ಸ್ಯಾಮ್‍ಸಂಗ್ ಗೆಲಾಕ್ಸಿ ವಾಚ್ 5 ಪ್ರೊ: ಹಲವು ವೈಶಿಷ್ಟ್ಯಗಳುವುಳ್ಳ ಆಂಡ್ರಾಯ್ಡ್ ವಾಚ್
Team Udayavani, Oct 13, 2022, 10:27 AM IST
ಈಗ ಸ್ಮಾರ್ಟ್ ವಾಚ್ ಧರಿಸುವುದು ಟ್ರೆಂಡ್ ಆಗಿದೆ. ಒಂದೆರಡು ವರ್ಷಗಳ ಹಿಂದೆ ಸ್ಮಾರ್ಟ್ ಬ್ಯಾಂಡ್‍ಗಳನ್ನು ಕಟ್ಟುತ್ತಿದ್ದವರೆಲ್ಲ ಈಗ ಸ್ಮಾರ್ಟ್ ವಾಚ್ ಗೆ ಅಪ್ ಡೇಟ್ ಆಗಿದ್ದಾರೆ. 1500 ರೂ. ಗಳಿಂದ ಹಿಡಿದು, 50-60 ಸಾವಿರ ರೂ.ಗಳವರೆಗೂ ಸ್ಮಾರ್ಟ್ ವಾಚ್‍ಗಳು ಭಾರತದ ಮಾರುಕಟ್ಟೆಯಲ್ಲಿವೆ. ಭಾರತದ ಮಾರುಕಟ್ಟೆಯಲ್ಲಿ ಸ್ಯಾಮ್ ಸಂಗ್ ವಾಚ್‍ಗಳು ಪ್ರಮುಖ ಸ್ಥಾನವನ್ನು ಅಲಂಕರಿಸಿವೆ. ಪ್ರೀಮಿಯಂ ವಾಚ್ ಗಳ ವಿಭಾಗದಲ್ಲಿ ಸ್ಯಾಮ್ ಸಂಗ್ ಅಗ್ರಗಣ್ಯವಾಗಿದೆ. ಸ್ಯಾಮ್ ಸಂಗ್ ಇತ್ತೀಚಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಹೊಸ ವಾಚ್ ಗೆಲಾಕ್ಸಿ ವಾಚ್ 5 ಪ್ರೊ.
ಇದರಲ್ಲಿ ಎರಡು ಆವೃತ್ತಿಗಳಿವೆ. ವಾಚ್ 5 ಪ್ರೊ ಎಲ್‍ಟಿಇ (ಇ ಸಿಮ್ ವರ್ಷನ್), ವಾಚ್ 5 ಪ್ರೊ ಬಿಟಿ (ಬ್ಲೂ ಟೂತ್ ವರ್ಷನ್). ಕ್ರಮವಾಗಿ ಇವುಗಳ ದರ, 49,999 ರೂ. ಹಾಗೂ 44,999 ರೂ. ಈ ವಾಚಿನ ವೈಶಿಷ್ಟ್ಯಗಳನ್ನು ಇಲ್ಲಿ ನೀಡಲಾಗಿದೆ.
ವಿನ್ಯಾಸ: ಈ ವಾಚಿನ ಕೇಸ್ 45 ಮಿ.ಮೀ. ಇದೆ. ಇದರ ತೂಕ 47 ಗ್ರಾಂ ಇದೆ. (ಬೆಲ್ಟ್ ಹೊರತುಪಡಿಸಿ). ಇದು ಟೈಟಾನಿಯಂ ಕೇಸ್ ಹೊಂದಿದೆ. ಸ್ಯಾಫೈರ್ ಗಾಜಿನ ಡಿಸ್‍ಪ್ಲೇ ಹೊಂದಿದೆ. ಇದು ಡಿಸ್‍ಪ್ಲೇ ತರಚು, ಗೀರು ಆಗದಂತೆ ರಕ್ಷಿಸುತ್ತದೆ. ಐಪಿ 68 ರೇಟಿಂಗ್ ಹೊಂದಿದ್ದು, ಧೂಳು, ನೀರು ನಿರೋಧಕವಾಗಿದೆ. ವಾಚಿನ ವೃತ್ತಾಕಾರದ ಕೇಸಿನ ತುಸು ಆಚೆ ಬರುವಂತೆ ಎರಡು ಸಣ್ಣ ಬಟನ್ ನೀಡಲಾಗಿದೆ. ಇದನ್ನು ಮೆಲ್ಲಗೆ ಒತ್ತಿದಾಗ ಮೆನು ಆಯ್ಕೆಗೆ ಹೋಗಬಹುದು ಮತ್ತು ಮೆನುವಿನಿಂದ ಹೊರ ಬರಬಹುದು.
