ರೆಡ್‍ ಮಿ ನೋಟ್‍ 10ಟಿ ಬಜೆಟ್‍ ದರದ 5ಜಿ ಮೊಬೈಲ್‍


Team Udayavani, Aug 10, 2021, 6:46 PM IST

ರೆಡ್‍ ಮಿ ನೋಟ್‍ 10ಟಿ ಬಜೆಟ್‍ ದರದ 5ಜಿ ಮೊಬೈಲ್‍

ನವದೆಹಲಿ: ಶಿಯೋಮಿ ಕಂಪೆನಿ ಮಿತವ್ಯಯದ ದರದಲ್ಲಿ ಉತ್ತಮ ಸ್ಪೆಸಿಫಿಕೇಷನ್‍ ಉಳ್ಳ ಮೊಬೈಲ್‍ ಪೋನ್‍ಗಳನ್ನು ಹೊರತರುತ್ತಿದೆ. ಹೀಗಾಗಿಯೇ ಈಗ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಲ್ಲೇ ಅತಿ ಹೆಚ್ಚು ಮಾರಾಟವಾಗುವ ಮೊಬೈಲ್‍ ಫೋನ್‍ ಬ್ರಾಂಡ್‍ ಎಂಬ ಹೆಗ್ಗಳಿಕೆ ಪಡೆದಿದೆ. ಸ್ಯಾಮ್‍ ಸಂಗ್‍ ಮತ್ತು ಆಪಲ್‍ ಕಂಪೆನಿಗಳನ್ನು ಹಿಂದಿಕ್ಕಿ ಈ ತ್ರೈಮಾಸಿಕದಲ್ಲಿ ಅದು ಮೊದಲ ಸ್ಥಾನಕ್ಕೇರಿದೆ.

ಶಿಯೋಮಿ ಪ್ರಸ್ತುತ ಮಿ ಬ್ರಾಂಡ್‍ ನಡಿ 20 ಸಾವಿರ ರೂ.ಗೂ ಮೇಲ್ಪಟ್ಟ ಮಧ್ಯಮ ಹಾಗೂ ಫ್ಲಾಗ್‍ಶಿಪ್‍ ಮೊಬೈಲ್‍ ಗಳನ್ನೂ, ರೆಡ್‍ಮಿ ಬ್ರಾಂಡ್‍ನಡಿ ಆರಂಭಿಕ ಹಾಗೂ ಮಧ್ಯಮ ವಲಯದ ಮೊಬೈಲ್‍ಗಳನ್ನು ತಯಾರಿಸುತ್ತಿದೆ. ರೆಡ್‍ಮಿ ಬ್ರಾಂಡ್‍ನಡಿ ಇದುವರೆಗೆ 5ಜಿ ಫೋನ್ ಗಳನ್ನು ಹೊರತಂದಿರಲಿಲ್ಲ. ಪ್ರಸ್ತುತ  ರೆಡ್‍ಮಿ ನೋಟ್‍ 10 ಸರಣಿ ಚಾಲ್ತಿಯಲ್ಲಿದ್ದು, ಇದೇ ಸರಣಿಯಲ್ಲಿ ರೆಡ್‍ಮಿ ನೋಟ್‍ 10 ಟಿ 5ಜಿ ಫೋನನ್ನು ಹೊರತರಲಾಗಿದೆ. ನೆನಪಿರಲಿ, ರೆಡ್‍ಮಿ ನೋಟ್‍ 10, ರೆಡ್ ಮಿ ನೋಟ್‍ 10 ಪ್ರೊ, ರೆಡ್‍ಮಿ ನೋಟ್‍ 10ಎಸ್‍. ರೆಡ್‍ಮಿ ನೋಟ್‍ 10 ಪ್ರೊ ಮ್ಯಾಕ್ಸ್ ಗಳು ಈಗಾಲೇ ಚಾಲ್ತಿಯಲ್ಲಿವೆ. ಈಗ  ಸಾಲಿಗೆ ಹೊಸ ಸೇರ್ಪಡೆ ರೆಡ್‍ಮಿ ನೋಟ್‍ 10 ಟಿ 5ಜಿ. ವಿವಿಧ ಕಂಪೆನಿಗಳು ಹೊರ ತರುವ ಒಂದೇ ಸರಣಿಯ ಸಂಖ್ಯೆಗಳು,  ಪ್ರೊ,  ಮ್ಯಾಕ್ಸ್, ಎಸ್‍, ಟಿ ಇತ್ಯಾದಿಗಳು ಗ್ರಾಹಕನನ್ನು ಗೊಂದಲಕ್ಕೀಡುಮಾಡುತ್ತವೆ. ಹೊಸದಾಗಿ ಅದರ ಪರಿಚಯ ಮಾಡಿಕೊಳ್ಳಬೇಕಾದ ಗ್ರಾಹಕ ಕಕ್ಕಾಬಿಕ್ಕಿಯಾಗಬೇಕಾಗುತ್ತದೆ! ಈಗಾಗಲೇ ಅವುಗಳ ಬಗ್ಗೆ ತಿಳಿದಿರುವ,  ಆಗಾಗ ಗ್ಯಾಜೆಟ್‍ ಸುದ್ದಿಗಳನ್ನು ಓದುವವರಿಗಷ್ಟೇ ಈ ಫೋನಿನಲ್ಲಿ ಏನಿದೆ? ಆ ಫೋನಿನಲ್ಲಿ ಏನಿಲ್ಲ? ಪ್ರೊಸೆಸರ್‍ ಯಾವುದು, ರ್ಯಾಮ್‍ ಎಷ್ಟು ಎಂಬುದು ತಿಳಿಯಲು ಸಾಧ್ಯ!

