Samsung Galaxy S23 Plus: ಇದರಲ್ಲಿ ಏನೇನು ವೈಶಿಷ್ಟ್ಯ ಇದೆ ನೋಡಿ
Team Udayavani, Apr 18, 2023, 6:40 PM IST
ಆಂಡ್ರಾಯ್ಡ್ ಫೋನ್ ಗಳಲ್ಲಿ ಪ್ರೀಮಿಯಂ ಫೋನ್ ಬಯಸುವವರು ಸಾಮಾನ್ಯವಾಗಿ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ ಸರಣಿಯ ಸ್ಮಾರ್ಟ್ ಫೋನ್ ಗಳತ್ತ ಮೊದಲ ನೋಟ ಹರಿಸುತ್ತಾರೆ. ಸಾಮಾನ್ಯವಾಗಿ ಪ್ರೀಮಿಯಂ ಫೋನ್ ಗಳಲ್ಲಿ ಐಫೋನ್ ಇಷ್ಟಪಡುವವರು ಐಫೋನ್ ಪರಿಗಣಿಸುತ್ತಾರೆ. ಐಓಎಸ್ ಇಷ್ಟಪಡದೆ, ತಮಗೆ ಎಲ್ಲ ರೀತಿಯ ಆಪ್ ಗಳು, ಸ್ವತಂತ್ರ ಅನುಕೂಲತೆಗಳು ಬೇಕೆನ್ನುವವರು ಆಂಡ್ರಾಯ್ಡ್ ನತ್ತಲೇ ಮುಖಮಾಡುತ್ತಾರೆ. ಐಫೋನ್ ಗೆ ಸಮನಾದ ಫೋನ್ ಬೇಕೆಂದಾಗ ಅವರು ಪರಿಗಣಿಸುವುದು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ ಸರಣಿಯತ್ತ. ಈ ವರ್ಷ ಅದು ಹೊರತಂದಿರುವ ಎಸ್ 23 ಪ್ಲಸ್ ನ ಗುಣ ವೈಶಿಷ್ಟ್ಯಗಳು ಇಲ್ಲಿವೆ.
ವಿನ್ಯಾಸ: Samsung Galaxy S23+ ಸರಳವಾದ ಸೊಗಸಾದ ವಿನ್ಯಾಸವನ್ನು ಹೊಂದಿದೆ. ಲೋಹದ ಚೌಕಟ್ಟು (ಫ್ರೇಂ) ಬಿಳಿಯ ಬಣ್ಣದ ಗಾಜಿನ ಹಿಂಬದಿ ಬ್ಯಾಕ್ ಪ್ಯಾನಲ್ ಇದೆ. ಮೆಟಲ್ ಫ್ರೇಂ ಮತ್ತು ಗಾಜಿನ ಹಿಂಬದಿ ಫೋನಿಗೆ ಐಷಾರಾಮಿ ಸ್ಪರ್ಶ ನೀಡಿದೆ. ಹಿಂಬದಿಯ ಎಡ ಮೂಲೆಯಲ್ಲಿ ಮೂರು ಕ್ಯಾಮರಾಗಳ ಲೆನ್ಸ್ ಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಪಕ್ಕದಲ್ಲಿ ಕ್ಯಾಮರಾ ಫ್ಲಾಶ್ ಇದೆ. ಫೋನಿನ ಫ್ರೇಂ ನ ಮೂಲೆಗಳು ಅರ್ಧ ವೃತ್ತಾಕಾರದಲ್ಲಿವೆ. ಫೋನಿನ ತಳಭಾಗದಲ್ಲಿ ಸಿಮ್ ಹಾಕುವ ಟ್ರೇ, ಟೈಪ್ ಸಿ ಪೋರ್ಟ್, ಸ್ಪೀಕರ್ ಗ್ರಿಲ್ ಇದೆ. ಬಲಭಾಗದಲ್ಲಿ ಶಬ್ದ ಹೆಚ್ಚಿಸುವ ಕಡಿಮೆ ಮಾಡುವ ಬಟನ್ ಮತ್ತು ಆನ್ ಆಫ್ ಮಾಡುವ ಬಟನ್ ಗಳಿವೆ. ಫೋನಿನ ಮೇಲ್ಭಾಗ ಹಾಗೂ ಎಡಭಾಗದಲ್ಲಿ ಯಾವುದೇ ಬಟನ್ ಅಥವಾ ಪೋರ್ಟ್ ಇಲ್ಲ. ಪ್ರೀಮಿಯಂ ಫೋನ್ ಗಳಲ್ಲಿ ಈಗ 3.5 ಎಂ.ಎಂ. ಆಡಿಯೋ ಪೋರ್ಟ್ ಇರುವುದಿಲ್ಲ. ಕಾರಣ ವೈರ್ ಲೆಸ್ ಇಯರ್ ಬಡ್ ಗಳು ಜನಪ್ರಿಯವಾಗಿರುವುದು. ಹಾಗೆಯೇ ಈ ಫೋನಿನಲ್ಲೂ ಆಡಿಯೋ ಜಾಕ್ ಗೆ ಬೇಕಾದ ರಂಧ್ರ ಇಲ್ಲ. ಲೋಹದ ಫ್ರೇಂ, ಬ್ಯಾಕ್ ಗ್ಲಾಸ್ ನಿಂದಾಗಿ ಫೋನಿನ ವಿನ್ಯಾಸ ಗಮನ ಸೆಳೆಯುತ್ತದೆ. ಬ್ಯಾಕ್ ಕವರ್ ಬಳಸದೇ ಹೋದರೂ ಫೋನು ಕೈಯಲ್ಲಿ ಜಾರುವುದಿಲ್ಲ.