ವಾಚಿನ ಬೆಲ್ಟ್ ವಿನ್ಯಾಸ ಬಹಳ ಅನುಕೂಲಕರವಾಗಿದೆ. ಬೆಲ್ಟಿನಲ್ಲೇ ಚೈನಿನಂತೆ ನಮ್ಮ ಕೈ ಅಳತೆಗೆ ಎಷ್ಟು ಬೇಕೋ ಅಷ್ಟು ಸೈಜಿಗೆ ಕಟ್ಟಿಕೊಳ್ಳಬಹುದಾದ ಆಯ್ಕೆಯಿದೆ. ಸಾಮಾನ್ಯವಾಗಿ ಬೆಲ್ಟ್ ವಾಚುಗಳಲ್ಲಿ ರಂಧ್ರಗಳಿರುತ್ತವೆ. ನಿಮಗೆ ಬೇಕಾದ ಅಳತೆಗೆ ಕಟ್ಟಿಕೊಳ್ಳಬೇಕು. ಆದರೆ ಇದರಲ್ಲಿ ರಂಧ್ರಗಳಿಲ್ಲ. ಬೆಲ್ಟ್ ನಲ್ಲೇ ಬಕಲ್ ನೀಡಲಾಗಿದೆ. ಅದನ್ನು ನಿಮ್ಮ ಕೈಗೆ ಬೇಕಾದ ಅಳತೆಗೆ ಹೊಂದಿಸಿಕೊಳ್ಳಬಹುದು. ಸಿಲಿಕಾನ್ ಬೆಲ್ಟ್ ನೀಡಲಾಗಿದೆ. ಬೆಲ್ಟ್ ನ ಗುಣಮಟ್ಟ ಚೆನ್ನಾಗಿದೆ. ವಾಚು ಕೈಯಲ್ಲಿ ಕಟ್ಟಿಕೊಂಡಾಗ ಸ್ವಲ್ಪ ದಪ್ಪ ಎನಿಸುತ್ತದೆ. ಆದರೆ ಅದು ಈಗಿನ ಟ್ರೆಂಡ್ ಆದ್ದರಿಂದ ನೋಡಲು ಪ್ರೀಮಿಯಂ ಲುಕ್ ಹೊಂದಿದೆ.
ಪರದೆ: ಸ್ಯಾಮ್ ಸಂಗ್ ಫೋನ್ ಗಳ ಡಿಸ್‍ಪ್ಲೇ ಗುಣಮಟ್ಟಕ್ಕೆ ಪ್ರಸಿದ್ಧಿ. ಹಾಗೆಯೇ ಈ ವಾಚಿನಲ್ಲಿ 1.4 ಇಂಚಿನ ಸುಪರ್ ಅಮೋಲೆಡ್ ಡಿಸ್ ಪ್ಲೇ ಗೂ ಕೂಡ ಇದು ಅನ್ವಯಿಸುತ್ತದೆ. ಸುಂದರವಾದ ಡಿಸ್‍ಪ್ಲೇ, ಬಣ್ಣಗಳ ಹೊಂದಾಣಿಕೆ, ಅಕ್ಷರಗಳ ಸ್ಪಷ್ಟತೆ ಮತ್ತು ಚುರುಕಾದ ಟಚ್ ಸ್ಕ್ರೀನ್ ಅನುಭವ ದೊರಕುತ್ತದೆ.
