ಮಧ್ಯಾಹ್ನ ಕಾಣೆಯಾಗಿ ಸಂಜೆಯ ವೇಳೆ Google’s Play Storeನಲ್ಲಿ ಪ್ರತ್ಯಕ್ಷವಾದ Paytm !
Team Udayavani, Sep 18, 2020, 7:44 PM IST
ಮಣಿಪಾಲ: ಪೇಮೆಂಟ್ ಆ್ಯಪ್ ಪೇಟಿಎಂ ಅಚ್ಚರಿ ಎಂಬಂತೆ ಗೂಗಲ್ ಪ್ಲೇ ಸ್ಟೋರ್ ನಿಂದ ಕಣ್ಮರೆಯಾಗಿತ್ತು. ಇದೀಗ ಮತ್ತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. ಇದಕ್ಕೆ ಸಂಬಂಧಿಸಿದಂತೆ Update: And we’re back! ಎಂದು Paytm ಟ್ವೀಟ್ ಮಾಡಿದೆ.
One 97 Communication Ltd. ಪೇಟಿಎಂ ಮಾಲಿಕತ್ವವನ್ನು ಹೊಂದಿದ್ದು, ಬೆಳಗ್ಗೆ ತನ್ನ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಈ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ರಿಮೂವ್ ಮಾಡಲಾಗಿತ್ತು.
ಈ ಕುರಿತು ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿದ ಪೇಟಿಎಂ “ಪೇಟಿಎಂ ಆ್ಯಂಡ್ರಾಯ್ಡ್ ಆ್ಯಪ್ ತಾತ್ಕಲಿಕವಾಗಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿಲ್ಲ. ಮಾತ್ರವಲ್ಲದೆ ಯಾವುದೇ ಹೊಸ ಅಪ್ ಡೆಟ್ ಗಳು ಕೂಡ ದೊರಕುವುದಿಲ್ಲ. ಶೀಘ್ರದಲ್ಲಿ ವಾಪಾಸಾಗುತ್ತೇವೆ. ನಿಮ್ಮ ಎಲ್ಲಾ ಪಾವತಿ ಸೇವೆಗಳು ಸಂಪೂರ್ಣ ಭದ್ರವಾಗಿದೆ’ ಎಂದಿತ್ತು.
Dear Paytm’ers,
Paytm Android app is temporarily unavailable on Google’s Play Store for new downloads or updates. It will be back very soon.
All your money is completely safe, and you can continue to enjoy your Paytm app as normal.
— Paytm (@Paytm) September 18, 2020
IPL ಆರಂಭದ ಮುನ್ನಾದಿನ Paytmಗೆ ಶಾಕ್ ಕೊಟ್ಟಿದ್ದು ಯಾಕೆ ಗೊತ್ತಾ?
ಕೆಲವೊಂದು ಸಂಭಾವ್ಯ ಹಾನಿಯಿಂದ ಬಳಕೆದಾರರನ್ನು ರಕ್ಷಿಸಲು ಹೊಸ ನೀತಿಗಳನ್ನು ಜಾರಿಗೆ ತರಲಾಗಿದೆ. ಯಾವುದೇ ಅಪ್ಲಿಕೇಶನ್ ಗಳು ಈ ನೀತಿಗಳನ್ನು ಉಲ್ಲಂಘಿಸಿದಾಗ, ಅದರ ಡೆವಲಪರ್‌ಗೆ ಮಾಹಿತಿ ನೀಡುತ್ತೇವೆ. ಆದರೇ ಆ್ಯಪ್ ಡೆವಲಪರ್ ಗಳು ಈ ನೀತಿಗಳನ್ನು ಅನುಸರಿಸದಿದ್ದರೇ ಪ್ಲೇಸ್ಟೋರ್ ನಿಂದ ಅವನ್ನು ತೆಗೆದುಹಾಕಲಾಗುವುದು. ಹೊಸ ನೀತಿಗಳನ್ನು ಅಳವಡಿಸಿಕೊಂಡರೇ ಮಾತ್ರ ಅಂತಹ ಆ್ಯಪ್ ಗಳಿಗೆ ಪ್ಲೇಸ್ಟೋರ್ ನಲ್ಲಿ ಜಾಗವಿರುತ್ತದೆ. ಅದಾಗ್ಯೂ 2ನೇ ಬಾರಿ ಗೂಗಲ್ ನಿಯಮ ಉಲ್ಲಂಘಿಸಿದರೇ ಹೆಚ್ಚು ಗಂಭೀರವಾದ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಗೂಗಲ್ ಆ್ಯಂಡ್ರಾಯ್ಡ್ ಸೆಕ್ಯೂರಿಟಿ ಮತ್ತು ಪ್ರೈವಸಿಯ ಉಪಾಧ್ಯಕ್ಷ ಸುಝಾನೆ ಫ್ರೇ ಈ ಬೆಳವಣಿಗೆ ಬಳಿಕ ಮಾಹಿತಿ ನೀಡಿದ್ದರು.
Update: And we’re back! ?
— Paytm (@Paytm) September 18, 2020
ಆನ್ ಲೈನ್ ಕ್ಯಾಸಿನೋ ಮತ್ತು ಜೂಜು ಅಥವಾ ಸ್ಪೋರ್ಟ್ಸ್ ಬೆಟ್ಟಿಂಗ್ ಕುರಿತಾದ ಆ್ಯಪ್ ಗಳನ್ನು ಗೂಗಲ್ ಪ್ರೋತ್ಸಾಹಿಸುವುದಿಲ್ಲ. ಇಂತಹ ಆ್ಯಪ್ ಗಳ ಜಾಹೀರಾತು ಅಥವಾ ಲಿಂಕ್ ಹಂಚಿಕೊಳ್ಳುವುದು ಹಾಗೂ ಥರ್ಢ್ ಪಾರ್ಟಿ ಆ್ಯಪ್ ಗಳಿಗೆ ಬಳಕೆದಾರರನ್ನು ಸೆಳೆಯುವುದು ಗೂಗಲ್ ಪಾಲಿಸಿಯ ಉಲ್ಲಂಘನೆಯಾಗುತ್ತದೆ ಎಂದಿತ್ತು ಗೂಗಲ್ ಪ್ಲೇ ಸ್ಟೋರ್.
ಈ ಕಾರಣಕ್ಕಾಗಿ ಪೇಟಿಎಂ ಅಪ್ಲಿಕೇಶನ್ ನನ್ನು ರಿಮೂವ್ ಮಾಡಲಾಗಿತ್ತು. ಪೇಟಿಎಂ ಭಾರತೀಯ ಮೂಲದ ಕಂಪೆನಿ One 97 Communication Ltd. ಮಾಲಿಕತ್ವವನ್ನು ಹೊಂದಿದ್ದು, ವಿಜಯ್ ಶಂಕರ್ ಶರ್ಮಾ ಇದರ ಸಂಸ್ಥಾಪಕರಾಗಿದ್ದಾರೆ. ಈ ಕಂಪೆನಿ ಚೀನಾದ ಆಲಿಬಾಬ ಗ್ರೂಪ್ ನ ಮಿತ್ರ ಸಂಸ್ಥೆ fintech firm Ant Financials ನಿಂದ ಭಾರೀ ಹಣವನ್ನು ಪಡೆದಿದೆ ಎಂದು ವರದಿಗಳು ಈ ಬೆಳವಣಿಗೆ ಬಳಿಕ ಹರಿದಾಡುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.