IPL ಆರಂಭದ ಮುನ್ನಾದಿನ Paytmಗೆ ಶಾಕ್‌ ಕೊಟ್ಟಿದ್ದು ಯಾಕೆ ಗೊತ್ತಾ?


Team Udayavani, Sep 18, 2020, 7:30 PM IST

PaytmGPlay

ಮಣಿಪಾಲ: ಗೂಗಲ್‌ ತನ್ನ ಪ್ಲೇ ಸ್ಟೋರ್‌ನಿಂದ ಹೋಮ್‌ ಡಿಜಿಟಲ್‌ ಪಾವತಿ ಅಪ್ಲಿಕೇಶನ್‌ Paytm ಅನ್ನು ತೆಗೆದುಹಾಕಿದೆ. ಹೀಗಾಗಿ ಹೊಸ ಡೌನ್‌ಲೋಡ್‌‌ಗಳು ಅಥವಾ ಅಪ್‌ಲೋಡ್‌ಗಳು ತಾತ್ಕಾಲಿಕವಾಗಿ ಲಭ್ಯವಿಲ್ಲ ಎಂದು ಪೇಟಿಎಂ ಶುಕ್ರವಾರ ಟ್ವೀಟ್‌ ಮಾಡಿದೆ. ಆದರೆ ನಾವು ಶೀಘ್ರದಲ್ಲೇ ಹಿಂತಿರುಗುತ್ತೇವೆ. ನಿಮ್ಮ ಎಲ್ಲ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ. ಮಾತ್ರವಲ್ಲದೇ ಈ ಹಿಂದಿನಂತೆ ನೀವು ಅದನ್ನು ಬಳಸಬಹುದು ಎಂದು ಕಂಪನಿ ಹೇಳಿದೆ.

ಆನ್‌ಲೈನ್‌ ದಂದೆ!
ಮತ್ತೊಂದೆಡೆ, ಭಾರತದಲ್ಲಿ ಫ್ಯಾಂಟಸಿ ಕ್ರಿಕೆಟ್‌, ಆನ್‌ಲೈನ್‌ ಕ್ಯಾಸಿನೊಗಳು ಮತ್ತು ಇತರ ಜೂಜಿನ ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ ಅನುಮತಿಸುವುದಿಲ್ಲ ಎಂದು ಗೂಗಲ್‌ ಹೇಳಿದೆ. ಯಾರಾದರೂ ಇದನ್ನು ಮಾಡಿದರೆ ಅದು ನೀತಿಯ ಉಲ್ಲಂಘನೆಯಾಗಿದ್ದು, ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.

ಆನ್‌ಲೈನ್‌ ಕ್ಯಾಸಿನೊಗೆ ಅವಕಾಶ ಇಲ್ಲ
ಅಕ್ರಮ ಜೂಜಾಟ, ಆನ್‌ಲೈನ್‌ ಕ್ಯಾಸಿನೊಗಳು ಮತ್ತು ಕ್ರೀಡಾ ಬೆಟ್ಟಿಂಗ್‌ಗಳಿಗೆ ಅನುಕೂಲ ಮಾಡಿಕೊಡಲು ಸಾಧ್ಯವಿಲ್ಲ ಎಂದು ಗೂಗಲ್‌ ಹೇಳಿದೆ. ಅಪ್ಲಿಕೇಶನ್‌ ಗೂಗಲ್‌ ಪ್ಲೇಸ್ಟೋರ್‌ನಲ್ಲಿನ ನೀತಿಗಳನ್ನು ಉಲ್ಲಂ ಸಿದಾಗ, ನಾವು ಡೆವಲಪರ್‌ಗೆ ತಿಳಿಸುತ್ತೇವೆ. ಆ್ಯಪ್‌ನವರು ಬದಲಾವಣೆಗಳನ್ನು ಮಾಡುವವರೆಗೆ ಅಪ್ಲಿಕೇಶನ್‌ ಅನ್ನು ಪ್ಲೇ ಸ್ಟೋರ್‌ನಿಂದ ಹೊರಗಿಡಲಾಗುತ್ತದೆ ಎಂದು ಹೇಳಿದ್ದಾರೆ.

