ಸ್ಯಾಮ್ಸಂಗ್ ಮತ್ತು ಜಿಯೋನಿಂದ ಗ್ರಾಹಕರಿಗೆ ಬಂಪರ್ ಕೊಡುಗೆ!


Team Udayavani, Feb 23, 2019, 10:52 AM IST

ಮುಂಬೈ:  ಜಿಯೋ ತನ್ನ ಗ್ರಾಹಕರಿಗಾಗಿ ಸ್ಯಾಮ್‌ಸಂಗ್‌ನ ಹೊಸ ಸ್ಮಾರ್ಟ್‌ಫೋನುಗಳಾದ ಗೆಲಾಕ್ಸಿ ಎಂ20 ಹಾಗೂ ಗೆಲಾಕ್ಸಿ ಎಂ10 ಮಾದರಿಗಳ ವಿಶೇಷ ಮಾರಾಟ ವ್ಯವಸ್ಥೆಯನ್ನು ಘೋಷಿಸುವ ಮೂಲಕ ಡಿಜಿಟಲ್ ಜೀವನಶೈಲಿಯ ಹೊಸ ಪ್ರಸ್ತಾಪವನ್ನು ಮುಂದಿಟ್ಟಿದೆ. ಎಂ ಸೀರೀಸ್ ಸಾಧನಗಳಲ್ಲಿ ಜಿಯೋ ಸಂಪರ್ಕ ಬಳಸುವ ಗ್ರಾಹಕರಿಗೆ ವಿಶೇಷ ಡಬಲ್ ಡೇಟಾ ಕೊಡುಗೆಯನ್ನೂ ಜಿಯೋ ಪರಿಚಯಿಸಿದೆ.

Samsung.com ಜಾಲತಾಣದಲ್ಲಿನ ಪ್ರತ್ಯೇಕ ಕಿಟಕಿಯ ಮೂಲಕ ಹೊಚ್ಚಹೊಸ ಎಂ ಸೀರೀಸ್ ಸಾಧನಗಳನ್ನು ಇತರರಿಗಿಂತ ಮೊದಲು ಖರೀದಿಸುವ ಅವಕಾಶವನ್ನು ಈ ಮಾರಾಟ ವ್ಯವಸ್ಥೆ ಜಿಯೋ ಗ್ರಾಹಕರಿಗೆ ನೀಡಿದೆ. ಗ್ರಾಹಕರು ಈ ಮಾರಾಟ ವ್ಯವಸ್ಥೆಯನ್ನು Jio.com  ಹಾಗೂ ಮೈಜಿಯೋ ಮೂಲಕ ಮಾತ್ರವೇ ಬಳಸಬಹುದು.

ಗೆಲಾಕ್ಸಿ ಎಂ ಸರಣಿಯ ಸಾಧನಗಳಿಗೆ ನೀಡಲಾಗುತ್ತಿರುವ ಜಿಯೋ ಡಬಲ್ ಡೇಟಾ ಕೊಡುಗೆ, ಉಳಿತಾಯದ ಜೊತೆಗೆ ಅಪರಿಮಿತ ವೀಡಿಯೋ, ಸಂಗೀತ, ಕ್ರಿಕೆಟ್ ಹಾಗೂ ಇನ್ನೂ ಅನೇಕ ಸೌಲಭ್ಯಗಳನ್ನು ಆನಂದಿಸುವ ಅವಕಾಶ ಒದಗಿಸುತ್ತಿದೆ. ಸಾಟಿಯಿಲ್ಲದ ಡಿಜಿಟಲ್ ಜೀವನಶೈಲಿಯನ್ನು ಅನುಭವಿಸಲು ಬಯಸುವ ಟೆಕ್ ಆಸಕ್ತ ಯುವ ಜನತೆಯನ್ನು ಜಿಯೋ ಗೆಲಾಕ್ಸಿ ಎಂ ಸರಣಿಯ ಈ ಡಿಜಿಟಲ್ ಜೀವನಶೈಲಿ ಪ್ರಸ್ತಾಪ ತನ್ನತ್ತ ಸೆಳೆಯಲಿದೆ.

