ಭಾರತದಲ್ಲಿ ಬಿಡುಗಡೆಯಾಗಿದೆ ಸ್ಯಾಮ್ ಸಂಗ್ ನ ಎ52ಎಸ್ 5ಜಿ ಸ್ಮಾರ್ಟ್ ಫೋನ್.! ಇಲ್ಲಿದೆ ಮಾಹಿತಿ
Team Udayavani, Sep 2, 2021, 1:36 PM IST
ನವ ದೆಹಲಿ : ಸ್ಮಾರ್ಟ್ ಫೋನ್ ಗಳ ದೈತ್ಯ ಸಂಸ್ಥೆ ಸ್ಯಾಮ್ ಸಂಗ್ ತನ್ನ ಎ ಸರಣಿಯ ಗ್ಯಾಲಕ್ಸಿ A52S 5G ಸ್ಮಾರ್ಟ್‌ಫೋನ್ ನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಸ್ಮಾರ್ಟ್ ಫೋನ್ ನನ್ನು ಇನ್ಫಿನಿಟಿ-ಒ ಡಿಸ್ಪ್ಲೇ, 64 ಎಂಪಿ ಕ್ವಾಡ್ ಕ್ಯಾಮೆರಾ ಒಐಎಸ್ ನೊಂದಿಗೆ ಬಿಡುಗಡೆ ಮಾಡಲಾಗಿದೆ, ಇದು ನೀರು ಮತ್ತು ಧೂಳು ನಿರೋಧಕ ಐಪಿ 67 ರೇಟಿಂಗ್ ನೊಂದಿಗೆ ಗ್ರಾಹಕರ ಕೈಗೆ ಸಿಗಲಿದೆ.
ಇದನ್ನೂ ಓದಿ : ಖ್ಯಾತ ಸ್ಪಿನ್ನರ್ ಗೆ ಮುಳುವಾದ ICL ಸೇರ್ಪಡೆ; ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಚಾಲಕ ವೃತ್ತಿವರೆಗೆ
ಸ್ಯಾಮ್ ಸಂಗ್ ಬಿಡುಗಡೆಗೊಳಿಸಿರುವ ಈ ಹೊಸ ಸ್ಮಾರ್ಟ್ ಫೋನ್ ನನ್ನು ಕಪ್ಪು, ಬಿಳಿ ಮತ್ತು ನೇರಳೆ ಬಣ್ಣದ ಆಯ್ಕೆಗಳಲ್ಲಿ ಸಂಸ್ಥೆ ನೀಡುತ್ತಿದೆ .
ಸ್ಯಾಮ್‌ಸಂಗ್ ಗ್ಯಾಲಕ್ಸಿ A52S 5G ಇತರೆ ಸ್ಮಾರ್ಟ್ ಫೋನ್ ಗಳಿಗಿಂತ ಹೇಗೆ ಭಿನ್ನ..?
ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಯಾಮ್ ಸಂಗ್ ಇಂಡಿಯಾದ ಹಿರಿಯ ನಿರ್ದೇಶಕ ಹಾಗೂ ಮೊಬೈಲ್ ಮಾರ್ಕೆಟಿಂಗ್ ಮುಖ್ಯಸ್ಥ ಆದಿತ್ಯ ಬಬ್ಬರ್, ಸ್ಯಾಮ್ ಸಂಗ್ ಗ್ಯಾಲಕ್ಸಿ A52S 5G 6GB RAM+128GB ಸ್ಟೋರೇಜ್ ಮಾಡೆಲ್ ಗೆ 35,999 ರೂ. ಮತ್ತು 8GB RAM+128GB ಸ್ಟೋರೇಜ್ ಮಾಡೆಲ್ ಗೆ 37,499 ರೂ. ಎಂದು ಮಾಹಿತಿ ನೀಡಿದ್ದಾರೆ.
ಸ್ಯಾಮ್ ಸಂಗ್ ಗ್ಯಾಲಕ್ಸಿ A52S 5G 6.5-ಇಂಚಿನ ಫುಲ್ ಎಚ್ ಡಿ+ ಸೂಪರ್ ಆಮ್ಲೋಡ್ ಇನ್ಫಿನಿಟಿ-ಓ ಡಿಸ್ಪ್ಲೇ 1080 x 2400 ಪಿಕ್ಸೆಲ್ ರೆಸಲ್ಯೂಶನ್ ಹಾಗೂ 120Hz ರಿಫ್ರೆಶ್ ರೇಟ್ ನನ್ನು ಹೊಂದಿದೆ. ಹುಡ್ ಅಡಿಯಲ್ಲಿ, ಸ್ಮಾರ್ಟ್ ಫೋನ್ ನಲ್ಲಿ ಸ್ನಾಪ್ ಡ್ರಾಗನ್ 778 ಜಿ ಚಿಪ್ ಸೆಟ್ ಇದೆ, ಜೊತೆಗೆ ಅಡ್ರಿನೊ 642 ಎಲ್ ಜಿಪಿಯು ಜೊತೆಗೆ 8 ಜಿಬಿ RAM ಹಾಗೂ 256 ಜಿಬಿ ಸಂಗ್ರಹವಿದೆ. ಸ್ಮಾರ್ಟ್ ಫೋನ್ ಮೈಕ್ರೊ ಎಸ್ ಡಿ ಕಾರ್ಡ್ ಬೆಂಬಲದೊಂದಿಗೆ ಬರುತ್ತದೆ, ಇದು 1TB ವರೆಗೆ ಹೆಚ್ಚುವರಿ ಸಂಗ್ರಹಣೆಯನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತದೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸ್ಯಾಮ್ ಸಂಗ್ ನ ಹೊಸ ಸ್ಮಾರ್ಟ್ ಫೋನ್ 4,500mAh ಬ್ಯಾಟರಿಯನ್ನು ಹೊಂದಿದ್ದು, ಫೋನ್ ಆಂಡ್ರಾಯ್ಡ್ 11 ಓಎಸ್ ನಲ್ಲಿ ಒನ್ ಯುಐ 3.1 ಮೇಲೆ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ : ಕಿಚ್ಚನ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದ ‘ವಿಕ್ರಾಂತ್ ರೋಣ’ ಡೆಡ್ ಮ್ಯಾನ್ಸ್ ಟೀಸರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.