ಸೆ.30ರೊಳಗೆ ಕಾರ್ಡ್ ಟೋಕನೈಸೇಷನ್ ಮಾಡಿ: ಏನಿದು ಟೋಕನೈಸೇಷನ್?
Team Udayavani, Aug 26, 2022, 7:10 AM IST
ಏನಿದು ಟೋಕನೈಸೇಷನ್? :
ಟೋಕನೈಸೇಷನ್ ಎಂದರೆ ನಿಮ್ಮ ಕಾರ್ಡ್‌ಗಳ ನೈಜ ವಿವರಗಳನ್ನು “ಟೋಕನ್’ ಎಂಬ ಪರ್ಯಾಯ ಕೋಡ್ ಮೂಲಕ ಬದಲಿಸು ವುದು. ಈ ಟೋಕನ್‌ನಲ್ಲಿ ಕಾರ್ಡ್‌ದಾರರ ಯಾವುದೇ ವೈಯಕ್ತಿಕ ಮಾಹಿತಿ ಇರುವುದಿಲ್ಲ. ಅಲ್ಲದೇ, ಇದು ಮತ್ತೆ ಮತ್ತೆ ಬದಲಾಗುವ ಕಾರಣ “ಪಾವತಿ’ಗೆ ಅತ್ಯಂತ ಸುರಕ್ಷಿತ ವಿಧಾನ ಎಂದೆನಿಸಿಕೊಳ್ಳಲಿದೆ. ಒಂದು ಬಾರಿ ನಿಮ್ಮ ಕಾರ್ಡ್‌ನ ಟೋಕ ನೈಸೇಷನ್ ಪ್ರಕ್ರಿಯೆ ಪೂರ್ಣಗೊಂಡರೆ, ಯಾವುದೇ ಪಾವತಿ ಮಧ್ಯವರ್ತಿಗಳು, ವ್ಯಾಲೆಟ್ ಮತ್ತು ಆನ್‌ಲೈನ್ ಮರ್ಚೆಂಟ್‌ಗಳು ನಿಮ್ಮ ಕಾರ್ಡ್‌ನ ವಿವರಗಳನ್ನು ಸಂಗ್ರಹಿಸಿಟ್ಟುಕೊಳ್ಳುವಂತಿಲ್ಲ.
ಸೆ.30ರ ಬಳಿಕ ಯಾವುದೇ ವ್ಯಾಪಾರಿಗಳು, ಪಾವತಿ ಮಧ್ಯವರ್ತಿ ಸಂಸ್ಥೆಗಳು, ಪೇಮೆಂಟ್ ಗೇಟ್‌ವೇಗಳು ಗ್ರಾಹಕರ ಕಾರ್ಡ್ ವಿವರಗಳನ್ನು (ಡೆಬಿಟ್ ಮತ್ತು ಕ್ರೆಡಿಟ್) ಸಂಗ್ರಹಿಸಿಡುವಂತಿಲ್ಲ. ಎಲ್ಲ ಕಾರ್ಡ್‌ಗಳ ದತ್ತಾಂಶಗಳ ಜಾಗವನ್ನು ವಿಶಿಷ್ಟ ಟೋಕನ್ ಸಂಖ್ಯೆ ತುಂಬಲಿದೆ. ಸೆ.30ರ ಗಡುವಿಗೆ ಮುನ್ನ ಎಲ್ಲರೂ ತಮ್ಮ ತಮ್ಮ ಕಾರ್ಡ್‌ಗಳ ಟೋಕನೈಸೇಷನ್ ಮಾಡುವಂತೆ ಆರ್‌ಬಿಐ ಸೂಚಿಸಿದೆ.