ಟ್ಯಾಪ್ ಮಾಡುವಾಗ, ಸ್ವೈಪ್ ಮಾಡುವಾಗ ಯಾವುದೇ ಅಡೆತಡೆಯಿಲ್ಲದಂತೆ ಸರಾಗವಾದ ಅನುಭವ ನೀಡುತ್ತದೆ.
ಓಎಸ್: ಸ್ಯಾಮ್ ಸಂಗ್ ಮಾತೃ ತಯಾರಿಕೆಯಾದ ಎಕ್ಸಿನಾಸ್ ಡಬ್ಲೂ 920 ಪ್ರೊಸೆಸರ್ ಅನ್ನು ಇದು ಒಳಗೊಂಡಿದೆ. ಇದು ಗೂಗಲ್‍ನ ವಿಯರ್ ಓಎಸ್ ಕಾರ್ಯಾಚರಣೆ ಹೊಂದಿದ್ದು, ಸ್ಯಾಮ್‍ಸಂಗ್ ಒನ್ ಯೂಐ ಜೊತೆಗಿದೆ. ಮುಂಚೆ ಸ್ಯಾಮ್ ಸಂಗ್ ವಾಚ್‍ಗಳಿಗೆ ಟೈಜನ್ ಓಎಸ್ ಬಳಸುತ್ತಿತ್ತು. ಇದರಲ್ಲಿ ಗೂಗಲ್ ಪ್ಲೇ ಸ್ಟೋರ್ ಇದೆ. ಗೂಗಲ್ ಮ್ಯಾಪ್ ಸೇರಿದಂತೆ ಇನ್ನಿತರ ಗೂಗಲ್ ಆಪ್‍ಗಳನ್ನು ಇನ್ ಸ್ಟಾಲ್ ಮಾಡಿಕೊಳ್ಳಬಹುದು. ಸ್ಯಾಮ್ ಸಂಗ್ ಫೋನಿನಲ್ಲಿ ನೋಡುವ ಬಹುತೇಕ ಆಂಡ್ರಾಯ್ಡ್ ಆಪ್‍ಗಳು ಮೊದಲೇ ಇನ್ ಸ್ಟಾಲ್ ಆಗಿವೆ.
ಇದು 1.5 ರ್ಯಾಮ್ ಮತ್ತು 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಈಗಾಗಲೇ ಇನ್ ಸ್ಟಾಲ್ ಆಗಿರುವ ಆಪ್‍ಗಳ ಸಂಗ್ರಹ ಕಳೆದರೆ ಇನ್ನು 7.5 ಜಿಬಿ ಆಂತರಿಕ ಸಂಗ್ರಹ ಇದೆ.
ಇದರ ಓಎಸ್, ಯೂಸರ್ ಇಂಟರ್ ಫೇಸ್ ಆಕರ್ಷಕವಾಗಿವೆ. ಬಜೆಟ್ ವಾಚ್‍ಗಳಿಗೂ ಇಂತಹ ವಾಚ್‍ಗಳಿಗೂ ಎಷ್ಟೊಂದು ವ್ಯತ್ಯಾಸ ಇರುತ್ತದೆ ಎಂದು ತಿಳಿಯುತ್ತದೆ. ವಾಚನ್ನು ಟಚ್ ಮೂಲಕ ನಿರ್ವಹಣೆ ಮಾಡಿದಾಗ ಬಹಳ ವೇಗವಾಗಿ ಕಾರ್ಯಾಚರಿಸುತ್ತದೆ. ಯಾವುದೇ