ಪರದೆ: Galaxy S23+ 6.6-ಇಂಚಿನ FHD+ ಪರದೆ ಹೊಂದಿದೆ. ಫೋನಿನ ನಾಲ್ಕೂ ಬದಿಗಳಲ್ಲೂ ಒಂದೇ ಅಳತೆಯ ಬಹಳ ತೆಳುವಾದ ಬೆಜೆಲ್ ಹೊಂದಿದೆ. ತಳಭಾಗದಲ್ಲಿ ಬೆಜೆಲ್ ಅನ್ನು ದೊಡ್ಡದು ಮಾಡಿಲ್ಲ. ಹೀಗಾಗಿ ಪರದೆಯ ಅಳತೆ 6.6 ಇಂಚು ಇದ್ದಾಗಲೂ ಫೋನು ದೊಡ್ಡ ಗಾತ್ರ ಎನಿಸುವುದಿಲ್ಲ. ಮೇಲಿನ ಜೇಬಿನಲ್ಲಿ ಸುಲಭವಾಗಿ ಇರಿಸಿಕೊಳ್ಳಬಹುದಾಗಿದೆ. ಒಂದು ಕೈಯಿಂದ ಫೋನನ್ನು ನಿರ್ವಹಿಸುವುದು ತುಂಬಾ ಸುಲಭ.
ಇದು ಡೈನಾಮಿಕ್ 120Hz LTPO ಡಿಸ್ ಪ್ಲೇ ಹೊಂದಿದೆ. ಎಲ್ ಟಿ ಪಿ ಓ ದುಬಾರಿ ಫೋನ್ ಗಲ್ಲಿ ಕಂಡು ಬರುವ ಅತ್ಯುನ್ನತ ಮಟ್ಟದ ಡಿಸ್ ಪ್ಲೇ. ನೀರಿನ ಹನಿ ಮತ್ತು ಗೀರುಗಳ ವಿರುದ್ಧ ರಕ್ಷಣೆಗಾಗಿ ಪರದೆಯ ಮೇಲಿನ ಪದರದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಲೇಪನವನ್ನು ಹೊಂದಿದೆ. ಇದು ಕಡಿಮೆ ಅಂತರದಿಂದ ಫೋನ್ ಕೆಳಗೆ ಬಿದ್ದಾಗ ರಕ್ಷಣೆ ನೀಡುತ್ತದೆ. ಆದರೂ ಸುರಕ್ಷತೆಯ ದೃಷ್ಟಿಯಿಂದ ಪರದೆಗೆ ಟೆಂಪರ್ಡ್ ಗ್ಲಾಸ್ ಹಾಗೂ ಫೋನಿಗೆ ಬ್ಯಾಕ್ ಕೇಸ್ ಹಾಕಿಕೊಳ್ಳುವುದು ಒಳಿತು.
