ಬಹು ನಿರೀಕ್ಷಿತ ಸ್ಯಾಮ್ ಸಂಗ್ ಎ80 ಬಿಡುಗಡೆ
Team Udayavani, Aug 1, 2019, 7:34 PM IST
ಮಣಿಪಾಲ: ಮೊಬೈಲ್ ತಯಾರಕ ದಿಗ್ಗಜ ಸ್ಯಾಮ್ಸಂಗ್ ಪರಿಚಯಿಸಿದ್ದ ಗ್ಯಾಲಕ್ಸಿಎ ಸರಣಿಯ ಮೊಬೈಲ್ಗಳು ವಿಶ್ವದಲ್ಲಿ ಬೇಡಿಕೆಯನ್ನು ಹೊಂದಿದೆ. ತನ್ನ ಎ ಸೀರೀಸ್ ನ ಮುಂದುವರಿದ ಭಾಗವಾಗಿ ‘ಗ್ಯಾಲಕ್ಸಿ ಎ80’ ಬಿಡುಗಡೆ ಮಾಡುವುದಾಗಿ ಸಂಸ್ಥೆ ಈ ಹಿಂದೆ ಘೊಷಿಸಿತ್ತು. ಅದರಂತೆ ಗುರುವಾರ ಸ್ಯಾಮ್ಸಂಗ್ ಎರಡೂ ಬದಿಯಲ್ಲೂ 48 ಮೆಗಾಪಿಕ್ಸೆಲ್ ಕ್ಯಾಮೆರಾ ಬಳಸಬಹುದಾದ ವಿಶ್ವದ ಮೊದಲ ರೊಟೇಟಿಂಗ್ ಕ್ಯಾಮೆರಾ ಸ್ಮಾರ್ಟ್ ಫೋನ್ ‘ಗ್ಯಾಲಕ್ಸಿ ಎ80’ ಅನ್ನು ಬಿಡುಗಡೆ ಮಾಡಿದೆ.
ಹೇಗಿದೆ ಡಿಸ್ಪ್ಲೇ ಮತ್ತು ವಿನ್ಯಾಸ
ಗ್ಯಾಲಕ್ಸಿ ಎ80′ ಸ್ಮಾರ್ಟ್ ಫೋನ್ 20:9 ಆಕಾರ ಅನುಪಾತದಲ್ಲಿ 6.7 ಇಂಚಿನ ಫುಲ್ HD + (2400×1080 ಪಿಕ್ಸೆಲ್ ಗಳು) ಸೂಪರ್ ಅಮೋಲೆಡ್ ನ್ಯೂ ಇನ್ಫಿನಿಟಿ ಡಿಸ್ಪ್ಲೇ ಹೊಂದಿದೆ. ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸಾರ್ ಹೊಂದಿರುವ ಈ ಸ್ಮಾರ್ಟ್ಫೋನ್ ಆಕರ್ಷಕ ಸ್ಲೈಡಿಂಗ್ ಕ್ಯಾಮೆರಾದೊಂದಿಗೆ ಅತ್ಯುನ್ನತ ಲುಕ್ ಹೊಂದಿದೆ.
ಪ್ರೊಸೆಸರ್
ಗ್ಯಾಲಕ್ಸಿ ಎ 80 1.7GH ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 730 ಜಿ ಪ್ರೊಸೆಸರ್ ಹೊಂದಿದೆ. ಇದು 2 ಕೋರ್ ಗಳನ್ನು ಹೊಂದಿದ್ದು, 2.2GHz ಮತ್ತು 6 1.7GHz ನಲ್ಲಿ 8 ಜಿಬಿ ಜಿಬಿ RAM ನೊಂದಿಗೆ ಲಭ್ಯವಿದೆ. ಆಂಡ್ರಾಯ್ಡ್ 9.0 ಪೈ ಅನ್ನು ಚಾಲನೆ ಮಾಡುವ ಸ್ಮಾರ್ಟ್ ಫೋನಿನ ಆಂತರಿಕ ಮೆಮೊರಿ 128GB ಇದೆ.
ಕ್ಯಾಮರಾ
ಸ್ಯಾಮ್ಸಂಗ್ ಗ್ಯಾಲಕ್ಸಿ ಎ 80 ಸ್ಮಾರ್ಟ್ ಫೋನ್ 48 ಮೆಗಾಪಿಕ್ಸೆಲ್ ಪ್ರಾಥಮಿಕ ಕೆಮರಾ ಹೊಂದಿದೆ. ಹಿಂದಿನ ಕ್ಯಾಮೆರಾ ಸೆಟಪ್ ಆಟೋಫೋಕಸ್ ಹೊಂದಿದೆ. ಸೆಲ್ಫಿ ತೆಗೆದುಕೊಳ್ಳುವಾಗ ಮುಂಭಾಗಕ್ಕೆ ರೊಟೇಟ್ ಆಗುತ್ತದೆ. ಕ್ಯಾಮೆರಾವನ್ನು ಬ್ಯಾಕಪ್ ಮಾಡುವ ಸೂಪರ್ ಸ್ಟೆಡಿ ಮೋಡ್, 3ಡಿ ದೃಶ್ಯಗಳನ್ನು ಗುರುತಿಸಬಹುದಾಗಿದೆ. 3ಡಿ ಡೆಪ್ತ್ ಕ್ಯಾಮೆರಾ ಜತೆಗೆ ಇನ್ಫ್ರಾರೆಡ್ ಸೆನ್ಸಾರ್ ಅನ್ನು ಹೊಂದಿದೆ.
ಯು.ಎಸ್.ಬಿ. ಟೈಪ್-ಸಿ ಮತ್ತು 25W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ 3,700 ಎಂಎಎಚ್ ಬ್ಯಾಟರಿ ಹೊಂದಿದೆ. ಮಾರುಕಟ್ಟೆಯಲ್ಲಿ ಈ ಹೊಸ ಫೋನಿನ ದರ ರೂ. 47,990 ಆಗಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.