![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Apr 22, 2022, 2:54 PM IST
ಬೆಂಗಳೂರು: ಸ್ಮಾರ್ಟ್ ವಾಚ್ ಗಳು ಎಂದರೆ ದುಬಾರಿ ಎಂಬಂತಾಗಿದ್ದು, ಬಜೆಟ್ ದರದಲ್ಲಿ ಹಲವು ವೈಶಿಷ್ಟ್ಯಗಳುಳ್ಳ ಪಿಟ್ರಾನ್ ಫೋರ್ಸ್ ಎಕ್ಸ್ 11 (pTron ForceX11) ಸ್ಮಾರ್ಟ್ ವಾಚನ್ನು ಪಿಟ್ರಾನ್ ಹೊರತಂದಿದೆ.
ಇದರ ದರ 2,799 ರೂ. ಆಗಿದ್ದು ಅಮೆಜಾನ್. ಇನ್ ನಲ್ಲಿ ಲಭ್ಯವಿದೆ. ಬಜೆಟ್ ದರಕ್ಕೆ ಹೆಚ್ಚಿನ ಸವಲತ್ತುಗಳನ್ನು ಈ ವಾಚ್ ಒದಗಿಸುತ್ತದೆ. ಆಂಡ್ರಾಯ್ಡ್ ಹಾಗೂ ಐಓಎಸ್ ಎರಡೂ ಆಪರೇಟಿಂಗ್ ವ್ಯವಸ್ಥೆಯುಳ್ಳ ಫೋನ್ ಗಳೊಡನೆ ಇದನ್ನು ಬಳಸಬಹುದು.
ಇದು 1.7 ಇಂಚಿನ ಎಚ್.ಡಿ. ಟಚ್ ಸ್ಕ್ರೀನ್ ಡಿಸ್‍ಪ್ಲೇ ಹೊಂದಿದೆ. ಬ್ಲೂಟೂತ್ ಕಾಲಿಂಗ್ ಸೌಲಭ್ಯ ಹೊಂದಿದೆ. ವಾಚಿನಲ್ಲಿ ಇನ್‍ಬಿಲ್ಟ್ ಮೈಕ್ರೋಫೋನ್ ಇದ್ದು, ಲಿಂಕ್ ಮಾಡಲಾದ ಫೋನಿಗೆ ಬಂದ ಕರೆಯನ್ನು ವಾಚ್‍ನಿಂದಲೇ ಸ್ವೀಕರಿಸಿ, ಮಾತನಾಡಬಹುದು. ಬಹುತೇಕ ಕಡಿಮೆ ಬೆಲೆಯ ವಾಚ್ ಗಳಲ್ಲಿ ಈ ಸೌಲಭ್ಯ ಇಲ್ಲ. ಅಲ್ಲದೇ ಮೊಬೈಲ್ ಗೆ ಬಂದ ಮೆಸೇಜ್, ವಾಟ್ಸಪ್ ನಂತಹ ಸಾಮಾಜಿಕ ಜಾಲತಾಣಗಳ ನೊಟಿಫಿಕೇಷನ್ ಅನ್ನು ವಾಚ್‍ನ ಪರದೆಯಲ್ಲೇ ನೋಡಬಹುದಾಗಿದೆ. ಲೋಹದ ಬಾಡಿ ಹೊಂದಿರುವುದು ಸಹ ವಿಶೇಷ.
ಹೃದಯ ಬಡಿತದ ಮೇಲ್ವಿಚಾರಣೆ, ರಕ್ತದಲ್ಲಿನ ಆಮ್ಲಜನಕ ಮಟ್ಟ ಮಾಪನ, ನಿದ್ರಾ ಸಮಯದ ಮಾಪನ ಸೇರಿದಂತೆ,ಆರೋಗ್ಯ ಸಂಬಂಧಿ ಮಾಪಕಗಳನ್ನು ಈ ಸ್ಮಾರ್ಟ್ ವಾಚ್ ಹೊಂದಿದೆ. ಐಪಿ68 ರೇಟಿಂಗ್ ಹೊಂದಿದ್ದು, ಧೂಳು, ಕೊಳೆ ಮತ್ತು ತುಂತುರು ನೀರು ನಿರೋಧಕವಾಗಿದೆ.
ಮ್ಯಾಗ್ನಟಿಕ್ ಚಾರ್ಜಿಂಗ್ ಹೊಂದಿದ್ದು, 3 ಗಂಟೆಗಳ ಕಾಲ ಚಾರ್ಜ್ ಮಾಡಿದರೆ 7 ದಿನಗಳ ಕಾಲ ಬ್ಯಾಟರಿ ಬಾಳಿಕೆ ಬರುತ್ತದೆ ಎಂದು ಕಂಪೆನಿ ತಿಳಿಸಿದೆ. ಇದು ಕಪ್ಪು, ನೀಲಿ ಹಾಗೂ ಪಿಂಕ್ ಬಣ್ಣದಲ್ಲಿ ಲಭ್ಯ.
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
You seem to have an Ad Blocker on.
To continue reading, please turn it off or whitelist Udayavani.