ಫೋನಿನ ಡಿಸ್ ಪ್ಲೇ ಗುಣಮಟ್ಟ ತುಂಬಾ ಚೆನ್ನಾಗಿದೆ. ಬಿರು ಬಿಸಿಲಿನಲ್ಲೂ ಪರದೆಯ ಮೇಲಿನ ಅಕ್ಷರಗಳು, ಚಿತ್ರಗಳು ಸ್ಪಷ್ಟವಾಗಿ ಕಾಣುತ್ತವೆ. 120 ಹರ್ಟ್ಜ್ ರಿಫ್ರೆಶ್ ರೇಟ್ ಇದೆ. ಸೆಟಿಂಗ್ ಗೆ ಹೋಗಿ 120 ಹರ್ಟ್ಜ್ ಅಥವಾ 60 ಹರ್ಟ್ಜ್ ಗೆ ನಿಲ್ಲಿಸಿಕೊಳ್ಳಬಹುದು. ರಿಫ್ರೆಶ್ ರೇಟ್ ಹೆಚ್ಚಿದ್ದಾಗ ಪರದೆಯನ್ನು ಸ್ಕ್ರಾಲ್ ಮಾಡಿದಾಗ ಸಣ್ಣ ಅಡೆ ತಡೆಯೂ ಇಲ್ಲದಂತೆ ಸರಾಗವಾಗಿ ಮೇಲೆ ಹೋಗುತ್ತದೆ. ಕಡಿಮೆಯಲ್ಲಿ ಒಂದಿನಿತು ತಡೆ ಬರುತ್ತದೆ. ಆದರೆ ಕಡಿಮೆ ರಿಫ್ರೆಶ್ ರೇಟ್ ನಲ್ಲಿಟ್ಟಾಗ ಮೊಬೈಲ್ ನ ಬ್ಯಾಟರಿ ಹೆಚ್ಚು ಬಾಳಿಕೆ ಬರುತ್ತದೆ. ಇದು ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಪರದೆಯ ಮೇಲೆಯೇ ಹೊಂದಿದೆ. ಬೆರಳು ತಾಕಿದೊಡನೆಯೇ ಬಹಳ ವೇಗವಾಗಿ ಸೂಕ್ಷ್ಮವಾಗಿ ಫೋನ್ ಅನ್ ಲಾಕ್ ಆಗುತ್ತದೆ.
ಕಾರ್ಯಾಚರಣೆ: ಇದರಲ್ಲಿ ಸದ್ಯದ ಆಂಡ್ರಾಯ್ಡ್ ಫೋನುಗಳ ಅತ್ಯಂತ ಪವರ್ ಫುಲ್ ಪ್ರೊಸೆಸರ್ ಸ್ನಾಪ್‌ಡ್ರಾಗನ್ 8 Gen 2 SoC ಅನ್ನು ಅಳವಡಿಸಲಾಗಿದೆ. ಹೀಗಾಗಿ ಮೊಬೈಲ್ ಫೋನಿನ ಕಾರ್ಯಾಚರಣೆ ಬಹಳ ನಯವಾಗಿದೆ. ಮಲ್ಟಿ-ಟಾಸ್ಕಿಂಗ್, ವೀಡಿಯೊ ಎಡಿಟಿಂಗ್, ಗೇಮಿಂಗ್ ಎಲ್ಲವನ್ನೂ ನಿರಾಯಾಸವಾಗಿ ನಿಭಾಯಿಸುತ್ತದೆ. ತಾಪ ನಿಯಂತ್ರಣದ ವಿಷಯದಲ್ಲಿ ಸುಧಾರಣೆಯಾಗಿದೆ. ಒಂದು ಗಂಟೆಗೂ ಹೆಚ್ಚು ಕಾಲ ಹೆವಿ ಅಪ್ಲಿಕೇಶನ್‌ಗಳು ಮತ್ತು ಗೇಮ್ ಗಳನ್ನು ಬಳಸಿದ ನಂತರವೂ ಮೊಬೈಲ್ ಫೋನ್ ಬಿಸಿಯಾಗುವುದಿಲ್ಲ.
Galaxy S23+ ಸ್ಯಾಮ್‌ಸಂಗ್‌ನ ಕಸ್ಟಮ್ One UI 5.1 ಸ್ಕಿನ್ ಹೊಂದಿದೆ. ಇದು Android 13 ಕಾರ್ಯಾಚರಣೆ ಹೊಂದಿದೆ. ಕಂಪನಿಯು ನಾಲ್ಕು ವರ್ಷಗಳ ಪ್ರಮುಖ ಆಂಡ್ರಾಯ್ಡ್ ಓಎಸ್ ಅಪ್‌ಡೇಟ್ ಗಳು ಮತ್ತು ಐದು ವರ್ಷಗಳ ಸೆಕ್ಯುರಿಟಿ ಪ್ಯಾಚ್‌ಗಳನ್ನು ನೀಡುವುದಾಗಿ ಭರವಸೆ ನೀಡಿದೆ.