ಇರಲಿ, ಈಗ ಇಲ್ಲಿ ಈ ಹೊಸ ರೆಡ್‍ಮಿ ನೋಟ್‍ 10ಟಿ 5ಜಿ ಫೋನಿನಲ್ಲಿರುವ  ಅಂಶಗಳನ್ನು ತಿಳಿಯೋಣ..

ದರ :  4ಜಿಬಿ ರ್ಯಾಮ್‍ ಮತ್ತು 64 ಜಿಬಿ ಆಂತರಿಕ ಸಂಗ್ರಹ ಮಾದರಿಗೆ 14,499 ರೂ. ಹಾಗೂ 6ಜಿಬಿ ರ್ಯಾಮ್‍ ಮತ್ತು 128 ಜಿಬಿ ಮಾದರಿಗೆ 16,499 ರೂ. ದರವಿದೆ. (ಅಮೆಜಾನ್‍ ಮತ್ತು ಮಿ.ಕಾಂನಲ್ಲಿರುವ ದರ)

ವಿನ್ಯಾಸ : ಕೈಗೆತ್ತಿಕೊಳ್ಳುತ್ತಿದ್ದಂತೆ, ಇದು ಉಳಿದ 10 ಸರಣಿಯ ಫೋನ್‍ ಗಳಿಗಿಂತ ಕಡಿಮೆ ತೂಕ ಹೊಂದಿರುವುದು ಅನುಭವಕ್ಕೆ ಬರುತ್ತದೆ. ಹಾಗೆಯೇ ಅವುಗಳಷ್ಟು ದಪ್ಪವಿಲ್ಲದೇ ಸ್ಲಿಮ್‍ ಆಗಿದೆ. ಲೋಹದ ಫ್ರೇಂ ಇದ್ದು, ಹಿಂಬದಿ ಪ್ಲಾಸ್ಟಿಕ್‍ ನಿಂದ ಮಾಡಲಾಗಿದೆ. ಆದರೆ ಅದು ಪ್ಲಾಸ್ಟಿಕ್‍ ಎಂದು ಅನಿಸದಂತೆ ಗಾಜಿನ ಫಿನಿಷ್‍ ನೀಡಲಾಗಿದೆ. ಹಿಂಬದಿಯ ಎಡ ಮೂಲೆಯಲ್ಲಿ ಮೂರು ಲೆನ್ಸಿನ ಕ್ಯಾಮರಾವನ್ನು ಉಬ್ಬಿದ ವಿನ್ಯಾಸದಲ್ಲಿ ಅಳವಡಿಸಲಾಗಿದೆ. ಮೊಬೈಲ್‍ ಕಚವದಿಂದ ಈಚೆ ಬಂದಂಥ ಉಬ್ಬಿದ ಕ್ಯಾಮರಾದಿಂದ ಫೋನನ್ನು ಟೇಬಲ್‍ ಮೇಲೆ ಇಟ್ಟಾಗ ಗೀರುಗಳಾಗಬಹುದು ಎಂಬ ಆತಂಕ ಹಲವರದು. ಆದರೆ ಕಂಪೆನಿಗಳು ಆ ರೀತಿಯ ಕ್ಯಾಮರಾ ಲೆನ್ಸ್ ಮೇಲೆ ಗೀರು ನಿರೋಧಕ, ಗಟ್ಟಿಯಾದ ಗಾಜು ಹಾಕಿರುತ್ತಾರೆ ಹಾಗಾಗಿ ಗೀರುಗಳಾಗುವುದಿಲ್ಲ. ಫೋನಿನ ಬಲ ಅಂಚಿನಲ್ಲಿ ಮೇಲೆ ಧ್ವನಿ ಹೆಚ್ಚಿಸುವ ಕಡಿಮೆ ಮಾಡುವ ಬಟನ್‍ ಇದೆ. ಅದರ ಕೆಳಗೆ ಸ್ವಿಚ್ ಆನ್‍ ಆಫ್‍ ಮಾಡುವ ಬಟನ್‍ ಇದೆ. ಈ ಬಟನ್ನೇ ಬೆರಳಚ್ಚು ಸ್ಕ್ಯಾನರ್‍ ಆಗಿಯೂ ಕೆಲಸ ಮಾಡುತ್ತದೆ.

