ಶೀಘ್ರದಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ Realme X7 5G
Team Udayavani, Jan 31, 2021, 2:23 PM IST
ನವದೆಹಲಿ: ಕಳೆದ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಚೀನಾ ಮಾರುಕಟ್ಟೆಗೆ ಲಗ್ಗೆ ಇಡುವ ಮೂಲಕ ಧೂಳೆಬ್ಬಿಸಿದ್ದ ಪ್ರಸಿದ್ಧ ಸ್ಮಾರ್ಟ್ ಪೋನ್ ಕಂಪನಿಯಾದ realme ಯ X7 5G ಆವೃತ್ತಿಯು ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲು ತಯಾರಾಗಿದ್ದು, ಮುಂಬರುವ ಫೆಬ್ರವರಿ 4ರಂದು ಬಿಡುಗಡೆಗೊಳ್ಳಲಿದೆ ಎನ್ನಲಾಗಿದೆ. ಈ ನಡುವೆ ಭಾರತದಲ್ಲಿ ಈ ಹೊಸ ಸ್ಮಾರ್ಟ್ ಪೋನಿನ ಬೆಲೆ ಎಷ್ಟಿರಬಹುದು ಎಂಬ ಮಾಹಿತಿಗಳನ್ನು ಒಳಗೊಂಡಂತೆ ಮೊಬೈಲ್ ಪೋನಿನ ಫೀಚರ್ ಗಳ ಕುರಿತಾದ ಮಾಹಿತಿಗಳು ಆನ್ ಲೈನ್ ನಲ್ಲಿ ಸೋರಿಕೆಯಾಗಿದೆ.
ರಿಯಲ್ ಮೀ X7 5G ಯ ವೈಶಿಷ್ಟ್ಯತೆಗಳು
ಈ ಹೊಸ ಸರಣಿಯ ಸ್ಮಾರ್ಟ್ ಪೋನ್ ಓಕ್ಟಾ ಕೋರ್ ಮೀಡಿಯಾ ಟೆಕ್ ಡೆನ್ಸಿಟಿ 800U SoC ಪ್ರೊಸೆಸರ್ ಅನ್ನು ಒಳಗೊಂಡಿರಲಿದ್ದು, LPDDR 4x RAM ಅನ್ನು ಹೊಂದಿರಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಋತುವಿನ ಮೊದಲ ಕಂಬಳ ಯಶಸ್ವಿ: ಇಲ್ಲಿದೆ ಹೊಕ್ಕಾಡಿಗೋಳಿ ಕಂಬಳದ ಫಲಿತಾಂಶ ಪಟ್ಟಿ
ಡಿಸ್ ಪ್ಲೇ
X7 5G ಸ್ಮಾರ್ಟ್ ಪೋನ್ 6.4 ಇಂಚಿನ ಫುಲ್ ಹೆಚ್.ಡಿ+ ಅಮೋಲ್ಡ್ ಡಿಸ್ ಪ್ಲೇ ಅನ್ನು ಒಳಗೊಂಡಿರಲಿದೆ ಎಂದು ತಿಳಿದು ಬಂದಿದೆ.
ಕ್ಯಾಮರಾ ವಿನ್ಯಾಸ
ಈ ಸ್ಮಾರ್ಟ್ ಪೋನ್ ನಲ್ಲಿ ಕ್ವಾಡ್ ರೇರ್ ಕ್ಯಾಮರಾ ಇರಲಿದ್ದು, 64 MP ಪ್ರಾಥಮಿಕ ಕ್ಯಾಮರಾ, 8 MP ಅಲ್ಟ್ರಾ ವೈಡ್ ಆ್ಯಂಗಲ್ ಕ್ಯಾಮರಾ ಮತ್ತು 2 MP ಮೈಕ್ರೋ ಕ್ಯಾಮರಾವನ್ನು ಹೊಂದಿರಲಿದೆ ಹಾಗೂ 32 MP ಸೆಲ್ಫಿ ಕ್ಯಾಮರಾವನ್ನು ಒಳಗೊಂಡಿರಲಿದೆ.
ಇದನ್ನೂ ಓದಿ:“ಹಾರ್ಮ್ ಫುಲ್ ಕಂಟೆಂಟ್ ಗಳನ್ನು ನಿಯಂತ್ರಿಸಲು ಹೊಸ ತಂತ್ರ” : ಫೇಸ್ ಬುಕ್
ಬೆಲೆ
ರಿಯಲ್ ಮೀ X7 5G ಭಾರತೀಯ ಮಾರುಕಟ್ಟೆಯಲ್ಲಿ ಎರಡು ರೀತಿ ಬೆಲೆಗಳಲ್ಲಿ ಲಭ್ಯವಾಗಲಿದ್ದು, 6GB + 128 GB ಸ್ಟೋರೇಜ್ ಅನ್ನು ಒಳಗೊಂಡಿರುವ ಸ್ಮಾರ್ಟ್ ಪೋನ್ 19,999 ರೂಗಳಲ್ಲಿ ಲಭ್ಯಗೊಳ್ಳಲಿದೆ. ಇನ್ನು 8GB + 128 GB ಸ್ಟೋರೇಜ್ ಅನ್ನು ಒಳಗೊಂಡಿರುವ ಸ್ಮಾರ್ಟ್ ಪೋನ್ 21,999 ರೂಗಳಲ್ಲಿ ಬಳಕೆದಾರರನ್ನು ತಲುಪಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
MUST WATCH
ಹೊಸ ಸೇರ್ಪಡೆ
Bengaluru: ಅಪರಾಧ, ರೌಡಿಸಂ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳಿ: ಡಿಜಿಪಿ ಸೂಚನೆ
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.