ರಿಯಲ್‌ಮಿಯಿಂದ ನಾರ್ಜೊ30 5ಜಿ ಮೊಬೈಲ್, ಸ್ಮಾರ್ಟ್ ಟಿವಿ , ಬಡ್‌ಸ್ ಕ್ಯೂ 2 ಬಿಡುಗಡೆ
Team Udayavani, Jun 26, 2021, 6:09 PM IST
ನವದಹಲಿ: ರಿಯಲ್‌ಮಿ ತನ್ನ ನಾರ್ಜೊ ಕುಟುಂಬಕ್ಕೆ ಹೊಸ ಇಬ್ಬರು ಸದಸ್ಯರನ್ನು ಸೇರ್ಪಡೆ ಮಾಡಿದೆ. ರಿಯಲ್‌ಮಿ ನಾರ್ಜೊ 30 5ಜಿ ಮತ್ತು ರಿಯಲ್‌ಮಿ ನಾರ್ಜೊ 30 ಮೊಬೈಲ್‌ಗಳು ನಾರ್ಜೊ ಫ್ಯಾಮಿಲಿ ಸೇರಿವೆ. ರಿಯಲ್‌ಮಿ ಸ್ಮಾರ್ಟ್ ಟಿವಿ ಫುಲ್ ಹೆಚ್‌ಡಿ 32’’ ಮತ್ತು ರಿಯಲ್‌ಮಿ ಬಡ್‌ಸ್ಕ್ಯೂ 2 ಇಯರ್ ಬಡ್‌ಗಳನ್ನು ಕಂಪೆನಿ ಹೊರತಂದಿದೆ.
ರಿಯಲ್‌ಮಿ ನಾರ್ಜೊ 30 5ಜಿ: ಮೊಬೈಲ್, ಮೀಡಿಯಾಟೆಕ್ ಡೈಮೆನ್ಸಿಟಿ 700 5ಜಿ ಪ್ರೊಸೆಸರ್ ಹೊಂದಿದೆ. 6.5 ಇಂಚಿನ ಪರದೆಯನ್ನು ಹೊಂದಿದ್ದು, ವೇಗದ ಸೈಡ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. 48 ಎಂಪಿ ಹೈರೆಸಲ್ಯೂಷನ್ ಪ್ರಾಥಮಿಕ ಕ್ಯಾಮೆರಾ, ಸೆಲ್ಫೀಗಾಗಿ 16 ಎಂಪಿ ಅಲ್ಟ್ರಾ-ಕ್ಲಿಯರ್ ಫ್ರಂಟ್ ಕ್ಯಾಮೆರಾವನ್ನು ಒಳಗೊಂಡಿದೆ. ಬೆಳ್ಳಿ ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯ. 6 ಜಿಬಿ+128 ಜಿಬಿ ಸ್ಟೋರೇಜ್ ಇದ್ದು, ಇದರ ದರ 15,999 ರೂ. ಜೂನ್ 30ರ ಮಧ್ಯಾಹ್ನ 12ರಿಂದ ರಿಯಲ್‌ಮಿ.ಕಾಮ್, ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ.