ಇನ್ನು ಸ್ಯಾಮ್ ಸಂಗ್ ಒನ್ ಯೂಸರ್ ಇಂಟರ್ ಫೇಸ್ , ಫ್ಯಾನ್ ಗಳಿಗೆ ಚಿರಪರಿಚಿತ. ಹಿಂದಿನ ಫೋನ್ ಗಳಂತೆಯೇ ಅದು ಮುಂದುವರೆದಿದೆ. ಇತ್ತೀಚಿನ ಬಹುತೇಕ ಆಂಡ್ರಾಯ್ಡ್ ಫೋನ್ ಗಳಲ್ಲಿ ಕರೆ ಮಾಡುವವರು ಕಾಲ್ ರೆಕಾರ್ಡ್ ಮಾಡಿಕೊಂಡರೆ, ಈ ಕರೆ ರೆಕಾರ್ಡ್ ಆಗುತ್ತಿದೆ ಎಂಬ ಸಂದೇಶ ಎರಡೂ ಬದಿಯ ಕಾಲರ್ ಗಳಿಗೆ ಕೇಳಿಬರುತ್ತದೆ. ಆದರೆ ಈ ಫೋನಿನಲ್ಲಿ ಆ ರೀತಿಯ ಸಂದೇಶ ಬರುವುದಿಲ್ಲ. ಸ್ಯಾಮ್ ಸಂಗ್ ಆಂಡ್ರಾಯ್ಡ್ ಓಎಸ್ ಜೊತೆ ತನ್ನ ಒನ್ ಯೂ ಐ ಸೇರಿಸಿರುವುದರಿಂದ ರೆಕಾರ್ಡ್ ಸಂದೇಶ ಇದರಲ್ಲಿ ಬರುವುದಿಲ್ಲ ಎನಿಸುತ್ತದೆ.
ಕ್ಯಾಮೆರಾ:
Samsung Galaxy S23+ ಉತ್ತಮ ಛಾಯಾಗ್ರಹಣ ಅನುಭವವನ್ನು ನೀಡುತ್ತದೆ. ಇದು ಹಿಂಬದಿಯಲ್ಲಿ 50 +12+ 10 ಮೆಗಾಪಿಕ್ಸಲ್ ಮೂರು ಲೆನ್ಸಿನ ಕ್ಯಾಮರಾ ಹೊಂದಿದೆ. ಸೆಲ್ಫೀ ಗೆ 12 ಮೆ.ಪಿ.ಕ್ಯಾಮರಾ ಇದೆ. ಫೋಟೋಗಳು ಬಹಳ ಸ್ಪಷ್ಟವಾಗಿ, ಡೀಟೇಲ್ ಆಗಿ ಮೂಡಿಬರುತ್ತವೆ. ನೈಟ್ ಮೋಡ್ನಲ್ಲಿ ಕಡಿಮೆ ಬೆಳಕು ಇದ್ದರೂ ಸಹ, ಸ್ಪಷ್ಟ ಚಿತ್ರವನ್ನು ನೀಡುತ್ತದೆ. ಸೆಲ್ಫೀ ಸಹ ಉತ್ತಮವಾಗಿ ಮೂಡಿಬರುತ್ತದೆ. ಈ ಫೋನ್ ಕೈಯಲ್ಲಿದ್ದರೆ, ಸಾಮಾನ್ಯ ಕ್ಯಾಮರಾವೊಂದು ಜೊತೆಯಲ್ಲಿದ್ದಂತೆ.