ಪ್ರೊಸೆಸರ್‍ : ಇದರಲ್ಲಿರುವುದು ಮೀಡಿಯಾಟೆಕ್‍ ಡೈಮೆನ್ಸಿಟಿ 700 ಪ್ರೊಸೆಸರ್‍. ಇದೇ ಪ್ರೊಸೆಸರ್‍ ಸ್ಯಾಮ್ ಸಂಗ್‍ ಎ22 ಮೊಬೈಲ್‍ನಲ್ಲಿದೆ. ಪ್ರಸ್ತುತ  ಮಧ್ಯಮ ದರ್ಜೆಯ ಫೋನ್‍ಗಳಿಗೆ 5ಜಿ ಸವಲತ್ತು ನೀಡಲು ಹಲವು ಕಂಪೆನಿಗಳು ಈ ಪ್ರೊಸೆಸರ್‍ ಮೊರೆ ಹೋಗುತ್ತಿವೆ. ಕ್ವಾಲ್‍ಕಾಂ ಸ್ನಾಪ್ ಡ್ರಾಗನ್‍ ಪ್ರೊಸೆಸರ್‍ ಗಳನ್ನೇ ಅವಲಂಬಿಸಿದ್ದ ಕಂಪೆನಿಗಳು ಸಹ ಈಗ ಮೀಡಿಯಾಟೆಕ್‍ ಪ್ರೊಸೆಸರ್‍ ಮೊರೆ ಹೋಗುತ್ತಿವೆ. ಹೀಗಾಗಿ ಈಗ ಸ್ನಾಪ್‍ಡ್ರಾಗನ್‍ ಜೊತೆ ಮೀಡಿಯಾಟೆಕ್‍ ಕೂಡ ಸ್ಪರ್ಧೆ ಮಾಡುತ್ತಿದೆ. ಬಳಕೆಯ ಅನುಭವದಲ್ಲಿ ಈ ಪ್ರೊಸೆಸರ್‍ ವೇಗವಾಗಿ ಕಾರ್ಯ ನಿರ್ವಹಿಸುತ್ತದೆ. ಎಂಟು ಕೋರ್‍ಗಳ  ಪ್ರೊಸೆಸರ್‍ 2.2 ಗಿಗಾಹರ್ಟ್ಜ್ ವೇಗ ಹೊಂದಿದೆ. 7 ನ್ಯಾನೋ ಮೀಟರ್‍ ಆರ್ಕಿಟೆಕ್ಚರ್‍ ಒಳಗೊಂಡಿದೆ. 5ಜಿ ಭಾರತದಲ್ಲಿ ಲಭ್ಯವಿಲ್ಲದ ಕಾರಣ, ಅದರ ಉಪಯೋಗ ಸದ್ಯಕ್ಕಿಲ್ಲ. ಅಪ್ಲಿಕೇಷನ್‍ಗಳು, ವೆಬ್ ಸೈಟ್ ತೆರೆದುಕೊಳ್ಳುವಿಕೆ ಇತ್ಯಾದಿಗಳು ವೇಗವಾಗಿ ಕಾರ್ಯನಿರ್ವಹಿಸುತ್ತವೆ.

ಆಂಡ್ರಾಯ್ಡ್ 11 ಓಎಸ್‍ ಇದ್ದು, ಇದಕ್ಕೆ ಕಸ್ಟಮೈಸ್‍ ಮಾಡಿದ ಮಿ ಯೂಸರ್‍ ಇಂಟರ್‍ ಫೇಸ್‍ 12 ಆವೃತ್ತಿ ಅಳವಡಿಸಲಾಗಿದೆ. ಪ್ಯೂರ್‍ ಆಂಡ್ರಾಯ್ಡ್ ಗಿಂತ  ಸ್ವಲ್ಪ ಹೆಚ್ಚಿನ ಸವಲತ್ತುಗಳು ಮಿ ಯೂಐ ಯಲ್ಲಿ ದೊರಕುತ್ತವೆ.