ವಿಶೇಷ ಮಾರಾಟ
1. ಗೆಲಾಕ್ಸಿ ಎಂ10 ಹಾಗೂ ಎಂ20 ಸ್ಮಾರ್ಟ್‌ಫೋನುಗಳನ್ನು ಫೆಬ್ರುವರಿ 22ರ ಮಧ್ಯಾಹ್ನ 12ರಿಂದ 1ರವರೆಗೆ ಜಿಯೋ ಗ್ರಾಹಕರಿಗಾಗಿ ಆಯೋಜಿಸಿರುವ ವಿಶೇಷ ಮಾರಾಟದಲ್ಲಿ ಗ್ರಾಹಕರು ಕೊಳ್ಳಬಹುದು.

2. ಮಾರಾಟದ ದಿನದಂದು, ಜಿಯೋ ಗ್ರಾಹಕರು Jio.com  ಹಾಗೂ ಮೈಜಿಯೋ ಆಪ್‌ನಲ್ಲಿರುವ ಸೇಲ್ ಬ್ಯಾನರ್ ಮೇಲೆ ಕ್ಲಿಕ್ ಮಾಡಬೇಕು. ಅವರ ಜಿಯೋ ಸಂಖ್ಯೆಯನ್ನು ದೃಢೀಕರಿಸಿದ ನಂತರ, ಅವರು ಮುಂದುವರೆದು ಈ ಮಾರಾಟದಲ್ಲಿ ಪಾಲ್ಗೊಳ್ಳಬಹುದು.

3. ಹೊಸದಾಗಿ ಪರಿಚಯಿಸಲಾದ ಗೆಲಾಕ್ಸಿ ಎಂ20 ಹಾಗೂ ಎಂ10 ಮಾದರಿಗಳು ಈ ಮಾರಾಟದಲ್ಲಿ ದೊರಕಲಿವೆ. ಗೆಲಾಕ್ಸಿ ಎಂ20ರ ಬೆಲೆ 4GB+64GB ಮಾದರಿಗೆ ರೂ. 12,990 ಹಾಗೂ 3GB+32GB ಮಾದರಿಗೆ ರೂ. 10,990 ಇರಲಿದೆ. ಗೆಲಾಕ್ಸಿ ಎಂ10ರ ಬೆಲೆ 3GB+32GB ಮಾದರಿಗೆ ರೂ. 8,990 ಹಾಗೂ 2GB+16GB ಮಾದರಿಗೆ ರೂ. 7,990 ಇದೆ.

ಡಬಲ್ ಡೇಟಾ ಕೊಡುಗೆ
1. ಡಬಲ್ ಡಾಟಾ ಕೊಡುಗೆಯು ರೂ. 3,110ವರೆಗಿನ ಮೌಲ್ಯದ ಉಳಿತಾಯವನ್ನು ನೀಡಲಿದೆ.

2. 2019ರ ಫೆಬ್ರುವರಿ 5ರಂದು ಅಥವಾ ಆನಂತರ ಸ್ಯಾಮ್‌ಸಂಗ್ ಗೆಲಾಕ್ಸಿ ಎಂ20 ಅಥವಾ ಎಂ10 ಖರೀದಿಸುವ ಜಿಯೋ ಸೇವೆಗಳ ಸಕ್ರಿಯ ಪ್ರಿಪೇಡ್ ಚಂದಾದಾರರು ಈ ಕೊಡುಗೆಯನ್ನು ಪಡೆಯಬಹುದಾಗಿದೆ.

3. ಈ ಕೊಡುಗೆಯನ್ನು ಪಡೆಯಲು ಗೆಲಾಕ್ಸಿ ಎಂ ಸರಣಿಯ ಬಳಕೆದಾರರು ಫೆಬ್ರವರಿ 5ರಂದು ಅಥವಾ ಆನಂತರ ರೂ. 198  ಅಥವಾ ರೂ. 299 ಮೌಲ್ಯದ ರೀಚಾರ್ಜ್ ಮಾಡಿಸಬೇಕು.

4. ಈ ಕೊಡುಗೆಯು ಫೆಬ್ರವರಿ 5 ರಿಂದ ಮೇ 5ರವರೆಗೆ ಲಭ್ಯವಿರಲಿದೆ.