ಇಂತಹ ಸ್ಮಾರ್ಟ್ ವಾಚುಗಳನ್ನು ಬಳಸುವುದೇ ದಿನ ನಿತ್ಯದ ವ್ಯಾಯಾಮ, ಓಟ, ನಿದ್ರೆ, ಇತ್ಯಾದಿಗಳ ಪ್ರಮಾಣ ಅಳೆಯುವ ಸಲುವಾಗಿ. ಇದರಲ್ಲಿ ನಡಿಗೆ, ಓಟ, ಸೈಕ್ಲಿಂಗ್, ರನ್ನಿಂಗ್ ಕೋಚ್, ಈಜು, ಟ್ರೆಡ್‍ಮಿಲ್, ಭಾರ ಎತ್ತುವಿಕೆ, ಏರೋಬಿಕ್ಸ್, ಫುಟ್ ಬಾಲ್, ಬಿಲ್ವಿದ್ಯೆ ಮುಂತಾದ 90 ಬಗೆಯ ವರ್ಕೌಟ್ ಗಳನ್ನು ಆಯ್ಕೆ ಮಾಡಿಕೊಂಡು ಅದರ ಚಟುವಟಿಕೆಗಳನ್ನು ಮಾಪನ ಮಾಡಬಹುದಾಗಿದೆ. ಆಯಾ ಚಟುವಟಿಕೆಗಳನ್ನು ಮಾಡುತ್ತಿರುವ ಸಮಯ, ಕ್ಯಾಲರಿಗಳ ಬರ್ನಿಂಗ್, ಹೃದಯ ಬಡಿತಗಳ ಸಂಖ್ಯೆ ಇತ್ಯಾದಿಗಳನ್ನು ತೋರಿಸುತ್ತದೆ. ಹೊರಾಂಗಣದಲ್ಲಿ ಸೈಕ್ಲಿಂಗ್ ಹೋದಾಗ ನೀವು ಹೋದ ದಾರಿಯಲ್ಲೇ ವಾಪಸ್ ಬರುವ ನ್ಯಾವಿಗೇಷನ್ ಅನ್ನು ಸಹ ಇದು ತೋರಿಸುತ್ತದೆ.
ಬಾಡಿ ಕಂಪೋಸಿಷನ್ ಎನ್ನುವ ವೈಶಿಷ್ಟ್ಯ ಆನ್ ಮಾಡಿದಾಗ ನಮ್ಮ ದೇಹದೊಳಗಿನ ಅನೇಕ ಅಂಶಗಳ ಮಾಪನ ದೊರಕುತ್ತದೆ. ಬಾಡಿ ಮಾಸ್ ಇಂಡೆಕ್ಸ್ ಅನ್ನು ಎರಡು ಕೀಗಳಿಗೆ ಮಧ್ಯದ ಮತ್ತು ಉಂಗುರದ ಬೆರಳನ್ನು ಇಡುವ ಮೂಲಕ ಪರೀಕ್ಷಿಸಬಹುದು. ಇದರಲ್ಲಿ ದೇಹದ ಕೊಬ್ಬಿನ ಪ್ರಮಾಣ, ದೇಹದಲ್ಲಿರುವ ನೀರಿನ ಅಂಶ, ಬಿಎಂಆರ್ ಇತ್ಯಾದಿ ತಿಳಿಯುತ್ತದೆ.
ಒತ್ತಡ ಮಾಪಕ ಇದೆ. ಒತ್ತಡವನ್ನು ನಿಯಂತ್ರಿಸಲು ಉಸಿರನ್ನು ಒಳಗೆ ಹಾಗೂ ಹೊರಗೆ ಹಾಕುವ ಸಮಯ ಮಾಪಕ ಇದೆ. ಇದು ಪ್ರಾಣಾಯಾಮ ಮಾಡುವವರಿಗೆ ಅತ್ಯಂತ ಅನುಕೂಲಕರ ಫೀಚರ್ ಆಗಿದೆ.