Google Pay ಗೆ Paytm ಸ್ಪರ್ಧೆ !
Paytm ದೇಶದ ದೊಡ್ಡ ಆರಂಭಿಕ ಉದ್ಯಮಗಳಲ್ಲಿ ಒಂದಾಗಿದೆ. ಗೂಗಲ್‌ನ ಪಾವತಿ ಪ್ಲಾಟ್‌ಪಾರ್ಮ್ ‌ Google Payನಿಂದ Paytm ನೇರ ಸ್ಪರ್ಧೆಯನ್ನು ಸಹ ಹೊಂದಿದೆ. ಮಾರ್ಚ್‌ 31ಕ್ಕೆ ಕೊನೆಗೊಂಡ 2019-20ರ ಆರ್ಥಿಕ ವರ್ಷದಲ್ಲಿ ಪೇಟಿಎಂ ಆದಾಯ 3 ಸಾವಿರ 629 ಕೋಟಿ ರೂ.ಗೆ ಏರಿಕೆಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

5 ಕೋಟಿ ವರೆಗೆ ಗೆಲ್ಲಲು ಪೇಟಿಎಂ ನಗದು ಕೊಡುಗೆ
Paytm First Games ಯೋಜನೆ ಅಡಿ ಪೇಟಿಯಂನಲ್ಲಿ 5 ಕೋಟಿ ರೂ. ಗೆಲ್ಲಬಹುದಾಗಿದೆ. ಇದು ಆಟಗಾರರಿಗೆ ನಗದನ್ನು ನೀಡುತ್ತದೆ. ಈ ವೇದಿಕೆಯಲ್ಲಿ ರಮ್ಮಿ, ಫ್ಯಾಂಟಸಿ, ಲುಡೋ ಮತ್ತು ಇತರ ರೀತಿಯ ಮಲ್ಟಿ-ಪ್ಲೇಯರ್‌ ಆಟಗಳನ್ನು ಆಡಬಹುದಾಗಿದೆ. ಮಾಹಿತಿಯ ಪ್ರಕಾರ ವಿಶೇಷ ಪಂದ್ಯಾವಳಿಯಲ್ಲಿ ಆಟಗಾರರು ಪ್ರತಿದಿನ ಒಂದು ಲಕ್ಷ ರೂಪಾಯಿಗಳನ್ನು ಗೆಲ್ಲಬಹುದು.

ಇನ್ನೂ Paytm ಸಂಬಂಧಿ ಅಪ್ಲಿಕೇಶನ್ಸ್‌ ಇವೆ
ಗೂಗಲ್‌ಕಚyಠಿಞ ಪಾವತಿ ಅಪ್ಲಿಕೇಶನ್‌ ಅನ್ನು ಪ್ಲೇ ಸ್ಟೋರ್‌ನಿಂದ ಮಾತ್ರ ತೆಗೆದುಹಾಕಿದೆ. ಇತರ ಕಚyಠಿಞಅಪ್ಲಿಕೇಶನ್‌ಗಳು ಪ್ಲೇ ಸ್ಟೋರ್‌ನಲ್ಲಿ ಇನ್ನೂ ಲಭ್ಯವಿದೆ. ಇದರಲ್ಲಿ Paytm Mall, Paytm for Business, Paytm Money, Paytm Instore Orders, Paytm Insider and Paytm Store Manager ಸೇರಿವೆ.