ಬ್ಯಾಟರಿ: ಇದು 4700 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ. ಬ್ಯಾಟರಿ ಒಂದು ದಿನದ ಬಾಳಿಕೆ ಬರುತ್ತದೆ. ಸಾಮಾನ್ಯವಾಗಿ ಪ್ರೀಮಿಯಂ ಫೋನ್ ಗಳಲ್ಲಿ ಒಂದು ದಿನಕ್ಕೆ ಎರಡು ಮೂರು ಬಾರಿ ಚಾರ್ಜ್ ಮಾಡಬೇಕಾಗುತ್ತದೆ. ಆದರೆ ಈ ಫೋನಿನಲ್ಲಿ ಬೆಳಿಗ್ಗೆ ಶೇ. 100 ಚಾರ್ಜ್ ಮಾಡಿದರೆ, ಸಾಮಾನ್ಯ ಬಳಕೆ, (ವಾಟ್ಸಪ್, ಫೇಸ್ ಬುಕ್, ಕರೆಗಳು, ಕ್ಯಾಮರಾ ಬಳಕೆ ಇಂತಹ ಮಧ್ಯಮ ಬಳಕೆಗೆ) ಸಂಜೆ 7 ಗಂಟೆಯವರೆಗೂ ಬ್ಯಾಟರಿ ಉಳಿಯುತ್ತದೆ. ಆದರೆ ಇದಕ್ಕೆ ಅತ್ಯಂತ ವೇಗದ ಚಾರ್ಜಿಂಗ್ ಸೌಲಭ್ಯ ನೀಡಿಲ್ಲ. 45 ವ್ಯಾಟ್ಸ್ ಚಾರ್ಜಿಂಗ್ ನೀಡಿದೆ. ಶೇ. 1 ರಿಂದ 100 ರವೆರಗೆ ಚಾರ್ಜ್ ಆಗಲು ಇದು ಸುಮಾರು ಒಂದು ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಪ್ರತಿಸ್ಪರ್ಧಿ ಕಂಪೆನಿಗಳು ಈಗ 80 ವ್ಯಾಟ್ಸ್, 100 ವ್ಯಾಟ್ಸ್ ತ್ವರಿತ ವೇಗದ ಚಾರ್ಜರ್ ನೀಡುತ್ತಿವೆ. ಸ್ಯಾಮ್ ಸಂಗ್ ನಿಂದಲೂ ಇಷ್ಟು ವೇಗದ ಚಾರ್ಜಿಂಗ್ ಸೌಲಭ್ಯವನ್ನು ಗ್ರಾಹಕರು ಬಯಸುತ್ತಾರೆ. ಜೊತೆಗೆ ಇದರ ಬಾಕ್ಸ್ ಜತೆ ಚಾರ್ಜರ್ ಬರುವುದಿಲ್ಲ. ಗ್ರಾಹಕ ಪ್ರತ್ಯೇಕವಾಗಿ ಚಾರ್ಜರ್ ಕೊಳ್ಳಬೇಕು. ಇದು ಸಹ ಒಂದು ಕೊರತೆಯಾಗಿದೆ. ಇಷ್ಟು ದುಬಾರಿ ಹಣ ನೀಡಿಯೂ ಗ್ರಾಹಕನಿಗೆ ಮೊಬೈಲ್ ಜೊತೆ ಚಾರ್ಜರ್ ನೀಡುವುದಿಲ್ಲ ಎಂಬ ಅಸಮಾಧಾನ ಬರುತ್ತದೆ. ಹಾಗಾಗಿ ಮುಂದಿನ ಬಿಡುಗಡೆಗಳಲ್ಲಿ ಸ್ಯಾಮ್ ಸಂಗ್ ಕಂಪೆನಿ ಅತ್ಯಂತ ವೇಗದ ಸೂಪರ್ ಚಾರ್ಜಿಂಗ್ ಸೌಲಭ್ಯ ಮತ್ತು ಚಾರ್ಜರ್ ಅನ್ನು ಮೊಬೈಲ್ ಜೊತೆ ನೀಡಬೇಕಾಗಿದೆ.
Samsung Galaxy S23+ ಬೆಲೆ 94,999 ರೂ. ಆಗಿದೆ. (8 GB RAM ಮತ್ತು 256 ಜಿಬಿ ಸ್ಟೋರೇಜ್)
ಸಾರಾಂಶ: ಶ್ರೀಮಂತಿಕೆಯ ವಿನ್ಯಾಸ, ಮೃದುವಾದ ಕಾರ್ಯಾಚರಣೆ ಮತ್ತು ಗಮನ ಸೆಳೆಯುವ ಡಿಸ್ ಪ್ಲೇ, ಉತ್ತಮ ಬ್ಯಾಟರಿ ಬಾಳಿಕೆ, ಉತ್ತಮ ಕ್ಯಾಮೆರಾ ನಾಲ್ಕು ವರ್ಷಗಳ ಆಂಡ್ರಾಯ್ಡ್ ಅಪ್ ಡೇಟ್ ಹೊಂದಿದೆ. ಐಫೋನ್ ಗೆ ಸರಿಸಾಟಿಯಾಗಬಲ್ಲ ಆಂಡ್ರಾಯ್ಡ್ ಫೋನ್ ಬೇಕು ಅನ್ನುವ ಗ್ರಾಹಕರಿಗೆ ಇದು ಉತ್ತಮ ಪರ್ಯಾಯ ಎಂದು ಹೇಳಬಹುದು.
-ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.