ಇಸಿಮ್ ಬಳಕೆ : ಅನೇಕ ಸ್ಮಾರ್ಟ್ ವಾಚ್‍ಗಳಲ್ಲಿ ಬ್ಲೂಟೂತ್ ಮೂಲಕ ಫೋನ್ ಗೆ ಸಂಪರ್ಕ ಮಾಡಿಕೊಂಡಾಗ ಕರೆ ಸ್ವೀಕರಿಸುವ, ಕರೆ ಮಾಡುವ ಆಯ್ಕೆ ಇದೆ. ಆದರೆ ಈ ವಾಚ್‍ನಲ್ಲಿ ನೀವು ಫೋನ್ ನಲ್ಲಿ ಬಳಸುತ್ತಿರುವ ಸಿಮ್ ನ ನಂಬರ್ ಅನ್ನೇ ವಾಚ್‍ನಲ್ಲಿರುವ ಇ ಸಿಮ್ ಫೀಚರ್ ಗೆ ಸೆಟಿಂಗ್ ಮಾಡಿಕೊಂಡು ಪ್ರತ್ಯೇಕವಾಗಿ ಬಳಸಬಹುದು. ಜಿಯೋ ಸಿಮ್ ಗೆ ಈ ಆಯ್ಕೆ ಇದೆ. ಇದರಿಂದಾಗಿ ವಾಚ್ 5 ಪ್ರೊ ಬ್ಲೂಟೂತ್ ಮೂಲಕ ಫೋನ್‍ಗೆ ಕನೆಕ್ಟ್ ಆಗಿಲ್ಲದಾಗಲೂ ಕೂಡ, ನಮ್ಮ ನಂಬರ್ ಗೆ ಕರೆಗಳು ಬಂದಾಗ ಫೋನ್ ನಲ್ಲೇ ನೊಟಿಫಿಕೇಷನ್ ಬರುತ್ತದೆ. ಅಲ್ಲೇ ಕರೆ ಸ್ವೀಕರಿಸಿ ಮಾತನಾಡಬಹುದು. ಮತ್ತು ಕರೆಗಳನ್ನು ಮಾಡಬಹುದು. ಮನೆಯಲ್ಲಿ ಫೋನ್ ಮರೆತು ಹೋದರೂ, ಈ ವಾಚ್ ಇದ್ದರೆ ಫೋನ್ ನಂತೆ ಬಳಸಬಹುದು. ಇಯರ್ ಬಡ್ ಅನ್ನು ಬಳಸಿದರೆ ವಾಚನ್ನು ಕಿವಿಯಲ್ಲಿ ಹಿಡಿಯದೇ ಮಾತನಾಡಬಹುದು.
ಬ್ಯಾಟರಿ: ಇದು 590 ಎಂಎಎಚ್ ಬ್ಯಾಟರಿ ಹೊಂದಿದೆ. ಸಾಮಾನ್ಯ ಬಳಕೆಗೆ 80 ಗಂಟೆ ಹಾಗೂ ಜಿಪಿಎಸ್ ಆನ್ ಮಾಡಿದರೆ 20 ಗಂಟೆಗಳ ಬಾಳಿಕೆ ಬರುತ್ತದೆ ಎಂದು ಕಂಪೆನಿ ಹೇಳುತ್ತದೆ. ಆದರೆ ಇ- ಸಿಮ್ ಫೀಚರ್ ಬಳಸಿದಾಗ ಬ್ಯಾಟರಿ ಬಾಳಿಕೆ ಕಡಿಮೆ ಆಗುತ್ತದೆ.
ಒಟ್ಟಾರೆ, ಆಂಡ್ರಾಯ್ಡ್ ಬಳಕೆದಾರರಿಗೆ ಇದೊಂದು ಅತ್ಯುತ್ತಮ ವಾಚ್. ಫಿಟ್‍ನೆಸ್, ಸ್ಪೋಟ್ಸ್ಸ್, ಸ್ಟೈಲ್, ಕರೆ ಮಾಡಲು, ಸಂಗೀತ ಕೇಳಲು ಸೇರಿದಂತೆ ಅನೇಕ ಅನುಕೂಲಕರ ವೈಶಿಷ್ಟ್ಯಗಳಿರುವ ಒಂದು ಮಾದರಿ ವಾಚ್ ಇದು ಎನ್ನಲಡ್ಡಿಯಿಲ್ಲ.
-ಕೆ. ಎಸ್. ಬನಶಂಕರ ಆರಾಧ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.