ಬ್ಯಾಂಕುಗಳ ಖಾಸಗೀಕರಣ.. ಏನೇನು ಬದಲಾಗಬಹುದು?
Team Udayavani, Apr 19, 2021, 1:03 PM IST
ಬ್ಯಾಂಕುಗಳ ರಾಷ್ಟ್ರೀಕರಣವಾಗಿ 52ವರ್ಷಗಳಾಗಿದೆ. ಈಗ ಕಾಲಚಕ್ರ ಒಮ್ಮೆ ಹಿಂದಕ್ಕೆತಿರುಗಿದೆ. ಎಲ್ಲರಿಗೂ ಅಚ್ಚರಿಯಾಗುವರೀತಿಯಲ್ಲಿ ಬ್ಯಾಂಕಿಂಗ್ ಉದ್ಯಮವೀಗ ಖಾಸಗೀಕರಣದತ್ತ ವಾಲುತ್ತಿದೆ. ಸಾರ್ವಜನಿಕರಂಗದ ಬ್ಯಾಂಕುಗಳ ಖಾಸಗೀಕರಣಕ್ಕೆ ಪೂರ್ವಭಾವಿ ಸಮಾಲೋಚನೆಯನ್ನುಹಣಕಾಸು ಮಂತ್ರಾಲಯ ಮತ್ತು ರಿಸರ್ವ್‌ಬ್ಯಾಂಕ್ ಆರಂಭಿಸಿದೆ ಎಂಬರ್ಥದಮಾತುಗಳನ್ನು ಕೇಂದ್ರ ವಿತ್ತ ಸಚಿವರೇಹೇಳಿದ್ದಾರೆ ಎನ್ನಲಾಗುತ್ತಿದ್ದು, ಬ್ಯಾಂಕ್ ಸಿಬ್ಬಂದಿ,ಕಾರ್ಮಿಕ ಸಂಘಗಳ ಮುಖಂಡರು, ಗ್ರಾಹಕರುಮತ್ತು ವ್ಯಾಪಾರೋದ್ಯಮ ಸಂಸ್ಥೆಗಳುಮುಂದಿನ ಬೆಳವಣಿಗೆಯನ್ನು ಕುತೂಹಲದಿಂದ ಗಮನಿಸುತ್ತಿವೆ.
ಏನೇನು ಬದಲಾವಣೆ ಅಗಬಹುದು?
ಬ್ಯಾಂಕುಗಳ ಖಾಸಗೀಕರಣ ಪ್ರಕ್ರಿಯೆ ನಿಜಕ್ಕೂ ನಡೆದರೆ, ಆನಂತರದಲ್ಲಿ ಬ್ಯಾಂಕ್‌ಗಳಲ್ಲಿ ಸರ್ಕಾರದ ಹೂಡಿಕೆ- ಪಾಲುಗಾರಿಕೆ ಶೇ.50ಇಳಿಯತ್ತದೆ. ಖಾಸಗಿ ಬ್ಯಾಂಕುಗಳಲ್ಲಿ ಲಾಭವೇಮುಖ್ಯ ಆಗಿರುವುದರಿಂದ ಪ್ರತಿ ಶಾಖೆಯ ಮರು ಸಮೀಕ್ಷೆ ನಡೆಯಬಹುದು.
ಲಾಭಗಳಿಸದ ಮತ್ತು ಬ್ಯಾಲೆನ್ಸ್ ಶೀಟ್ ಗೆಹೊರೆಯಾದ ಶಾಖೆಗಳನ್ನು ಮುಚ್ಚಬಹುದುಅಥವಾ ಅವನ್ನು ಮತ್ತೂಂದು ಬ್ಯಾಂಕ್ ನಲ್ಲಿವಿಲೀನಗೊಳಿಸಬಹುದು. ನಿರ್ವಹಣಾ ವೆಚ್ಚತಗ್ಗಿಸಲು ಈಗ ಖಾಯಂ ಸಿಬ್ಬಂದಿಕಾರ್ಯನಿರ್ವಹಿಸುತ್ತಿರುವ ಹಲವುಕೆಲಸಗಳನ್ನು ಹೊರಗುತ್ತಿಗೆಗೆ ನೀಡಬಹುದು.ಬ್ಯಾಂಕ್ ಶಾಖೆಗಳು ಕಾರ್ಪೋರೇಟ್ ಲುಕ್‌ಪಡೆಯಬಹುದು. ಈಗಿರುವ ಜಿಲ್ಲಾ ಶಾಖೆ,ಪ್ರಾದೇಶಿಕ ಶಾಖೆಗಳಂಥ ಕಂಟ್ರೋಲಿಂಗ್‌ಆಫೀಸುಗಳ ಸಂಖ್ಯೆ ಕಡಿಮೆ ಆಗಬಹುದು.ಹಾಗೆಯೇ ದುಬಾರಿ ಸಂಬಳದ ಹಲವುಹು¨ªೆಗಳು ಕಡಿಮೆಯಾಗಬಹುದು.
