೂರು ವಿಧದ ಸೇವಾ ಶುಲ್ಕ ಗಳಿವೆ.
ತಿಂಗಳಿಗೆ 130 ರೂ ಪಾವತಿ ಮಾಡಿದರೆ 100 ಜಿಬಿ ಸ್ಟೋರೆಜ್ ಸ್ಪೇಸ್, ತಿಂಗಳಿಗೆ 210 ರೂ ಪಾವತಿ ಮಾಡಿದರೆ 100 ಜಿಬಿ ಸ್ಟೋರೆಜ್ ಸ್ಪೇಸ್ ಹಾಗೂ ತಿಂಗಳಿಗೆ 650 ರೂ ಪಾವತಿ ಮಾಡಿದ್ದಲ್ಲಿ 2 ಟಿಬಿ ಸ್ಟೋರೆಜ್ ಸ್ಪೇಸ್ ಸಿಗುತ್ತದೆ. ಒಂದು ಪ್ಲ್ಯಾನ್ ನನ್ನು 5 ಜನರೊಂದಿಗೆ ಹಂಚಿಕೊಳ್ಳಬಹುದಾಗಿರುವುದು ವಿಶೇಷ.
-ಸಿದ್ಧಾರ್ಥ್ ಎಸ್. ಗೋಕಾಕ್
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
You seem to have an Ad Blocker on.
To continue reading, please turn it off or whitelist Udayavani.