![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jan 3, 2020, 5:06 AM IST
ಬುಲೆಟ್ ಬೈಕ್ ಓಡಿಸುವುದಕ್ಕೇನೋ ಖುಷಿ. ಆದರೆ ಸಖತ್ ಭಾರ ಅನ್ನೋದು ಕೆಲವರ ಕಂಪ್ಲೇಂಟು! ಈ ಕಾರಣದಿಂದ ಹಲವರು ಖರೀದಿಸದೆ ಕೂತಿದ್ದೂ ಇದೆ. ಇದನ್ನು ಗಮನಿಸಿರುವ ರಾಯಲ್ ಎನ್‌ಫೀಲ್ಡ್ ಮಹಿಳೆಯರೂ ಓಡಿಸಬಹುದಾದ ಹಗುರ ಬೈಕ್‌ಗಳನ್ನು ತಯಾರಿಸಲು ಸಿದ್ಧತೆ ನಡೆಸಿದೆ.
ಶೆರ್ಪಾ, ಹಂಟರ್ ಹೊಸ ಬೈಕು
ಎನ್‌ಫೀಲ್ಡ್ ಹೊಸ ಬೈಕ್‌ಗಳ ಬಿಡುಗಡೆಗೆ ಯೋಜನೆ ರೂಪಿಸಿದ್ದು, ಅವುಗಳ ಹೆಸರು ಶೆರ್ಪಾ, ಹಂಟರ್ ಎಂದಿರಲಿದೆ. ಅಂದಹಾಗೆ ಈ ಶೆರ್ಪಾ ಬಿಡುಗಡೆಯಾಗಬೇಕಾದರೂ ತೀರ ಹೊಸತೇನಲ್ಲ. 1960ರಲ್ಲೇ ಈ ಹೆಸರಿನ ಬೈಕ್ ಅನ್ನು ಎನ್‌ಫೀಲ್ಡ್ ಮಾರುಕಟ್ಟೆಯಲ್ಲಿ ಹೊಂದಿತ್ತು. ಅದು 173ಸಿಸಿ ಬೈಕ್ ಆಗಿದ್ದು, ರಾಜದೂತ್‌ಗೆ ಸಡ್ಡು ಹೊಡೆದಿತ್ತು. ಸದ್ಯ ಹೊಸ ಶೆರ್ಪಾ 250 ಸಿಸಿ ಬೈಕ್ ಆಗಿರಲಿದೆ ಎಂದು ಹೇಳಲಾಗಿದೆ.
ಶೆರ್ಪಾ ಮತ್ತು ಹಂಟರ್‌ಗಳು ಎನ್‌ಫೀಲ್ಡ್‌ನ ಎಂಟ್ರಿ ಲೆವೆಲ್ ಮಾಡೆಲ್‌ಗಳಾಗಿದ್ದು ಹೆಚ್ಚಿನ ಗ್ರಾಹಕರನ್ನು ತಲುಪುವ ಉದ್ದೇಶ ಹೊಂದಲಾಗಿದೆ. ಈ ಶೆರ್ಪಾ ಬೈಕ್ ಹಿಮಾಲಯನ್‌ನ ಕಿರಿ ತಮ್ಮ ಆಗಿರಲಿದೆ ಎಂಬ ಗುಸುಗುಸು ಕೂಡ ಇದೆ.
ಹಂಟರ್ ಹೆಸರಿನಲ್ಲಿ ಬರಲಿರುವ ಬೈಕು 411 ಸಿಸಿಯ ಸಾðéಂಬ್ಲಿರ್ ಬೈಕು ಆಗಿರಲಿದೆ ಎಂಬ ಸುದ್ದಿ ಇದೆ. ಈಗಾಗಲೇ ಇದರ ವಿನ್ಯಾಸ ಅಂತಿಮ ಹಂತದಲ್ಲಿದ್ದು ಎಂಜಿನ್ ನಿರ್ಮಾಣ ಕಾರ್ಯ ನಡೆದಿದೆ. ಎರಡೂ ಬೈಕ್‌ಗಳು ಬಿಎಸ್6 ಎಂಜಿನ್ ಹೊಂದಿರಲಿದ್ದು ಮಾರುಕಟ್ಟೆಯಲ್ಲಿ ಪ್ರಬಲ ಪೈಪೋಟಿ ನೀಡುವ ಲಕ್ಷಣವಿದೆ.
ಯಾವಾಗ ಬಿಡುಗಡೆ
2020ರ ಕೊನೆಯ ಭಾಗದಲ್ಲಿ ಎರಡೂ ಬೈಕ್‌ಗಳು ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ಇದರೊಂದಿಗೆ ಎನ್‌ಫೀಲ್ಡ್ ದೊಡ್ಡ ಸಾಮರ್ಥ್ಯದ ಬೈಕುಗಳ ತಯಾರಿಗೆ ಹೆಚ್ಚಿನ ಗಮನವನ್ನೂ ಕೊಡುತ್ತಿದೆ. 650 ಸಿಸಿ ಹಿಮಾಲಯನ್ ಕೂಡ ಬಿಡುಗಡೆಯಾಗುವ ನಿರೀಕ್ಷೆ ಇದೆ.
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
You seem to have an Ad Blocker on.
To continue reading, please turn it off or whitelist Udayavani.