ಪರದೆ: ಎಫ್‍ಎಚ್‍ಡಿ ಪ್ಲಸ್‍ ಐಪಿಎಸ್‍ ಡಿಸ್‍ಪ್ಲೇ ಇದ್ದು, 6.5 ಇಂಚಿನ ಪರದೆ ಹೊಂದಿದೆ. 90 ಹರ್ಟ್ಜ್ ರಿಫ್ರೆಶ್ ರೇಟ್‍ ಇದೆ. ಮೇಲ್ಭಾಗದಲ್ಲಿ ಸೆಲ್ಫೀ ಕ್ಯಾಮರಾಗೆ ಪಂಚ್‍ ಹೋಲ್‍ ಡಿಸ್‍ಪ್ಲೇ ಇದೆ.  ಪರದೆಗೆ ಕಾರ್ನಿಂಗ್‍ ಗೊರಿಲ್ಲಾ ಗಾಜಿನ ಸುರಕ್ಷತೆ ಇದೆ.  ಅದರ ಮೇಲೆ ಸ್ಕ್ರೀನ್‍ ಗಾರ್ಡ್ ಮೊದಲೇ ಅಂಟಿಸಲಾಗಿದೆ. ಹೀಗಾಗಿ ಸದ್ಯಕ್ಕೆ ಅದರ ಮೇಲೆ ಟೆಂಪರ್ಡ್ ಗ್ಲಾಸ್‍ ಹಾಕುವ ಅಗತ್ಯ ಇಲ್ಲ. ಇದು ಐಪಿಎಸ್‍ ಎಲ್‍ಸಿಡಿ  ಡಿಸ್‍ಪ್ಲೇ ಎಂಬುದನ್ನು ಗಮನಿಸಬೇಕು. ರೆಡ್‍ಮಿ ನೋಟ್‍ 10 ಸರಣಿಯಲ್ಲಿ ಉಳಿದ ಫೋನ್‍ಗಳಿಗೆ ಅಮೋಲೆಡ್‍ ಪರದೆ ಇದೆ. ಆದರೂ 5ಜಿ ಫೋನನ್ನು 15 ಸಾವಿರ ರೇಂಜ್‍ನಲ್ಲಿ ನೀಡುವುದಕ್ಕಾಗಿ ಎಲ್‍ ಇ ಡಿ ಪರದೆ ಬದಲು ಎಲ್‍ಸಿಡಿ ಪರದೆ ಅಳವಡಿಸಲಾಗಿದೆ ಅನಿಸುತ್ತದೆ.

ಕ್ಯಾಮರಾ: 48 ಪ್ರಾಥಮಿಕ ಕ್ಯಾಮರಾ, 2 ಮೆಗಾಪಿಕ್ಸಲ್‍ ಡೆಪ್ತ್ ಲೆನ್ಸ್ ಹಾಗೂ 2 ಮೆ.ಪಿ. ಮ್ಯಾಕ್ರೋ ಲೆನ್ಸ್ ಹೊಂದಿದೆ. 8 ಮೆ.ಪಿ. ಸೆಲ್ಫಿ ಕ್ಯಾಮರಾ ಅಳವಡಿಸಲಾಗಿದೆ. ಇದೇ ದರಕ್ಕೆ 5ಜಿ ಇಲ್ಲದಿದ್ದರೆ 64 ಮೆ.ಪಿ. ಕ್ಯಾಮರಾವನ್ನೇ ರೆಡ್‍ಮಿ ನೀಡಿದೆ. ಆದರೆ ಬಜೆಟ್‍ 5ಜಿ ಫೋನ್‍ ಆದ್ದರಿಂದ 48 ಮೆ.ಪಿ. ಕ್ಯಾಮರಾ ನೀಡಲಾಗಿದೆ. ಈ ದರಕ್ಕೆ ಕ್ಯಾಮರಾ ಗುಣಮಟ್ಟ ಚೆನ್ನಾಗಿದೆ. ಸೆಲ್ಫಿ ಕ್ಯಾಮರಾಕ್ಕೆ 8 ಮೆ.ಪಿ. ನೀಡಲಾಗಿದ್ದು, ಅದರಿಂದ ಹೆಚ್ಚಿನ ಗುಣಮಟ್ಟವನ್ನು ನಿರೀಕ್ಷಿಸುವಂತಿಲ್ಲ.