ಬ್ಯಾಂಕ್‌ಶಾಖೆಗಳು ಇಲ್ಲದ ಸ್ಥಳದಲ್ಲಿ ಶಾಖೆ ತೆರೆಯುವಪರಿಕಲ್ಪನೆ ನೇಪಥ್ಯಕ್ಕೆ ಸರಿದು, ಬಿಜಿನೆಸ್ ಹೆಚ್ಚಿರುವ ಮತ್ತು ಬ್ಯಾಂಕ್ ಗೆ ಹೆಚ್ಚು ಲಾಭ ತರುವಸ್ಥಳಗಳಲ್ಲಿ ಮಾತ್ರ ಶಾಖೆಗಳನ್ನುತೆರೆಯಬಹುದು. ಖಾಸಗಿ ಬ್ಯಾಂಕುಗಳುಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗಿಂತಹೆಚ್ಚು ಲಾಭ ಗಳಿಸಬಹುದು.ಸಾಮಾಜಿಕ ಬ್ಯಾಂಕ್‌ಕಲ್ಪನೆ ಕ್ರಮೇಣಹಿನ್ನೆಲೆಗೆ ಸರಿದುಕಮರ್ಷಿಯಲ್‌ಬ್ಯಾಂಕ್‌ಮುನ್ನೆಲೆಗೆಬರಬಹುದು.ಈವರೆಗೆಬ್ಯಾಂಕ್‌ಶುಲ್ಕ, ಠೇವಣಿಮತ್ತುಬಡ್ಡಿದರದಮೇಲೆ ಸರ್ಕಾರನಿಯಂತ್ರಣಹೊಂದಿದ್ದು ಅದು ಕಳಚಿಮಾರ್ಕೆಟ್ ರಿಲೇಟೆಡ್ ಬಡ್ಡಿದರಮತ್ತು ಶುಲ್ಕಗಳು ಜಾರಿಗೆ ಬರಬಹುದು. ಸಾಲಮನ್ನಾ, ಏಕಬಾರಿ ತೀರುವಳಿಗಳು ಇತಿಹಾಸದಪುಟ ಸೇರಿ ನೇರ, ದೃಢ ಮತ್ತು ತ್ವರಿತ ಸಾಲವಸೂಲಿ ಪ್ರಕ್ರಿಯೆ ಜಾರಿಗೆ ಬರಬಹುದು.