5. ಡಬಲ್ ಡೇಟಾವನ್ನು 10 ಡಬಲ್ ಡಾಟಾ ವೋಚರ್‌ಗಳ ರೂಪದಲ್ಲಿ ಅರ್ಹ ಬಳಕೆದಾರರಿಗೆ ನೀಡಲಾಗುವುದು. ಆ ವೋಚರ್‌ಗಳನ್ನು ಫೆಬ್ರವರಿ 5 ಮತ್ತು 2020ರ ಜೂನ್ 30ನಡುವೆ ಬಳಸಿಕೊಳ್ಳಬಹುದು.

6. ಪ್ರತಿ ರೀಚಾರ್ಜ್‌ಗೆ ಒಂದು ಡಬಲ್ ಡೇಟಾ ವೋಚರಿನಂತೆ ನಿಗದಿತ ಅವಧಿಯಲ್ಲಿ ಗರಿಷ್ಠ 10 ರೀಚಾರ್ಜುಗಳಿಗೆ ಬಳಕೆದಾರರು ಈ ವೋಚರುಗಳನ್ನು ಬಳಸಬಹುದು.

7. ಎಂ ಸರಣಿಯ ಸಾಧನಗಳ ಎಲ್ಲ ಭಾರತೀಯ ಆವೃತ್ತಿಗಳ ಮೇಲೆ ಈ ಕೊಡುಗೆ ಲಭ್ಯ.

ಸಾಧನದ ವಿವರಗಳು 
ಗೆಲಾಕ್ಸಿ ಎಂ20 ನೈಜ FHD+ಗುಣಮಟ್ಟದ 6.3” FHD ಇನ್‌ಫಿನಿಟಿ-ವಿ ಡಿಸ್‌ಪ್ಲೇ ಹೊಂದಿದ್ದು, ಗೆಲಾಕ್ಸಿ ಎಂ10 ಮಾದರಿಯಲ್ಲಿ HD ಗುಣಮಟ್ಟದ 6.2” ” HD+  ಇನ್‌ಫಿನಿಟಿ ವಿ ಡಿಸ್‌ಪ್ಲೇ ಇದೆ. ಈ ಪರದೆಗಳು ನಿಜಕ್ಕೂ ಆವರಿಸಿಕೊಳ್ಳುವಂತಹ ವೀಕ್ಷಣೆಯ ಅನುಭವ ನೀಡುತ್ತವೆ. ಗೆಲಾಕ್ಸಿ ಎಂ20 ಹಾಗೂ ಎಂ10 ಎರಡೂ ಮಾದರಿಗಳು ಜನಪ್ರಿಯ ಆಪ್‌ಗಳ ಮೂಲಕ ಎಚ್‌ಡಿ ಕಂಟೆಂಟ್‌ನ ಅಡೆತಡೆಗಳಿಲ್ಲದ ಪ್ರಸಾರಕ್ಕೆ Widevine L1 ಪ್ರಮಾಣೀಕೃತವಾಗಿವೆ.

ಸಂಗೀತ ಮತ್ತು ವಿಡಿಯೋದ ತಡೆರಹಿತ ಸ್ಟ್ರೀಮಿಂಗ್‌ಗಾಗಿ ಗೆಲಾಕ್ಸಿ ಎಂ20 ಮಾದರಿಯಲ್ಲಿ ಸ್ಯಾಮ್‌ಸಂಗ್ ಶಕ್ತಿಶಾಲಿಯಾದ 5000 mAh ಬ್ಯಾಟರಿಯನ್ನು ನೀಡಿದೆ. ಅಷ್ಟೇ ಅಲ್ಲ, ಇದರಲ್ಲಿರುವ ಪವರ್ ಮ್ಯಾನೇಜ್‌ಮೆಂಟ್ ಸೌಲಭ್ಯ ಹಲವು ಹಂತಗಳ ತಂತ್ರಜ್ಞಾನ ವ್ಯವಸ್ಥೆಯಿಂದ ಕೂಡಿದ್ದು ಕಡಿಮೆ ವಿದ್ಯುತ್ ಬಳಕೆಯನ್ನು ಸಾಧ್ಯವಾಗಿಸುತ್ತದೆ. ಬಾಕ್ಸ್‌ನಲ್ಲೇ ಬರುವ 15W ಚಾರ್ಜರ್ ಹಾಗೂ ಟೈಪ್ ಸಿ ಫಾಸ್ಟ್ ಚಾರ್ಜಿಂಗ್ ಸಹಾಯದಿಂದ ಸಾಮಾನ್ಯ ಚಾರ್ಜಿಂಗ್‌ಗಿಂತ ಮೂರು ಪಟ್ಟು ಬೇಗನೆ ಚಾರ್ಜ್ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ.