ಬ್ಯಾಟರಿ: 5000 ಎಂಎಎಚ್‍ ಬ್ಯಾಟರಿ ನೀಡಿರುವುದು ತೃಪ್ತಿಕರ ಅಂಶ. ಬ್ಯಾಟರಿ ಸಾಮರ್ಥ್ಯ ಚೆನ್ನಾಗಿದೆ. ಒಂದೂವರೆ ದಿನ ಬಾಳಿಕೆಗೆ ಅಡ್ಡಿಯಿಲ್ಲ. ದಕ್ಕೆ 18 ವ್ಯಾಟ್ಸ್ ವೇಗದ ಚಾರ್ಜಿಂಗ್‍ ಸೌಲಭ್ಯ ನೀಡಲಾಗಿದೆ. ವಿಶೇಷವೆಂದರೆ ಬಾಕ್ಸ್ ಜೊತೆ 22.5 ವ್ಯಾಟ್ಸ್ ಚಾರ್ಜರ್‍ ನೀಡಲಾಗಿದೆ!

ಹೆಚ್ಚುವರಿಯಾಗಿ ಅಮೆಜಾನ್‍ ಅಲೆಕ್ಸಾ ಉಪಕರಣವಾಗಿಯೂ ಇದನ್ನು ಬಳಸಬಹುದು. ಅಲೆಕ್ಸಾ ಅಪ್ಲಿಕೇಷನ್‍ ಸ್ಥಾಪಿಸಿ, ಮಾತಿನ ಮೂಲಕ ಅಲೆಕ್ಸಾಗೆ ಆದೇಶಗಳನ್ನು ನೀಡಬಹುದು.

ಭಾರತದಲ್ಲಿ ಪ್ರಸ್ತುತ 5ಜಿ ಸೌಲಭ್ಯ ಇಲ್ಲ. ಮುಂದಿನ ಒಂದೆರಡು ವರ್ಷಗಳಲ್ಲಿ 5ಜಿ ಬರುತ್ತದೆಂಬ ಉದ್ದೇಶದಿಂದ ಕಂಪೆನಿಗಳು 5ಜಿ ಉಳ್ಳ ಫೋನ್‍ಗಳನ್ನು ಹೊರತರುತ್ತಿವೆ. ಇದೇ ದರಕ್ಕೆ 5ಜಿ ಇಲ್ಲದ ಇದೇ ಬ್ರಾಂಡಿನ ಫೋನನ್ನು ಕೊಂಡಾಗ ಇನ್ನುಳಿದ ಸೌಲಭ್ಯಗಳು ಇದಕ್ಕಿಂತ ಚೆನ್ನಾಗಿರುತ್ತವೆ. ಬಜೆಟ್‍ ಫೋನ್ ಗಳಲ್ಲಿ 5ಜಿ ಫೋನೇ ಬೇಕೆಂದು ಕೊಂಡಾಗ, ಕ್ಯಾಮರಾ, ಪರದೆ,  ವೇಗದ ಚಾರ್ಜರ್ ಇತ್ಯಾದಿಗಳಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ 15-16 ಸಾವಿರ ದರದಲ್ಲಿ 5ಜಿ ಫೋನ್‍ ಈಗಲೇ ಬೇಕಾ? ಎಂಬುದನ್ನು ಗ್ರಾಹಕರೇ ನಿರ್ಧರಿಸಬೇಕು.

 

-ಕೆ.ಎಸ್‍. ಬನಶಂಕರ ಆರಾಧ್ಯ

 

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Airport: 2025ರ ಏಪ್ರಿಲ್‌ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ

Airport: 2025ರ ಏಪ್ರಿಲ್‌ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ

JioHotstar domain: ಜಿಯೋ ಹಾಟ್‌ಸ್ಟಾರ್‌ ಡೊಮೈನ್‌ ನಮ್ಮದು: ದುಬೈ ಮಕ್ಕಳ ವಾದ!

JioHotstar domain: ಜಿಯೋ ಹಾಟ್‌ಸ್ಟಾರ್‌ ಡೊಮೈನ್‌ ನಮ್ಮದು: ದುಬೈ ಮಕ್ಕಳ ವಾದ!

Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್

Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್

Jio-Bharath

Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!

Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್‌ ಬಿಡುಗಡೆ

Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್‌ ಬಿಡುಗಡೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.