ಇಂದು ಭಾರತದಲ್ಲಿ ರಿಯಲ್ಮೆ 8, ರಿಯಲ್ಮೆ 8 ಪ್ರೊ ಬಿಡುಗಡೆ : ವಿಶೇಷತೆಗಳೇನು..?
Team Udayavani, Mar 24, 2021, 2:35 PM IST
ನವ ದೆಹಲಿ : ರಿಯಲ್ ಮಿ 8 ಸಿರೀಸ್ ಅನಾವರಣವು ಇಂದು(ಮಾರ್ಚ್ 24) ಭಾರತದಲ್ಲಿ ನಡೆಯಲಿದೆ. ಅನಾವರಣವು ಲೈವ್ ಸ್ಟ್ರೀಮ್ ಮೂಲಕ ನಡೆಯಲಿದೆ.
ಕಳೆದ ವರ್ಷ ರಿಯಲ್ ಮಿ 7 ಸಿರೀಸ್ ನ ನವೀಕರಣಗಳೊಂದಿಗೆ ರಿಯಲ್ ಮಿ 8 ಮತ್ತು ರಿಯಲ್ ಮಿ 8 ಪ್ರೊ ಇಂದು ಅನಾವರಣ ಆಗುವ ನಿರೀಕ್ಷೆಯಿದೆ. ರಿಯಲ್ ಮಿ 8 ಸಿರೀಸ್ ಸೂಪರ್ ಅಮೋಲೆಡ್ ಡಿಸ್ಪ್ಲೇ ಮತ್ತು ಸ್ಪೀಡ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ.
ಓದಿ : ಆಸ್ಟ್ರೇಲಿಯಾದಲ್ಲಿ ಭಾರೀ ಮಳೆ : ಮನೆಗೆ ನುಗ್ಗುತ್ತಿವೆ ಹಾವು-ಜೇಡಗಳು!
ರಿಯಲ್ ಮಿ 8 ಸಿರೀಸ್ ನ ಅನಾವರಣ ಲೈವ್ ಸ್ಟ್ರೀಮ್ ಸಂಜೆ 7: 30 ಕ್ಕೆ ಪ್ರಾರಂಭವಾಗಲಿದೆ. ರಿಯಲ್ ಇಂಡಿಯಾ ಅಧಿಕೃತ ಯೂಟ್ಯೂಬ್ ಚಾನೆಲ್ ಮೂಲಕ ಲೈವ್ ಸ್ಟ್ರೀಮ್ ಆಗುತ್ತದೆ.
ರಿಯಲ್ ಮಿ 8 ಮತ್ತು ರಿಯಲ್ ಮಿ 8 ಪ್ರೊ ಇಂಡಿಯಾದ ಬೆಲೆ ವಿವರಗಳನ್ನು ಕಂಪನಿಯು ಇನ್ನೂ ಪ್ರಕಟಿಸಿಲ್ಲ. ಆದರೆ, ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಬಿಡುಗಡೆಗೊಂಡ ರಿಯಲ್ ಮಿ 7 ಸಿರೀಸ್ ನ್ನು ರೂ. 14,999 ಗೆ ನೀಡಿತ್ತು, ರಿಯಲ್ ಮಿ 8 ಸಿರೀಸ್ ಕೂಡ ಸಿರೀಸ್ 7 ನ ಆಸು ಪಾಸಿನ ಬೆಲೆಯಲ್ಲಿ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ರಿಯಲ್ ಮಿ 8 ಬೆಲೆ 15,000 ರೂ. ಹಾಗೂ ರಿಯಲ್ ಮಿ 8 ಪ್ರೊ ಎಲ್ಲೋ ರೂ. 25,000 ರೂ ಇರಬಹುದು ಎಂದು ಅಂದಾಜಿಸಲಾಗಿದೆ.
ರಿಯಲ್ ಮಿ 8, ರಿಯಲ್ ಮಿ 8 ಪ್ರೊ ವಿಶೇಷತೆಗಳು :
ರಿಯಲ್ ಮಿ 8 ರಲ್ಲಿ 6.4 ಇಂಚಿನ ಸೂಪರ್ ಅಮೋಲೆಡ್ ಡಿಸ್ಪ್ಲೇ, ಮೀಡಿಯಾ ಟೆಕ್ ಹೆಲಿಯೊ ಜಿ 95 ಎಸ್ ಒ ಸಿ, 64 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್ ಹೊಂದಿರುವ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು 30 ಡಬ್ಲ್ಯೂ ಡಾರ್ಟ್ ಚಾರ್ಜ್ ಹೊಂದಿರುವ 5,000 ಎಮ್ ಎ ಹೆಚ್ ಬ್ಯಾಟರಿ ಇರುತ್ತದೆ ಎಂದು ರಿಯಲ್ ಮಿ ಈಗಾಗಲೇ ದೃಢಪಡಿಸಿದೆ.
ರಿಯಲ್ ಮಿ 8 ಪ್ರೊ 108 ಮೆಗಾಪಿಕ್ಸೆಲ್ ಸ್ಯಾಮ್ ಸಂಗ್ ಎಚ್ ಎಂ 2 ಪ್ರೈಮರಿ ಕ್ಯಾಮೆರಾ ಸೆನ್ಸಾರ್ ನೊಂದಿಗೆ ಬಿಡುಗಡೆಯಾಗಲು ಸಿದ್ಧವಾಗಿದೆ ಮತ್ತು 65W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ 4,500 ಎಮ್ ಎ ಹೆಚ್ ಬ್ಯಾಟರಿಯನ್ನು ಹೊಂದಿದೆ. ಈ ಸಿರೀಸ್ ನ ಉತ್ತಮ ಮಾದರಿಯು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 720 ಜಿ SoC ಅನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.
ಓದಿ : ತುಂಬಿ ತುಳುಕುತ್ತಿದೆ ಪ್ರಗತಿಯ ಕೊಡ : ಖಾನಾಪುರ ತಾಲೂಕಿನ ಮಾದರಿ ಗ್ರಾಪಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಹೊಸ ಸೇರ್ಪಡೆ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.