ಗೆಲಾಕ್ಸಿ ಎಂ20 ಮಾದರಿಯಲ್ಲಿ ಸ್ಯಾಮ್‌ಸಂಗ್‌ನ ಹೊಚ್ಚಹೊಸ Exynos 7904 ಆಕ್ಟಾ ಕೋರ್ ಪ್ರಾಸೆಸರ್ ಇದ್ದು, ಅದು ಅತ್ಯುತ್ತಮ ನೆಟ್‌ವರ್ಕ್ ವೇಗ, ಸುಲಲಿತ ಮಲ್ಟಿಟಾಸ್ಕಿಂಗ್ ಹಾಗೂ ಕಡಿಮೆ ವಿದ್ಯುತ್ ಬಳಕೆಯ ಮೂಲಕ ಬಳಕೆದಾರರ ಅನುಭವವನ್ನು ಉತ್ತಮಪಡಿಸುತ್ತದೆ. ಗೆಲಾಕ್ಸಿ ಎಂ10 ಮಾದರಿಯಲ್ಲಿ Exynos 7870 ಆಕ್ಟಾ ಕೋರ್ ಪ್ರಾಸೆಸರ್ ಇದೆ.

ಗ್ರಾಹಕರ ಸುರಕ್ಷತೆಯನ್ನು ಹೆಚ್ಚಿಸಲು ಗೆಲಾಕ್ಸಿ ಎಂ20 ಫಿಂಗರ್‌ಪ್ರಿಂಟ್ ಹಾಗೂ ಫೇಸ್ ಅನ್‌ಲಾಕ್ ಸೌಲಭ್ಯಗಳನ್ನು ನೀಡುತ್ತದೆ. ಗೆಲಾಕ್ಸಿ ಎಂ10 ಮಾದರಿಯಲ್ಲಿ ಫೇಸ್ ರೆಕಗ್ನಿಶನ್ ಅನ್‌ಲಾಕ್ ಸೌಲಭ್ಯ ಇದೆ.

ಶಕ್ತಿಶಾಲಿಯಾದ ಜೋಡಿ (ಡ್ಯುಯಲ್) ಕ್ಯಾಮೆರಾ ಗೆಲಾಕ್ಸಿ ಎಂ ಸರಣಿಯ ಇನ್ನೊಂದು ಪ್ರಮುಖಾಂಶವಾಗಿದ್ದು, ಚಲನೆಯಲ್ಲೇ ಫೋಟೋಗಳನ್ನೂ ವೀಡಿಯೋಗಳನ್ನೂ ಸೆರೆಹಿಡಿಯಲು ಬಯಸುವ ಇಂದಿನ ಯುವಜನತೆಗೆ ಸೂಕ್ತವಾಗಿದೆ. ಗೆಲಾಕ್ಸಿ ಎಂ20 ಹಾಗೂ ಎಂ10 ಎರಡರಲ್ಲೂ ಅಲ್ಟ್ರಾ ವೈಡ್ ಸೌಲಭ್ಯವಿರುವ ಜೋಡಿ ಪ್ರಾಥಮಿಕ ಕ್ಯಾಮೆರಾ (ಡ್ಯುಯಲ್ ರಿಯರ್ ಕ್ಯಾಮೆರಾ) ಇದೆ. ಎರಡೂ ಮಾದರಿಗಳಲ್ಲಿ F1.9 ಅಪರ್ಚರ್‌ನ 13MP ಪ್ರಾಥಮಿಕ ಕ್ಯಾಮೆರಾ ಇದೆ. ಎರಡನೆಯ (ಸೆಕೆಂಡರಿ) ಕ್ಯಾಮೆರಾದಲ್ಲಿ 5MP ಅಲ್ಟ್ರಾ ವೈಡ್ ಸೌಲಭ್ಯ ಇದೆ.