ರಿಯಲ್‌ಮಿ ನಾರ್ಜೊ 30: ಮೀಡಿಯಾ ಟೆಕ್ ಹೆಲಿಯೋ ಜಿ 95 ಗೇಮಿಂಗ್ ಪ್ರೊಸೆಸರ್. 5000ಎಂಎಹೆಚ್ ಬ್ಯಾಟರಿಯನ್ನು ಒಳಗೊಂಡಿದೆ ಮತ್ತು ಶಕ್ತಿಯುತ 30 ವ್ಯಾಟ್‌ಸ್ ಡಾರ್ಟ್ ಚಾರ್ಜರ್ ಹೊಂದಿದೆ.ಇದು ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಕೇವಲ 65 ನಿಮಿಷಗಳಲ್ಲಿ 0ರಿಂದ 100% ವರೆಗೆ ಚಾಜ್ ಮಾಡಲು ಅನುವು ಮಾಡಿಕೊಡುತ್ತದೆ. ಇದು 48 ಎಂಪಿ ಎಐ ತ್ರಿವಳಿ ಕ್ಯಾಮೆರಾವನ್ನು ಹೊಂದಿದ್ದು, ಸ್ಯಾಮ್‌ಸಂಗ್ ಲೆನ್‌ಸ್ ನ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ದರ: ರೂ. 12499 (4 ಜಿಬಿ+64ಜಿಬಿ) ಮತ್ತು ರೂ. 14499 (6ಜಿಬಿ+128ಜಿಬಿ) ಗೆ ಲಭ್ಯವಿದೆ. ಮೊದಲ ಮಾರಾಟ ಜೂನ್ 29, ಮಧ್ಯಾಹ್ನ 12 ರಿಂದ ರಿಯಲ್‌ಮಿ.ಕಾಮ್, ಫ್ಲಿಪ್‌ಕಾರ್ಟ್‌ನಲ್ಲಿ ದೊರಕುತ್ತದೆ.
ರಿಯಲ್‌ಮಿ ಸ್ಮಾರ್ಟ್ ಟಿವಿ ಫುಲ್ ಎಚ್‌ಡಿ 32’’ ಅಲ್ಟ್ರಾ-ಬ್ರೆಟ್ ಎಫ್‌ಹೆಚ್‌ಡಿ ಡಿಸ್‌ಪ್ಲೇ, ಅಲ್ಟ್ರಾ-ವಯಡ್ ಗ್ಯಾಮೆಟ್, 85% ಎನ್‌ಟಿಎಸ್‌ಸಿ ವರೆಗೆ 16.7 ಮಿಲಿಯನ್ ಬಣ್ಣಗಳನ್ನು ನೀಡುತ್ತದೆ. ಬೆಝೆಲ್ ಲೆಸ್ ವಿನ್ಯಾಸವನ್ನು ಒಳಗೊಂಡಿದೆ. 4 ಸ್ಪೀಕರ್‌ಗಳನ್ನೊಳಗೊಂಡಿದ್ದು, ಮಿಡಿಯಾಟೆಕ್ ಪ್ರೊಸೆಸರ್ ಹೊಂದಿದೆ.
ಇದರ ಬೆಲೆ ರೂ. 18999. ಮೊದಲ ಮಾರಾಟ ಜೂನ್ 29ರಂದು, ಮಧ್ಯಾಹ್ನ 12ರಿಂದ ರಿಯಲ್‌ಮಿ.ಕಾಮ್, ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗಲಿದೆ.
ರಿಯಲ್ ಮಿ ಬಡ್‌ಸ್ ಕ್ಯೂ2: ನಾಯ್‌ಸ್ ಕ್ಯಾನ್ಸಲೇಷನ್ ಸೌಲಭ್ಯ ಇರುವ ಟ್ರೂ ವೈರ್ ಲೆಸ್ ಇಯರ್‌ಬಡ್‌ಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ. 10 ಮಿ.ಮಿ. ಬಾಸ್ ಬೂಸ್‌ಟ್ ಇರುವ ಸ್ಪೀಕರ್‌ಗಳಿವೆ. ಇಯರ್‌ಬಡ್ ಮೇಲೆ ಟಚ್ ಮಾಡುವ ಮೂಲಕ ಕರೆ ಸ್ವೀಕಾರ ಅಥವಾ ರದ್ದು ಮಾಡುವ, ಹಾಡುಗಳನ್ನು ಫಾರ್ವರ್ಡ್ ಮಾಡುವ ಆಫ್ ಮಾಡುವ ಸೌಲಭ್ಯ ಇದೆ.
ಇದರ ಬೆಲೆ ರೂ. 2499. ಮೊದಲ ಮಾರಾಟವು ಜೂನ್ 30ರಿಂದ. ರಿಯಲ್‌ಮಿ.ಕಾಮ್, ಅಮೆಜಾನ್‌ನಲ್ಲಿ ದೊರಕುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.