ಮಾಡದಿದ್ದರೆ ಏನಾಗುತ್ತದೆ? :
ಇದೇನೂ ಕಡ್ಡಾಯವಲ್ಲ, ಆದರೆ, ನೀವು ನಿಮ್ಮ ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳ ಟೋಕನೈಸೇಷನ್ ಪ್ರಕ್ರಿಯೆ ಸೆ.30ರೊಳಗೆ ಪೂರ್ಣಗೊಳಿಸದಿದ್ದರೆ, ಕಾರ್ಡ್ ಬಳಸಿ ವಹಿವಾಟು ನಡೆಸಲು ಸಾಕಷ್ಟು ಸಮಯ ವ್ಯಯಿಸಬೇಕಾಗುತ್ತದೆ. ಅಂದರೆ, ಟೋಕನೈಸೇಷನ್ ಮಾಡದ ಗ್ರಾಹಕರು ಪ್ರತಿ ಬಾರಿ ಆನ್‌ಲೈನ್ ವಹಿವಾಟು ನಡೆಸುವಾಗಲೂ, ನಿಮ್ಮ ಕಾರ್ಡ್ ಸಂಖ್ಯೆ, ಸಿವಿವಿ, ಕಾರ್ಡ್ ಎಕ್ಸ್‌ಪೈರ್ ಆಗುವ ದಿನಾಂಕ ಸೇರಿದಂತೆ ಎಲ್ಲ ವಿವರಗಳನ್ನೂ ನಮೂದಿಸಬೇಕಾಗುತ್ತದೆ. ಏಕೆಂದರೆ, ಪ್ರಸ್ತುತ ಸೇವ್ ಆಗಿರುವ ನಿಮ್ಮೆಲ್ಲ ಕಾರ್ಡ್ ವಿವರಗಳೂ ಸರ್ವರ್‌ನಿಂದ ಡಿಲೀಟ್ ಆಗಿರುತ್ತದೆ.
ಹೇಗೆ ಮಾಡುವುದು? :
- ಯಾವುದಾದರೂ ಇ-ಕಾಮರ್ಸ್/ಮರ್ಚೆಂಟ್ ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್‌ಗೆ ಭೇಟಿ ಕೊಟ್ಟು, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ವಹಿವಾಟು ಆರಂಭಿಸಿ.
- ಆಗ “ನಿಮ್ಮ ಕಾರ್ಡ್ ಅನ್ನು ಆರ್‌ಬಿಐ ಮಾರ್ಗಸೂಚಿ ಪ್ರಕಾರ ಟೋಕನೈಸ್ ಮಾಡಲು ಬಯಸುತ್ತೀರಾ’ ಅಥವಾ “ನಿಮ್ಮ ಕಾರ್ಡ್ ಅನ್ನು ಸುರಕ್ಷಿತವಾಗಿಡಿ’ ಎಂಬ ಆಯ್ಕೆಗಳನ್ನು ಪೇಮೆಂಟ್ ಪ್ರೊಸೆಸರ್ ತೋರಿಸುತ್ತದೆ.
- ಆ ಆಯ್ಕೆಯನ್ನು ಕ್ಲಿಕ್ ಮಾಡಿ. ಕೂಡಲೇ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್‌ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿದ ಕೂಡಲೇ ಟೋಕನ್ ಸೃಷ್ಟಿಯಾಗುತ್ತದೆ.
- ಕೂಡಲೇ ನಿಮ್ಮ ಕಾರ್ಡಿನ ನೈಜ ವಿವರಗಳ ಬದಲಾಗಿ ಅಲ್ಲಿ ಆ ಟೋಕನ್ ಸಂಖ್ಯೆ ಸೇವ್ ಆಗುತ್ತದೆ
- ನಂತರ, ನೀವು ಅದೇ ವೆಬ್‌ಸೈಟ್ ಅಥವಾ ಆ್ಯಪ್‌ಗೆ ಭೇಟಿ ಕೊಟ್ಟಾಗ, ಸೇವ್ ಆಗಿರುವ ನಿಮ್ಮ ಕಾರ್ಡ್‌ನ ಕೊನೆಯ 4 ಅಂಕಿಗಳು ಮಾತ್ರ ನಿಮಗೆ ಕಾಣಿಸುತ್ತವೆ.
- ಆ ಅಂಕಿಗಳನ್ನು ಗುರುತಿಸುವ ಮೂಲಕ ನೀವು ಪಾವತಿ ಪೂರ್ಣಗೊಳಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cooking Oil: ಅಡುಗೆ ಎಣ್ಣೆ ಆಮದು ಸವಾಲು
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್ ಸಿಂಗ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.