ಐಪಿಎಲ್‌ ಮೊದಲು ಪೇಟಿಎಂಗೆ ದೊಡ್ಡ ಆಘಾತ
ಐಪಿಎಲ್‌ನ ಜನಪ್ರಿಯತೆಯನ್ನು ಪರಿಗಣಿಸಿ Paytm ಇತ್ತೀಚೆಗೆ Paytm First Games ಆ್ಯಪ್‌ ಅನ್ನು ಬಿಡುಗಡೆ ಮಾಡಿತ್ತು. Paytm First Games ಗೇಮಿಂಗ್‌ ಮೂಲಕ ಐಪಿಎಲ್‌ ಸಮಯದಲ್ಲಿ 100 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಸಂಗ್ರಹಿಸುವ ಗುರಿಯನ್ನು ಹೊಂದಿತ್ತು. ಮುಂದಿನ 6 ತಿಂಗಳಲ್ಲಿ 200ಕ್ಕೂ ಹೆಚ್ಚು ಲೈವ್‌ ಈವೆಂಟ್‌ಗಳನ್ನು ಆಯೋಜಿಸಲು ಕಂಪನಿಯು ಯೋಜಿಸಿತ್ತು. ಪೇಟಿಎಂ ಈ ವಾರ ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡೂಲ್ಕರ್‌ ಅವರನ್ನು ಪೇಟಿಎಂ ಮೊದಲ ಕ್ರೀಡಾಕೂಟ (Paytm First Games) ದ ಬ್ರಾಂಡ್‌ ಅಂಬಾಸಿಡರ್‌ ಆಗಿ ಮಾಡಿದೆ. Paytm First Games ನಲ್ಲಿ 50ಕ್ಕೂ ಹೆಚ್ಚು ಆಟಗಳು ಲಭ್ಯವಿದೆ.

ಮತ್ತೆ ಲಭ್ಯವಾಗಬಹುದೇ?
ಸದ್ಯ ಇಂತಹ ಪ್ರಶ್ನೆಗಳು ಕಾಡುತ್ತಿದೆ. ಗೋಗಲ್‌ ಪ್ಲೇ ಸ್ಟೋರ್‌ನ ನಿಬಂಧನೆಗಳನ್ನು ನೋಡುವುದಾದರೆ ಅಪ್ಲಿಕೇಶನ್‌ಗಳು ತನ್ನ ನಿಯಮಗಳನ್ನು ಮೀರುವುದು ಕಂಡು ಬಂದರೆ ಅಂತಹ ಅಪ್ಲಿಕೇಶನ್‌ಗಳ ಡೆವಲಪರ್‌ಗಳು ಅಥವಾ ತಯಾರಕರಿಗೆ ಸೂಚನೆ ನೀಡಲಾಗುತ್ತದೆ. ಸೂಚನೆಯ ಹೊರತಾಗಿಯೂ ಇದು ಮುಂದುವರೆದರೆ ಅಂತಹ ಅಪ್ಲಿಕೇಶನ್‌ಗಳನ್ನು ಅನಿರ್ಧಿಷ್ಟ ಅವಧಿಗೆ ಬ್ಯಾನ್‌ ಮಾಡಲಾಗುತ್ತದೆ. ಇಲ್ಲಿ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಆ ಅಪ್ಲಿಕೇಶನ್‌ ಲಭ್ಯವಿರುವುದಿಲ್ಲ. ತನ್ನ ವರ್ತನೆಯನ್ನು ತಿದ್ದುಕೊಂಡು ಅಪ್ಲಿಕೇಶನ್‌ ಮತ್ತೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಜಾಗ ಪಡೆದುಕೊಳ್ಳಬಹುದು. ಈಗಾಗಲೇ ಗೂಗಲ್‌ ನೀಡಿರುವ ಸೂಚನೆಯನ್ನು ಪೇಟಿಯಂ ಪಾಲಿಸಿ ಮತ್ತೆ ಪ್ಲೇ ಸ್ಟೋರ್‌ ನಲ್ಲಿ ಕಾಣಿಸಿಕೊಳ್ಳಬಹುದಾಗಿದೆ.

 

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಇದೀಗ ಜಿಯೋ ಹಾಟ್‌ಸ್ಟಾರ್‌

JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಇದೀಗ ಜಿಯೋ ಹಾಟ್‌ಸ್ಟಾರ್‌

drdo

DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್‌ ಪರೀಕ್ಷೆ ಯಶಸ್ವಿ

PM-Modi-Paris

AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್

GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.