ಮಾನವ ಸಂಪನ್ಮೂಲ ವಿಷಯದಲ್ಲಿ…
ಖಾಸಗೀಕರಣದ ನಂತರ ಮಾನವಸಂಪನ್ಮೂಲದ ವಿಚಾರದಲ್ಲಿ ಭಾರೀ ಬದಲಾವಣೆಆಗಬಹುದು. ಸಾರ್ವಜನಿಕ ರಂಗದಬ್ಯಾಂಕುಗಳಲ್ಲಿ ಇರುವ ನೌಕರಿ ಭದ್ರತೆಕನಸಾಗಬಹುದು. ಈವರೆಗೆ ಸಿಬ್ಬಂದಿಗಳ ಸೇವೆಮತ್ತು ಸೌಲಭ್ಯಗಳು, ಅಧಿಕಾರವರ್ಗ ಮತ್ತುಸಿಬ್ಬಂದಿಗಳ ಮದ್ಯದ ದ್ವಿಪಕ್ಷೀಯ ಒಪ್ಪಂದದಮೇರೆಗೆ ಆಗುತ್ತಿದ್ದವು. ಮುಂದಿನ ದಿನಗಳಲ್ಲಿಇದು ಮ್ಯಾನೇಜ್ ಮೆಂಟ್‌ನ ಏಕಪಕ್ಷೀಯನಿರ್ಧಾರಕ್ಕೆ ಒಳಗಾಗಬಹುದು. ಸಂಬಳ-ಸೌಲಭ್ಯಗಳು ನೌಕರರ ಹಕ್ಕಾಗದೇ ಸಾಧನೆಯಕುಣಿಕೆಗೆ ಸಿಕ್ಕಿ ಹಾಕಿಕೊಳ್ಳಬಹುದು. ಸಿಬ್ಬಂದಿಗಳುಇಷ್ಟವಿದ್ದರೆ ಇರಬಹುದು, ಇಲ್ಲವಾಗದೆ ಎದ್ದುಹೋಗಬಹುದು ಎನ್ನುವ ನಿಯಮವನ್ನುಮ್ಯಾನೇಜ್ ಮೆಂಟ್ ಜಾರಿಗೆತರಬಹುದು.
ಈಗವೇತನ ಪರಿಷ್ಕರಣೆ ಐದು ವರ್ಷಕೊಮ್ಮೆ ಅಗುತ್ತಿದ್ದು, ಈವ್ಯವಸ್ಥೆ ಮುಂದುವರಿಯಬಹುದೇ ಹೋಗಬಹುದು. ಮ್ಯಾನೇಜ್‌ಮೆಂಟ್‌ನೀಡಿದಾಗ ಮತ್ತುನೀಡಿದಷ್ಟನ್ನು ಸ್ವೀಕರಿಸುವಪರಿಸ್ಥಿತಿ ಬರಬಹುದು.ಬ್ಯಾಂಕ್ ನೇಮಕಾತಿಗಳಲ್ಲಿ ಮತ್ತುಬಡ್ತಿಗಳಲ್ಲಿ ಅರ್ಹತೆಯೇ ಮಾನದಂಡವಾಗಬಹುದು.
ಹಾಗೆಯೇ ಪ್ರಭಾವಮತ್ತು ವಶೀಲಿ ಇನ್ನೊಂದು ರೂಪದಲ್ಲಿಅನಾವರಣಗೊಳ್ಳಬಹುದು. ಬ್ಯಾಂಕ್ ಕೆಲಸದಅವಧಿ ಬದಲಾಗಬಹುದು. ಹಾಗೆಯೇ ಕಡಿಮೆಸಿಬ್ಬಂದಿ, ಹೆಚ್ಚು ಕೆಲಸ ನಿಯಮವೂ ಜಾರಿಗೆಬರಬಹುದು. ಭಾರತೀಯ ರೈಲ್ವೆ ನಂತರ ಅತಿದೊಡ್ಡ ಕಾರ್ಮಿಕ ಶಕ್ತಿ ಎಂದು ಕರೆಸಿಕೊಳ್ಳುವಬ್ಯಾಂಕ್ ಕಾರ್ಮಿಕ ಸಂಘಗಳು ತಮ್ಮನೆಲೆಯನ್ನು ಕಳೆದುಕೊಳ್ಳಬಹುದು.
ವರೆಗೂಹೇಳಲಾದ ಬದಲಾವಣೆಗಳು ಬ್ಯಾಂಕ್ ಗಳಖಾಸಗೀಕರಣ ಪ್ರಕ್ರಿಯೆ ಶುರುವಾದದಿನದಿಂದಲೇ ಆಗುತ್ತವೆ ಎಂದು ಹೇಳಲಾಗದು.ಇವು ನಿಧಾನಕ್ಕೆ ಅಗಬಹುದು. ಕೆಲವುಆಗದಿರಬಹುದು, ಮತ್ತೆ ಕೆಲವು ಅಲ್ಪ ಸ್ವಲ್ಪಬದಲಾವಣೆಯೊಂದಿಗೆ ಆಗಬಹುದು
ರಮಾನಂದ ಶರ್ಮಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Mumbai Coast: ಗೇಟ್‌ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.