ಅಲ್ಟ್ರಾ ವೈಡ್ ಸೌಲಭ್ಯ ಬಳಸುವ ಗ್ರಾಹಕರು ಬಹಳ ಸುಲಭವಾಗಿ ಹೆಚ್ಚು ವಿಸ್ತಾರವಾದ ಚಿತ್ರಗಳನ್ನು ಸೆರೆಹಿಡಿಯಬಹುದು. ಲ್ಯಾಂಡ್‌ಸ್ಕೇಪ್, ಸಿಟಿಸ್ಕೇಪ್, ಗುಂಪು ಛಾಯಾಚಿತ್ರಗಳನ್ನೆಲ್ಲ ಸೆರೆಹಿಡಿಯುವಾಗ ಒಂದೇ ಫ್ರೇಮಿನೊಳಗೆ ಹೆಚ್ಚಿನ ವಿವರಗಳನ್ನು ಸೇರಿಸಲು ಇದು ಅತ್ಯುತ್ತಮ ಆಯ್ಕೆ.

ಗೆಲಾಕ್ಸಿ ಎಂ20 ಹಾಗೂ ಎಂ10 ಎರಡರಲ್ಲೂ ಅತ್ಯುತ್ತಮ ಲೋ ಅಪರ್ಚರ್ ಲೆನ್ಸ್‌ಗಳಿದ್ದು, ಗ್ರಾಹಕರು ಕಡಿಮೆ ಬೆಳಕಿನಲ್ಲೂ ಉತ್ತಮ ಹಾಗೂ ಸ್ಪಷ್ಟ ಚಿತ್ರಗಳನ್ನು ಸೆರೆಹಿಡಿಯುವುದನ್ನು ಸಾಧ್ಯವಾಗುಸುತ್ತವೆ. ಜೋಡಿ ಪ್ರಾಥಮಿಕ ಕ್ಯಾಮೆರಾ ವ್ಯವಸ್ಥೆ ಅತ್ಯುತ್ತಮ ಲೈವ್ ಫೋಕಸ್ ಪೋರ್ಟ್‌ರೇಟ್ ಚಿತ್ರಗಳನ್ನೂ ಸಾಧ್ಯವಾಗಿಸುತ್ತದೆ. ಜೊತೆಗೆ, ವೇಗದ ಹಾಗೂ ಸರಾಗವಾದ ಬಳಕೆಗೆ ಸೂಕ್ತವಾದ ಹೊಸ ಸ್ಯಾಮ್‌ಸಂಗ್ ಎಕ್ಸ್‌ಪೀರಿಯೆನ್ಸ್ 9.5 ಆವೃತ್ತಿಯ ಖೀಗಿ ಕೂಡ ಗೆಲಾಕ್ಸಿ ಎಂ ಸರಣಿಯ ಸಾಧನಗಳಲ್ಲಿದೆ.

ಗೆಲಾಕ್ಸಿ ಎಂ20 ಹಾಗೂ ಎಂ10 ಎರಡೂ ಮಾದರಿಗಳು 512 ಜಿಬಿಗೆ ವಿಸ್ತರಿಸಬಹುದಾದ ಪ್ರತ್ಯೇಕ ಸ್ಟೋರೇಜ್ ಸ್ಲಾಟ್ ಹೊಂದಿವೆ. ಎರಡೂ ಮಾದರಿಗಳಲ್ಲಿ ಡ್ಯುಯಲ್ ಸಿಮ್ ವಿಓಎಲ್‌ಟಿಇ ಬೆಂಬಲ ಇದೆ.

ಟಾಪ್ ನ್ಯೂಸ್

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…ಡ್ರೋನ್‌ ಏರ್‌ಟ್ಯಾಕ್ಸಿ

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

CT RAVI 2

C T Ravi; ಸನಾತನ ಧರ್ಮ ಉಳಿದರೆ ದೇಶದ ಉಳಿವು

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

Tiger

Gundlupet: ಬಂಡೆ ಮೇಲೆ ಹುಲಿ; ಆತಂಕ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.